Ultimate magazine theme for WordPress.

ಶಂಕರ್ ನಾಗ್ ಅವರ ಸಮಾಧಿ ನಿಜಕ್ಕೂ ಇಲ್ವಾ, ಅದು ಇದ್ರೂ ಎಲ್ಲಿದೆ ಒಂದಿಷ್ಟು ಮಾಹಿತಿ

0 79

ನಾವಿಂದು ಶಂಕರನಾಗ್ ಅವರ ಸಮಾಧಿಗೆ ಸಂಬಂಧಪಟ್ಟಂತೆ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಶಂಕರನಾಗ್ ಎನ್ನುವ ಹೆಸರನ್ನು ಕೇಳಿದಾಕ್ಷಣ ನಮ್ಮೆಲ್ಲರಿಗೂ ಮೈ ರೋಮಾಂಚನವಾಗುತ್ತದೆ. ಕಾರಣ ಆ ಹೆಸರಿನಲ್ಲಿ ಅಂಥದೊಂದು ಶಕ್ತಿ ಇದೆ ಆ ಕಾಲದಲ್ಲಿಯೇ ಶಂಕರ್ ನಾಗ್ ಅವರ ಯೋಚನೆ ಪರಿ ಅಸಾಧ್ಯವಾದದ್ದು.

ಇದೇ ಸಂದರ್ಭದಲ್ಲಿ ನಮ್ಮೆಲ್ಲರಿಗೂ ಒಂದು ಹತಾಶ ಮನೋಭಾವನೆ ಬರುತ್ತದೆ ಶಂಕರ್ ನಾಗ್ ಅವರು ಈಗ ಇದ್ದಿದ್ದರೆ ಅವರ ಎಂತೆಂತಹ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿದ್ದವು ಎಂತೆಂತಹ ಸಿನಿಮಾಗಳು ಬರುತ್ತಿದ್ದವು ಎಂದು. ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ಸಾರ್ವಜನಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಆಗಲೇ ಸರ್ಕಾರಕ್ಕೆ ಸಾಕಷ್ಟು ಸಲಹೆಯನ್ನು ಕೊಟ್ಟಿದ್ದರು.

ನಾವು ಈಗ ನೋಡುತ್ತಿರುವ ಮೆಟ್ರೋ ಕನಸನ್ನು ಅವರು ಆ ಕಾಲದಲ್ಲಿಯೇ ಕಂಡಿದ್ದರು ನಂದಿಬೆಟ್ಟಕ್ಕೆ ರೋಪ್ ವೆ ಹಾಕಬೇಕು ಆ ಮೂಲಕ ಕೇಬಲ್ ಕಾರುಗಳು ಚಲಿಸಬೇಕು ಎಂದು ಹೇಳಿ ಆಗಲೇ ಕನಸನ್ನು ಕಂಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಸರ್ಕಾರಕ್ಕೆ ವರದಿಯನ್ನು ಕೂಡ ಸಲ್ಲಿಸಿದ್ದರು. ಹೀಗೆ ಸಿನಿಮಾ ಜೊತೆಗೆ ಸಾರ್ವಜನಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅದ್ಭುತವಾದಂತಹ ಕನಸನ್ನು ಕಂಡಿದ್ದರು.

ದಕ್ಷಿಣಭಾಗದಲ್ಲಿ ಇರುವಂತವರಿಗೆ ಶಂಕರ್ ನಾಗ್ ಯಾರು ಎಂಬುದು ಚೆನ್ನಾಗಿ ಗೊತ್ತಿದೆ ಆದರೆ ಉತ್ತರದ ಕಡೆಯವರಿಗೆ ಶಂಕರ್ ನಾಗ್ ಎಂದರೆ ತಕ್ಷಣ ಅವರಿಗೆ ತಿಳಿಯುವುದಿಲ್ಲ ಆದರೆ ಮಾಲ್ಗುಡಿ ಡೇಸ್ ಎಂದು ಹೇಳುತ್ತಿದ್ದ ಹಾಗೆ ನಮಗೆ ಗೊತ್ತು ಗೊತ್ತು ಎಂದು ಹೇಳುತ್ತಾರೆ. ಕೇವಲ ಸಿನಿಮಾಗಳು ಮಾತ್ರವಲ್ಲ ಮಾಲ್ಗುಡಿ ಡೇಸ್ ಮೂಲಕ ಇಡೀ ಭಾರತದಾದ್ಯಂತ ಹೊಸ ಸಂಚಲನ ಮೂಡಿಸಿದ್ದರು.

ಕೇವಲ ಮೂವತ್ತೈದು ವರ್ಷಕ್ಕೆ ಎಂಬತ್ತರಿಂದ ತೊಂಬತ್ತು ಸಿನಿಮಾಗಳನ್ನ ಮಾಡಿದ್ದರು ನಿರ್ದೇಶಕನಾಗಿ ನಿರ್ಮಾಪಕನಾಗಿ ನಟನಾಗಿ ಕೆಲಸವನ್ನು ಮಾಡಿದ್ದರು. ಶಂಕರನಾಗ್ ಅವರು ಅಷ್ಟು ಬೇಗ ಎಲ್ಲರನ್ನು ಬಿಟ್ಟು ಹೋಗುತ್ತಾರೆ ಎಂದು ಯಾರೂ ಕೂಡ ಅಂದುಕೊಂಡಿರಲಿಲ್ಲ. ಅಂದು ಶೂಟಿಂಗ್ ನಲ್ಲಿ ಇರುವಂಥವರು ನಾಳೆ ಒಂದು ಕೆಲಸ ಇದೆ ಹೋಗಬೇಕು ಎಂದು ಅರ್ಜೆಂಟಾಗಿ ಮನೆಗೆ ಹೋಗುತ್ತಾರೆ ಅಲ್ಲಿ ಊಟ ಮಾಡಿ ಹೊರಡುವುದಕ್ಕೆ ಸಿದ್ದವಾಗುತ್ತಾರೆ ಆಗ ಮನೆಯವರು ಕೂಡ ಬೇಡ ಎಂದು ಹೇಳುತ್ತಾರೆ

ಅನಂತನಾಗ್ ಅವರು ಕೂಡ ಹೋಗುವುದು ಬೇಡ ಎಂದು ಹೇಳುತ್ತಾರೆ. ಆದರೂ ಕೂಡ ಶಂಕರನಾಗ್ ಅವರ ಪತ್ನಿ ಅರುಂಧತಿನಾಗ್ ಹಾಗೂ ಮಗಳುಕಾವ್ಯ ಹಾಗೂ ಡ್ರೈವರ್ ಲಿಂಗಣ್ಣ ಇವರ ಜೊತೆ ಕಾರಿನಲ್ಲಿ ಹೊರಡುತ್ತಾರೆ ಸೆಪ್ಟೆಂಬರ್ ಮೂವತ್ತು ಸಾವಿರದ ಒಂಬೈನೂರಾ ತೊಂಬತ್ತರಲ್ಲಿ ದಾವಣಗೆರೆಯ ಹೊರವಲಯ ಆನಗೊಡಿನಲ್ಲಿ ಕಾರು ಅಪಘಾತಕ್ಕೆ ಒಳಗಾಗುತ್ತದೆ. ಶಂಕರ್ ನಾಗ್ ಅವರು ಸ್ಥಳದಲ್ಲಿಯೇ ಮರಣ ಹೊಂದುತ್ತಾರೆ.

ಇಡೀ ಕರ್ನಾಟಕವೇ ಸ್ತಬ್ಧವಾಗುತ್ತದೆ ಪ್ರತಿಯೊಬ್ಬರೂ ಕೂಡ ಆಶ್ಚರ್ಯಕ್ಕೆ ಒಳಗಾಗುತ್ತಾರೆ. ಅನಂತರ ಅವರ ದೇಹವನ್ನು ದಾವಣಗೆರೆಯಿಂದ ಬೆಂಗಳೂರಿಗೆ ಕರೆತರಲಾಗುತ್ತದೆ ಕನ್ನಡ ಸಿನಿಮಾರಂಗದವರೆಲ್ಲರೂ ಕೂಡ ಅಲ್ಲಿಗೆ ಬರುತ್ತಾರೆ ಆ ಸಮಯದಲ್ಲಿ ಅರುಂಧತಿನಾಗ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುತ್ತಾರೆ ಹಾಗಾಗಿ ಸಿನಿಮಾ ರಂಗದವರು ಅವರ ಅಂತಿಮಕ್ರಿಯೆಯಲ್ಲಿ ಹೆಚ್ಚಾಗಿ ಭಾಗಿಯಾಗುತ್ತಾರೆ.

ಫಿಲಂ ಚೇಂಬರ್ ಗೆ ಕರೆದುಕೊಂಡು ಬಂದು ಅಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆಯನ್ನು ಮಾಡುತ್ತಾರೆ ನಂತರ ಅವರ ಕಂಟ್ರಿ ಕ್ಲಬ್ ಗೆ ಕೂಡ ಪಾರ್ಥಿವ ಶರೀರವನ್ನು ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ.

ಅನಂತರ ಅಭಿಮಾನಿಗಳಿಗೆ ತಿಳಿಯುತ್ತದೆ ಅಂತಿಮ ವಿಧಿವಿಧಾನಕ್ಕಾಗಿ ವಿಲ್ಸನ್ ಗಾರ್ಡನ್ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಆಗ ಚಿತಾಗಾರಗಳ ಸಂಖ್ಯೆ ಕಡಿಮೆ ಇತ್ತು ಅಲ್ಲಿ ಶಂಕರ್ ನಾಗ್ ಅವರಿಗೆ ಅಗ್ನಿಸ್ಪರ್ಷ ವನ್ನ ಮಾಡಲಾಗುತ್ತದೆ. ಆನಂತರದಲ್ಲಿ ಎಲ್ಲರಿಗೂ ಕಾಡುವಂತಹ ಪ್ರಶ್ನೆ ಶಂಕರ್ ನಾಗ್ ಅವರ ಸಮಾಧಿ ಎಲ್ಲಿದೆ ಎಂಬುದು.

ತುಂಬಾ ಜನ ತಿಳಿದುಕೊಂಡಿದ್ದರು ಅರುಂಧತಿ ನಾಗ್ ಅವರು ವಾಸಿಸುವ ಸಿಂಗಸಂದ್ರಲ್ಲಿ ಅವರ ಸಮಾಧಿ ಇದೆ ಎಂದು ಅಲ್ಲಿ ಯಾವುದೇ ರೀತಿಯ ಸಮಾಧಿ ಇಲ್ಲ. ವಿಲ್ಸನ್ ಗಾರ್ಡ್ ನಲ್ಲಿಯೂ ಕೂಡ ಶಂಕರ್ ನಾಗ್ ಅವರ ಸಮಾಧಿ ಇಲ್ಲ ಎಲ್ಲಿಯೂ ಕೂಡ ಶಂಕರನಾಗ್ ಅವರ ಸಮಾಧಿಗೆ ಇಲ್ಲ. ಯಾಕೆ ಪದೇಪದೇ ಸಮಾಧಿಗಳ ಬಗ್ಗೆ ಸ್ಮಾರಕಗಳ ಬಗ್ಗೆ ಚರ್ಚೆ ಆಗುತ್ತದೆ ಎಂದರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟರು ವಿಧಿವಶರಾದರು ಕೂಡ ಆ ನಟನೊಂದಿಗೆ ಭಾವನಾತ್ಮಕವಾಗಿ ಸಂಬಂಧ ಹೊಂದುವುದಕ್ಕೆ ಒಂದೇ ಒಂದು ಜಾಗ ಎಂದರೆ ಅದು ಸಮಾಧಿ.

ಆದರೆ ಶಂಕರ್ ನಾಗ್ ಅವರೊಂದಿಗೆ ಭಾವನಾತ್ಮಕವಾಗಿ ಸಂಬಂಧ ಹೊಂದುವುದಕ್ಕೆ ಅಥವಾ ಅವರಿಗೆ ನಮನವನ್ನು ಸಲ್ಲಿಸುವುದಕ್ಕೆ ಎಲ್ಲಿಯೂ ಕೂಡ ಅವರ ಸಮಾಧಿ ಇಲ್ಲ. ಆ ಸಮಯದಲ್ಲಿ ಅರುಂಧತಿನಾಗ್ ಅವರು ಕೂಡ ತುಂಬ ದುಃಖದಲ್ಲಿದ್ದರೂ ಅವರ ಕುಟುಂಬದವರು ಕೂಡ ಇದರ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ.

ಸದ್ಯ ಅರುಂಧತಿನಾಗ್ ಅವರು ಶಂಕರ್ ನಾಗ್ ಅವರ ಕನಸಾಗಿರುವಂತಹ ರಂಗಶಂಕರವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಶಂಕರ್ ನಾಗ್ ಅವರ ನೆನಪಿಗೆ ಇರುವುದು ಅದೊಂದೇ ಅದನ್ನು ಬಿಟ್ಟರೆ ಬೇರೆ ಯಾವುದೂ ಇಲ್ಲ. ಅವರ ಸ್ಮಾರಕಕ್ಕೆ ಸಂಬಂಧಿಸಿದಂತೆ ಸರ್ಕಾರ ಮುತುವರ್ಜಿ ವಹಿಸಬೇಕಿತ್ತು. ಕಾರಣ ಅವರು ಸಿನಿಮಾರಂಗಕ್ಕೆ ಕೊಟ್ಟಂತಹ ಕೊಡುಗೆ ಅಪಾರ ಜೊತೆಗೆ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು

ಸರ್ಕಾರಕ್ಕೂ ಸಾಕಷ್ಟು ಯೋಚನೆಗಳನ್ನು ಆಗಲೇ ನೀಡಿದ್ದರು ಆ ಕಾರಣಕ್ಕಾದರೂ ಒಂದು ಚಿಕ್ಕ ಮಟ್ಟದಲ್ಲಿ ಆದರೂ ಶಂಕರ್ ನಾಗ್ ಅವರ ಸ್ಮಾರಕ ಇರಬೇಕಿತ್ತು. ಅವರು ವಿಧಿವಶರಾದಂತಹ ಸಮಯದಲ್ಲಿ ಸಮಾಧಿ ಸ್ಮಾರಕಗಳ ಬಗ್ಗೆ ಹೆಚ್ಚಿನ ಕಾಳಜಿ ಇರಲಿಲ್ಲ ಆದರೆ ಈಗಲಾದರೂ ಅದರ ಕುರಿತು ಯೋಚನೆಯನ್ನು ಮಾಡಬಹುದಾಗಿತ್ತು. ಯಾಕೆಂದರೆ ಶಂಕರ್ ನಾಗ್ ಅವರು ಸಾಮಾನ್ಯ ನಟರಲ್ಲ. ಒಟ್ಟಾರೆಯಾಗಿ ಶಂಕರ್ ನಾಗ್ ಅವರ ನೆನಪಿಗಾಗಿ ಏನಾದರೂ ಒಂದು ಆಗಬೇಕು ಇದರ ಕುರಿತು ಅಭಿಮಾನಿಗಳು ಕೂಡಾ ಧ್ವನಿ ಎತ್ತಬೇಕಾಗಿದೆ.

Leave A Reply

Your email address will not be published.