ಶಿಲ್ಪ ಶೆಟ್ಟಿ ಕನ್ನಡಲ್ಲಿ ಮಾತಾಡಿದನ್ನು ನೋಡಿ ರಶ್ಮಿಕಾ ಕಲಿಬೇಕು ಅಂದ್ರು ನೆಟ್ಟಿಗರು

0 6

ನಮ್ಮ ರಾಜ್ಯದಲ್ಲಿ ಹುಟ್ಟಿ ಬೆಳೆದು ದೊಡ್ಡವರಾಗಿ ಹೋದ ಮೇಲೆ ಕನ್ನಡ ಮಾತಾಡಲು ಹಿಂದೆ ಮುಂದೆ ನೋಡುವ ಒಂದಿಷ್ಟು ಜನರ ನಡುವೆ ಬೇರೆ ರಾಜ್ಯದಲ್ಲಿ ಇದ್ದು ಕನ್ನಡವನ್ನು ಹೆಮ್ಮೆಯಿಂದ ಹೊಗಳುವ ಅವ್ರೆ ಎಷ್ಟು ಮೇಲು ಅಲ್ಲವೇ, ಇತ್ತೀಚಿನ ಟಾಪ್ ನಟಿಯರ ಸಾಲಿನಲ್ಲಿ ರಶ್ಮಿಕಾ ಮಂದಣ್ಣ ಅವರು ಕೂಡ ಒಬ್ಬರು. ಇವರು ಕಿರಿಕ್ ಪಾರ್ಟಿ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಸಿನಿಮಾ ಬಹಳ ಜನಪ್ರಿಯಗೊಂಡಿತು. ಹಾಗೆಯೇ ನಂತರದಲ್ಲಿ ಬೇರೆಬೇರೆ ಭಾಷೆಗಳ ಸಿನಿಮಾಗಳಿಗೆ ಕರೆಗಳು ಬರುತ್ತಾ ಹೋದವು. ನಂತರದಲ್ಲಿ ಹಲವಾರು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಆದ್ದರಿಂದ ನಾವು ಇಲ್ಲಿ ರಶ್ಮಿಕ ಮಂದಣ್ಣ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ.

ಇವರು ಏಪ್ರಿಲ್ 5 1996ರಲ್ಲಿ ಜನಿಸಿದರು. ರಶ್ಮಿಕಾ ಅವರು ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಒಂದು ಕೊಡವ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಮದನ್ ಮಂದಣ್ಣ. ಹಾಗೆಯೇ ಇವರ ತಾಯಿಯ ಹೆಸರು ಸುಮನಾ ಮಂದಣ್ಣ. ಶಿಮನ್ ಎನ್ನುವ ಸಹೋದರಿ ಇವರಿಗೆ ಇದ್ದಾರೆ. ಇವರು ಕೂರ್ಗ್ ಪಬ್ಲಿಕ್ ಸ್ಕೂಲ್ ನಲ್ಲಿ ಆರಂಭಿಕ ವಿದ್ಯಾಭ್ಯಾಸವನ್ನು ಪಡೆದರು. ಮೈಸೂರು ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಮತ್ತು ಆರ್ಟ್ಸ್ ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದರು.

ಎಂ.ಎಸ್.ರಾಮಯ್ಯ ಕಾಲೇಜ್ ಆಫ್ ಆರ್ಟ್ಸ್, ಸೈನ್ಸ್ & ಕಾಮರ್ಸ್ನಿಂದ ಸೈಕಾಲಜಿ, ಜರ್ನಲಿಸಮ್ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ರಶ್ಮಿಕಾರವರು 2018ರ ಬೆಂಗಳೂರು ಟೈಮ್ಸ್ ನ 25ರ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಂಡರು. 2019ರಲ್ಲಿ ಅವರು 28ನೇ ಸ್ಥಾನದಲ್ಲಿದ್ದರು. ನಂತರ ಅವರು ಮೊದಲ ಬಾರಿಗೆ ಬೆಂಗಳೂರ್ ಟೈಮ್ಸನಲ್ಲಿ ಅತ್ಯಂತ ಅಪೇಕ್ಷಣೀಯ ಮಹಿಳೆಯರ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದರು. ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಈಗ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸೂಪರ್ ಡ್ಯಾನ್ಸರ್ ಸೀಸನ್ 4ರಲ್ಲಿ ಶಿಲ್ಪಾ ಶೆಟ್ಟಿ ಅವರು ನಿರ್ಣಾಯಕಿ ಆಗಿದ್ದರು.

ಆಗ ಕರ್ನಾಟಕದ ಬೆಳಗಾವಿ ಜಿಲ್ಲೆಯ ಒಬ್ಬ ಹುಡುಗ ಬಹಳ ಚೆನ್ನಾಗಿ ಡ್ಯಾನ್ಸ್ ಮಾಡಿದ್ದನು. ಹಾಗೆಯೇ ಅವನು ಕನ್ನಡದವನು ಎಂದ ಕೂಡಲೇ ಶಿಲ್ಪಾ ಶೆಟ್ಟಿ ಅವರು ಬಹಳ ಮರ್ಯಾದೆ ಕೊಟ್ಟರು. ಬೇರೆ ಭಾಷೆಯವರು ನಮ್ಮ ಭಾಷೆಗೆ ಇಷ್ಟು ಗೌರವ ಕೊಡುತ್ತಿದ್ದಾರೆ. ಹಾಗೆಯೇ ನಾವೂ ಕೂಡ ನಮ್ಮ ಭಾಷೆಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಇತ್ತೀಚೆಗೆ ಹೆಚ್ಚಾಗಿ ಕನ್ನಡದವರೇ ಬೇರೆ ಭಾಷೆಯ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ನಮ್ಮ ಕನ್ನಡ ಭಾಷೆಯನ್ನು ನಾವು ಉಳಿಸಿ ಬೆಳೆಸೋಣ. ನಮ್ಮ ಭಾಷೆಯನ್ನು ಬೆಳೆಸಲು ನಮ್ಮ ಕನ್ನಡ ಚಿತ್ರರಂಗದವರು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಾರೆ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಕನ್ನಡವನ್ನು ಮರೆತಿರುವ ರಶ್ಮಿಕಾ ಮಂದಣ್ಣ ಅವರು ಶಿಲ್ಪ ಶೆಟ್ಟಿಯವರನ್ನು ನೋಡಿ ಕಲಿಯಬೇಕಾಗಿದೆ ಎಂಬುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ

Leave A Reply

Your email address will not be published.