ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ಸಿಂಹ ರಾಶಿಯವರ ಯುಗಾದಿ ಹಬ್ಬದ ವಾರ್ಷಿಕ ಭವಿಷ್ಯವನ್ನು ತಿಳಿಯೋಣ.

ಏಪ್ರಿಲ್ ತಿಂಗಳಿನ 30 ನೇ ತಾರೀಖು ಗುರು ಗ್ರಹ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ಸಿಂಹ ರಾಶಿಯವರಿಗೆ ಗುರು ಬಲ ಈ ವರ್ಷದಲ್ಲಿ ಕಮ್ಮಿ ಇದೆ. ಕೆಲವು ಶುಭ ಫಲಗಳ ಜೊತೆಗೆ ಹೆಚ್ಚಿನ ಕಷ್ಟ ನಷ್ಟದ ಫಲಗಳನ್ನು ಕೂಡ ಸಿಂಹ ರಾಶಿಯವರು ಅನುಭವಿಸುವರು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಪ್ರಯತ್ನ, ಬುದ್ದಿವಂತಿಕೆ, ಸಮಯ ಪ್ರಜ್ಞೆ, ಕಾರ್ಯ ನಿಷ್ಠೆ ಎಲ್ಲಾ ಇರಬೇಕು ಅದಕೆ, ತಕ್ಕಂತೆ ಮಂಗಳಕರ ಫಲಗಳು ಸಿಗುತ್ತದೆ. ಹೆತ್ತವರ ಸೇವೆ ಮಾಡಬೇಕು, ಅವರ ಆಶೀರ್ವಾದ ಪಡೆಯಬೇಕು. ಹಿರಿಯರ ಸೇವೆ ಮಾಡಬೇಕು.

ಪೂಜ್ಯರು ಹಾಗೂ ಪುಣ್ಯ ಕ್ಷೇತ್ರಗಳ ದರ್ಶನ ಮಾಡಬೇಕು. ಇದರಿಂದ, ಮನಸ್ಸು ಕೂಡ ಶಾಂತಿಯಿಂದ ಇರುತ್ತದೆ. ಕೋಪ ಹಠ ಎನ್ನುವುದು ಸಿಂಹ ರಾಶಿಯವರಿಗೆ ಹೆಚ್ಚಿಗೆ ಇರುತ್ತದೆ. ಅದನ್ನು, ಬಿಟ್ಟು ತಾಳ್ಮೆ ಮತ್ತು ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು. ಇದರಿಂದ, ಊಹೆ ಮಾಡಿದ ಫಲಗಳು ದೊರೆಯುತ್ತವೆ.

ಕೆಲವು ಸಂತೋಷದ ಘಟನೆಗಳು ಸಿಂಹ ರಾಶಿಯವರ ಬದುಕಿನಲ್ಲಿ ಘಟಿಸುತ್ತವೆ ಆದರೆ, ಅದನ್ನು ಸಹ ಎಚ್ಚರಿಕೆ ವಹಿಸಿ ಉಳಿಸಿಕೊಳ್ಳಬೇಕು. ಸಂಸಾರದಲ್ಲಿ ಇರುವ ತೊಡಕುಗಳನ್ನು ಸಹನೆಯಿಂದ ದೂರ ಮಾಡಿಕೊಳ್ಳಬೇಕು.ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಣೆ ಮಾಡಬೇಕು. ದಾಂಪತ್ಯ ಬದುಕು ಹೆಚ್ಚು ಸುಖಕರವಾಗಿ ಇರುತ್ತದೆ. ಪ್ರೇಮಿಗಳ ನಡುವೆ ಹೊಂದಾಣಿಕೆ ಇರುತ್ತದೆ ಆದರೆ, ಅದನ್ನು ಚೆನ್ನಾಗಿ ನಿಭಾಯಿಸುವ ಹೊಣೆ ಸಿಂಹ ರಾಶಿಯವರದ್ದು.

ಮನೆಯಲ್ಲಿ ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತವೆ. ಕಂಕಣ ಭಾಗ್ಯ ಕೂಡಿ ಬರುತ್ತದೆ. ಪ್ರಮುಖ ವ್ಯಕ್ತಿಗಳ ಭೇಟಿ ಆಗುತ್ತದೆ. ಶನಿ ದೇವರು ಸಿಂಹ ರಾಶಿಯವರಿಗೆ ಸಾಧಾರಣ ಮತ್ತು ಮಿಶ್ರ ಫಲಗಳನ್ನು ಕೊಡುವರು.ದುಷ್ಟ ಜನರ ಸಹವಾಸ ಬಿಡಬೇಕು, ದುಷ್ಚಟದಿಂದ ದೂರ ಉಳಿಯಬೇಕು. ಲೇವಾದೇವಿ ವ್ಯವಹಾರ ಲೆಕ್ಕಪತ್ರದ ವ್ಯವಹಾರದಲ್ಲಿ ಹೆಚ್ಚು ಎಚ್ಚರಿಗೆ ವಹಿಸಬೇಕು.

ಆರ್ಥಿಕವಾಗಿ ಸ್ವಲ್ಪ ಹಣ ಕಾಸಿನ ಸಂಕಷ್ಟ ಎದುರಿಸುವ ಸಾಧ್ಯತೆ ಇದೆ. ವಿರುದ್ಧ ಜನಗಳಿಂದ ಕಿರುಕುಳ ಇರುತ್ತದೆ. ಸ್ತ್ರೀ ಸಂಬಂಧಿತ ಚಿಂತೆಗಳು ಕಾಡುವ ಸಾಧ್ಯತೆ ಇರುತ್ತದೆ. ಸಜ್ಜನರ ಸಂಘ ಮಾಡಬೇಕು. ಬೇರೆಯವರ ತೊಂದರೆಗಳ ನಡುವೆ ತಲೆ ಹಾಕದೆ ಇದ್ದರೆ ಒಳ್ಳೆಯದು. ಅದು, ಸಿಂಹ ರಾಶಿಯವರಿಗೆ ಮಾನಹಾನಿ ಮಾಡಬಹುದು.

ಸರ್ಕಾರಿ ನೌಕರರಿಗೆ ಮನಸಿಗೆ ನೋವು ಉಂಟು ಮಾಡುವ ಸನ್ನಿವೇಶಗಳು ಇರುತ್ತದೆ ಮತ್ತು ಅಧಿಕಾರಿಗಳಿಂದ ಅವಮಾನ ಆಗುವ ಸಾಧ್ಯತೆ ಸಹ ಹೆಚ್ಚಾಗಿ ಇದೆ. ಮಿತ್ರರಿಂದ ದ್ರೋಹ ಆಗುವ ಸಾಧ್ಯತೆ ಇದೆ.ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಏಕಾಗ್ರತೆ ಮತ್ತು ಶ್ರದ್ದೆಯಿಂದ ಓದಬೇಕು ಇದರಿಂದ ಓದಿನಲ್ಲಿ ಪ್ರಗತಿ ಸಿಗುತ್ತದೆ. 

ಪರಿಹಾರಗಳು :-ಗುರು ರಾಯರ ದರ್ಶನ ಮಾಡಬೇಕು ಹಾಗೂ ದತ್ತಾತ್ರೇಯ ಸ್ವಾಮಿಯ ದರ್ಶನ ಮಾಡಬೇಕು. ಗುರುಗಳ ಸೇವೆ, ತಂದೆ ತಾಯಿಯ ಸೇವೆ ಮಾಡಬೇಕು. ಕಷ್ಟದಲ್ಲಿ ಇರುವ ಜನರಿಗೆ ಸಹಾಯ ಮಾಡಬೇಕು, ರುದ್ರ ಸ್ತೋತ್ರವನ್ನು ಪಠಿಸಿ.

ಆಂಜನೇಯ ಸ್ವಾಮಿಯ ದರ್ಶನ, ಪೂಜೆ ಮತ್ತು ಅಭಿಷೇಕ ಮಾಡಿಸಬೇಕು. ಕೇಸರಿ ತಿಲಕವನ್ನು ಧರಿಸಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *