ಜೀವನ ಯಾರ ಯಾರ ಜೀವನ ಹೇಗೆ ಇರತ್ತೆ ಅಂತ ಹೇಳೋದು ತುಂಬಾನೇ ಕಷ್ಟ. ಇವತ್ತು ಬಡವ ಆಗಿರೋ ವ್ಯಕ್ತಿ ನಾಳೆ ಶ್ರೀಮಂತ ಆಗಬಹುದು ಇವತ್ತು ಶ್ರೀಮಂತ ಇರೋ ವ್ಯಕ್ತಿ ನಾಳೆ ಬಡವ ಕೂಡ ಆಗಬಹುದು. ಅದರಂತೆಯೇ ನಾವು ನಿಮಗೆ ಒಬ್ಬ ಚಿತ್ರ ನಟಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ವಿಷ್ಣುವರ್ಧನ್ ಅವರ ಜೊತೆಯೂ ನಟಿಸಿದ ಹಾಗೂ ನೂರು ಚಿತ್ರಗಳಲ್ಲಿ ನಟಿಸಿದ ಪ್ರಸಿದ್ಧ ನಟಿಯೊಬ್ಬರು ಇಂದು ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದಾರೆ. ಆದರೆ ಒಂದು ಕಾಲದಲ್ಲಿ ಪ್ರಸಿದ್ಧ ಚಿತ್ರ ನಟಿ ಆಗಿ ಮೆರೆದವರು ಇಂದು ಒಂದು ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವುದು ಅಂದರೆ, ಅವರ ಜೀವನ ಹೇಗೆ ಬದಲಾಯಿತು ನೋಡಿ. ಅವರೇ ದೇವಯಾನಿ. ಸುಮಾರು ನೂರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಆ ಮೂಲಕ ಚಿತ್ರ ರಂಗದಲ್ಲಿ ಹೆಸರುಗಳಿಸಿದ್ದಾರೆ.

ಚಿತ್ರಗಳಲ್ಲಿ ನಟಿಸುತ್ತಿರುವಾಗ ನಿರ್ದೆಶಕ ರಾಜಕುಮಾರ್ ಅವರನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ವಿವಾಹವಾದರು. ಇವರಿಗೆ ಇಸ್ಸರು ಹೆಣ್ಣುಮಕ್ಕಳ ಜನಿಸಿದ ನಂತರ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆ ಆದವು ಇತ್ತ ಪತಿಯ ನಿರ್ದೇಶನದ ಚಿತ್ರಗಳೂ ಸಹ ಸೋಲನುಭವಿಸಲು ಶುರು ಆದವು. ಹಾಗೂ ಇಬ್ಬರಿಗೂ ಸಹ ಅವಕಾಶಗಳು ಸಿಗದೇ ಹಾಗಾಯಿತು. ಮನೆಯವರ ವಿರೋಧವಾಗಿ ಮದುವೆ ಆಗಿದ್ದರಿಂದ ಮನೆಯವರಿಂದ ಸಹ ಯಾವುದೇ ಸಹಾಯ ದೊರೆಯಲಿಲ್ಲ.

ಇಷ್ಟೆಲ್ಲಾ ಆದಾಗ ಗಂಡನನ್ನು ದೂಷಿಸದೆ ಅವರ ಬೆನ್ನೆಲುಬಾಗಿ ನಿಂತರು. ಅವರಿವರ ಬಳಿ ಬೇಡಿಕೊಂಡು ನಟಿಸಲು ಅವಕಾಶ ಕೇಳುವ ಜಾಯಮಾನದವರಲ್ಲದ ದೇವಯಾನಿ ಕೊನೆಗೆ ಒಂದು ಖಾಸಗಿ ಶಾಲೆಯಲ್ಲಿ ಶಿಕ್ಷಕಯಾಗಿ ಸೇರಿಕೊಂಡರು ಹಾಗೂ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ ಇದ್ದಾರೆ. ಅವಕಾಶಗಳು ಸಿಗದೇ ಮಾನಸಿಕ ಖಿನ್ನತೆಗೆ ಒಳಗಾಗದೆ ಇದ್ದ ಕೆಲಸದಲ್ಲೇ ಬಂದ ಸಂಬಳದಿಂದ ನೆಮ್ಮದಿಯ ನೀವನ ನಡೆಸುತ್ತಿದ್ದಾರೆ ದೇವಯಾನಿ.

ಚಿತ್ರಗಳಲ್ಲಿ ನಟಿಸಲು ಅವಕಾಶಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಎಷ್ಟೋ ಅನಾಹುತ ಮಾಡಿಕೊಂಡ ನಟಿಯರಿಗೆ ದೇವಯಾನಿ ಅವರು ಉತ್ತಮ ಮಾದರಿ ಎನ್ನಬಹುದು. ನಾವು ಕೂಡ ಜೀವನದಲ್ಲಿ ಏನೇ ಕಷ್ಟಗಳು ಬಂದರು ಕೂಡ ಕುಗ್ಗದೆ ಅದನ್ನು ಗಟ್ಟಿಯಾಗಿ ನಿಂತು ಎದುರಿಸಬೇಕು.

Leave a Reply

Your email address will not be published. Required fields are marked *