Ultimate magazine theme for WordPress.

ನಿಮ್ಮ ಅಸ್ತಿ ಅಥವಾ ಜಮೀನಿಗೆ ಹೋಗಲು ರಸ್ತೆ ಇಲ್ಲವೇ? ಹಾಗಾದ್ರೆ ನಿಮಗಾಗಿ ಇಲ್ಲಿದೆ ಸಂಪೂರ್ಣ ಮಾಹಿತಿ

0 6,526

ಆಸ್ತಿ ಅಥವಾ ಜಮೀನು ಮನುಷ್ಯನ ಜೀವನದ ಒಂದು ಭಾಗವಾಗಿದೆ. ಹೊಲ, ತೋಟ, ಅಥವಾ ಮನೆ ಹೀಗೆ ಬೆಲೆ ಕಟ್ಟುವ ಯಾವ ಜಾಗವಾದರೂ ಅದನ್ನು ಆಸ್ತಿ ಎನ್ನುತ್ತೇವೆ. ಆಸ್ತಿ ಅಥವಾ ಜಮೀನಿಗೆ ಸಂಪರ್ಕ ಮಾಡಲು ಧಾರಿ ಬೇಕಾಗುತ್ತದೆ. ಒಂದು ಜಮೀನಿಗೆ ಬೇರೊಬ್ಬರ ಜಮೀನಿನ ಮೂಲಕ ಹೋಗಬೇಕಾಗುತ್ತದೆ. ಅದಕ್ಕೆ ದಾರಿಯನ್ನು ಆ ಜಮೀನಿನ ಮಾಲೀಕನಿಂದ ಪಡೆದುಕೊಳ್ಳಬೇಕಾಗುತ್ತದೆ. ಜಮೀನಿಗೆ ದಾರಿಯ ಸಮಸ್ಯೆ ಸಹಜವಾಗಿ ಎದುರಾಗುತ್ತದೆ. ಆದ್ದರಿಂದ ನಾವಿಲ್ಲಿ ಅದರ ಬಗೆಗಿನ ಹೆಚ್ಚಿನ ವಿವರಣೆಯನ್ನು ತಿಳಿದುಕೊಳ್ಳೋಣ.

ಜಮೀನಿನ ತಕರಾರುಗಳಲ್ಲಿ ರೋಡಿನಲ್ಲಿ ಸಮಸ್ಯೆ ತುಂಬಾ ಬರುತ್ತದೆ. ಬೇರೊಬ್ಬರ ಜಮೀನಿನ ಮೂಲಕ ಹಾದು ಹೋಗುವಾಗ ಕೆಲವು ಒಪ್ಪಂದಗಳ ದಾರಿಯನ್ನು ಬಿಟ್ಟುಕೊಂಡಿರುತ್ತಾರೆ. ಎಕರೆಗಟ್ಟಲೆ ಜಮೀನು ಇರುವುದರಿಂದ ಇನ್ನೊಬ್ಬರ ಜಮೀನಿನ ಮೇಲೆ ಹಾದು ಹೋಗುವ ಸಂದರ್ಭಗಳು ಬರುತ್ತದೆ. ಅದಕ್ಕೆ ದಾರಿಯು ಅವಶ್ಯವಾಗಿ ಬೇಕಾಗುತ್ತದೆ. ಕೆಲವರು ಬಾಯಿ ಮಾತಿನ ಒಪ್ಪಂದದಲ್ಲಿ ದಾರಿಯನ್ನು ಜಮೀನಿಗೆ ಹೋಗಲು ಬಿಟ್ಟುಕೊಂಡಿರುತ್ತಾರೆ. ಅದು ಮುಂದಿನ ತಲೆಮಾರುಗಳಲ್ಲಿ ಸಮಸ್ಯೆಯನ್ನು ಉಂಟು ಮಾಡಬಹುದು. ಹೀಗಾಗಿ ಬರಿ ಬಾಯಿ ಮಾತಿನ ಮೇಲೆ ದಾರಿ ಬಿಟ್ಟುಕೊಳ್ಳುವುದು ಸಾಕಾಗುವುದಿಲ್ಲ.

ಬಾಯಿಮಾತಿನ ಒಪ್ಪಂದಕ್ಕೆ ಯಾವುದೇ ಸಮಯದಲ್ಲಿ ಬೇಕಾದರೂ ತಕರಾರನ್ನು ಮಾಡಬಹುದಾಗಿದೆ. ಅದಕ್ಕೆ ಸರಿಯಾದ ಕರಾರಿನ ಮೂಲಕ ಒಪ್ಪಂದ ಮಾಡಿಕೊಳ್ಳುವುದು ಉತ್ತಮ. ಹೀಗಾಗಿ ಯಾವುದೇ ಒಪ್ಪಂದವಾಗಿದ್ದರೂ ಲಿಖಿತ ರೂಪದಲ್ಲಿ ಇದ್ದರೆ ಮತ್ತು ರಿಜಿಸ್ಟರ್ ಆಗಿದ್ದರೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಯಾರ ಜಮೀನಿನಲ್ಲಿ ದಾರಿ ಇರುತ್ತದೆ ಅದಕ್ಕೆ ಸರಿಯಾದ ಒಂದು ಸ್ಕೆಚ್ ಅನ್ನು ಹಾಕಿ ಜಾಗದ ಮಾಲೀಕರು ಯಾರು ಇರುತ್ತಾರೋ ಅವರ ಸಹಿಯನ್ನು ಕರಾರಿಗೆ ಪಡೆದುಕೊಳ್ಳಬೇಕು. ಅದಕ್ಕೆ ಕಾನೂನಿಂದ ಮಾನ್ಯತೆ ಇರುತ್ತದೆ. ಇದಕ್ಕೆ ಯಾವುದೇ ತಂಟೆ ತಕರಾರುಗಳು ಬರುವುದಿಲ್ಲ. ಯಾರು ಬಂದು ಕೇಳಿದರು ಸಹ ಕರಾರನ್ನು ತೋರಿಸಬಹುದಾಗಿದೆ.

ಮುಂದೆ ಇರುವ ಜಮೀನಿನವರು ಹಿಂದೆ ಇರುವ ಜಮೀನಿನವರೆಗೆ ದಾರಿ ಬಿಡದೆ ಇದ್ದಾಗ ಅನುಭೋಗದ ಹಕ್ಕಿನ ಪ್ರಕಾರ ಕಾನೂನಿಂದ ಪಡೆದುಕೊಳ್ಳಬಹುದಾಗಿದೆ. ಇದನ್ನು ಪಡೆದುಕೊಳ್ಳಬೇಕಾದರೆ ಇಬ್ಬರು ವ್ಯಕ್ತಿಗಳು ಇರಬೇಕು. ಅವರು ಪ್ರತ್ಯೇಕವಾದ ಸ್ವತ್ತಿಗೆ ಮಾಲೀಕರು ಆಗಿರಬೇಕು. ಇದರಲ್ಲಿ ಒಬ್ಬ ವ್ಯಕ್ತಿಗೆ ಅನ್ಯಮಾರ್ಗವಿಲ್ಲದೆ ಅವರ ಜಮೀನಿನಲ್ಲಿ ಹೋಗುವ ಸಂದರ್ಭವಿದ್ದಾಗ ಅನುಭೋಗದ ಹಕ್ಕಿನ ಪ್ರಕಾರ ದಾರಿಯನ್ನು ಬಿಡಲೇಬೇಕಾಗುತ್ತದೆ. ಇದನ್ನು ಸೆಕ್ಷನ್ 12ರಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿಯಾಗಿ ಜಮೀನಿಗೆ ಹೋಗಲು ದಾರಿಯನ್ನು ಕಾನೂನು ರೀತಿಯಲ್ಲಿ ಮಾಡಿಕೊಳ್ಳಬಹುದಾಗಿದೆ.

Leave A Reply

Your email address will not be published.