ಮಕ್ಕಳು ಜ್ಞಾನ ಪೂರ್ವಕವಾಗಿ ಓದಿನಲ್ಲಿ ಯಾವಾಗಲು ಯಶಸ್ಸು ಕಾಣಲು ಈ ಚಿಕ್ಕ ಮಂತ್ರವನ್ನು ಪಠಿಸಿ

Astrology Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪ್ರತಿ ಮನುಷ್ಯ ತಾನು ದುಡಿಯುತ್ತಿರುವುದು ತಮ್ಮ ಕುಟುಂಬ ಚೆನ್ನಾಗಿರಲಿ ತಮ್ಮ ಮನೆಯವರು ಮಕ್ಕಳು ಸದಾ ಉತ್ತಮವಾಗಿರಲಿ ಅನ್ನೋ ಕಾರಣಕ್ಕೆ, ಆದ್ರೆ ಕಾಲ ಮಕ್ಕಳು ಹುಟ್ಟಿನಿಂದಲೇ ಬುದ್ಧಿವಂತರಾಗಿರುತ್ತಾರೆ ಇನ್ನು ಕೆಲವರು ವಯಸ್ಸು ಕಳೆದಂತೆ ಹಾಗೂ ತನ್ನ ಸುತ್ತಲಿನ ಪರಿಸರ ಅವನನ್ನು ಹೇಗೆ ಬೆಳೆಸುತ್ತದೆ ಅನ್ನೋ ಆಧಾರದ ಮೇಲೆ ತಾನು ಬುದ್ದಿವಂತನಾಗುತ್ತಾನೆ. ಹಿರಿಯರು ಹಾಗೂ ಹಿರಿಯ ಪಂಡಿತರು ಹೇಳುವ ಹಾಗೆ ಮಕ್ಕಳನ್ನು ಚಿಕ್ಕಂದಿನಿಂದಲೇ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಬೇಕಾಗುತ್ತದೆ.

ಮಕ್ಕಳು ಯಾವಾಗಲು ಓದಿನಲ್ಲಿ ಸದಾ ಯಶಸ್ಸನ್ನು ಕಾಣಲು ಈ ದೇವರ ಚಿಕ್ಕ ಮಂತ್ರವನ್ನು ಪಠಿಸುವುದರಿಂದ ಒಳ್ಳೆಯ ಯಶಸ್ಸು ಸಿಗುತ್ತದೆ ಹಾಗೂ ಮಕ್ಕಳು ಜ್ಞಾನ ಪೂರ್ವಕವಾಗಿ ಬೆಳೆಯಲು ಸಹಕಾರಿಯಾಗುತ್ತದೆ ಅನ್ನೋದನ್ನ ಪಂಡಿತರು ಹೇಳುತ್ತಾರೆ ಅಷ್ಟಕ್ಕೂ ಈ ಮಂತ್ರ ಪಠನೆ ಯಾವುದು ಅನ್ನೋದನ್ನ ನೋಡುವುದಾದರೆ, ಶಿವನ ಹಲವು ಅವತಾರಗಳಲ್ಲಿ ದಕ್ಷಿಣಾಮೂರ್ತಿ ಸ್ವರೂಪವು ಕೂಡ ಒಂದಾಗಿದೆ, ಈ ದಕ್ಷಿಣಾಮೂರ್ತಿಯು ಜ್ಞಾನವನ್ನು ವೃದ್ಧಿಸುವ ಪರಮ ಗುರು ಎಂಬುದಾಗಿ ಹೇಳಲಾಗುತ್ತದೆ.

ಆದ್ದರಿಂದ ಈ ದಕ್ಷಿಣ ಮೂರ್ತಿಯನ್ನು ಪೂಜಿಸುವುದರ ಜೊತೆಗೆ ಈ ಚಿಕ್ಕ ಮಂತ್ರ ಪಠಣ ಮಾಡುವುದರಿಂದ ಓದಿನಲ್ಲಿ ಯಾವಾಗಲು ಯಶಸ್ಸನ್ನು ಕಾಣಬಹುದು ಎಂಬುದಾಗಿ ಹೇಳುತ್ತಾರೆ ಪಂಡಿತರು. ಈ ದಕ್ಷಿಣಾಮೂರ್ತಿಯ ಫೋಟೋವನ್ನು ಮನೆಯ ದಕ್ಷಿಣಾ ದಿಕ್ಕಿನಲ್ಲಿಟ್ಟು, ಓಂ ದಕ್ಷಿಣಾಮುರ್ತಯೇಚ ವಿದ್ಮಹೇ ಧ್ಯಾನಸ್ಥಾಯ ಧೀಮಹಿ ತನ್ನೋ ಧಿಷಃ ಪ್ರಚೋದಯಾತ್ ಎಂಬ ಮಂತ್ರವನ್ನು ಪೂಜಿಸುವ ಸಮಯದಲ್ಲಿ ಪಠಿಸಬೇಕು. ಇದರಿಂದ ಇನ್ನೊಂದು ವಿಶೇಷ ಫಲವೇನು ಅನ್ನೋದನ್ನ ನೋಡುವುದಾದರೆ ಶಾಸ್ತ್ರಗಳು ಹೇಳುವ ಪ್ರಕಾರ ಮಕ್ಕಳಲ್ಲಿ ಪದೇ ಪದೇ ಅನಾರೋಗ್ಯದ ಸಮಸ್ಯೆ ಕಾಡುವುದಿಲ್ಲ, ಲವಲವಿಕೆಯಿಂದ ಇರುತ್ತಾರೆ. ಮಕ್ಕಳ ಒಳ್ಳೆಯ ಭವಿಷ್ಯಕ್ಕಾಗಿ ಇದನ್ನು ಅನುಸರಿಸುವುದು ಉತ್ತಮ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *