ಶಿರಸಿ ಅಂದ್ರೆ ಮಲೆನಾಡ ಸೊಬಗನ್ನು ಹೊಂದಿರುವಂತ ಊರು, ಇಲ್ಲಿಯ ವಾತಾವರಣ ಎಂತವರಿಗೂ ಇಷ್ಟಪಡಿಸುವಂತಾದಾಗಿದೆ. ಶಿರಸಿಯ ವಿಶೇಷತೆ ಏನು ಅನ್ನೋದನ್ನ ಒಮ್ಮೆ ಇಲ್ಲಿ ತಿಳಿಯುವುದರ ಜೊತೆಗೆ ಶಿರಸಿಯ ಸಹಸ್ರ ಲಿಂಗಗಳನ್ನು ಹೊಂದಿರುವಂತ ಈ ನದಿಯ ಬಗ್ಗೆ ಕೂಡ ಇಲ್ಲಿ ತಿಳಿದುಕೊಳ್ಳೋಣ ನಿಮಗೆ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ. ಹೀಗೆ ಹೊಸ ಹೊಸ ವಿಚಾರಗಳೊಂದಿಗೆ ನಿಮ್ಮೊಂದಿಗೆ ನಾವು ಬರುತ್ತೇವೆ.

ಶಿರಸಿಯ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ ಈ ಊರಿನ ಸಮೀಪದಲ್ಲಿ ಕೆಲವೊಂದಷ್ಟು ಪ್ರವಾಸಿ ಸ್ಥಳಗಳಿವೆ ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜ ಮಠ), ಸಹಸ್ರಲಿ೦ಗ, ಮೋರೆಗಾರ ಜಲಪಾತ, ಕುಮುಟಾಯಿಂದ ಶಿರಸಿಗೆ ಹೊಗುವ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಆಕರ್ಷಣೀಯವಾಗಿದೆ ಇನ್ನು ಇಲ್ಲಿ ಸುತ್ತಲೂ ಕಾಡುಗಳನ್ನು ಹೊಂದಿದ್ದು ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಬಹುದಾಗಿದೆ.

ಇಲ್ಲಿನ ಮುಖ್ಯ ಬೆಳೆ ಏನು ಅನ್ನೋದನ್ನ ನೋಡುವುದಾದರೆ ಅಡಿಕೆ, ತೆಂಗು ಭತ್ತ ವೆನಿಲ್ಲಾ, ಕೋಕಾಗಳನ್ನು ಇಲ್ಲಿನ ಸುತ್ತ ಮುತ್ತಲಿನ ಜನರು ಬೆಳೆಯುತ್ತಾರೆ. ಇಲ್ಲಿನ ಪ್ರಸಿದ್ಧ ದೇವಾಲಯ ಶಿರಸಿಯ ಮಾರಿಕಾಂಬಾ ದೇವಾಲಯವಾಗಿದೆ. ಶಿರಸಿಯು ಬೆಂಗಳೂರಿನಿಂದ 425 ಕಿ.ಮೀ ನಷ್ಟು ದೂರವನ್ನು ಹೊಂದಿದ್ದು ಸಾವಿರಾರು ಪ್ರವಾಸಿಗರು ಈ ಊರಿಗೆ ಆಗಮಿಸುತ್ತಿರುತ್ತಾರೆ.

ಮತ್ತೊಂದು ವಿಶೇಷ ಪ್ರೇಕ್ಷಣೆಯ ಸ್ಥಳ ಅಂದ್ರೆ ಸಹಸ್ರಲಿಂಗ, ಹೌದು ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಆದ್ದರಿಂದ ಇದನ್ನು ಶಿರಸಿಯ ಸಹಸ್ರಲಿಂಗ ಎಂಬುದಾಗಿ ಕರೆಯಲಾಗುತ್ತದೆ.

ಸಹಸ್ರಲಿಂಗದ ಹಿನ್ನಲೆ ವಿಶೇಷತೆ ಏನು ಅನ್ನೋದನ್ನ ನೋಡುವುದಾದರೆ ಶಿರಸಿ ಪ್ರದೇಶದಲ್ಲಿ ಹಿಂದೆ 1678-1718 ರ ಸಮಯದಲ್ಲಿ ಆಳುತ್ತಿದ್ದ ಸದಾಶಿವರಾಯ ಅರಸನು ಈ ಶಿವಲಿಂಗಗಳ ನಿರ್ಮಾತೃ ಎನ್ನಲಾಗಿದೆ. ಇನ್ನು ಈ ವ್ಯಕ್ತಿ ಶಿವ ಪರಮಭಕ್ತನಾದ್ದರಿಂದ ಇಲ್ಲಿ ಹರಿದಿರುವ ಶಲ್ಮಲಾ ನದಿಯ ತಟದ ಕಲ್ಲುಗಳ ಮೇಲೆ, ನೀರೊಳಗಿನ ಕಲ್ಲುಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಶಿವಲಿಂಗಗಳನ್ನು ಕೆತ್ತಿಸಿದ್ದಾನೆ ಅನ್ನೋದು ಹಿರಿಯರ ಮಾತು. ಈ ಸ್ಥಳಕ್ಕೆ ಭೇಟಿ ನೋಡೋರು ಕುಟುಂಬ ಸಮೇತವಾಗಿ ಊಟ ತಂದು ಇಲ್ಲಿಯ ಸೊಬಗನ್ನು ಸೇವೆಡು ಮನೆಮಂದಿ ಕೂತು ಊಟ ಮಾಡಿ ಹೋಗುತ್ತಾರೆ.

Leave a Reply

Your email address will not be published. Required fields are marked *