ಕನಸಿನ ರಾಣಿ ಮಾಲಾಶ್ರೀಗಾಗಿ ಪತಿ ರಾಮು ಕಟ್ಟಿಸಿದ ಮನೆ ಹೇಗಿದೆ ನೋಡಿ

0 4

ಕನ್ನಡ ಚಿತ್ರರಂಗದ ಕನಸಿನ ರಾಣಿ ಎಂದೇ ಖ್ಯಾತಿ ಪಡೆದ ನಟಿ ಮಾಲಾಶ್ರೀ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ವಿಭಿನ್ನವಾಗಿ ಸಾಹಸಿ ಚಿತ್ರಗಳಲ್ಲಿ ನಟಿಸಿದ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿಯಾಗಿ ಜನಪ್ರಿಯತೆ ಗಳಿಸಿದ್ದಾರೆ. ಕೋಟಿ ರಾಮು ಅವರೊಂದಿಗೆ ವಿವಾಹವಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದರು, ದುರದೃಷ್ಟವಶಾತ್ ಇತ್ತೀಚಿಗೆ ಕೋಟಿ ರಾಮು ಅವರು ಕೊರೋನ ವೈರಸ್ ಗೆ ಬಲಿಯಾದರು. ಕೋಟಿ ರಾಮು ಅವರು ತಮ್ಮ ಕುಟುಂಬದವರಿಗಾಗಿ ಮನೆಯನ್ನು ನಿರ್ಮಿಸಿದ್ದಾರೆ. ಮನೆಯ ಬಗ್ಗೆ, ಮಾಲಾಶ್ರೀ ಅವರ ಕುಟುಂಬ ಜೀವನ ಹಾಗೂ ಸಿನಿ ಜೀವನದ ಕೆಲವು ಸ್ವಾರಸ್ಯಕರ ಮಾಹಿತಿಯನ್ನು ನೋಡೋಣ.

ಇತ್ತೀಚೆಗೆ ಕನ್ನಡ ಚಿತ್ರರಂಗದ ಪ್ರಮುಖ ನಟಿ ಮಾಲಾಶ್ರೀ ಅವರು ತಮ್ಮ ಪತಿ ಕೋಟಿ ರಾಮು ಅವರನ್ನು ಕಳೆದುಕೊಂಡಿದ್ದಾರೆ. ಮಾಲಾಶ್ರೀ ಅವರು ಸಿನಿಮಾಗಳಲ್ಲಿ ನಟಿಸುವಾಗ ಜನಪ್ರಿಯ ನಟಿ ಎನಿಸಿಕೊಂಡಿದ್ದಾರೆ. ತಮ್ಮ ಮೊದಲ ಸಿನಿಮಾದಿಂದಲೇ ನಿರ್ಮಾಪಕರ, ನಿರ್ದೇಶಕರ, ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಕನ್ನಡ ಚಿತ್ರರಂಗದ ಅಂದಿನ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದಾರೆ. ನಂತರ ಸಿನಿಮಾಗಳಲ್ಲಿ ಅವಕಾಶಗಳು ಸ್ವಲ್ಪ ಕಡಿಮೆಯಾದವು ಆಗ ಅವರು ಸಾಹಸಮಯ ಸಿನಿಮಾಗಳಲ್ಲಿ ನಟಿಸಲು ಪ್ರಾರಂಭಿಸಿದರು ಇದರಿಂದಲೂ ಅವರು ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದರು. ನಂತರ ಮಾಲಾಶ್ರೀ ಅವರು ನಿರ್ದೇಶಕ ಕೋಟಿ ರಾಮು ಅವರನ್ನು ಪ್ರೀತಿಸಿ ಮದುವೆ ಆದರು, ನಟಿ ಮಾಲಾಶ್ರೀ ಅವರು ಸಂಸಾರದಲ್ಲಿ ಸುಖಜೀವನವನ್ನು ಅನುಭವಿಸಿದರು. ಅವರಿಗೆ ಅನನ್ಯ ಮತ್ತು ಆರ್ಯ ಎಂಬ ಇಬ್ಬರು ಮಕ್ಕಳಿದ್ದಾರೆ.

ಕೋಟಿ ರಾಮು ಅವರು ತಮ್ಮ ಪ್ರೀತಿಯ ಪತ್ನಿ ಹಾಗೂ ಮುದ್ದಿನ ಮಕ್ಕಳಿಗಾಗಿ ಒಂದು ಮನೆಯನ್ನು ನಿರ್ಮಿಸಿದ್ದಾರೆ ಹಾಗೂ 30-40 ಕೋಟಿ ಮೌಲ್ಯದ ಆಸ್ತೆಯನ್ನು ಹೊಂದಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಈ ಮನೆಯು ನಟಿ ಮಾಲಾಶ್ರೀ ಅವರ ಕನಸಿನ ಮನೆಯಾಗಿತ್ತು. ಮಾಲಾಶ್ರೀ ಅವರ ಮನೆಯೂ ನೋಡಲು ಸುಂದರವಾಗಿದ್ದು, ಭವ್ಯವಾಗಿ, ವಿಶಾಲವಾಗಿದೆ. ಮನೆಯಲ್ಲಿ ಹಲವು ಕೋಣೆಗಳಿವೆ. ಮನೆಯನ್ನು ಮತ್ತೆ ಮತ್ತೆ ನೋಡಬೇಕು ಎನಿಸುವಷ್ಟು ಸುಂದರವಾಗಿದೆ. ಮನೆಯ ಮುಂದೆ ಸುಂದರವಾದ ಕೈತೋಟವಿದೆ ಅಲ್ಲಿ ನಾನಾರೀತಿಯ ಹೂವಿನ ಗಿಡಬಳ್ಳಿಗಳು ಇವೆ. ತಮ್ಮ ಇಬ್ಬರು ಮಕ್ಕಳಿಗೆ ಇನ್ನೂ ಎರಡು ಮನೆ ನಿರ್ಮಾಣ ಮಾಡಬೇಕು ಹಾಗೂ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬುದು ರಾಮು ಅವರ ಬಹುದೊಡ್ಡ ಆಸೆಯಾಗಿತ್ತು ಅಲ್ಲದೆ ಅವರ ಸಿನಿಮಾವನ್ನು ನಿರ್ಮಾಣ ಮಾಡಬೇಕು ಎಂಬ ಆಸೆಯನ್ನು ಕೋಟಿ ರಾಮು ಅವರು ಇಟ್ಟುಕೊಂಡಿದ್ದರು ಆದರೆ ಅವರ ಆಸೆ ಈಡೇರಲಿಲ್ಲ ಎಂದು ಮಾಲಾಶ್ರೀ ಅವರು ನೆನೆದು ಕಣ್ಣೀರು ಹಾಕಿದ್ದಾರೆ.

ಮಾಲಾಶ್ರೀ ಅವರು ತಮ್ಮ ಮನೆಯಲ್ಲಿ ಇರುವಾಗ ಸರಳವಾಗಿ ಎಲ್ಲರೊಂದಿಗೆ ಮಾತನಾಡಿಕೊಂಡು ತಮಾಷೆ ಮಾಡುತ್ತಿರುತ್ತಾರೆ. ಮಾಲಾಶ್ರೀ ಅವರು ಚೆನ್ನೈನ ತೆಲುಗು ಕುಟುಂಬದಲ್ಲಿ 1969 ರಲ್ಲಿ ಜನಿಸಿದರು. ಮಾಲಾಶ್ರೀ ಅವರು ಚೈಲ್ಡ್ ಆರ್ಟಿಸ್ಟ್ ಆಗಿ 34 ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಮೊದಲ ಸಿನಿಮಾ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ನಟಿಸಿದ ಸಿನಿಮಾ ನಂಜುಂಡಿ ಕಲ್ಯಾಣ. ಕೋಟಿ ರಾಮು ಅವರು ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ನಟಿ ಮಾಲಾಶ್ರೀ ಅವರ ಕುಟುಂಬದವರಿಗೆ ದೇವರು ಕೋಟಿ ರಾಮು ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ಕೊಡಲಿ ಹಾಗೂ ಕೋಟಿ ರಾಮು ಅವರು ನಿರ್ಮಿಸಿದ ಮನೆ ಕೊನೆಯವರೆಗೂ ನೆನಪಾಗಿ ಉಳಿಯಲಿ ಎಂದು ಆಶಿಸೋಣ.

Leave A Reply

Your email address will not be published.