ಮನೆಯಲ್ಲಿನ ಇರುವೆಗಳ ಕಾಟಕ್ಕೆ ಸಿಂಪಲ್ ಪರಿಹಾರ

0 17

ಇರುವೆ ನೋಡಲು ಚಿಕ್ಕದಾಗಿ ಇದ್ದರೂ ಕಾಟ ಕೊಡುವುದು ಬಹಳ. ಗ್ಯಾಸ್ ಕಟ್ಟೆಯ ಮೇಲೆ ಒಂದು ವಸ್ತು ಇಟ್ಟರೂ ಸಾಕು ಇರುವೆಗಳು ಒಂದು ರಾಶಿ ಬಂದುಬಿಡುತ್ತವೆ. ಅದರಲ್ಲೂ ಹಾಲಿನ ಪಾತ್ರೆ ಇಟ್ಟರೆ ಬಹಳ ಬರುತ್ತದೆ. ಇರುವೆಗಳಲ್ಲಿ ಬಹಳ ವಿಧಗಳಿವೆ. ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ನಾವು ಇಲ್ಲಿ ಇರುವೆಗಳಿಂದ ಮುಕ್ತಿ ಪಡೆಯಬಹುದಾದ ಸಲಹೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕೆಲವರು ಮಾರುಕಟ್ಟೆಯಲ್ಲಿ ಸಿಗುವ ಇರುವೆಯ ಔಷಧಿಗಳನ್ನು ತರುತ್ತಾರೆ. ಆದರೆ ಭಯ ಇರುತ್ತದೆ. ಅವುಗಳಲ್ಲಿ ರಾಸಾಯನಿಕಗಳು ಇರುತ್ತವೆ. ಅಪ್ಪಿತಪ್ಪಿಯೂ ಮನುಷ್ಯನ ದೇಹದೊಳಗೆ ಹೊಕ್ಕಿದರೆ ಎಂಬ ಭಯ ಇರುತ್ತದೆ. ಮಕ್ಕಳು ಇರುವ ಮನೆಗಳಲ್ಲಿ ಇಂತಹವುಗಳನ್ನು ಬಳಸಲೇಬಾರದು. ಮನೆಯಲ್ಲಿ ಇರುವ ಪದಾರ್ಥಗಳನ್ನು ಬಳಸಿ ಇರುವೆಗೆ ಔಷಧಿಯನ್ನು ಮಾಡಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.

ಮೊದಲು ಎರಡು ಚಮಚ ಹುಡಿ ಉಪ್ಪನ್ನು ತೆಗೆದುಕೊಳ್ಳಬೇಕು. ಕಲ್ಲು ಉಪ್ಪಾದರೆ ಅದನ್ನು ಪುಡಿಮಾಡಿಕೊಳ್ಳಬೇಕು. ಒಂದು ಲಿಂಬೆಹಣ್ಣನ್ನು ತೆಗೆದುಕೊಂಡು ಅದನ್ನು ಮಾಂದ್ರಿಯಲ್ಲಿ ಅದರ ಸಿಪ್ಪೆಯನ್ನು ತುರಿದುಕೊಳ್ಳಬೇಕು. ಇಲ್ಲಿ ನಿಂಬೆಹಣ್ಣಿನ ರಸ ಬೇಡ. ಇದರ ಸಿಪ್ಪೆ ಇದ್ದರೆ ಸಾಕು. ಇಡೀ ಲಿಂಬೆಹಣ್ಣನ್ನು ತುರಿದುಕೊಳ್ಳಬೇಕು. ಆದಷ್ಟು ಕಾಯಿ ಇರುವ ಲಿಂಬೆಹಣ್ಣು ತೆಗೆದುಕೊಂಡರೆ ಒಳ್ಳೆಯದು.

ನಂತರ ಒಂದು ಕುಟ್ಟಾಣಿಯನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಉಪ್ಪು ಹಾಕಿ ಅದಕ್ಕೆ ತುರಿದ ಲಿಂಬೆಹಣ್ಣಿನ ಸಿಪ್ಪೆಯನ್ನು ಹಾಕಬೇಕು. ನಂತರ 10 ಲವಂಗವನ್ನು ತೆಗೆದುಕೊಳ್ಳಬೇಕು. ಅದನ್ನೂ ಸಹ ಕುಟ್ಟಾಣಿಗೆ ಹಾಕಿ ಚೆನ್ನಾಗಿ ಕುಟ್ಟಬೇಕು. ನಂತರ ನೆಲ ಉದ್ದುವ ಟಬ್ ಗೆ 2 ಲೀಟರ್ ನೀರು ಹಾಕಿ ಕುಟ್ಟಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಬಟ್ಟೆಯನ್ನು ಅದರಲ್ಲಿ ಅದ್ದಿ ನೆಲವನ್ನು ಚೆನ್ನಾಗಿ ಒರೆಸಬೇಕು. ಇದನ್ನು ಎಲ್ಲಿ ಬೇಕಾದರೂ ಬಳಸಬಹುದು. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡಿ ಉದ್ದಬೇಕು. ಇದರ ಪರಿಮಳಕ್ಕೆ ಇರುವೆಗಳು ಬರುವುದೇ ಇಲ್ಲ.

Leave A Reply

Your email address will not be published.