ಕನ್ನಡದ ಖ್ಯಾತ ನಟಿ ಪ್ರೇಮ ಬೆಂಗಳೂರಿನಲ್ಲಿ ಜನಿಸಿದವರು. ಇವರು ಕೊಡವ ಜನಾಂಗಕ್ಕೆ ಸೇರಿದವರಾಗಿದ್ದು ಇವರು ತಮ್ಮ ಪ್ರೌಢ ಶಿಕ್ಷಣವನ್ನು ಬೆಂಗಳೂರಿನ ಮಹಿಳಾ ಸೇವಾ ಸಮಾಜ ಪ್ರೌಢ ಶಾಲೆಯಲ್ಲಿ ಮುಗಿಸಿದ್ದಾರೆ. ಇವರು ತಮ್ಮ ಪದವಿ ಪೂರ್ವ ಶಿಕ್ಷಣವನ್ನು SSMRV ಕಾಲೇಜಿನಲ್ಲಿ ಮುಗಿಸಿದ್ದಾರೆ. ಇವರು ರಾಷ್ಟ ಮಟ್ಟದಲ್ಲಿ ಹೈ ಜಂಪ್, ವಾಲಿಬಾಲ್ ಆಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರೇಮ ಅವರು 1995 ರಲ್ಲಿ ಶಿವರಾಜ್ ಕುಮಾರ್ ಅವರ ಜೊತೆ ಸವ್ಯ ಸಾಚಿ ಚಿತ್ರದ ಮೂಲಕ ಕನ್ನಡ ಚಲಮ ಚಿತ್ರ ರಂಗಕ್ಕೆ ಮೊದಲ ಭಾರಿಗೆ ಪಾದಾರ್ಪಣೆ ಮಾಡಿದರು. ನಂತರ ಬಂದ ಓಂ ಚಿತ್ರದಿಂದ ಅವರ ಅಭಿನಯದಿಂದ ಸಾಕಷ್ಟು ಪ್ರಸಿದ್ಧಿ ಹೊಂದಿದರು.

ಸಾಕಷ್ಟು ಜನಪ್ರಿಯವಾಗಿ ಹೆಸರು ಗಳಿಸಿಕೊಂಡ ಪ್ರೇಮ ಅವರಿಗೆ ಒಬ್ಬಳು ಮಗಳು ಇದ್ದಾಳೆ ಎಂದು ಎಲ್ಲಾ ಕಡೆಯೂ ಸುದ್ಧಿ ಆಗಿತ್ತು. ಈ ವಿಷಯದ ಬಗ್ಗೆ ಸ್ವತಃ ಪ್ರೇಮಾ ಅವರೇ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಇಂಥ ವಿಷಯ ಬಂದಾಗ ಎಲ್ಲರಲ್ಲೂ ಪ್ರೇಮ ಅವರ ಮಗಳು ಯಾರು? ಗಂಡ ಯಾರು? ಅವರೀಗ ಎಲ್ಲಿ ಇದ್ದಾರೆ? ಎನ್ನುವ ಕುತೂಹಲ ಎಲ್ಲರಲ್ಲೂ ಇದ್ದೆ ಇರುತ್ತದೆ. ನಿಮ್ಮೆಲ್ಲ ಕುತೂಹಲಕ್ಕೆ ಇಲ್ಲಿದೆ ಉತ್ತರ.

ಕನ್ನಡದ ನಟಿ ಪ್ರೇಮಾ ಅವರು ಸಾಫ್ಟ್ವೇರ್ ಇಂಜಿನೀಯರ್ ಎಂದು ಹೇಳಿಕೊಂಡಿದ್ದ ಜೀವನ್ ಅಪ್ಪಚ್ಚು ಅವರನ್ನು ಜುಲೈ 6, 2006 ರಲ್ಲಿ ವಿವಾಹ ಆಗಿದ್ದರು. ಮದುವೆಯಾದ ಕೆಲವು ದಿನಗಳ ನಂತರ ಪ್ರೇಮ ಅವರಿಗೆ ತಿಳಿಯಿತು ಅವರ ಗಂಡ ಸಾಫ್ಟ್ವೇರ್ ಇಂಜಿನೀಯರ್ ಅಲ್ಲ ಅವರು ಹೇಳಿದ್ದು ಸುಳ್ಳು ಎಂದು. ಸುಳ್ಳು ಹೇಳಿ ಮದುವೆ ಆಗಿದ್ದಾರೆ ಎನ್ನುವುದು ಕೊನೆಗೆ ತಿಳಿಯಿತು. ಪ್ರೇಮಾ ಅವರ ದುಡಿಮೆಯಿಂದ ಆರಾಮ್ ಆಗಿ ತಿಂದುಕೊಂಡು ಜೀವನ ನಡೆಸಬಹುದು ಎಂದುಕೊಂಡಿದ್ದ ಜೀವನ್ ಅವರಿಂದ ಪ್ರೇಮ ದೂರವಾದರು. ಇನ್ನು ಪ್ರೇಮಾ ಅವರಿಗೆ ಮುದ್ದಾದ ಹೆಣ್ಣು ಮಗಳು ಕೂಡಾ ಇದ್ದರೆ ಎಂದು ಎಲ್ಲಾ ಕಡೆಯೂ ವದಂತಿ ಹಬ್ಬಿತ್ತು. ಇದರ ಬಗ್ಗೆ ಮಾತನಾಡಿದ ಪ್ರೇಮಾ ಅವರು ನನಗೆ ಮದುವೆ ಆಗಿದೆ ಅಷ್ಟೇ ಆದರೆ ಯಾವ ಗಂಡನೂ ಇಲ್ಲ ಮಗಳೂ ಇಲ್ಲ. ಸಮಯ ಬಂದಾಗ ನನ್ನ ಅಭಿಮಾನಿಗಳಿಗೆ ನಾನೇ ಹೇಳುತ್ತೇನೆ ಸುಮ್ಮನೆ ಸುಳ್ಳು ಸುದ್ಧಿ ಹಬ್ಬಿಸಿ ಉರಿಯುತ್ತಿರುವ ಗಾಯದ ಮೇಲೆ ಉಪ್ಪು ಸುರಿಯಬೇಡಿ ಎಂದು ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ

By

Leave a Reply

Your email address will not be published. Required fields are marked *