ನಟ ಬಾಲಾಜಿ ನಟನೆಯಿಂದ ದೂರ ಉಳಿಯಲು ಕಾರಣವೇನು, ಸದ್ಯ ಈ ನಟನ ಪರಿಸ್ಥಿತಿ ಹೇಗಿದೆ ಗೋತ್ತಾ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಕನ್ನಡ ಸಿನಿಮಾರಂಗದ ಇತಿಹಾಸದಲ್ಲಿ ಅನೇಕ ಕಲಾವಿದರು ಬಂದು ಹೋಗಿದ್ದಾರೆ ಅದರಲ್ಲಿ ಒಂದಷ್ಟು ಜನ ಆರಂಭದಲ್ಲಿ ಭರವಸೆ ಮೂಡಿಸಿದರರೂ ಕೂಡ ಆನಂತರದಲ್ಲಿ ಸಿನಿಮಾರಂಗದಿಂದ ದೂರವೇ ಉಳಿದರು ಅವರಲ್ಲಿ ಒಬ್ಬರು ಬಾಲಾಜಿ ವೀರಸ್ವಾಮಿ. ವಿ ರವಿಚಂದ್ರನ್ ಅವರ ತಮ್ಮ ಹಾಗೆ ವೀರಸ್ವಾಮಿ ಅವರ ಎರಡನೇ ಮಗ ಕನ್ನಡ ಸಿನಿಮಾ ರಂಗದಲ್ಲಿ ಸಾಕಷ್ಟು ಭರವಸೆಯನ್ನು ಮೂಡಿಸಿದಂತಹ ನಟ ಕೂಡ ಹೌದು.

ಆದರೆ ಆದಷ್ಟು ಬೇಗ ಬಾಲಾಜಿಯವರು ನಟನೆಯಿಂದ ದೂರವೇ ಉಳಿದರು. ಹಾಗಾದರೆ ಬಾಲಾಜಿಯವರು ನಟನೆಯಿಂದ ದೂರ ಉಳಿಯುವುದಕ್ಕೆ ನಿಜವಾದ ಕಾರಣ ಏನು ಮತ್ತೊಮ್ಮೆ ಅವರು ಸಿನಿಮಾರಂಗಕ್ಕೆ ಬರುವ ಸಾಧ್ಯತೆ ಇದೆಯೇ ಈ ಕುರಿತಾದ ಮಾಹಿತಿಯನ್ನು ನಾವಿಂದು ತಿಳಿದುಕೊಳ್ಳೋಣ.

ವೀರಸ್ವಾಮಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಂತಹ ಒಳ್ಳೆಯ ಪ್ರೊಡ್ಯೂಸರ್. ಇವರು ಮೂಲತಹ ಕರ್ನಾಟಕದವರಲ್ಲ ಅವರು ತಮಿಳುನಾಡಿನವರು ಆರಂಭದಲ್ಲಿ ಸಿನಿಮಾ ಪೋಸ್ಟರ್ ಗಳನ್ನು ಗೋಡೆಗೆ ಅಂಟಿಸುವ ಕೆಲಸವನ್ನು ಮಾಡುತ್ತಿದ್ದರು ನಿಧಾನವಾಗಿ ಸಿನಿಮಾರಂಗಕ್ಕೆ ಕಾಲಿಟ್ಟು ಸಿನಿಮಾನ ಪ್ರೊಡ್ಯೂಸ್ ಮಾಡುವಂತ ಹಂತಕ್ಕೆ ಬೆಳೆಯುತ್ತಾರೆ.

ಈಶ್ವರಿ ಪ್ರೊಡಕ್ಷನ್ ಮೂಲಕ ದೊಡ್ಡ ಸಾಧನೆ ಮಾಡುತ್ತಾರೆ. ಇಂದು ಕನ್ನಡ ಸಿನಿಮಾದಲ್ಲಿ ಬಹಳಷ್ಟು ಜನ ಹೆಸರು ಮಾಡಿದ್ದಾರೆ ಗಟ್ಟಿಯಾಗಿ ನೆಲೆಯೂರಿದ್ದಾರೆ ಇದಕ್ಕೆ ಕಾರಣ ವೀರಸ್ವಾಮಿ ಅವರು. ಅವರ ಮಕ್ಕಳಲ್ಲಿ ರವಿಚಂದ್ರನ್ ಅವರು ಕೂಡಾ ಸಿನಿಮಾರಂಗದಲ್ಲಿ ನಾನಾ ಕೆಲಸಗಳಲ್ಲಿ ತಮ್ಮನ್ನು ಗುರುತಿಸಿಕೊಂಡರು.

ಒಂದು ಕಾಲದಲ್ಲಿ ಪ್ರೇಮಲೋಕವನ್ನು ಸೃಷ್ಟಿ ಮಾಡಿರುವಂತಹ ರವಿಚಂದ್ರನ್ ಅವರು ನಿಧಾನವಾಗಿ ಹಿಟ್ ಸಿನಿಮಾಗಳನ್ನು ಕೊಡುವಂತಹ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಾ ಬಂತು ಕಾರಣ ಸಿನಿಮಾರಂಗದಲ್ಲಿ ಹೊಸ ಹೊಸ ಪ್ರತಿಭೆಗಳು ಕಾಣಿಸಿಕೊಳ್ಳತೊಡಗಿದರು. ಇನ್ನು ಬಾಲಾಜಿ ಅವರ ವಿಷಯವನ್ನು ನೋಡುವುದಾದರೆ ಅವರ ವಿಷಯದಲ್ಲಿ ರವಿಚಂದ್ರನ್ ಅವರು ಸಾಕಷ್ಟು ಕನಸನ್ನು ಕಂಡಿದ್ದರು.

ನನ್ನ ತಮ್ಮನನ್ನು ನಾನೇ ಸಿನಿಮಾರಂಗಕ್ಕೆ ಪರಿಚಯಿಸಬೇಕು ನನ್ನ ತಮ್ಮ ಹೀರೋ ಆಗಿ ಮೆರೆಯುವುದಕ್ಕೆ ನಾನೇ ಅವನಿಗೆ ಪ್ರೋತ್ಸಾಹವನ್ನು ನೀಡಬೇಕು. ಸಿನಿಮಾರಂಗದಲ್ಲಿ ಯಾವಾಗಲೂ ಕೇಳಿಬರುವ ಮಾತು ಕನಸುಗಾರನ ಈಡೇರದ ಒಂದೇ ಒಂದು ಕನಸು ಅದು ಅವರ ತಮ್ಮನ ವಿಚಾರ. ತಮ್ಮ ದೊಡ್ಡ ನಟನಾಗಿ ಬಹಳಷ್ಟು ಯಶಸ್ಸನ್ನು ಕಾಣಬೇಕು ಎಂದು ಅವರು ಕನಸನ್ನು ಕಂಡಿದ್ದರು. ಅದು ಸಾಧ್ಯವಾಗಲಿಲ್ಲ ಎಂದು ಆಗಾಗ ಸಿನಿಮಾರಂಗ ಮಾತನಾಡುತ್ತಿರುತ್ತದೆ.

ಅದೇ ರೀತಿ ಬಾಲಾಜಿ ಅವರಿಗೂ ಕೂಡ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಗಟ್ಟಿಯಾಗಿ ನೆಲೆಯುರುವುದಕ್ಕೆ ಸಾಧ್ಯವಾಗಲಿಲ್ಲ. ರವಿಚಂದ್ರನ್ ಅವರಿಗೆ ಬಾಲಾಜಿಯವರು ಬೆನ್ನೆಲುಬಾಗಿ ನಿಂತಿದ್ದಾರೆ. ಅದು ಹೇಗೆ ಬಾಲಾಜಿ ಅವರು ಏನು ಮಾಡುತ್ತಿದ್ದಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ವೀರ ಸ್ವಾಮಿಯವರು ಸಾವಿರದ ಒಂಬೈನೂರ ತೊಂಬತ್ತೆರಡರಲ್ಲಿ ವಿಧಿವಶರಾಗಿದ್ದಾರೆ. ಹೆಚ್ಚುಕಮ್ಮಿ ಒಂದು ವರ್ಷ ಅವರು ಅನಾರೋಗ್ಯದಿಂದ ಬಳಲುತ್ತಿರುತ್ತಾರೆ ಆ ಸಮಯದಲ್ಲಿ ಈಶ್ವರಿ ಪ್ರೊಡಕ್ಷನ್ ಬಹಳ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿರುತ್ತದೆ. ಅವರ ಮರಣದ ನಂತರ ಎಲ್ಲರೂ ಕೂಡ ಮಾತನಾಡುವುದಕ್ಕೆ ಪ್ರಾರಂಭಿಸುತ್ತಾರೆ.

ಈಶ್ವರಿ ಪ್ರೊಡಕ್ಷನ್ ಇನ್ನೂ ಮುಳುಗಿಹೋದ ಹಾಗೆಂದು. ಈಗಾಗಲೇ ರವಿಚಂದ್ರನ್ ಅವರು ನಟನೆಯಲ್ಲಿ ತುಂಬಾ ಮುಂದೆ ಹೋಗಿರುತ್ತಾರೆ ಹಾಗಾಗಿ ಈಶ್ವರಿ ಪ್ರೊಡಕ್ಷನ್ ನನ್ನ ನೋಡಿಕೊಳ್ಳುವವರು ಯಾರು ಎಂಬ ಪ್ರಶ್ನೆ ಕಾಡುತ್ತದೆ. ವೀರಸ್ವಾಮಿ ಅವರು ಮರಣ ಹೊಂದಿದ ಹನ್ನೊಂದನೇ ದಿನಕ್ಕೆ ಈಶ್ವರಿ ಪ್ರೊಡಕ್ಷನ್ ಅಲ್ಲಿ ವೀರಾಸ್ವಾಮಿಯವರು ಕುಳಿತುಕೊಳ್ಳುವ ಕುರ್ಚಿಯ ಮೇಲೆ ಹದಿನೇಳು ವರ್ಷದ ಹುಡುಗನೊಬ್ಬ ಕುಳಿತುಕೊಳ್ಳುತ್ತಾನೆ.

ಆತ ಕನಸುಗಳನ್ನು ಕಾಣುತ್ತಾ ಏನು ಮಾಡಬೇಕು ಎಂದು ಯೋಚನೆ ಮಾಡುತ್ತಾ ಕುಳಿತಿರುತ್ತಾನೆ ಅಲ್ಲಿಗೆ ಬಂದಂತಹ ಒಂದಿಷ್ಟು ಜನ ಆಶ್ಚರ್ಯಕ್ಕೆ ಒಳಗಾಗುತ್ತಾರೆ ಬರಿ ಹದಿನೇಳು ವರ್ಷದ ಹುಡುಗನ ಹತ್ತಿರ ಏನು ಮಾಡುವುದಕ್ಕೆ ಸಾಧ್ಯ ಎಂದು ಆದರೆ ಕೇವಲ ಹದಿನೇಳು ವರ್ಷಕ್ಕೆ ಈಶ್ವರಿ ಪ್ರೊಡಕ್ಷನ್ಸ್ ಜವಾಬ್ದಾರಿಯನ್ನ ತೆಗೆದುಕೊಂಡ ಬಾಲಾಜಿ ನಿಧಾನವಾಗಿ ಒಂದೊಂದೇ ಸಿನಿಮಾಗಳನ್ನು ಡಿಸ್ಟ್ರಿಬ್ಯೂಟ್ ಮಾಡಲು ಪ್ರಾರಂಭಿಸುತ್ತಾರೆ

ಅವರ ಅಣ್ಣ ಸಿನಿಮಾವನ್ನು ಡೈರೆಕ್ಟ್ ಮಾಡಿ ಅದನ್ನು ನಟನೆ ಮಾಡಿ ಅದನ್ನು ತಯಾರಿಸುತ್ತಿದ್ದರು. ಅದನ್ನ ತಮ್ಮನ ಕೈಗೆ ತಂದುಕೊಡುತ್ತಿದ್ದರು ತಮ್ಮ ಆರಂಭದಲ್ಲಿ ಒಂದಷ್ಟು ಕಡೆಗಳಲ್ಲಿ ಮಾತ್ರ ಮೈಸೂರು ಶಿವಮೊಗ್ಗ ಹೀಗೆ ಒಂದಷ್ಟು ಕಡೆಗಳಲ್ಲಿ ಮಾತ್ರ ಸಿನಿಮಾವನ್ನ ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದರು ನಂತರ ನಿಧಾನವಾಗಿ ಇಡೀ ರಾಜ್ಯಕ್ಕೆ ಡಿಸ್ಟ್ರಿಬ್ಯೂಟ್ ಮಾಡುವಂತಹ ಹಂತಕ್ಕೆ ಬೆಳೆಯುತ್ತಾರೆ.

ವೀರಸ್ವಾಮಿ ಅವರು ಈಶ್ವರಿ ಪ್ರೊಡಕ್ಷನ್ ಅನ್ನು ಯಾವ ರೀತಿ ಮೇಲಕ್ಕೆತ್ತಿದ್ದಾರೆ ಅದೇ ರೀತಿಯಲ್ಲಿ ಬಾಲಾಜಿಯವರು ಕೂಡ ಅದನ್ನು ಬೆಳೆಸುತ್ತಾ ಹೋಗುತ್ತಾರೆ. ಆದರೆ ಬಾಲಾಜಿಯವರು ತೆರೆಯ ಹಿಂದೆಯೇ ಈ ರೀತಿಯ ಕೆಲಸವನ್ನು ಮಾಡುವುದು ಬಹಳಷ್ಟು ಜನರಿಗೆ ತಿಳಿಯುವುದಿಲ್ಲ. ಇವರ ತಂದೆ ಮತ್ತು ಅಣ್ಣನಿಗೆ ಇವರು ನಟನಾಗಬೇಕು ಎಂಬ ಕನಸಿತ್ತು ಸಾವಿರದ ಒಂಬೈನೂರಾ ತೊಂಬತ್ತಾರರಲ್ಲಿ ಕಾಲೇಜು ಎನ್ನುವ ಸಿನಿಮಾ ಸೆಟ್ಟೇರುತ್ತದೆ ಒಂದು ತಿಂಗಳ ಕಾಲ ಚಿತ್ರೀಕರಣ ನಡೆದು ನಾನಾ ಕಾರಣಗಳಿಂದ ಆ ಸಿನಿಮಾ ನಿಂತುಹೋಗುತ್ತದೆ.

ಅದಾದ ಕೆಲವು ವರ್ಷಗಳ ನಂತರ ಅಹಂಪ್ರೇಮಾಸ್ಮೀ ಎನ್ನುವ ಸಿನಿಮಾದ ಮೂಲಕ ಬಾಲಾಜಿಯವರನ್ನು ರವಿಚಂದ್ರನ್ ಅವರು ತೆರೆಯ ಮೇಲೆ ತರುತ್ತಾರೆ. ಆ ಸಿನಿಮಾ ತಕ್ಕಮಟ್ಟಿಗೆ ಸದ್ದು ಮಾಡುತ್ತದೆ. ಅನಂತರ ತುಂಟ ಇನಿಯಾ ಎನ್ನುವ ಸಿನಿಮಾಗಳನ್ನ ಮಾಡುತ್ತಾರೆ ಸೋಲುತ್ತವೆ ರಾಜಕುಮಾರಿ ಎನ್ನುವ ಸಿನಿಮಾ ಮಾಡುತ್ತಾರೆ ಅದು ಕೂಡ ಸೋಲುತ್ತದೆ.

ಯಾವೆಲ್ಲ ಸಿನಿಮಾಗಳನ್ನು ಮಾಡುವುದಕ್ಕೆ ಪ್ರಾರಂಭಿಸುತ್ತಾರೆ ಅವೆಲ್ಲವುಗಳು ಕೂಡ ಸೋಲುವುದಕ್ಕೆ ಪ್ರಾರಂಭವಾಗುತ್ತದೆ. ಆಗ ರವಿಚಂದ್ರನ್ ಅವರು ಬಾಲಾಜಿ ಅವರಿಗೆ ನೀನು ಈಶ್ವರಿ ಪ್ರೊಡಕ್ಷನ್ ನಲ್ಲಿ ಡಿಸ್ಟ್ರಿಬ್ಯೂಷನ್ ಪ್ರೊಡಕ್ಷನ್ ಈ ಕೆಲಸಗಳಲ್ಲಿ ಗಮನವನ್ನು ಹರಿಸು ಅದು ನಿನಗೆ ಯಶಸ್ಸನ್ನು ತಂದುಕೊಡುತ್ತದೆ ಎಂದು ಸಲಹೆ ನೀಡುತ್ತಾರೆ.

ಅದೇ ರೀತಿಯಾಗಿ ಬಾಲಾಜಿಯವರು ಕೂಡ ನಟನೆಯನ್ನು ಕೈಬಿಡುತ್ತಾರೆ ನಂತರ ಈಶ್ವರಿ ಪ್ರೊಡಕ್ಷನ್ಸ್ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲಿಟ್ಟುಕೊಂಡು ಮಾಡುತ್ತಾರೆ. ಅದರಲ್ಲಿ ಯಶಸ್ಸನ್ನು ಕಾಣುತ್ತಾರೆ ಸದ್ಯ ಆರ್ಥಿಕವಾಗಿಯೂ ತುಂಬಾ ಸಬಲರಾಗಿದ್ದು ತುಂಬಾ ಚೆನ್ನಾಗಿದ್ದಾರೆ ಅಣ್ಣತಮ್ಮಂದಿರು ಕೂಡ ಉತ್ತಮವಾದ ಬಾಂಧವ್ಯವನ್ನು ಇಟ್ಟುಕೊಂಡಿದ್ದಾರೆ ಇದಿಷ್ಟು ಬಾಲಾಜಿ ಅವರ ಕುರಿತಾದ ವಿಚಾರ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *