ಕರುನಾಡ ಚಕ್ರವರ್ತಿ, ಸ್ಯಾಂಡಲ್‌ವುಡ್ ಕಿಂಗ್, ಸೆಂಚುರಿ ಸ್ಟಾರ್,ಹ್ಯಾಟ್ರಿಕ್ ಹೀರೊ ಹೀಗೆ ಹಲವು ಬಿರುದುಗಳಿಂದ ಕರೆಸಿಕೊಳ್ಳುವ ಶಿವಣ್ಣ ಕನ್ನಡ ಚಿತ್ರರಂಗದ ಪ್ರಖ್ಯಾತ ನಟ. ಸುಮಾರು ಮೂರು ದಶಕಗಳಿಂದ ನೂರ ಇಪ್ಪತ್ತೈದಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನಗೆದ್ದಿರುವ ಡಾ.ಶಿವರಾಜಕುಮಾರ್ ಕನ್ನಡ ಚಿತ್ರರಂಗದ ದಿಗ್ಗಜ, ವರನಟ ಡಾ.ರಾಜ್‌ಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್‌ವರ ಹಿರಿಯ ಪುತ್ರ. ಇವರ ಕಿರಿಯ ಸಹೋದರರಾದ ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ಮಾಪಕರಾಗಿ ಜನಪ್ರಿಯರಾಗಿದ್ದಾರೆ. ಶಿವರಾಜ್ ಕುಮಾರ್ ಅವರ ಜೀವನ ಅವರ ಕುಟುಂಬ ಮನೇ ಈಗ ಹೇಗಿದೆ ಎನ್ನುವುದನ್ನು ನಾವು ಇಲ್ಲಿ ತಿಳಿದುಕೊಳ್ಳಬಹುದು.

ಶಿವರಾಜ್ ಕುಮಾರ್ ಅವರು 1986 ರಲ್ಲಿ ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನದಲ್ಲಿ ಮೂಡಿಬಂದ ಆನಂದ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಗೆ ನಾಯಕನಾಗಿ ಪ್ರವೇಶಿಸಿದರು. ಇದೇ ಚಿತ್ರದ ಮೂಲಕ ಚಿ.ಉದಯಶಂಕರ್‌ವರ ಪುತ್ರ ಗುರುದತ್ತ್ ಮತ್ತು ಸುಧಾರಾಣಿ ಕೂಡ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರ 250 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡು ಕನ್ನಡ ಚಿತ್ರರಂಗದಲ್ಲಿ ಅದ್ಭುತ ದಾಖಲೆ ಬರೆಯಿತು.ಈ ಚಿತ್ರದ ಟುವ್ವಿ ಟುವ್ವಿ ಹಾಡು ಆಗಿನ ಯುವಜನತೆಯ ಹಾಟ್ ಫೇವರೇಟ್ ಆಗಿತ್ತು. ಆನಂದ್ ಚಿತ್ರದ ಮುಂದಿನ ಎರಡೂ ಚಿತ್ರಗಳು ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಶತದಿನ ಪ್ರದರ್ಶನ ಕಂಡವು. ಶಿವರಾಜ್ ಕುಮಾರ್ ಅಭಿನಯದ ಮೊದಲ ಮೂರೂ ಚಿತ್ರಗಳೂ ಶತದಿನೋತ್ಸವದ ಯಶಸ್ಸು ಪಡೆದದ್ದರಿಂದ ‘ಹ್ಯಾಟ್ರಿಕ್ ಹೀರೋ’ ಎಂಬ ಬಿರುದಿಗೆ ಪಾತ್ರರಾದರು. 1998 ರಲ್ಲಿ ತೆರೆಕಂಡ ಅಂಡಮಾನ್ ಚಿತ್ರದಲ್ಲಿ ಶಿವಣ್ಣರವರ ಪುತ್ರಿ ನಿವೇದಿತಾ ಚಿತ್ರದಲ್ಲಿ ಕೂಡ ಪುತ್ರಿಯಾಗಿ ನಟಿಸಿದರು.

ಅಷ್ಟರ ನಂತರ ಸಾಕಷ್ಟು ಹಿಟ್ ಸಿನಿಮಾಗಳನ್ನು ಕನ್ನಡ ಜನತೆಗೆ ಉಣ ಬಡಿಸಿದ ಖ್ಯಾತಿ ಶಿವರಾಜ್ ಕುಮಾರ್ ಅವರಿಗೆ ಸಲ್ಲುತ್ತದೆ. 2014 ರಲ್ಲಿ ತೆರೆಕಂಡ ಭಜರಂಗಿ ಮತ್ತು 2018 ರಲ್ಲಿ ತೆರೆಗೆಬಂದ ಟಗರು ಚಿತ್ರಗಳು ಕನ್ನಡ ಸಿನಿಮಾ ಬಾಕ್ಸಾಫೀಸಿನಲ್ಲಿ ದಾಖಲೆ ಬರೆದವು.ಐವತ್ತು ದಾಟಿದರೂ ಈಗಲೂ ಚೈತನ್ಯದ ಚಿಲುಮೆಯಂತಿರುವ ಶಿವರಾಜಕುಮಾರ್ ಈಗಿನ ಯುವನಟರಿಗೆ ಮಾದರಿ. ಸಿನಿಮಾ ರಂಗಕ್ಕೆ ಇವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಬಳ್ಳಾರಿಯ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವಿಶ್ವ ವ್ಯಾಪೀ ಮಾನ್ಯತೆ ದೊರೆಯಲು ಡಾ ರಾಜ್ ಕುಮಾರ್ ಅವರೇ ಕಾರಣ ಎಂದ ಅವರು ತಮ್ಮ ತಂದೆ ಡಾ ರಾಜ್ ಅವರ ಯಶಸ್ಸಿನ ಹಿಂದೆ ತಾಯಿ ಡಾ ಪಾರ್ವತಮ್ಮ ರಾಜ್ಕುಮಾರ್ ಅವರು ಇದ್ದಂತೆ, ತಮ್ಮ ಯಶಸ್ಸಿನ ಹಿಂದೆ ಪತ್ನಿ ಗೀತಾ ಅವರ ಪಾಲು ಇದೆ. ಗೀತಾ ತಮ್ಮ ಬಾಳಲ್ಲಿ ಬೆಳಕು ತಂದಿದ್ದಾರೆ ಎನ್ನುವುದನ್ನು ಶಿವರಾಜ್ ಕುಮಾರ್ ಅವರು ಎಂದಿಗೂ ಮರೆಯಲಿಲ್ಲ.

ಇವರು ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್, ಸಾರ್ವಭೌಮ ಅಭಯಹಸ್ತ ಹಲವಾರು ಚಿತ್ರಗಳಲ್ಲಿ ಹಿನ್ನೆಲೆಗಾಯನ ಕೂಡ ಮಾಡಿದ್ದಾರೆ. ಇನ್ನು ಈಗ ಕೆಲವು ವರ್ಷಗಳ ಹಿಂದೆ ಅಷ್ಟೇ ಶಿವರಾಜ್ ಕುಮಾರ್ ಅವರು ತಮ್ಮ ಮಗಳು ನಿರುಪಮಾ ವಿವಾಹವನ್ನು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಮಾಡಿದ್ದರು. ಶಿವರಾಜ್ ಕುಮಾರ್ ಅವರ ಮಗಳು ನಿರುಪಮಾ ಹಾಗೂ ಅವರ ಅಳಿಯ ದಿಲೀಪ್ ಇಬ್ಬರೂ ಸಹ ವೃತ್ತಿಯಲ್ಲಿ ವೈದ್ಯರು. ಇನ್ನು ಶಿವರಾಜ್ ಕುಮಾರ್ ಅವರು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ನಟನೆ ಮಾಡಿದ್ದಾರೆ ಉತ್ತಮ ಗಾಯಕ ಹಾಗೂ ನೃತ್ಯಗಾರ ಕೂಡಾ ಹೌದು. ಅಷ್ಟೇ ಅಲ್ಲದೇ ಸಿನಿಮಾ ನಿರ್ಮಾಣ ಕಾರ್ಯವನ್ನೂ ಸಹ ಮಾಡುತ್ತಿದ್ದಾರೆ ಶಿವರಾಜ್ ಕುಮಾರ್ ಅವರು. ಅಂದಹಾಗೆ ಶಿವರಾಜ್ ಕುಮಾರ್ ಅವರು ಒಂದು ಸಿನಿಮಾ ನಟನೆಗೆ ತೆಗೆದುಕೊಳ್ಳುವ ಅಭಾವನೆ ಐದು ಕೋಟಿ ರೂಪಾಯಿ ಹಾಗಿ ಇವರ ವಾರ್ಷಿಕ ಆದಾಯ ಎರಡುನುರಾ ಐವತ್ತು ಕೋಟಿ ರೂಪಾಯಿ. ಇವರ ಬಳಿ ವಿವಿಧ ರೀತಿಯ ಕಾರ್ ಕಲೆಕ್ಷನ್ ಗಳನ್ನು ಸಹ ನಾವು ಕಾಣಬಹುದು. ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ನಟ ಶಿವರಾಜ್ ಕುಮಾರ್ ಅವರ ಜೀವನ ಶೈಲಿ, ಅವರ ಕುಟುಂಬದ ಕೆಲವು ಫೋಟೋಗಳನ್ನು ಇಲ್ಲಿ ಕಾಣಬಹುದು.

Leave a Reply

Your email address will not be published. Required fields are marked *