ಈ ಹುಡುಗಿಯ ಮನೆ ನೋಡಿದ್ರೆ ನಿಜಕ್ಕೂ ದಂಗಾಗ್ತೀರಾ, ಅಷ್ಟಕ್ಕೂ ಯಾರು ಈ ಹುಡುಗಿ ನೋಡಿ

0 2

ಮನುಷ್ಯ ಎಂದ ಮೇಲೆ ಪ್ರತಿಯೊಬ್ಬನಿಗೂ ಆಸೆ ಮತ್ತು ಕನಸುಗಳು ಇರುವುದು ಸಹಜ ಆಗಿದೆ. ಕನಸು ಕಾಣುವುದು ಮನುಷ್ಯನ ಮೂಲಭೂತ ಹಕ್ಕು ಎಂದು ಹೇಳಬಹುದು. ಪ್ರತಿಯೊಬ್ಬರೂ ಶ್ರೀಮಂತರಾಗಿಯೇ ಹುಟ್ಟುವುದಿಲ್ಲ. ಹಾಗೆಯೇ ಪ್ರತಿಯೊಬ್ಬರೂ ಎಲ್ಲಾ ಅವಶ್ಯಕತೆಗಳನ್ನು ಪಡೆದುಕೊಂಡೇ ಹುಟ್ಟುವುದಿಲ್ಲ. ಅಂದರೆ ಪ್ರತಿಯೊಬ್ಬರಿಗೂ ಜೀವನದ ವ್ಯಾಪ್ತಿ ಚಿಕ್ಕದಾಗಿ ಇದ್ದರೂ ಕನಸುಗಳು ಮಾತ್ರ ದೊಡ್ಡದಾಗಿ ಇರುತ್ತವೆ. ಅದನ್ನು ಪೂರೈಸಿಕೊಳ್ಳಲು ಸರಿಯಾದ ಸಮಯ ಬೇಕು ಅಷ್ಟೆ. ಆದ್ದರಿಂದ ನಾವು ಇಲ್ಲಿ 14ವರ್ಷದ ಒಂದು ಬಾಲಕಿಯ ಸಾಧನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಬಾಲಕಿಯ ಹೆಸರು ಮಲೀಷಾ ಕರ್ವಾ. ಇವಳು ಮುಂಬೈನ ಸ್ಲಮ್ ನಲ್ಲಿ ಒಂದು ಚಿಕ್ಕ ಗುಡಿಸಲಿನಲ್ಲಿ ವಾಸವಿದ್ದಳು. ಇವಳು ಬಹಳ ಬಡತನದಲ್ಲಿ ಬೆಳೆದಳು. ಹಾಗೆಯೇ ಹಸಿವು ಮತ್ತು ಶಿಕ್ಷಣ ಇಲ್ಲದೆ ಇದ್ದವಳು. ಆದರೆ ಅಲ್ಲಿ ಇರುವ ಜನರಲ್ಲಿ ಇವಳಷ್ಟು ಶಿಕ್ಷಣವನ್ನು ಹೊಂದಿದವರು ಸಹ ಯಾರೂ ಇಲ್ಲ. ಅವಳ ತಂದೆ ಮುಖೇಶ್ ಹೆಚ್ಚು ಓದಿದವರಲ್ಲ.ಇವರು ಶ್ರೀಮಂತರ ಮನೆಯ ಪಾರ್ಟಿಗಳಲ್ಲಿ ಷೋ ನೀಡುವುದು ಅವರ ಕಾಯಕವಾಗಿತ್ತು.ಅದರಿಂದ ಸಿಗುತ್ತಿದ್ದ ಕೂಲಿಯಲ್ಲಿ ತಮ್ಮ ಕುಟುಂಬವನ್ನು ನಡೆಸುತ್ತಿದ್ದರು. ಮಲೀಷಾ ಒಂದು ದಿನ 5ನೇ ತರಗತಿ ಇದ್ದಾಗ ಯೂಟ್ಯೂಬ್ ನಲ್ಲಿ ಫ್ಯಾಷನ್ ಶೋ ನೋಡುತ್ತಿದ್ದಳು. ಬಾಲಿವುಡ್ ನ ನಟಿ ಪ್ರಿಯಾಂಕಾ ಚೋಪ್ರಾ ಒಂದು ಸ್ಟೈಲ್ ನಲ್ಲಿ ನಡೆಯುವುದನ್ನು ಗಮನಿಸುತ್ತಾಳೆ.

ಆಗ ಅವಳು ತಾನೂ ಒಬ್ಬ ಮೊಡಲ್ ಹಾಗೂ ಡ್ಯಾನ್ಸರ್ ಆಗಬೇಕೆಂದು ಬಯಸಿದಳು. ಸಾವಿರಾರು ಜನ ಹೀಗೆ ಬಯಸುತ್ತಾರೆ. ಆದರೆ ಎಲ್ಲರಿಗೂ ಆಸೆ ಕೈಗೂಡುವುದಿಲ್ಲ. ಹಾಲಿವುಡ್ ಚಿತ್ರವಾದ ಸ್ಟೆಪಪ್2 ಎಂಬ ಸಿನೆಮಾದ ನಟ ರಾಬರ್ಟ್ ಹಾಕ್ಮನ್ ಹೊಸ ಮ್ಯೂಸಿಕ್ ವಿಡಿಯೋಗಾಗಿ ಜಾಗವನ್ನು ಹುಡುಕಲು ಭಾರತಕ್ಕೆ ಬಂದಿದ್ದ. ಭಾರತದ ಗೇಟ್ ವೆ ಆದ ಮುಂಬೈನ ಕಡಲ ತೀರದಲ್ಲಿ ಸಂಚರಿಸುತ್ತಿರುವಾಗ ಮಲೀಷಾಳ ಸ್ನೇಹಿತೆ ಮತ್ತು ತಂಗಿಯ ಮೂಲಕ ಮಲೀಶಾಳ ಪರಿಚಯ ಆಯಿತು. ಆಗ ಅವಳು ಇಂಗ್ಲೀಷ್ ನಲ್ಲಿ ರಾಬರ್ಟ್ ಜೊತೆ ಮಾತನಾಡಿದಾಗ ಅವಳ ಚಾರ್ಮ್, ನಗು, ಆತ್ಮವಿಶ್ವಾಸ ಇತ್ತು. ಆಗ ರಾಬರ್ಟ್ ಇವಳಿಗೆ ಹೇಗಾದರೂ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಅವಳದೇ ಆದ ಹೆಸರಿನಲ್ಲಿ ಅವಳ ಫೋಟೋ ಹಾಕಿ ಖಾತೆಯನ್ನು ಆರಂಭಿಸುತ್ತಾರೆ.

ಅದರಲ್ಲಿ ಇವಳ ಫೋಟೋ ಮತ್ತು ಅವರು ಮುಂಬೈನಲ್ಲಿ ಮಲೀಷಾ ಮತ್ತು ಸ್ನೇಹಿತರ ಜೊತೆ ಕಳೆದ ಬಗ್ಗೆ ಬರೆದು ಪೋಸ್ಟ್ ಮಾಡುತ್ತಾರೆ. ಇದು ಎಲ್ಲಾ ಕಡೆ ಹರಡುತ್ತದೆ. ಹಾಗೆಯೇ ಹಾಲಿವುಡ್ ಸ್ಟಾರ್ ಜೊತೆ ಕುಳಿತ ಈಕೆಯ ಫೋಟೋ ತುಂಬಾ ಹರಡುತ್ತದೆ. ಇವಳ ಫೋಟೋಗಳನ್ನು ನೋಡಿ ಪಿಕಾಕ್ ಎಂಬ ತಂಡ ತಮ್ಮ ಮ್ಯಾಗ್ಸಿನ್ ಗಾಗಿ ಇವಳು ಇದ್ದಲ್ಲಿ ಹೋಗಿ ಫೋಟೋಶೂಟ್ ಮಾಡುತ್ತಾರೆ. 2020 ಅಕ್ಟೋಬರ್ ನಲ್ಲಿ ಪಿಕಾಕ್ ನ ಕವರ್ ಫೋಟೋನಲ್ಲಿ ಈ ಬಾಲಕಿಯ ಆಕರ್ಷಕ ಚಿತ್ರಗಳು ರಾರಾಜಿಸಿದ್ದವು. ಈಗ ಮಲೀಷಾ ಬಾಂಬೆಯ ಯಂಗೆಸ್ಟ್ ಸೆಲೆಬ್ರಿಟಿ ಆಗಿದ್ದಾಳೆ. ಇವಳ ಹೆಸರು ಮತ್ತು ಸುದ್ದಿ ಬಾಂಬೆಯಲ್ಲಿ ತುಂಬಾ ಹಬ್ಬಿದೆ. ಇನ್ಸ್ಟಾಗ್ರಾಮ್ ನಲ್ಲಿ ಈಗ ಲಕ್ಷಾಂತರ ಫಾಲೋವಾರ್ಸ್ ಗಳನ್ನು ಹೊಂದಿದ್ದಾಳೆ.

Leave A Reply

Your email address will not be published.