ಶಿವ ಶಂಕರ ಇಬ್ಬರು ಕೂಡ ಬೇರೆಬೇರೆನಾ ಪುರಾಣ ಕಥೆಗಳು ಏನ್ ಹೇಳುತ್ತೆ ಗೊತ್ತೆ

0 11

ಭಾರತದ ಹಿಂದೂ ಧರ್ಮವು ಸನಾತನವಾಗಿದ್ದು ಈ ಹಿಂದೂ ಧರ್ಮದಲ್ಲಿ ಮುಕ್ಕೋಟಿ ದೇವತೆಗಳಿದ್ದಾರೆ ಅವರಲ್ಲಿ ಸಮಸ್ತ ಜಗದ ಓಂಕಾರ ಮೂರ್ತಿ ಶಂಕರ ಶಶಿಧರ ಗಜಚರ್ಮಾಂಬರ ಗಂಗಾಧರ ಜಯ ವಿಶ್ವೇಶ್ವರ ಹೀಗೆ ಒಂದಾ ಎರಡಾ ದೇವರ ದೇವ ಮಹಾದೇವನ ಹೆಸರುಗಳು. ಇದರಲ್ಲೊಂದು ಸಾಮಾನ್ಯವಾಗಿ ಕರೆಯುವ ಹೆಸರು ಶಿವಶಂಕರ ಈಶ್ವರನ ಇತರ ಹೆಸರುಗಳಂತೆ ಇದು ಒಂದು ಹೆಸರು. ತುಂಬಾ ಜನಕ್ಕೆ ವಿಶೇಷ ಅಂತ ಅನಿಸುವುದಿಲ್ಲ ಆದರೆ ಇಬ್ಬರ ಹೆಸರನ್ನು ಒಟ್ಟಿಗೆ ಕರೆದರೆ ಹೇಗಿರುತ್ತದೆ.

ಪುರಾಣಗಳ ಪ್ರಕಾರ ಶಿವನೇ ಬೇರೆ ಶಂಕರನೇ ಬೇರೆ ಇದು ಹೊಸದೇನೂ ಅಲ್ಲ ಕಾಲಕ್ರಮೇಣ ಎರಡು ಹೆಸರುಗಳು ಸೇರಿಕೊಂಡು ಒಂದೇ ಹೆಸರಾಗಿದೆ. ಉದಾಹರಣೆಗೆ ಸೂರ್ಯನಾರಾಯಣ ಶಿವಸುಭ್ರ್ಮಣ್ಯ ಹರಿಹರನ್ ಎಂಬ ಹೆಸರುಗಳ ರೀತಿ ಶಿವಶಂಕರ ಎನ್ನುವ ಹೆಸರು ಕೂಡ ಬೆರೆತು ಹೋಗಿದೆ ವಾಸ್ತವದಲ್ಲಿ ಈ ಎರಡು ಹೆಸರುಗಳು ಭಿನ್ನ ಅದು ಹೇಗೆ ಇದಕ್ಕೇನು ಆಧಾರ ಎಂಬುದು ಕೆಲವರ ಪ್ರಶ್ನೆ ಅದನ್ನೇ ನಾವಿವತ್ತು ತಿಳಿಸಿಕೊಡುತ್ತೇವೆ.

ನಿಮಗೆಲ್ಲರಿಗೂ ಗೊತ್ತಿದೆ ನಮ್ಮ ಸನಾತನ ಧರ್ಮದಲ್ಲಿ ದೇವರ ದೇವ ಮಹಾದೇವನಿಗೆ ಎಂತಹ ಮಹೋನ್ನತ ಸ್ಥಾನ ಇದೆ ಎಂದು. ಈ ಸಮಸ್ತ ಪ್ರಕೃತಿಯ ಪಾಲಿಗೆ ಚಿರಂತನ ಮಹಾಪುರುಷನೇ ಮಹಾದೇವ. ಹೀಗಾಗಿ ಆಸ್ತಿಕರು ಶಿವಾರಾಧನೆಯನ್ನು ಮಾಡುತ್ತಾರೆ ಶಿವರಾತ್ರಿ ಆಚರಿಸುತ್ತಾರೆ. ಆದರೆ ಇವರಲ್ಲಿ ಕೆಲವರು ಮೂರ್ತಿಯ ಪೂಜೆ ಮಾಡುತ್ತಾರೆ ಇನ್ನು ಕೆಲವರು ಲಿಂಗದ ರೂಪದಲ್ಲಿ ಪೂಜಿಸುತ್ತಾರೆ ಮಹಾದೇವನ ಮುಂದೆ ಶರಣಾಗುತ್ತಾರೆ.

ಭಕ್ತಿ ಭಾವ ಭೌಗೋಳಿಕ ಆಚಾರ ವಿಚಾರಗಳ ಮೇಲೆ ಅವಲಂಬಿತವಾಗಿದೆ. ಆದರೆ ಕಾಲಾಂತರದಲ್ಲಿ ಭಾರತದ ಮೇಲೆ ದಂಡೆತ್ತಿ ಬಂದವರು ಹಲವರು. ಇವರು ಬಂದ ಮೇಲೆ ಇವರ ಜೊತೆ ಅವರದ್ದೇ ಆದ ಒಂದಷ್ಟು ಇತಿಹಾಸಕಾರರು ಗ್ರಂಥಕಾರರು ಬಂದರು ಹೋದರು ಪ್ರವಾಸಿಗರ ರೂಪದಲ್ಲಿ ಅವರಿಗೆಲ್ಲ ನಮ್ಮ ದೇಶದ ಏಷ್ಟೋ ಆಚರಣೆಗಳು ಸಂಪ್ರದಾಯಗಳು ಪದ್ಧತಿಗಳು ಆಶ್ಚರ್ಯ ಎನಿಸಿದವು. ಅಷ್ಟೇ ಕುತೂಹಲಕಾರಿಯಾಗಿ ನೋಡಿದರು ಇವೆಲ್ಲವನ್ನೂ. ಆದರೆ ಕೆಲವು ಗ್ರಂಥಕಾರರ ದೃಷ್ಟಿಕೋನದಲ್ಲಿ ಶಿವಲಿಂಗದ ರೂಪ ಅಪಾರ್ಥಕ್ಕಿಡಾಯಿತು ಸೆ ಕ್ಸ್ ಅನ್ನು ವೈಭವೀಕರಿಸುವ ಪಾಶ್ಚಾತ್ಯ ಸಂಸ್ಕೃತಿಯ ಒಂದು ವರ್ಗಕ್ಕೆ ಶಿವಲಿಂಗ ಜನನಾಂಗದ ರೀತಿ ಗೋಚರವಾಯಿತು ಇದನ್ನೇ ಕೆಲವು ಹಿಂದೂಗಳು ಕೂಡ ನಂಬಿಬಿಟ್ಟರು ಇದು ನಮ್ಮ ದೌರ್ಭಾಗ್ಯ.

ಕೆಲವರು ಇದೆ ಕಾರಣಕ್ಕೆ ಲಿಂಗಾರಾಧನೆಯಿಂದ ದೂಲವುಳಿದರು ಬಿಟ್ಟರು. ಆದರೆ ಇದು ಅಜ್ಞಾನ ಭಾಷಾಂತರದಿಂದ ಆದ ಎಡವಟ್ಟು. ಹಿಂದಿ ಅಥವಾ ಕನ್ನಡದಲ್ಲೂ ಕುಡ ನೀವು ನೋಡಿದ್ದೀರಿ ಸ್ತ್ರೀಲಿಂಗ ಮತ್ತು ಪುಲ್ಲಿಂಗ ಎಂದು ಸ್ತ್ರೀ ಪುರುಷರ ನಾಮ ಭೇದ ಮಾಡುತ್ತಾರೆ ಆದರೆ ಸಂಸ್ಕೃತದಲ್ಲಿ ಲಿಂಗಕ್ಕಿರುವ ಅರ್ಥವೇ ಬೇರೆ.

ಸಂಸ್ಕೃತದಲ್ಲಿ ಲಿಂಗ ಎಂದರೆ ಪ್ರತೀಕ ಅಥವಾ ಚಿನ್ಹೆ ಎಂದು ಅರ್ಥ. ಇವತ್ತು ನಾವು ನಿಮಗೆ ಶಿವಲಿಂಗದ ನಿಜವಾದ ಅರ್ಥವನ್ನು ತಿಳಿಸಿಕೊಡುತ್ತವೆ ಹಾಗೆ ಶಿವಲಿಂಗ ದಿಂದ ಶಂಕರ ಹೇಗೆ ಭಿನ್ನ ಎಂದು. ಶಿವ ಮತ್ತು ಶಂಕರ ಈ ಭಿನ್ನ ರೂಪದ ಬಗ್ಗೆ ಶಿವಪುರಾಣದಲ್ಲಿ ವಿಸ್ತೃತವಾದ ವಿವರಣೆ ಇದೆ. ಮೊದಲೇ ಹೇಳಿದಂತೆ ಸಂಸ್ಕೃತದಲ್ಲಿ ಲಿಂಗ ಎಂದರೆ ಪ್ರತೀಕ ಚಿನ್ಹೆ ಗುಣ ಎಂದು. ಶಿವಲಿಂಗ ಎಂದರೆ ಅದು ಶಿವನ ಗುಣ ಪ್ರತೀಕ ಚಿನ್ಹೆ ಎನ್ನುವುದು.

ವಾಸ್ತವದ ಅರ್ಥ ಶಿವನ ಅನಂತ ಶಕ್ತಿ ರೂಪ ಗುಣಗಳ ಪ್ರತೀಕವಾಗಿದೆ ಈ ಶಿವಲಿಂಗ. ಅನಂತ ಆಕಾಶ ಬ್ರಹ್ಮಾಂಡ ನಿರ್ಗುಣ ನಿರಾಕಾರ ಎಂದು ತಿಳಿಸುವ ಸಲುವಾಗಿ ಈ ಲಿಂಗವನ್ನು ಸೂಚಿಸಲಾಗಿದೆ ಮತ್ತು ಈ ಪದವನ್ನು ಪ್ರಯೋಗ ಮಾಡಲಾಗಿದೆ ಹೀಗಾಗಿ ಕೆಲವು ಗ್ರಂಥಗಳಲ್ಲಿ ಶಿವಲಿಂಗವನ್ನು ಪರಿಭಾವಿಸುತ್ತಿರುವ ಭೂಮಿಯ ಸುತ್ತ ಇರುವ ಬ್ರಹ್ಮಾಂಡ ಎಂದು ಕರೆಯಲಾಗಿದೆ. ಇನ್ನು ಕೆಲವು ಗ್ರಂಥಗಳಲ್ಲಿ ಶಿವಲಿಂಗವನ್ನು ಸಮಾನತೆಯ ಪ್ರತೀಕವಾಗಿ ಶಿವ ಶಕ್ತಿ ಅಂದರೆ ಮಹಾದೇವ ಮತ್ತು ಪಾರ್ವತಿ ದೇವಿಯ ಒಟ್ಟು ಅಂಶ ಎಂದು ಕರೆಯಲಾಗಿದೆ.

ನಮ್ಮ ಶರೀರ ಪಂಚಭೂತಗಳಿಂದ ಆಗಿದೆ ಈ ಶರೀರಕ್ಕೆ ಆತ್ಮವೇ ಶಕ್ತಿ ಅಂತ. ಅದೇ ರೀತಿ ಶಿವ ಶರೀರವಾದರೆ ಅದರೊಳಗಿರುವ ಶಕ್ತಿಯೇ ಆತ್ಮಜ್ಯೋತಿ ಇವೆರಡರ ಸಮ್ಮಿಲನವೇ ಈ ಶಿವಲಿಂಗ ಹಾಗಿದ್ದರೆ ಈ ಶಿವಲಿಂಗ ಸೃಷ್ಟಿ ಆಗಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಈ ಬ್ರಹ್ಮಾಂಡದ ಆರಂಭದಲ್ಲಿ ಶಿವ ವಿಷ್ಣುವನ್ನು ಸೃಷ್ಟಿಸಿದ ಆಮೇಲೆ ವಿಷ್ಣುವಿನ ನಾಭಿಯಿಂದ ಬ್ರಹ್ಮ ಸೃಷ್ಟಿಯಾದ ಬ್ರಹ್ಮನಿಂದ ಸಮಸ್ತ ಬ್ರಹ್ಮಾಂಡ ಸೃಷ್ಟಿಯಾಯಿತು ಎಂಬುದು ನಿಮಗೆಲ್ಲ ಗೊತ್ತಿರುವ ಕತೆ. ಈ ಕತೆಯ ಒಂದಂಶವೇ ವಿಷ್ಣು ಹಾಗೂ ಬ್ರಹ್ಮದೇವರ ನಡುವಿನ ಶ್ರೇಷ್ಟತೆಯ ಸಮರ. ಇವರಿಬ್ಬರಲ್ಲಿ ಯಾರು ಶ್ರೇಷ್ಠ ಎಂಬ ವಾದ ವಿವಾದ ಜಗಳವಾಯಿತು.

ಇಬ್ಬರ ಮುಂದೆ ಪ್ರಕಟವಾಯಿತು ಒಂದು ಸ್ಥಂಭ. ಈ ಸ್ಥಂಭದ ಕೊನೆ ಮೊನೆಯನ್ನು ಯಾರು ಹುಡುಕುತ್ತಾರೊ ಅವರೇ ಶ್ರೇಷ್ಠ ಎಂದಿತು ಅಶರೀರವಾಣಿ. ಅಡಿ ಹುಡುಕಿ ಹೋದ ನಾರಾಯಣ ಇದು ಅಸಾಧ್ಯವಾದ ಕೆಲಸ ಎಂದು ಒಪ್ಪಿಕೊಂಡು ವಾಪಸಾದ ಮೂಡಿ ಹುಡುಕಿ ಹೊರಟ ಬ್ರಹ್ಮ ದೇವ ತಾನೇ ಶ್ರೇಷ್ಠ ಎಂದು ಸಾಭಿತುಪಡಿಸಲು ಈ ಕಂಬದ ತುತ್ತ ತುದಿಯನ್ನು ನೋಡಿದ್ದೇನೆ ಎಂದ ಆಗ ಮತ್ತೆ ಅಶರೀರವಾಣಿ ಕೇಳಿಸಿತು ನನಗೆ ಯಾವುದೇ ಆದಿ ಅಂತ್ಯ ಇಲ್ಲ ಎಂಬ ವಾಣಿಯೊಂದಿಗೆ ಆ ಸ್ಥಂಭ ಶಿವಲಿಂಗದ ರೂಪಕ್ಕೆ ಬಂತು.

ಈಗ ಶಿವಲಿಂಗಕ್ಕೂ ಶಂಕರನಿಗೂ ಇರುವ ವ್ಯತ್ಯಾಸ ತಿಳಿದುಕೊಳ್ಳೋಣ. ಶಿವಲಿಂಗಕ್ಕೆ ಯಾವುದೇ ಆಕಾರವಿಲ್ಲ ನಿರ್ಗುಣ ನಿರಾಕಾರ ರೂಪವದು ಆದರೆ ಶಂಕರ ಎಂದರೆ ಮಹಾ ತಪಸ್ವಿಯ ರೂಪ ಕಣ್ಣಮುಂದೆ ಬರುತ್ತದೆ ತಪಸ್ವಿಯ ರೂಪದಲ್ಲಿರುವ ಈ ಶಂಕರನು ಶಿವನ ಸೃಷ್ಟಿಯೇ ಈ ಸೃಷ್ಟಿ ಸ್ಥಿತಿ ಲಯಕಾರರಾಗಿ ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿಸಿದ್ದಾನೆ ಶಿವ.

ಶಿವ ಬ್ರಹ್ಮ ಲೋಕದ ವಾಸಿಯಾದರೆ ಶಂಕರ ಸೂಕ್ಷ್ಮ ಲೋಕದ ನಿವಾಸಿ ಸೂಕ್ಷ್ಮ ಲೋಕ ಎಂದರೆ ಕೈಲಾಸ. ಇದಿಷ್ಟೇ ಅಲ್ಲ ನೀವೆಲ್ಲ ಶಿವನ ಹೆಸರಲ್ಲಿ ಶಿವರಾತ್ರಿ ಮಾಡುತ್ತಿರೇ ಹೊರತು ಶಂಕರನ ಹೆಸರಿನಲ್ಲಿ ಶಂಕರರಾತ್ರಿ ಮಾಡುವುದಿಲ್ಲ ಯಾಕೆಂದರೆ ಶಿವ ನಿರಾಕಾರ ಪರಮಾತ್ಮ. ಆದರೆ ಶಂಕರ ಸೂಕ್ಷ್ಮ ಆಕಾರವಿರುವ ದೇವ ಹೀಗಾಗಿಯೇ ಶಂಕರನನ್ನು ಧ್ಯಾನಸ್ಥ ಯೋಗಿಯ ರೂಪದಲ್ಲಿ ಪೂಜಿಸಿದರೆ ಶಿವನನ್ನು ಜ್ಯೋತಿರ್ಬಿಂದು ರೂಪದಲ್ಲಿ ಪೂಜಿಸಲಾಗುತ್ತದೆ ಹೀಗಾಗಿಯೇ ಶಿವನ ಪೂಜೆಯನ್ನು ಜ್ಯೋತಿರ್ಲಿಂಗ ರೂಪದಲ್ಲಿ ಮಾಡಲಾಗುತ್ತದೆ. ಕಲ್ಯಾಣಕಾರಿ ಶಿವ ಜನನ ಮರಣ ಚಕ್ರಗಳಿಂದ ಮುಕ್ತನಾದವನು ಆದರೆ ಶಂಕರ ಸಾಕಾರಿ ದೇವನಾಗಿದ್ದಾನೆ. ಹಾಗಾಗಿ ಈ ಸೃಷ್ಟಿಯ ಮೂಲ ಶಿವ. ಶಿವನಿಂದ ಬ್ರಹ್ಮ ವಿಷ್ಣು ಮಹೇಶ್ವರರ ಸೃಷ್ಟಿಯಾಗಿದೆ.

ಜ್ಯೋತಿಷ್ಯ: ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.