ಕನ್ನಡದ ಯುವರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಪ್ಪತ್ತು ದಿನಗಳಾದವು ಆದರೆ ಆ ನೋವಿನಿಂದ ಹೊರಬರುವುದಕ್ಕೆ ಇನ್ನೂ ಯಾರಿಂದಲೂ ಸಾಧ್ಯವಾಗಿಲ್ಲ. ಅಭಿಮಾನಿಗಳು ಹಾಗೂ ಕುಟುಂಬಸ್ಥರು ಇನ್ನು ಕೂಡ ದುಃಖದಲ್ಲಿದ್ದಾರೆ. ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ್ ನಮನ ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ರಾಜ್ಯದ ಪ್ರಮುಖರು ಚಿತ್ರರಂಗದ ಗಣ್ಯರು ಪುನೀತ್ ರಾಜಕುಮಾರ್ ಅವರ ಶಕ್ತಿ ಧಾಮ ಆಶ್ರಮದ ಮಕ್ಕಳು ಇನ್ನು ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಆ ಸಮಯದಲ್ಲಿ ವೇದಿಕೆ ಮೇಲೆ ಶಿವರಾಜ್ ಕುಮಾರ್ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

ಪುನೀತ್ ರಾಜಕುಮಾರ್ ಅವರ ಕುರಿತು ಮಾತನಾಡಲು ಶಿವಣ್ಣ ಕಣ್ಣೀರಿಡುತ್ತಲೇ ವೇದಿಕೆಗೆ ಬಂದಿದ್ದರು. ವೇದಿಕೆಯಲ್ಲಿ ಮಾತನಾಡುವುದಕ್ಕೆ ತುಂಬಾ ಕಷ್ಟ ಆಗುತ್ತಿದೆ ನನಗೆ ನಾಚಿಕೆ ಆಗುತ್ತಿದೆ ಇಲ್ಲಿ ನಿಂತು ಮಾತನಾಡುವುದಕ್ಕೆ. ಅವನ ಕುರಿತಾಗಿ ಜಾಸ್ತಿ ಮಾತನಾಡಿ ಮಾತನಾಡಿ ನನ್ನ ಕಣ್ಣ ದೃಷ್ಟಿಯ ಆಗಿಹೋಯಿತು ಎಂದು ಒಂದೊಂದು ಸಾರಿ ಅನಿಸುತ್ತದೆ.

ನಾನು ಯಾವುದೇ ಸಮಾರಂಭಕ್ಕೆ ಹೋದರೂ ಯಾವುದೇ ಸಂದರ್ಶನಕ್ಕೆ ಹೋದರು ಅವನ ಕುರಿತು ಮಾತನಾಡುತ್ತಿದ್ದೆ ಎಲ್ಲರೂ ನಿಮ್ಮ ತಮ್ಮನನ್ನು ಯಾಕೆ ಇಷ್ಟೊಂದು ಹೊಗಳುತ್ತಿರಿ ಎಂದು ಕೇಳುತ್ತಿದ್ದರು. ಅವನು ಹೊಗಳುವಂತಹ ಪದಾರ್ಥವಾಗಿದ್ದ. ಅವನು ಎಲ್ಲಾ ಕಡೆಗಳಲ್ಲಿಯೂ ಚಿಕ್ಕವಯಸ್ಸಿನಿಂದ ಹಿಡಿದು ಇದುವರೆಗೂ ಎಲ್ಲ ಕಡೆಗಳಲ್ಲಿಯೂ ಇದ್ದಾನೆ.

ನನಗೆ ನಟನೆ ಮಾಡುವುದಕ್ಕೆ ಅವನೇ ಸ್ಫೂರ್ತಿ ನನಗೆ ನಟನೆಯಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ಆದರೆ ಅವನು ಯಾವುದೇ ಸಮಾರಂಭದಲ್ಲಿ ಮಾತನಾಡುವಾಗ ನನಗೆ ಸ್ಪೂರ್ತಿ ಶಿವಣ್ಣ ಎಂದು ಹೇಳುತ್ತಿದ್ದ ಅದು ಅವನ ದೊಡ್ಡ ಮನಸ್ಸು. ಅವನು ಚಿಕ್ಕ ವಯಸ್ಸಿನಲ್ಲೇ ನಟನೆಗಳನ್ನು ಮಾಡಿಬಿಟ್ಟಿದ್ದ ಈಗ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಅದು ಅವನ ಇನ್ನೊಂದು ಮುಖ.

ಅವನು ಒಂದು ಕಾರನ್ನು ತೆಗೆದುಕೊಂಡರು ಫೋನ್ ಮಾಡಿ ನನಗೆ ಹೇಳುತ್ತಿದ್ದ ಶಿವಣ್ಣ ಈ ಕಾರನ್ನು ತೆಗೆದುಕೊಂಡು ಆ ಕಾರನ್ನು ತೆಗೆದುಕೊಂಡು ನೀವು ಕಾರನ್ನು ತೆಗೆದುಕೊಳ್ಳಿ ಎಂದು ಹೇಳುತ್ತಿದ್ದ. ನಾನು ಎಲ್ಲ ಕಾರ್ಯಕ್ರಮಗಳಲ್ಲಿ ನನ್ನ ತಮ್ಮ ರಾಯಲ್ ಆಗಿ ಇದ್ದಾನೆ ರಾಯಲ್ ಆಗಿಯೆ ಇರುತ್ತಾನೆ ಎಂದು ಹೇಳುತ್ತಿದ್ದೆ. ದೇವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ ದೇವರು ಒಳ್ಳೆಯವರನ್ನು ಬಿಡುವುದಿಲ್ಲ ಎಂದು ಕಾಣಿಸುತ್ತದೆ ಅದಕ್ಕೆ ಆದಷ್ಟು ಬೇಗ ತನ್ನ ಬಳಿ ಕರೆಸಿಕೊಂಡಿದ್ದಾನೆ.

ಅಪ್ಪು ನಮ್ಮಲ್ಲಿಯೇ ಇದ್ದಾನೆ ಅವನನ್ನು ಜೀವಂತವಾಗಿಟ್ಟುಕೊಳ್ಳಲು ನಾವು ಪ್ರಯತ್ನಿಸಬೇಕು ಅವನನ್ನು ಎಲ್ಲಯು ಕಳಿಸಿಕೊಡಬಾರದು. ಅವನಿಗೆ ದೀಪ ಹಚ್ಚುವುದನ್ನು ನಾನು ನಂಬುವುದಿಲ್ಲ ಅಪ್ಪಾಜಿ ಅಮ್ಮನಿಗೆ ದೀಪ ಹಚ್ಚುವುದಕ್ಕೆ ನಾನು ಇಷ್ಟಪಡುವುದಿಲ್ಲ ಅಂತಹದರಲ್ಲಿ ಅಪ್ಪುಗೆ ದೀಪ ಹಚ್ಚುವುದನ್ನು ನಾನು ಇಷ್ಟ ಪಡುವುದಿಲ್ಲ. ಎಲ್ಲರಿಗೂ ಹೋಗುವ ಸಮಯ ಬರುತ್ತದೆ ಆದರೆ ಅವನಿಗೆ ಇಷ್ಟು ಬೇಗ ಬಂತಲ್ಲ ಎಂದು ನೋವಾಗುತ್ತದೆ. ಅವನ ಬಗ್ಗೆ ಸಂತೋಷವಾಗುತ್ತದೆ

ಅವನು ಇಷ್ಟೆಲ್ಲಾ ಪ್ರೀತಿಯನ್ನು ಗಳಿಸಿದ್ದಾನೆ. ಚಿತ್ರರಂಗದ ಕಾಲವಿದರಲ್ಲಿ ಧ್ರುವ ಇರಬಹುದು ದರ್ಶನ್ ಇರಬಹುದು ಸುದೀಪ್ ಇರಬಹುದು ಯಶ್ ಇರಬಹುದು ವಿಜಯ್ ಗಣೇಶ್ಇರಬಹುದು ಇವರುಗಳಲ್ಲಿ ನಮ್ಮ ತಮ್ಮನನ್ನು ಕಾಣುತ್ತೇವೆ. ವಿಶಾಲ್ ನನ್ನ ನೋಡಿದಾಗ ಅಪ್ಪು ನೆನಪಾಗುತ್ತಾನೆ ನಾನು ಎಷ್ಟು ಬಾರಿ ಅಪ್ಪುಗು ಹೇಳಿದ್ದೇನೆ ಎಂದು ಹೇಳಿದರು.

ಯಾವಾಗಲು ಪಾರ್ಟಿ ಮಾಡಿ ಮನೆಗೆ ಬಂದಾಗ ಕರೋಕೆ ಹಾಡುತ್ತಿದ್ದೆವು ಅದರಲ್ಲಿ ಅವನಿಗೆ ಮೇ ಶಾಯರ್ ತೋ ನಹಿ ಹಾಡು ತುಂಬಾ ಹಿಡಿಸುತ್ತಿತ್ತು ಎಂದು ಹೇಳಿ ಶಿವಣ್ಣ ವೇದಿಕೆ ಮೇಲೆ ಹಾಡನ್ನು ಹಾಡಿದರು. ಅಪ್ಪು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ತೆರಳಿದರು ಅವರ ಕುಟುಂಬದವರ ಅಭಿಮಾನಿಗಳ ಮನಸ್ಸಿನಲ್ಲಿ ಅಜರಾಮರವಾಗಿ ಉಳಿದಿದ್ದಾರೆ ಅವರ ನೆನಪನ್ನು ಅಳಿಸಿ ಹಾಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ.

Leave a Reply

Your email address will not be published. Required fields are marked *