Shri Siddeshwar Swamiji ನಡೆದಾಡುವ ಸಂತ ಎಂದೇ ಹೆಸರುವಾಸಿಯಾದ ಸ್ವಾಮೀಜಿ ಎಂದರೆ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಸಾವಿರಾರು ಸಂಖ್ಯೆಯಲ್ಲಿ ಭಕ್ತರಿಗೆ ಜೀವನದ ಮೌಲ್ಯವನ್ನು ತಿಳಿಸಿಕೊಡುತಿದ್ದರು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಪಂಚ ಭಾಷೆಗಳಲ್ಲಿ ಪ್ರವಚನ ನೀಡುತ್ತಿದ್ದರು ದೇಶ ಕಂಡ ಎರಡನೆಯ ವಿವೇಕಾನಂದ ಎಂದು ಜ್ಞಾನಯೋಗಾಶ್ರಮ ಮಠದ ಸ್ವಾಮೀಜಿ ಶ್ರೀ ಸಿದೇಶ್ವರ ಸ್ವಾಮೀಜಿಯವರನ್ನು ಪೂಜೆ ಮಾಡುತ್ತಿದ್ದರು

ಸರಳತೆಯ ಜೀವನ ಸಾಗಿಸಿ ಪ್ರತಿಯೊಬ್ಬರಿಗೂ ಸಹ ಮಾದರಿಯಾಗಿ ಬದುಕಿದ್ದಾರೆ ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಸಿದ್ದೇಶ್ವರ ಸ್ವಾಮಿಗಳು. ಉಪನ್ಯಾಸ ಅಂಕಣ ಹಾಗೂ ಕೃತಿಗಳ ಮೂಲಕ ಅಸಂಖ್ಯಾತ ಜನರಿಗೆ ಸಾಂತ್ವನ ನೀಡಿದ್ದಾರೆ ಆದರೆ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಇದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಇಹಲೋಕವನ್ನು ತ್ಯಜಿಸಿದ್ದಾರೆ

ಇದರಿಂದ ಲಕ್ಷಾಂತರ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ ಶ್ರೀಗಳ ಚೇತರಿಕೆಗೆ ಲಕ್ಷಾಂತರ ಭಕ್ತರು ಪ್ರಾರ್ಥನೆ ಪೂಜೆ ನಡೆಸಿದ್ದರು ಆದರೂ ಸಹ ದೇವರ ಇಚ್ಛೆಯಂತೆ ಎಲ್ಲರನ್ನೂ ಬಿಟ್ಟು ದೇವಲೋಕದ ಕಡೆಗೆ ಪ್ರಯಾಣ ನಡೆಸಿದ್ದಾರೆ ನಾವು ಈ ಲೇಖನದ ಮೂಲಕ ಶ್ರಿ ಸಿದ್ದೇಶ್ವರ ಸ್ವಾಮೀಜಿಯವರ ಬಗ್ಗೆ ತಿಳಿದುಕೊಳ್ಳೋಣ.

ನಡೆದಾಡುವ ಸಂತ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದಾರೆ ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಇದ್ದರು ಮಠದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೂ ಸಹ ಕೊನೆ ಉಸಿರನ್ನು ಎಳೆದಿದ್ದಾರೆ ಸ್ವಾಮೀಜಿಯವರ ಬದುಕಿನ ಪ್ರತಿ ಹೆಜ್ಜೆಯೂ ಸಹ ರೋಚಕವಾಗಿದೆ ಪ್ರತಿಯೊಂದು ಹೆಜ್ಜೆಯೂ ಸಹ ಅರ್ಥ ಪೂರ್ಣ ಪಾಠವನ್ನು ಒಳಗೊಂಡಿದೆ ಹಾಗೆಯೇ ಎಷ್ಟೋ ಜನರ ಬಾಳಿಗೆ ಆಸರೆಯಾಗಿದ್ದರು ಹಾಗಾಗಿ ಅವರ ಆರೋಗ್ಯ ಸ್ಥಿತಿ ಬದಲಾಯಿಸಲಿ ಎಂದು ಕೋಟಿ ಕೋಟಿ ಭಕ್ತರು ದೇವರಲ್ಲಿ ಪ್ರಾರ್ಥನೆ ಮಾಡುತಿದ್ದರು ಆದರೆ ದೇವರ ಇಚ್ಚೆಯೆ ಬೇರೆ ಇತ್ತು ಸ್ವಾಮೀಜಿಯನ್ನು ತನ್ನ ಬಳಿ ಕರೆಸಿಕೊಂಡರು ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಇವರು ವಿಜಯಪುರದ ಜೀವಂತ ದೇವರು ಎಂದು ಪ್ರಸಿದ್ಧರಾಗಿದ್ದರು

ಈ ಯುಗದಲ್ಲಿ ಮಹಾತ್ಮರಲ್ಲಿ ಒಬ್ಬರಾಗಿ ಸಿದ್ದೇಶರ ಸ್ವಾಮೀಜಿ ಒಬ್ಬರು. ಸ್ವಾಮೀಜಿ ಉಪನ್ಯಾಸ ಅಂಕಣ ಹಾಗೂ ಕೃತಿಗಳ ಮೂಲಕ ಅಸಂಖ್ಯಾತ ಜನರಿಗೆ ಸಾಂತ್ವನ ನೀಡಿದ್ದಾರೆ ಇವರು ಬರಹ ಒಂದರಲ್ಲಿ ಹೇಳಿದ ಮಾತು ಅದೆಷ್ಟೋ ಜನರ ಚಿಂತನೆಯನ್ನು ಬದಲಾಯಿಸಿದೆ ಅದೇನೆಂದರೆ ನಾವು ಹುಡುಕುತಿರುತ್ತೇವೆ ಅದು ಇದು ಮತೊಂದನ್ನು ಸಂತೋಷವನ್ನು ಹಾಗೂ ದೇವರನ್ನು ಸಹ ಹುಡುಕುತ್ತೇವೆ ಹುಡುಕಬೇಡಿ ಸೂರ್ಯೋದಯದಲ್ಲಿ ಸೂರ್ಯಾಸ್ತದಲ್ಲಿ ಹೂವಿನಲ್ಲಿ ಹಸುರಿನಲಿ ಹರಿಯುವ ನೀರಿನಲ್ಲಿ ಮಗುವಿನ ನಗುವಿನಲ್ಲಿ ಅವನು ಇಲ್ಲೇ ಇದಾನೆ ನೋಡಿ ಹುಡುಕಬೇಡಿ ಎಂದು ಹೇಳಿದ್ದರು .

ಸಾಮಾಜಿಕ ಪರಿವರ್ತನೆ ಮಾಡುವ ಸಂಸ್ಥೆ ಗಳ ಸಾಲಿನಲ್ಲಿ ವಿಜಯಪುರದ ಜ್ಞಾನಯೋಗಾಶ್ರಮ ಸೇರುತ್ತದೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಜ್ಞಾನ ಯೋಗಾಶ್ರಮ ಅಧ್ಯಕ್ಷರಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದರು ನಿಸ್ವಾರ್ಥ ಸೇವೆ ಸರಳ ಜೀವನ ಅಕ್ಷರ ದಾಸೋಹ ಶ್ರೀಗಳ ಮೂಲ ಉದ್ದೇಶವಾಗಿತ್ತು ಆಸೆಯೇ ದುಃಖಕ್ಕೆ ಮೂಲ ಎಂಬುದನ್ನು ಅರಿತಿರುವ ಸ್ವಾಮೀಜಿ ಸಿದಾ ಸಾದ ಸರಳ ಸುಂದರ ಹಾಗೂ ಆ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ ಹಣ ಮತ್ತು ವಸ್ತುಗಳ ಮೇಲೆ ಆಸೆ ಹುಟ್ಟಬಾರದು ಎಂದು ತಾವು ಧರಿಸುವ ಬಟ್ಟೆಗಳಿಗೆ ಜೇಬು ಸಹ ಇಡುತಿರಲಿಲ್ಲ.

ಸ್ವಾಮೀಜಿಯವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸಾಮಾನ್ಯ ಕೃಷಿ ಕುಟುಂಬದಲ್ಲಿ ಸಾವಿರದ ಓಂಬೈನೂರಾ ನಲವತ್ತೊಂದು ಅಕ್ಟೋಬರ್ ಇಪ್ಪತ್ನಾಲ್ಕರಲ್ಲಿ ಜನಿಸಿದರು ಸಿದ್ದಗುಂಡಪ್ಪ ಎಂಬುದು ಇವರ ಬಾಲ್ಯದ ಹೆಸರಾಗಿತ್ತು ತಮ್ಮ ಗ್ರಾಮದ ಶಾಲೆಯಲ್ಲಿ ನಾಲ್ಕನೇ ತರಗತಿ ಮುಗಿಸಿದ ನಂತರ ಯೋಗ್ರಾಶ್ರಮದ ಮಲ್ಲಿಕಾರ್ಜುನ ಸ್ವಾಮಿ ಅವರ ಬಳಿ ಬರುತ್ತಾರೆ

ಮಲ್ಲಿಕಾರ್ಜುನ ಸ್ವಾಮಿ ಅವರು ಪ್ರವಚನದ ಮೂಲಕ ಜನರಲ್ಲಿ ಜ್ಞಾನದ ಜ್ಯೋತಿಯನ್ನು ಬೇಳಗುತ್ತಿದ್ದರು ಸ್ವಾಮಿಗಳು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ತಿಂಗಳು ಗಟ್ಟಲೆ ಪ್ರವಚನ ನೀಡುತ್ತಿದ್ದರು ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ವಿದ್ಯೆಗಾಗಿ ಕಷ್ಟ ಪಡುತಿದ್ದನ್ನು ಗಮನಿಸಿದರು ನಂತರ ವಿದ್ಯಾಸಂಸ್ಥೆಯನ್ನು ಪ್ರಾರಂಭಿಸಿದರು ಹಾಗೆಯೇ ಊಟ ವಸತಿಗಳಿಗೆ ವ್ಯವಸ್ಥೆ ಮಾಡಿದ್ದರು

ಇದರಿಂದ ಸಾವಿರಾರು ಮಕ್ಕಳು ವಿದ್ಯಾವಂತರಾದರು ವಿದ್ಯೆ ಕಲಿಯಲು ಬಂದ ಸಾವಿರಾರು ಮಕ್ಕಳಲ್ಲಿ ಸಿದ್ದಗುಂಡಪ್ಪನು ಒಬ್ಬರಾಗಿದ್ದರು ಮಲ್ಲಿಕಾರ್ಜುನ ಶ್ರೀ ಗಳು ಮಾಡುವ ಪ್ರವಚನ ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಭೆಗಳಿಗೆ ಆಸಕ್ತನಾಗಿದ್ದ ಸಿದ್ದ ಗುಂಡಪ್ಪ ಅವರನ್ನು ಕರೆದುಕೊಂಡು ಹೋಗುತ್ತಿದ್ದರು ಸಿದ್ದೇಶ್ವರ ಸ್ವಾಮೀಜಿ ಅವರು ಆಧ್ಯಾತ್ಮದ ಸಮಗ್ರವಾಗಿ ತಿಳಿದುಕೊಂಡರು ವಿದ್ಯಾಭ್ಯಾಸದಲ್ಲಿ ಸಹ ಪ್ರತಿಭಾವಂತರಾಗಿದ್ದರು.

ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದರು ಹಾಗೆಯೇ ಕೊಲ್ಲಾಪುರದ ವಿಶ್ವವಿದ್ಯಾನಿಲಯದಲ್ಲಿ ತತ್ವಶಾಸ್ತ ವಿಷಯದಲ್ಲಿ ಎಂ ಎ ಪದವಿಯನ್ನು ಪಡೆದಿದ್ದಾರೆ ಈ ಅವಧಿಯಲ್ಲಿ ಸಿದ್ದೇಶ್ವರರು ಕೊಲ್ಲಾಪುರದಲ್ಲಿ ಶ್ರೀ ವಿಜಯ ಪಾಟೀಲರ ಮನೆಯಲ್ಲಿ ವಾಸವಿದ್ದರು ಆ ಅವಧಿ ತಮ್ಮ ಗುರು ಮಲ್ಲಿಕಾರ್ಜುನ ಸ್ವಾಮೀಜಿಯ ಪ್ರವಚನವನ್ನು ಒಂದುಗುಡಿಸಿ ಸಿದ್ದಾಂತ ಶಿಖಾಮಣಿ ಎಂಬ ಪುಸ್ತಕವನ್ನು ಬರೆದು ಗುರುಗಳ ಹೆಸರಿನಲ್ಲಿ ಪ್ರಕಟಣೆ ಮಾಡಿದ್ದರು

ಆಗ ಅವರಿಗೆ ಹತ್ತೊಂಬತ್ತು ವರ್ಷ ಆಗಿತ್ತು ಸ್ನಾತಕೊತ್ತರ ಪದವಿ ಪಡೆದು ಸಿದ್ಧೇಶ್ವರ ಸ್ವಾಮೀಜಿ ಅವರಿಗೆ ಭಗವದ್ಗೀತೆ ಹಾಗೂ ಉಪನಿಷತ್ ಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿದ್ದರು. ಸಿದ್ದೇಶ್ವರ ಸ್ವಾಮೀಜಿಯವರು ಯೋಗ ಶಾಸ್ತ್ರ ಭಗವದ್ಗೀತೆ ವಚನ ಶಾಸ್ತ್ರ ಮುಂತಾದ ವಿಷಯಗಳ ಬಗ್ಗೆ ಗುರುಗಳ ಮುಖಾಂತರ ಕಲಿತರು ಜನಸಾಮಾನ್ಯರಿಗೆ ಅರ್ಥವಾಗದ ವೇದಾಂತದ ತತ್ವಗಳನ್ನು ಅತ್ಯಂತ ಸರಳವಾಗಿ ಜನರಿಗೆ ತಿಳಿಯುವ ಹಾಗೆ ವಿವರಿಸುವುದು

ಸ್ವಾಮೀಜಿಯ ವೈಶಿಷ್ಟ್ಯತೆ ಆಗಿರುತ್ತದೆ ಸಿದ್ದೇಶ್ವರರು ಬದುಕುವುದು ಹೇಗೆ ಬದುಕುವ ದಾರಿಗಳು ಯಾವವು ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು ಎಂಬುದನ್ನು ಉಪನಿಷತ್ ಮೂಲಕ ಇಡೀ ಭಾರತವನ್ನು ತಲುಪಿದೆ ಸಿದ್ದೇಶ್ವರರು ಅಲ್ಲಮ ಪ್ರಭು ವಚನಗಳ ಮೇಲೆ ಮಹತ್ತರವಾದ ಬೆಳಕನ್ನು ಚೆಲ್ಲಿದ್ದಾರೆ.

ಪ್ರಪಂಚದಾದ್ಯಂತ ಆಧ್ಯಾತ್ಮಿಕ ವಚನವನ್ನು ನೀಡಿದ್ದಾರೆ ಭಾರತೀಯ ಸಂತರ ಬಗ್ಗೆ ಅಮೂಲ್ಯವಾದ ಗ್ರಂಥಗಳನ್ನು ರಚನೆ ಮಾಡಿದ್ದಾರೆ ವೇದ ಯೋಗ ಸೂತ್ರ ವಚನ ಕುರಿತಾಗಿ ಸ್ವಾಮೀಜಿ ಉಪನ್ಯಾಸ ನೀಡುತ್ತಿದ್ದರು ಶ್ರೀ ಸ್ವಾಮೀಜಿ ಯವರು ಪತಂಜಲಿ ಯೋಗ ಶಾಸ್ತ್ರವನ್ನು ಸಂಪಾದಿಸಿದ್ದಾರೆ ಸಿದ್ದೇಶ್ವರ ಶ್ರೀಗಳು ಕನ್ನಡ ಸಂಸ್ಕೃತ ಹಿಂದಿ ಆಂಗ್ಲಭಾಷೆ ಮರಾಠಿ ಹೀಗೆ ಪಂಚ ಭಾಷೆಗಳಲ್ಲಿ ಪ್ರವಚನ ನೀಡುತ್ತಾರೆ

ಸಿದ್ದೇಶ್ವರ ಶ್ರೀಗಳ ಪ್ರವಚನ ಎಲ್ಲಿ ಏರ್ಪಡಿಸಿದರು ಸಹ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು ಜ್ಞಾನಯೋಗ ದ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ನಂತರ ಸಿದ್ದೇಶ್ವರ ಶ್ರೀಗಳು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಆಶ್ರಮದ ಚಟುವಟಿಕೆಯನ್ನು ಮುಂದುವರಿಸಿಕೊಂಡು ಬಂದರು ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರ ಶ್ರೀಗಳು ಮುಂದುವರಿಸಿಕೊಂಡು ಬಂದಿದ್ದರು. ಯಾವ ಸಂಸ್ಥೆಗಳಿಗೂ ಸಹ ಸಂಸ್ಥೆಯ ಹೆಸರಾಗಲಿ ಅವರ ಹೆಸರನ್ನು ಇಟ್ಟಿಲ್ಲ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎಂಬಂತೆ ನನ್ನದೇನಿದೆ ಎಲ್ಲವೂ ಭಗವಂತನಂದು ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು ಎಲ್ಲರಲ್ಲು ದೇವರನ್ನು ಕಾಣಬೇಕು

siddeswara swami uttara karnataka
siddeswara swami uttara karnataka

ನಾನು ನನ್ನದೆಂಬ ಮಮಕಾರ ಸಲ್ಲದು ಇಹಪರ ಎರಡು ಒಂದೇ ಎಂದು ಸಾರುತ್ತ ಅದರಂತೆ ನಡೆಯುತ್ತಿರುವ ಅಪರೂಪದ ಯೋಗಿಗಳು ಸಿದ್ದೇಶ್ವರ ಶ್ರೀಗಳು ಹಾಗೆಯೇ ಸಿದ್ದೇಶ್ವರ ಶ್ರೀಗಳಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ಘೋಷಿಸಿತ್ತು ಕರ್ನಾಟಕ ವಿಶ್ವ ವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು ಆದರೆ ಅಂತಹ ಅನೇಕ ಪ್ರಶಸ್ತಿ ಪುರಸ್ಕಾರವನ್ನು ಸಿದ್ದೇಶ್ವರ ಶ್ರೀಗಳು ವಿನಮ್ರವಾಗಿ ನಿರಾಕರಿಸಿದರು ಅವರು ನಾನೊಬ್ಬ ಸರಳ ವ್ಯಕ್ತಿ ಸಾಮಾನ್ಯ ಜೀವನ ನಡೆಸುತ್ತಾ ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ನನ್ನ ಉದ್ದೇಶ ಹಾಗಾಗಿ ಪ್ರಶಸ್ತಿಗಳ ಅವಶ್ಯಕತೆ ನನಗೆ ಇಲ್ಲ

ಆಧ್ಯಾತ್ಮ ಆದರ್ಶ ನೈತಿಕತೆ ಕೇವಲ ಬೋಧನೆ ಮಾಡುವುದು ಅಷ್ಟೇ ನನ್ನ ಕೆಲಸವಲ್ಲ ಬದಲಾಗಿ ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನನ್ನ ಧರ್ಮ ಎಂದು ಹೇಳಿ ಗೌರವ ಪೂರ್ವಕವಾಗಿ ಪ್ರಶಸ್ತಿಯನ್ನು ನಿರಾಕರಿಸಿದರು ಜನರಿಗೆ ಬದುಕು ಎಂಬುದನ್ನು ತಿಳಿಸುತ್ತಿದ್ದ ಹಾಗೂ ತಮ್ಮ ಜೀವನದಲ್ಲಿ ಸಹ ಸರಳ ನೈಪುಣ್ಯತೆಯನ್ನು ಮೈಗೂಡಿಸಿಕೊಂಡ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಲಕ್ಷಾಂತರ ಜನರನ್ನು ಅಲುಗಿದ್ದಾರೆ ಹೀಗಾಗಿ ಎಲ್ಲರ ಮನೆಗಳಲ್ಲಿ ಸಹ ಮನಗಳಲ್ಲಿ ದುಃಖ ಮನೆಮಾಡಿದೆ.

By

Leave a Reply

Your email address will not be published. Required fields are marked *