Actor Darshan Mother Meena thoogudeepa : ಕನ್ನಡ ಚಿತ್ರರಂಗದ ಖ್ಯಾತ ಕಲಾವಿದ ತೂಗುದೀಪ ಶ್ರೀನಿವಾಸ್ ಅವರಿಗೆ ಕಿಡ್ನಿ ಸಮಸ್ಯೆಯಿತ್ತು. ಎರಡು ಕಿಡ್ನಿಗಳು ವೈಫಲ್ಯವಾಗಿ ಸಾವು-ಬದುಕಿಗಾಗಿ ಹೋರಾಡುತ್ತಿದ್ದರು. ಈ ಸಂದರ್ಭದಲ್ಲಿ ಪತ್ನಿ ಮೀನಾ ತೂಗುದೀಪ ಅವರೇ ದರ್ಶನ್ ತಂದೆಗೆ ಒಂದು ಕಿಡ್ನಿ ದಾನ ಮಾಡಿ ಗಂಡನ್ನು ಉಳಿಸಿಕೊಂಡರು. ಕಿಡ್ನಿ ಕೊಟ್ಟ ಮೇಲೆ ತೂಗುದೀಪ ಶ್ರೀನಿವಾಸ ಮೊದಲಿನಂತೆ ಆಗ್ತಾರೆ ಎಂಬ ಬಹುದೊಡ್ಡ ಆಸೆ ಮನೆಯವರಲ್ಲಿತ್ತು. ಆ ಆಸೆ ಹೆಚ್ಚು ಕಾಲ ಉಳಿಯಲಿಲ್ಲ ಎನ್ನುವುದು ತೀರಾ ನೋವಿನ ಸಂಗತಿ. 52ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಖ್ಯಾತ ಕಲಾವಿದ ಶ್ರೀನಿವಾಸ ನಿಧನರಾದರು.

ತೂಗುದೀಪ ಶ್ರೀನಿವಾಸ ಅವರ ಕೊನೆಯ ದಿನಗಳು, ಕಿಡ್ನಿ ಸಮಸ್ಯೆಯಿಂದ ಉಂಟಾದ ಪರಿಸ್ಥಿತಿ, ಕಿಡ್ನಿ ದಾನ ಮಾಡಲು (Meena) ಮೀನಾ ಅವರು ನಿರ್ಧರಿಸಿದ್ದೇಕೆ ಎಂಬ ವಿಚಾರಗಳ ಬಗ್ಗೆ ದರ್ಶನ ತಾಯಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಡಿ ಬಾಸ್ ಅವರ ತಂದೆ ಕನ್ನಡ ಚಿತ್ರರಂಗದ ಖ್ಯಾತ ಖಳನಟ ತೂಗುದೀಪ ಶ್ರೀನಿವಾಸ್ ಅವರ ಕೊನೆಯ ಕ್ಷಣಗಳು ಹೇಗಿತ್ತು ನನ್ನ ಒಂದು ಕಿಡ್ನಿ ಕೊಡಲು ನಿರ್ಧರಿಸಿದೆ. ಒಂದೇ ಬೆಡ್‌ನಲ್ಲಿ ನಮ್ಮಿಬ್ಬರನ್ನು ಮಲಗಿಸಿದ್ದರು.

ಆಮೇಲೆ ನನ್ನನ್ನು ಅಲ್ಲಿಂದ ಕರೆದುಕೊಂಡು ಹೋದರು. ಹೋಗುವಾಗ ಮಕ್ಕಳಿಗೆ ಟಾಟಾ ಮಾಡಿದೆ. ಅಪ್ಪ ಅಮ್ಮ ಇಬ್ಬರು ಹೋಗ್ತಿದ್ದಾರೆ ನಾವು ಹೇಗಿರುವುದು ಎಂದು ನನ್ನ ಮೂವರು ಮಕ್ಕಳು ಬಹಳ ಬೇಸರ ಮಾಡಿಕೊಂಡಿದ್ದರು. ಆಪರೇಷನ್ ಆದ್ಮೇಲೆ ನನಗೆ ಪ್ರಜ್ಞೆ ಬಂದಿದ್ದೇ ಮೂರು ದಿನದ ನಂತರ ತೂಗುದೀಪ ಅವರಿಗೆ ಕೂಡಲೇ ಪ್ರಜ್ಞೆ ಬಂದಿದೆ. ನನಗೆ ಎರಡ್ಮೂರು ದಿನ ಆಯ್ತು. ಒಂದೇ ಆಸ್ಪತ್ರೆಯಲ್ಲಿದ್ದರೂ ನನಗೆ ಪತ್ರ ಬರೆದು ಮೀನಾ, ನಾನು ಚೆನ್ನಾಗಿದ್ದೇನೆ ನಿನಗೆ ಪ್ರಜ್ಞೆ ಬಂತಾ ಎಂದು ಕೇಳಿದ್ದರು ಎಂದು ಈ ಸಂದರ್ಶನದಲ್ಲಿ ಸ್ಮರಿಸಿಕೊಂಡಿದ್ದರು.

ನಮ್ಮ ಯಜಮಾನರ ಆರೋಗ್ಯ ಚೆನ್ನಾಗಿ ಆಗ್ಬೇಕು ಅಂತ ನಾನು ನಿರ್ಧರಿಸಿಬಿಟ್ಟಿದ್ದೆ. ಮೀನಾ ಎನ್ನುವವರು ಬಹಳಷ್ಟು ಜನ ಇದ್ದಾರೆ. ಆದರೆ ತೂಗುದೀಪ ಶ್ರೀನಿವಾಸ್ ಒಬ್ಬರೆ. ನಾನು ಕಿಡ್ನಿ ಕೊಡುವುದರಿಂದ ಅವರು ಇನ್ನೊಂದಷ್ಟು ದಿನ ಕನ್ನಡ ಚಿತ್ರರಂಗದಲ್ಲಿ ಇರ್ತಾರೆ ಎಂಬ ಆಸೆ ಇತ್ತು. ವಿಧಿಲಿಖಿತ ಆಗಿದ್ದೇ ಬೇರೆ ಒಂದು ವರ್ಷ ಚೆನ್ನಾಗಿದ್ದರು ಅಷ್ಟೇ ಎಂದು ಭಾವುಕರಾದರು. ಮಕ್ಕಳಿಗೆ ತಂದೆ ತಾಯಿ ಇಬ್ಬರು ಇರಬೇಕು.

ತಂದೆ ಪ್ರೀತಿನೇ ಬೇರೆ ತಾಯಿ ಪ್ರೀತಿನೇ ಬೇರೆ. ನಾನಾದರೂ ಮಕ್ಕಳ ಜೊತೆ ಹೆಚ್ಚು ಸಮಯ ಕಳೆದಿದ್ದೆ. ಆದರೆ ತೂಗುದೀಪ ಅವರು ಹೆಚ್ಚು ಸಮಯ ಮನೆಯಲ್ಲಿ ಇರ್ತಿರಲಿಲ್ಲ. ನನಗೆ ಏನಾದರೂ ಪರವಾಗಿಲ್ಲ, ನನ್ನ ಮಕ್ಕಳಿಗೆ ತಂದೆ ಇರಬೇಕು ಅಂತ ನನಗೆ ತುಂಬಾ ಆಸೆ ಇತ್ತು. ಆದರೆ ಅದು ಆಗಲಿಲ್ಲ ಎಂದು ನೋವಿನಿಂದ ನುಡಿದರು. ಕಿಡ್ನಿ ಆಪರೇಷನ್ ಆದ್ಮೇಲೆ ಸಿನಿಮಾ ಇಂಡಸ್ಟ್ರಿಯ ಬಹುತೇಕ ಎಲ್ಲಾ ಕಲಾವಿದರು ಮನೆಗೆ ಬಂದಿದ್ದರು.

ಮದುವೆಗೂ ಮುನ್ನ ದೈಹಿಕ ಸಂಪರ್ಕ ನಡೆಸಿದರೆ ಬೀಳುತ್ತೆ ಭಾರಿ ಶಿ ಕ್ಷೆ, ಹೊರಬಂತು ಹೊಸ ರೂಲ್ಸ್

ಅವರ ಎದುರು ನನಗೆ ಪುನರ್ಜನ್ಮ ಕೊಟ್ಟ ದೇವತೆ ಈಕೆ, ಸತಿ ಸಾವಿತ್ರಿ ಅಂತಿದ್ದರು. ರಾಜ್ ಕುಮಾರ್ ಅವರು ಏಳೆಂಟು ಸಲ ಬಂದಿದ್ದರು. ಶ್ರೀನಾಥ್ ಅವರು ನನಗೆ ನಮಸ್ಕಾರ ಮಾಡಿ ಏನಮ್ಮಾ ಮೀನಮ್ಮ, ಕಿಡ್ನಿ ಕೊಟ್ಟು ಸೀನಣ್ಣನ ಉಳಿಸಿಕೊಂಡು ಬಿಟ್ಟೆ ಅಂತ ಹೇಳಿದರು. ಆಮೇಲೆ ಏನೂ ಮಾಡೋಕೆ ಆಗಿಲ್ಲ ಎಂದು ಬೇಸರದಿಂದ ಮಾತನಾಡಿದ್ದಾರೆ.

Leave a Reply

Your email address will not be published. Required fields are marked *