ನಮ್ಮಲ್ಲಿ ಹಲವಾರು ನಂಬಿಕಗಳು ಅಂದರೆ ವಿಗ್ರಹಗಳನ್ನು ಪೂಜೆ ಮಾಡುವುದು ಫೋಟೋಗಳಿಗೆ ಪೂಜೆ ಮಾಡುವುದು ದೊಡ್ಡ ದೊಡ್ಡ ದೇವಸ್ತಾನಗಳಿಗೆ ಹರಕೆ ಕಟ್ಟಿಕೊಳ್ಳುವುದು ಹರಿಕೆ ತೀರಿಸುವುದು ಕಾಣಿಕೆಗಳನ್ನು ಕಟ್ಟುವುದು ಮುಡಿ ಕೊಡುವುದು ಹೀಗೆ ಹತ್ತು ಹಲವಾರು ಆಚರಣೆಗಳನ್ನು ನಾವು ಬಹಳ ಹಿಂದಿನಿಂದಲೂ ಆಚರಿಸುತ್ತಲೇ ಬಂದಿದ್ದೇವೆ, ಹಾಗೆಯೇ ನಾವಿಲ್ಲಿ ಹೇಳಹೊರಟಿರೋದು ಇವೆಲ್ಲಕ್ಕಿಂತ ವಿಶಿಷ್ಟವಾದ ಒಂದು ಆಚರಣೆಯ ಬಗ್ಗೆ. ಹೌದು ಇದೊಂದು ವಿಶಿಷ್ಟವಾದ ದೇವಾಲಯ ಈ ದೇವಾಲಯದಲ್ಲಿ ನಾವು ಬೇರೆ ಯಾವುದೇ ರೀತಿಯ ಹರಿಕೆಗಳನ್ನು ಮಾಡಿಕೊಳ್ಳುವಂತಿಲ್ಲ ತೀರಿಸುವಂತೆಯೂ ಇಲ್ಲಾ ಇಲ್ಲಿ ಏನೇ ಹರಿಕೆ ಮಾಡಿಕೊಂಡರು ಸಹ ಮಣ್ಣಿನ ಬೊಂಬೆಗಳ ಮೂಲಕವೇ ನಾವು ಹರಿಕೆಯನ್ನು ದೇವರಿಗೆ ಸಮರ್ಪಿಸಿ ಕೃತಜ್ಞರಾಗಬೇಕು, ಹಾಗಾದ್ರೆ ಆ ವಿಶಿಷ್ಟವಾದ ದೇವಾಲಯದ ಬಗ್ಗೆ ನಾವು ಕಲೆಹಾಕಿರುವ ಒಂದಷ್ಟು ಕುತೂಹಲಕಾರಿ ಮಾಹಿತಿಯನ್ನು ನಿಮಗೆ ನೀಡುತ್ತೇವೆ ಬನ್ನಿ.

ಈ ದೇವಸ್ತಾನಕ್ಕೆ ಏಳು ಶತಮಾನಗಳ ಇತಿಹಾಸವಿದೆ ಇಲ್ಲಿ ಕಟ್ಟಿದ ಹರಕೆ ಕಂಡಿತ ತೀರುತ್ತದೆ ಎಂಬುದು ಜನರ ನಂಬಿಕೆ. ಹಲವು ಅಸಾಧ್ಯವಾದ ರೋಗಗಳ ನಿವಾರಣೆ ಮನೆ ಕಟ್ಟುವುದು ಮಗು ಇಲ್ಲದವರು ಇತ್ಯಾದಿ ಹರಕೆಗಳನ್ನು ಹೊತ್ತು ದೇಶದ ಮೂಲೆ ಮೂಲೆಗಳಿಂದ ಭಕ್ತರು ಇಲ್ಲಿಗೆ ಬರುತ್ತಾರೆ ಕೇವಲ ಮಣ್ಣಿನಿಂದ ಭಕ್ತರ ಹರಕೆಗಳನ್ನು ತೀರಿಸುತ್ತಾನೆ ಇಲ್ಲಿಯ ದೈವ ಶ್ರೀ ಸದಾಶಿವರುದ್ರ ಸ್ವಾಮಿ 13 ನೇ ಶತಮಾನದಲ್ಲಿ ಆಡಳಿತದಲ್ಲಿದ್ದ ಬಾಂಗಾ ಅರಸರು ಈ ದೇವಾಲಯವನ್ನು ಅಭಿವೃದ್ಧಿಗೊಳಿಸಿದ್ದಾರೆಂಬುದಕ್ಕೆ ಇಲ್ಲಿ ಪುರಾವೆಗಳಿವೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧರ್ಮಸ್ಥಳದಿಂದ ಸುಮಾರು 13 ಕಿಲೋಮೀಟರ್ ಗಡಾಯಿ ಕಲ್ಲಿನ ತಳದಲ್ಲಿ ನಿರ್ಮಿಸಿದಂತೆ ಕಾಣುತ್ತದೆ ಈ ದೇವಸ್ಥಾನ ಈ ಮಣ್ಣಿನ ಹರಕೆ ಖ್ಯಾತಿಯ ಈ ದೇವಸ್ಥಾನ ಸೂರ್ಯ ಊರಿನಲ್ಲಿ ಇರುವುದರಿಂದ ಈ ದೇವಸ್ಥಾನವು ಸೂರ್ಯ ದೇವಸ್ಥಾನ ಎಂದೇ ಪ್ರಸಿದ್ಧವಾಗಿದೆ

ಈ ದೇವಸ್ಥಾನದ ಎಡ ಭಾಗದಲ್ಲಿ ಸುಂದರವಾದ ಕಲ್ಯಾಣಿ ಹಾಗೂ ಹರಕೆ ಬನ ಕಾಣಸಿಗುತ್ತದೆ ಬಹಳ ವರ್ಷಗಳಿಂದ ತನ್ನ ಪ್ರಕೃತಿ ಸೌಂದರ್ಯವನ್ನು ಕಾಯ್ದುಕೊಂಡು ಬಂದಿರುವ ಈ ಬನ ಪ್ರವಾಸಿಗರ ಸ್ವರ್ಗ ಎಂದೇ ಹೇಳಬಹುದು ಭಕ್ತರು ತಾವು ನಿರ್ಮಿಸಿದ ಹರಕೆಗಳನ್ನು ಹರಕೆ ಬನದಲ್ಲಿ ಹಾಕುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ ಈ ಬನದಲ್ಲಿ ಎಲ್ಲಿ ನೋಡಿದರಲ್ಲಿ ಚಿಕ್ಕ ಚಿಕ್ಕ ಮಣ್ಣಿನ ಮೂರ್ತಿಗಳು ಕಾಣಸಿಗುತ್ತವೆ ದನ ಕರು ತಾಯಿ ಮಗು ಮೂತ್ರ ಪಿಂಡ ಹೃದಯ ಬೈಕ್ ಕಾರು ಮನೆ ಬಸ್ಸು ವಿಮಾನ ಕಂಪ್ಯೂಟರ್ ಸೇರಿದಂತೆ ನಮ್ಮ ದಿನಬಳಕೆಯ ಎಲ್ಲ ವಸ್ತುಗಳನ್ನು ನಾವಿಲ್ಲಿ ಮಣ್ಣಿನ ರೂಪದಲ್ಲಿ ನೋಡಬಹುದು ನಿಮಗೆ ಬೇಕಾದ ಹರಕೆ ಮೂರ್ತಿಯ ಪ್ರತೀಕವಾಗಿ ಇಲ್ಲಿಡಬೇಕಾಗುತ್ತದೆ ಈ ಮೂರ್ತಿಗಳು ನಿಮಗೆ 50 ರಿಂದ 200 ರೂ ಗಳ ಒಳಗೆ ನಿಮಗೆ ದೊರೆಯುತ್ತವೆ ಈ ಬನಕ್ಕೆ ಮೇಲ್ಛಾವಣಿ ಇಲ್ಲದ ಕಾರಣ ಕೆಲವು ಮಣ್ಣಿನ ಮೂರ್ತಿಗಳು ಮಳೆ ಬಂದರೆ ತನ್ನ ಮೂಲ ರೂಪಕ್ಕೆ ಜಾರುತ್ತವೆ ಪ್ರತಿ ಬಾರಿಯೂ ನೀವು ದೇವಸ್ಥಾನಕ್ಕೆ ಬಂದೇ ಹರಕೆಯನ್ನು ತೀರಿಸಬೇಕೆಂದೇನೂ ಇಲ್ಲಾ ನೀವು ಮನೆಯಲ್ಲಿಯೇ ಹರಕೆಗಳ ಹಣವನ್ನು ತೆಗೆದಿಡಬಹುದು

ಇಲ್ಲಿಗೆ ತಲುಪುವ ಮಾರ್ಗ ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ 13 ಕಿಲೋಮೀಟರ್ ಹಾಗೂ ಬೆಳ್ತಂಗಡಿ ಇಂದ ಕಿಲ್ಲೂರು ಮಾರ್ಗವಾಗಿ 8 ಕಿಲೋಮೀಟರ್ ನಲ್ಲಿ ಈ ದೇವಸ್ಥಾನ ಇದೆ ಬಗೆಹರಿಯದ ಅದೆಷ್ಟೋ ಸಮಸ್ಯೆಗಳಿಗೆ ಪರಿಹಾರ ಈ ದೇವಸ್ಥಾನದಲ್ಲಿ ಸಿಕ್ಕಿದೆ ಹಾಗಾಗಿಯೇ ಇಲ್ಲಿಗೆ ಭಕ್ತರ ಸಂಖ್ಯೆ ಹೆರಳವಾಗಿದೆ. ದೇವಾಲಯದ ಸಂಪೂರ್ಣ ವಿಳಾಸ ಶ್ರೀ ಸದಾಶಿವರುದ್ರ ದೇವಾಲಯ, ಸೂರ್ಯ ಟೆಂಪಲ್ ಪೆರ್ಮಾಣು ಬೆಳ್ತಂಗಡಿ ನಾಡು ಧಕ್ಷಿಣ ಕನ್ನಡ ಜಿಲ್ಲೆ 574214.

Leave a Reply

Your email address will not be published. Required fields are marked *

error: Content is protected !!