ಮಾತು ಬೆಳ್ಳಿ ಮೌನ ಬಂಗಾರ ಎಂಬುದು ಸತ್ಯಕ್ಕೆ ಹತ್ತಿರವಾದ ಒಂದು ಮಾತು ಯಾಕಂದ್ರೆ ಈ ಜಗತ್ತಿನಲ್ಲಿ ಮಾತಿಗೆ ಎಷ್ಟು ಮಹತ್ವವಿದೆಯೋ ಆದರೆ ಮೌನಕ್ಕೆ ಅದಕ್ಕಿಂತ ಹೆಚ್ಚಿನದಾದ ಬೆಲೆಯಿದೆ, ಅದಕ್ಕೆ ಹೇಳುವುದು ಮಾತು ಬೆಳ್ಳಿ ಮೌನ ಬಂಗಾರ ಅಂತ. ಬೆಳ್ಳಿಗಿಂತ ಬಂಗಾರಕ್ಕೆ ಬೆಲೆ ಜಾಸ್ತಿ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ ಎಲ್ಲಾ ಸಮಯದಲ್ಲೂ ಬಾಯಿಗೆ ಬಂದಂತೆ ಮಾತನಾಡುವುದು ಉತ್ತಮ ಗುಣವಲ್ಲ ಎಲ್ಲಿ ಮೌನವನ್ನು ತಾಳಬೇಕೋ ಅಲ್ಲಿ ಮೌನವನ್ನು ಕಾಪಾಡಿಕೊಳ್ಳುವುದು ಮತ್ತೆ ಸಮಯಕ್ಕೆ ತಕ್ಕಂತೆ ಕಡಿಮೆ ಮಾತನಾಡುವುದೂ ಕೂಡ ಒಬ್ಬ ಜಾಣ ಮನುಷ್ಯನ ನಿಜವಾದ ಬುದ್ಧಿ ಚಾತುರ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯ ನೀತಿಯಲ್ಲಿ ಮಾತಿನ ಬಗ್ಗೆ ಅದರಲ್ಲಿಯೂ ಕಡಿಮೆ ಮಾತನಾಡುವವರ ಬಗ್ಗೆ ಹಲವಾರು ಮಾತುಗಳನ್ನು ಸ್ಪಷ್ಟಪಡಿಸಿದ್ದಾರೆ, ಅವರ ಪ್ರಾಕಾರ ಹೆಚ್ಚು ಮಾತನಾಡುವವರಿಗಿಂತ ಕಡಿಮೆ ಮಾತನಾಡುವವರೇ ಹೆಚ್ಚು ಕಷ್ಟಗಳಿಗೆ ಸಿಲುಕುತ್ತಾರಂತೆ. ಯಾಕಂದ್ರೆ ವೇದ ಸುಳ್ಳಾದರು ಗಾದೆ ಸುಳ್ಳಗದು ಎಂಬ ಮಾತಿದೆ ಹಾಗೆಯೇ ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆಯೂ ನೂರಕ್ಕೆ ನೂರು ಸತ್ಯದ ಮಾತು.

ಆಚಾರ್ಯ ಚಾಣಕ್ಯರ ಪ್ರಾಕಾರ ನಾವು ತುಂಬಾ ಪ್ರಾಮಾಣಿಕತೆಯಿಂದ ಇರುವುದು ಮತ್ತು ನೇರವಾಗಿ ಮಾತನಾಡುವುದೂ ಎರಡೂ ಹಾನಿಕಾರಕವೇ ಯಾಕಂದ್ರೆ ಕಾಡಿನಲ್ಲಿ ನಾವು ನೋಡಿದರೆ ನೇರವಾಗಿ ಬೆಳೆದಿರುವ ಮರಗಳೇ ಮೊದಲು ಕಡಿಯಲ್ಪಡುವುದು ಆದ ಕಾರಣ ಬಹಳ ನಿಷ್ಟುರವಾಗಿ ಮತ್ತು ನೇರವಾಗಿ ಮಾತನಾಡುವುದೂ ಉತ್ತಮವಲ್ಲ.

ಇನ್ನು ಹೇಗೆ ಹೆಚ್ಚಿಗೆ ಮಾತನಾಡುವುದೂ ಮತ್ತು ನೇರವಾಗಿ ಮಾತನಾಡುವುದೂ ಉತ್ತಮಾವಲ್ಲವೋ ಹಾಗೆಯೇ ಕಡಿಮೆ ಮಾತನಾಡುವುದೂ ಸಹ ಉತ್ತಮವಲ್ಲ ಎಂಬುದೇ ಚಾಣಕ್ಯರ ಮಾತೂ ಕೂಡಾ ಹಾಗಿದೆ, ಯಾಕಂದ್ರೆ ಕಡಿಮೆ ಮಾತನಾಡುವವರಲ್ಲಿ ಜ್ಞಾನವಿರುತ್ತೇ ಹೌದು ಆದರೆ ನಮ್ಮ ಮಾತುಗಳು ಅವಶ್ಯಕವಿರುವ ಸಮಯದಲ್ಲಿಯೂ ಕೂಡಾ ಮಾತನಾಡದೇ ಉಳಿಯುವುದರಿಂದ ಸತ್ಯವನ್ನು ಮುಚ್ಚಿಡುವುದರಿಂದ ಜನರು ನಿಮ್ಮನ್ನು ಕೀಳಾಗಿ ಕಾಣುವ ಸಂಬವವಿರುತ್ತದೆ. ಅಲ್ಲದೇ ನಿಮ್ಮನ್ನು ಇತರರ ಮುಂದೆ ಹೀಯಾಳಿಸುವ ಸಂಭವವೂ ಇರುತ್ತದೆ. ಹಾಗಾಗಿ ಸಂಬಂಧಗಳ ನಿರ್ವಹಣೆಯಲ್ಲಿ ನಾವು ಹೆಚ್ಚು ಮಾತನಾಡುವುದು ಹೇಗೆ ಉತ್ತಮವಲ್ಲವೋ ಹಾಗೆಯೇ ಸಮಯಕ್ಕೆ ಏನು ಬೇಕೋ ಅದನ್ನು ಮಾತನಾಡಲೂ ಬೇಕು ಇಲ್ಲವಾದಲ್ಲಿ ನೀವು ನಿಮ್ಮ ಸಂಬಂದಗಳನ್ನು ಕೆಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ, ಆದ್ದರಿಂದ ಆದಷ್ಟು ಕಡಿಮೆ ಮಾತನಾಡುವವರು ನಿಮ್ಮ ಮಾತುಗಳ ಅಗತ್ಯ ಯಾವ ಸಮಯಕ್ಕೆ ಯಾರ ಮುಂದೆ ಇರುತ್ತದೆಯೋ ಅಲ್ಲಿಯಾದರೋ ಮಾತನಾಡಬೇಕೆಂಬುದೇ ಚಾಣಕ್ಯ ನೀತಿಯ ಸಾರಾಂಶವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!