ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿ ಚಕ್ರಕ್ಕೆ ಸಂಚಾರ ಮಾಡುತ್ತವೆ. 2024ರ ವೃಶ್ಚಿಕ ರಾಶಿಯವರ ಯುಗಾದಿ ವಾರ್ಷಿಕ ಭವಷ್ಯವನ್ನು ತಿಳಿಯೋಣ.

ಗುರು ಗ್ರಹ ಏಪ್ರಿಲ್ ತಿಂಗಳಿನ 31 ನೇ ತಾರೀಖು ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶ ಮಾಡುತ್ತದೆ. ವೃಶ್ಚಿಕ ರಾಶಿಯ ಜನರಿಗೆ ಯುಗಾದಿ ಹಬ್ಬದ ನಂತರ 21 ದಿನಗಳು ಮಾತ್ರ ಗುರು ಬಲ ಇರುವುದಿಲ್ಲ. ಮೇ ತಿಂಗಳಿನ 1ನೇ ತಾರೀಖಿನಿಂದ ಬರುವ ವರ್ಷ 2025ರ ಯುಗಾದಿ ಹಬ್ಬದವರೆಗೂ ಗುರು ಬಲ ಚೆನ್ನಾಗಿ ಇರುತ್ತದೆ. ಪಂಚಮಾಧಿಪತಿ ಪೂರ್ವಪುಣ್ಯನಾಧಿಪತಿ ಗುರು ಗ್ರಹ ಹಿಂದಿನ ಕಾಲದಲ್ಲಿ ಮಾಡಿದ ಪುಣ್ಯವನ್ನು ಪ್ರಾಪ್ತಿ ಮಾಡುತ್ತದೆ.

ಗುರು ಗ್ರಹ ವೃಶ್ಚಿಕ ರಾಶಿಯವರಿಗೆ ಸಂತಾನ ಭಾಗ್ಯವನ್ನು ಕೊಡುತ್ತದೆ. ಸಂಪತ್ತು, ಐಶ್ವರ್ಯ, ಹಣ ವೃದ್ಧಿ ಆಗುತ್ತದೆ. ಕೌಟುಂಬಿಕ ಸಂತಸ, ಸುಖ, ಶಾಂತಿ ಮತ್ತು ನೆಮ್ಮದಿ ಕೊಡುವುದು ಗುರು ಗ್ರಹ. ವಾಕ್ ಚಾತುರ್ಯ ಚೆನ್ನಾಗಿ ಇಡುವುದು, ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸಲು ಸಹಾಯ ಮಾಡುವುದು ಗುರು ಗ್ರಹ. ಕಂಕಣ ಭಾಗ್ಯ ಕೂಡಿ ಬರುತ್ತದೆ. ಮನೆಯಲ್ಲಿ ಶುಭ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುತ್ತದೆ.

ಜಂಟಿ ವ್ಯವಹಾರದಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಗುರು ಗ್ರಹದ ವೀಕ್ಷಣೆಯಿಂದ ರಾಹು ದೋಷ, ಕುಜ ದೋಷ, ರವಿ ದೋಷ, ಪ್ರಾಣ ಗಂಡಾಂತರ ಎಲ್ಲಾ ದೋಷಗಳು ದೂರ ಆಗುತ್ತದೆ. ಸಾತ್ವಿಕ ಸೌಂದರ್ಯ ಸಿಗುತ್ತದೆ ಮುಖದಲ್ಲಿ ಕಾಂತಿ ಹೆಚ್ಚುತ್ತದೆ. ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ, ಒಳ್ಳೆ ಜೀವನ ಸಂಗಾತಿ ಮತ್ತು ಕುಟುಂಬ ಸಿಗುತ್ತದೆ. ತೀರ್ಥ ಯಾತ್ರೆಗೆ ಹೆಚ್ಚಿನ ಯೋಗವಿದೆ.

ಈ ರಾಶಿಯವರಿಗೆ ಬುದ್ದಿ ಅಭಿವೃದ್ದಿ ಆಗುತ್ತದೆ, ರಾಜ ಯೋಗವಿದೆ. ವಿವಾಹದ ನಂತರ ಧನ ಲಾಭ ಸಿಗುತ್ತದೆ.
ಸಂತಸ, ಭೋಗ ಭಾಗ್ಯ ಎನ್ನುವುದು ಹೆಚ್ಚಾಗಿ ಸಿಗುತ್ತದೆ. ಈ ರಾಶಿಯವರು ಉದ್ಯೋಗ ಬದಲಾವಣೆ ಮಾಡಬಹುದು, ನೂತನ ಉದ್ಯೋಗ ಅವಕಾಶ ಲಭಿಸುತ್ತದೆ. ಭೂಮಿ ಖರೀದಿ ಮಾಡುವ ಅವಕಾಶ ಇರುತ್ತದೆ. ನೂತನ ಮನೆ ನಿರ್ಮಾಣ ಮಾಡುವ ಯೋಗವಿದೆ.

ಹೊಸ ವಾಹನ ಖರೀದಿ ಮಾಡುವ ಅವಕಾಶ ಇರುತ್ತದೆ. ಒಳ್ಳೆ ಗುಣ ನಡತೆ, ಸೃಜನಶೀಲತೆ ಎಲ್ಲಾ ಈ ರಾಶಿಯವರಿಗೆ ಹೆಚ್ಚಾಗಿ ಇರುತ್ತದೆ. ಉನ್ನತ ವ್ಯಾಸಂಗ ಯೋಗ, ತಾಯಿ ಸುಖ, ಮನಸ್ಸು ಹಗುರವಾಗಿ ಇರುತ್ತದೆ. ಶನಿ ದೇವರ ಪ್ರಭಾವದಿಂದ ತಾಯಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಮನೆ ಅಭಿವೃದ್ದಿ ಆಗುತ್ತದೆ. ಆರೋಗ್ಯ ಉತ್ತವಾಗಿರುತ್ತದೆ. ಮನಸಲ್ಲಿ ಶಾಂತಿ ನೆಲೆಸುತ್ತದೆ. ಬಂಧು ಮಿತ್ರರಿಂದ ನೆಮ್ಮದಿ ಸಿಗುತ್ತದೆ.

ಈ ರಾಶಿಯವರು ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಗುಣ ಪಡೆಯುವರು. ಗುರು ಗ್ರಹದ ಬಲದಿಂದ ಶನಿ ದೇವರ ವಕ್ರ ದೃಷ್ಟಿ ಕೂಡ ಪ್ರಭಾವ ಬೀರುವುದಿಲ್ಲ. ಆಚಾರ ವಿಚಾರಗಳು ವೃದ್ಧಿ ಆಗುತ್ತದೆ. ದುರಾಸೆಗಳು ದೂರವಾಗುತ್ತದೆ, ವೃಶ್ಚಿಕ ರಾಶಿಯವರ ವಾರ್ಷಿಕ ಭವಿಷ್ಯ ತುಂಬಾ ಚೆನ್ನಾಗಿ ಇದೇ. ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಗುರುಗ್ರಹಕ್ಕೆ ಯಾವುದೇ ಶಾಂತಿ ಬೇಡ.

ಪರಿಹಾರ :-ಶನಿ ದೇವರ ದೇವಸ್ತಾನಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಮಾಡಿ. ದೇವರ ದರ್ಶನ ಪಡೆಯಬೇಕು. ಶನಿ ಮಹಾತ್ಮನಿಗೆ ಒಂದು ತೈಲ ಅಭಿಷೇಕ ಮಾಡಿಸಬೇಕು. ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ, ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

Leave a Reply

Your email address will not be published. Required fields are marked *