ಸಂಶೋಧನೆ ಪ್ರಕಾರ ದೇವರ ಮುಖ ಹೇಗಿದೆ ಗೊತ್ತಾ, ವಿಜ್ಞಾನಿಗಳು ಹೇಳಿದ್ದೇನು ಸಂಪೂರ್ಣ ಮಾಹಿತಿ

0 3

ವಿಜ್ಞಾನಿಗಳು ಅಂತಿಮವಾಗಿ ದೇವರ ಮುಖದ ಕಲ್ಪನೆಯನ್ನು ಹೊರತಂದಿದ್ದಾರೆ. ದೇವರ ಮುಖ ಹೇಗಿರುತ್ತದೆ ಎಂದು ಅವರು ಕಂಡುಕೊಂಡಿದ್ದಾರೆ. ಮೊದಲ ಬಾರಿಗೆ ದೇವರ ಮುಖವನ್ನು ಜಗತ್ತಿಗೆ ತೋರಿಸುತ್ತಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ದೇವರನ್ನು ನೋಡಿದವರು ಯಾರು, ದೇವರು ಯಾರಿಗಾದರೂ ಕಂಡಿದ್ದಾನಾ, ದೇವರು ನೋಡಲು ಹೇಗಿರುತ್ತಾನೆ ಈ ಪ್ರಶ್ನೆಗಳು ಸಾಮಾನ್ಯವಾಗಿ ಎಲ್ಲರಿಗೂ ಕಾಡುತ್ತದೆ. ಒಬ್ಬ ವ್ಯಕ್ತಿಯು ದೇವರ ಮುಖವನ್ನು ಮಾಡಬಹುದಾ ಎಂಬ ಪ್ರಶ್ನೆಯು ಕಾಡುತ್ತದೆ. ಅಮೆರಿಕದ ವಿಜ್ಞಾನಿಗಳು ಈ ವಿಷಯದ ಕುರಿತು ಸಂಶೋಧನೆ ನಡೆಸಿದ್ದಾರೆ. ಉತ್ತರ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಚಾಪೆಲ್ ಹಿಲ್‌ನಲ್ಲಿ 511 ಅಮೆರಿಕನ್​ ಕ್ರಿಶ್ಚಿಯನ್ನರ ಸಹಾಯದಿಂದ ವಿಜ್ಞಾನಿಗಳು ಮತ್ತು ಮನಶ್ಶಾಸ್ತ್ರಜ್ಞರು ಒಂದು ಚಿತ್ರವನ್ನು ರಚಿಸಿದ್ದಾರೆ. ಎಲ್ಲರ ಮನಸ್ಸಿನಲ್ಲಿ ದೇವರ ಬಗೆಗಿನ ಇರುವ ಅಭಿಪ್ರಾಯಗಳನ್ನು ಕಲೆಹಾಕಿ ಅದನ್ನು ಒಟ್ಟುಗೂಡಿಸಿ ಸಂಶೋಧಕರು ಸಂಯೋಜಿತ ದೇವರ ಮುಖವನ್ನು ರಚಿಸಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಯು ದೇವರನ್ನು ಹೇಗೆ ಬಹಿರಂಗಪಡಿಸುತ್ತಾನೆ ಎಂಬುದನ್ನು ಇದು ತೋರಿಸುತ್ತದೆ. ಈ ಸಂಶೋಧನೆ ವೇಳೆ ಅನೇಕ ಕ್ರೈಸ್ತರು ದೇವರಿಗೆ ಕಿರಿಯ ವಯಸ್ಸು ಎಂದು ಹೇಳಿದ್ದಾರೆ. ಅಷ್ಟೆ ಅಲ್ಲದೆ ದೇವರಲ್ಲಿ ಶ್ವೇತ ವರ್ಣದ ಬಟ್ಟೆ ತೊಟ್ಟಿರುವ ಸ್ತ್ರೀಲಿಂಗ ದೇವರನ್ನು ನೋಡಿದ್ದೇವೆ ಎಂದು ಅವರು ಹೇಳಿದ್ದಾರೆ. ವಾಸ್ತವವಾಗಿ ಈ ಸಂಶೋಧನೆಯಲ್ಲಿ ಭಾಗವಹಿಸಿದವರು ತಮ್ಮ ಚಿಂತನೆಯ ಮೇಲೆ ಅವಲಂಬಿತರಾಗಿದ್ದರು. ಉದಾರವಾದಿಗಳು ದೇವರನ್ನು ಹೆಚ್ಚು ಸ್ತ್ರೀಲಿಂಗ, ಕಿರಿಯ ಮತ್ತು ಹೆಚ್ಚು ಪ್ರೀತಿಯಿಂದ ನೋಡಿದರು. ಜನರ ಗ್ರಹಿಕೆಗಳು ಅವರ ಜನಸಂಖ್ಯಾ ಗುಣಲಕ್ಷಣಗಳಿಗೆ ಸಂಬಂಧಿಸಿದೆ.

ಈ ಸಂಶೋಧನೆಯಲ್ಲಿ ಕಡಿಮೆ ಎತ್ತರವಿರವ ಜನರು ಚಿಕ್ಕದಾಗಿ ಕಾಣುವ ದೇವರನ್ನು ಹೆಚ್ಚು ನಂಬುವ ವಿಷಯ ಕಂಡುಬಂದಿತು. ದೈಹಿಕವಾಗಿ ಆಕರ್ಷಕವಾಗಿರುವ ಜನರು ಹೆಚ್ಚು ದೈಹಿಕವಾಗಿ ಆಕರ್ಷಕ ದೇವರನ್ನು ನಂಬುತ್ತಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ದೇವರ ಬಗ್ಗೆ ಹಲವರು ತಮ್ಮದೆ ಆದ ಅನೇಕ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಕೆಲವರು ಹೆಚ್ಚು ದೇವರನ್ನು ನಂಬುತ್ತಾರೆ, ಕೆಲವರು ದೇವರನ್ನು ನಂಬುವುದಿಲ್ಲ. ದೇವರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದು. ದೇವರನ್ನು ನಂಬುವುದು ನಮ್ಮ ಕೆಲಸ ನಮಗೆ ಏನು ಮಾಡಬೇಕು ಹೇಗೆ ಒಳ್ಳೆಯದನ್ನು ಮಾಡಬೇಕು ಎಂಬುದು ದೇವರಿಗೆ ತಿಳಿದಿದೆ.

Leave A Reply

Your email address will not be published.