ವ್ಯಾಪಾರಿಯೊಬ್ಬ ಬುದ್ಧನಲ್ಲಿ ಕೇಳಿದ ಸ್ವಾಮಿ ನನ್ನಲ್ಲಿ ಇದ್ದ ಸಾಕಷ್ಟು ಹಣ ಇದೀಗ ಇಲ್ಲದಂತಾಗಿದೆ, ಬುದ್ಧ ಕೊಟ್ಟ ಸಂದೇಶ ನಿಜಕ್ಕೂ ಅದ್ಬುತ

0 1

ಗೌತಮ ಬುದ್ಧ ಬೌದ್ಧಧರ್ಮದ ಸಂಸ್ಥಾಪಕ ಮಾತ್ರವಲ್ಲ, ಚತುರಾರ್ಯ ಸತ್ಯಗಳಾದ ದುಃಖ, ದುಃಖದ ಹುಟ್ಟು, ದುಃಖದ ಅಡಗುವಿಕೆ, ಮತ್ತು ದುಃಖ ನಿವಾರಣೆಗೆ ಒಯ್ಯುವ ಅಷ್ಟಾಂಗಿಕ ಮಾರ್ಗವನ್ನು ಕಂಡು ಹಿಡಿದ ದಾರ್ಶನಿಕ. ಬುದ್ಧನು ಬೌದ್ಧ ಧರ್ಮದ ಸ್ಥಾಪಕ ಎನ್ನುವುದು ಜನಜನಿತವಾಗಿರುವ ಸಂಗತಿಯಾದರೂ ಅವನು ಬೋಧಿಸಿದ್ದು ದುಃಖದಿಂದ ಹೊರಬರುವ ಮಾರ್ಗವನ್ನು ಮಾತ್ರ. ಇದನ್ನೆ ಅವನು ಪಾಲಿ ಭಾಷೆಯಲ್ಲಿ ಧರ್ಮ ಎಂದು ಕರೆದನು.

ತಾನು ಬೊಧಿಸುತ್ತಿರುವುದರಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡವರಲ್ಲಿ ತಾನು ಮೊದಲನೆಯವನೂ ಅಲ್ಲ, ಕೊನೆಯವನೂ ಅಲ್ಲವೆಂದು ಸಾರಿದನು. ಯಾರು ಬೇಕಾದರೂ ಈ ಮಾರ್ಗವನ್ನು ಅನುಸರಿಸಿ ದುಃಖದಿಂದ ಮುಕ್ತರಾಗಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ, ಸಾಧನೆ ಮಾತ್ರ ಕಾರಣ ಎಂದು ಹೇಳಿದ. 

ಮುಕ್ತಿ ಮಾರ್ಗ ವಿಶ್ವದ ಪ್ರಸಿದ್ಧವಾಗಿರುವ ಧರ್ಮ ಮಾರ್ಗವೆಂದರೆ, ಅದು ಬೌದ್ಧ ಧರ್ಮ ಇದನ್ನು ಕಂಡುಹಿಡಿದ ಭಾರತದ ಸರಹದ್ದಿನಲ್ಲಿ ಜ್ಞಾನ ಯೋಗಿ ಗೌತಮ ತನ್ನ ಜ್ಞಾನೋದಯವನ್ನು ಪಡೆದ ಇದರಿಂದ ಇತನ್ನು ಬುದ್ಧನೆಂದು ಕರೆಯಲಾಗುತ್ತದೆ. ವಿವಿಧ ಪಂಥಗಳ ಗುರುಗಳ ಹತ್ತಿರ ಸತತವಾಗಿ ೬ವರ್ಷಗಳ ಕಾಲ ಅವರು ಹೇಳಿದಂತೆ ದೇಹ ದಂಡನೆ ಮಾಡಿ ಇದರಿಂದ ಯಾವುದೇ ಪ್ರತಿ ಫಲ ಮತ್ತು ಶಾಂತಿ ಸಿಗದೆ ಅಂತಿಮವಾಗಿ ಪರಮ ಸತ್ಯ ಕಾಣಲು ಮುಂದಿನ ೬ ವರ್ಷಗಳು ಬೋಧಿ ವೃಕ್ಷದ ಕೆಳಗೆ ನಿರಂತರ ಧ್ಯಾನ ತಪಸ್ಸು ಮಾಡುವುದರ ಮೂಲಕ ಪರಿಪೂರ್ಣ ಜ್ಞಾನೋದಯ ಪಡೆದುಕೊಂಡನು.

ಗೌತಮ ಬುದ್ಧರು ಮುಂದಿನ ೪೫ ವರ್ಷಗಳು ನಿರಂತರವಾಗಿ ಧರ್ಮೋಪದೇಶಗಳನ್ನು ಜನಸಾಮಾನ್ಯರಿಗೆ ನೀಡುವ ಮೂಲಕ ಮಾನವನ ದುಃಖ ನಿವಾರಣೆಗೆ ತ್ರಿಸರಣ ಬೋಧನೆ ಮಾಡಿದರು. ಈ ಮೂರು ಬೌದ್ಧ ಧಮ್ಮದ ಮೂಲ ಸಂಕೇತಗಳು.ಇವುಗಳನ್ನು ಪ್ರತಿಯೊಬ್ಬರ ಜೀವನ ಧ್ಯೇಯಗಳಾಗಿ ಒಪ್ಪಿಕೊಂಡು ಸಂತೋಷವಾಗಿರುವುದು. ಅವುಗಳೆಂದರೆ, ಬುದ್ಧಂ ಶರಣಂ ಗಚ್ಚಾಮಿ(ನಾನು ಬುದ್ಧನಿಗೆ ಶರಣಾಗುತ್ತೆನೆ.) ಧಮ್ಮಂ ಶರಣಂ ಗಚ್ಚಾಮಿ(ನಾನು ಧಮ್ಮಕ್ಕೆ ಶರಣಾಗುತ್ತೆನೆ.) ಸಂಘಂ ಶರಣಂ ಗಚ್ಚಾಮಿ(ನಾನು ಸಂಘಕ್ಕೆ ಶರಣಾಗುತ್ತೆನೆ.)

ಬುದ್ಧರು ತಮ್ಮ ಶಿಷ್ಯರಿಗೆ ಜ್ಞಾನ ಬೋಧನೆಯನ್ನು ಮಾಡುತ್ತಿರುತ್ತಾರೆ ಆಗ ಒಬ್ಬ ವ್ಯಾಪಾರಿಯು ಅಳುತ್ತಾ ಬಂದು ಬುದ್ಧಿಗೆ ನಮಸ್ಕರಿಸುತ್ತಾನೆ. ಸ್ವಾಮಿ ನನ್ನನ್ನು ಈ ದುಃಖವು ಸುಟ್ಟು ಹಾಕುತ್ತಿದೆ, ಇದರಿಂದ ಮುಕ್ತಿ ಕೊಡಿ ಎಂದು ಬೇಡಿಕೊಳ್ಳುತ್ತಾನೆ. ಆಗ ಬುದ್ಧರು ಸಂತೈಸಿಸಿ ಏನಾಯಿತು ಎಂದು ಕೇಳಿದಾಗ ಆ ವ್ಯಾಪಾರಿ ನಾನು ದಿನಾಲೂ ವ್ಯಾಪಾರದಿಂದ ಬಂದು ಹಣವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ ಮರದ ಕೆಳಗೆ ಗುಂಡಿ ಮಾಡಿ ಇಡುತಿದ್ದೆ, ಆದರೆ ಆತ ಹಣವನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಾ ಹೇಳುತ್ತಾನೆ.

ಬುದ್ಧರು ಅದಕ್ಕೆ ಮಗು ಚಿಂತಿಸಬೇಡ ಆಸೆ ಎಂಬುದು ಜೀವನವನ್ನು ನಡೆಸುತ್ತಾರೆ ಆದರೆ ಅತಿಯಾಸೆ ಎಂಬುದು ಜೀವನವನ್ನು ಬಲಿ ತೆಗೆದುಕೊಳ್ಳುತ್ತದೆ. ಆದ್ದರಿಂದ ನಮಗೆ ಎಷ್ಟು ಬೇಕೋ ಅಷ್ಟು ಇದ್ದರೆ ಸಾಕು ಉಳಿದಿದ್ದನ್ನು ದಾನಕ್ಕಾಗಿ, ಮತ್ತೊಬ್ಬರ ಸಹಾಯಕ್ಕಾಗಿ ಉಪಯೋಗಿಸಬೇಕು, ಕಷ್ಟದಲ್ಲಿ ಬಾರದ ಬಂಧುಗಳು ಹಾಗೂ ಕಷ್ಟದಲ್ಲಿ ಉಪಯೋಗಿಸದ ಹಣ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಹೇಳಿದ್ದಾರೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.