ಶನಿ ದೇವರು ಎಂದರೆ ಎಲ್ಲರ ಮನದಲ್ಲೂ ಕೂಡ ಭಯ ಇರುತ್ತದೆ. ಅವರು ಕರ್ಮ ಫಲದಾತ ನ್ಯಾಯಕ್ಕೆ ಅನುಗುಣವಾಗಿ ಫಲವನ್ನು ಕೊಡುವರು ಇದರಿಂದ ಯಾರು ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಶನಿ ದೇವರು ಪುರಾಣಗಳ ಪ್ರಕಾರ ನಾವು ಮಾಡುವ ಕೆಲಸಕ್ಕೆ ಅನುಗುಣವಾಗಿ ಫಲವನ್ನು ಕೊಡುವುದರಿಂದ ಶನಿಯನ್ನು ನ್ಯಾಯ ದೇವ ಎಂದು ಕೂಡ ಹೇಳುವರು. ಶನಿ ಗ್ರಹ ಪ್ರಸ್ತುತ ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಿದೆ. ಶನಿ ದೇವರು 2024 ರಿಂದ 2025ದರವರೆಗೂ ಕುಂಭ ರಾಶಿಯಲ್ಲಿ ಉಳಿಯುವನು. 2025ದರ ವರೆಗೂ ಈ 3 ರಾಶಿಯವರಿಗೆ ಅದೃಷ್ಟ ಕೂಡಿ ಬರಲಿದೆ. ಯಾವ ರಾಶಿಯವರಿಗೆ ಅದೃಷ್ಟ ಒಲಿದು ಬರಲಿದೆ ಎಂದು ತಿಳಿಯೋಣ.

ಧನು ರಾಶಿ :-ಶನಿ ದೇವರು ಕುಂಭ ರಾಶಿಯಲ್ಲಿ ಸಂಚಾರ ಮಾಡುವುದರಿಂದ ಧನು ರಾಶಿಯ ಜನರಿಗೆ ಕೂಡ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ. ಮಾಡುವ ಕಾರ್ಯಕ್ಕೆ ಲಾಭ ಮತ್ತು ಪ್ರಗತಿ ಸಿಗುತ್ತದೆ. ವ್ಯವಹಾರ ಮತ್ತು ವ್ಯಾಪಾರ ಅಭಿವೃದ್ದಿ ಆಗುತ್ತದೆ. ಈ ವೇಳೆಯಲ್ಲಿ ಮಾಡಿದ ಹೂಡಿಕೆಗಳು ಹೆಚ್ಚು ಫಲದ ಜೊತೆಗೆ ಲಾಭವನ್ನು ಕೊಡುತ್ತದೆ. ಮನಸ್ಸಿಗೆ ಖುಷಿ ನೀಡುವ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ಎಲ್ಲ ರೀತಿಯ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿ ಇರುವ ಜನರಿಗೆ ಕೆಲಸ  ಸಿಗುತ್ತದೆ.

ತುಲಾ ರಾಶಿ :- ತುಲಾ ರಾಶಿಯವರಿಗೆ ಕುಂಭ ರಾಶಿಯಲ್ಲಿ ಇರುವ ಶನಿ ಗ್ರಹ ಅದೃಷ್ಟ ತರುತ್ತದೆ. ವೃತ್ತಿ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇರುತ್ತದೆ. ತುಲಾ ರಾಶಿಯವರು ಪ್ರೀತಿಸಿದ ವ್ಯಕ್ತಿಯನ್ನು ಮದುವೆ ಆಗುವರು. ಉದ್ಯೋಗದ ಅಪೇಕ್ಷೆಯಲ್ಲಿ ಇರುವ ಜನರಿಗೆ ಉದ್ಯೋಗ ಸಿಗುವುದು. ಈ ರಾಶಿಯವರ ವೈವಾಹಿಕ ಜೀವನ ಸುಖಕರವಾಗಿ ಇರುತ್ತದೆ. ಸಂತಾನ ಭಾಗ್ಯ ಕೂಡ ಲಭಿಸುತ್ತದೆ. ಬಡತನದಿಂದ ಹೊರ ಬರುವ ಸಾಧ್ಯತೆ ಇದೆ.

ಕಟಕ ರಾಶಿ :- ಕುಂಭ ರಾಶಿಯಲ್ಲಿ ಇರುವ ಶನಿ ಗ್ರಹ ಕಟಕ ರಾಶಿಗೆ ಒಳ್ಳೆ ಫಲವನ್ನು ನೀಡುತ್ತದೆ. ಯಾವ ರೀತಿಯ ತೊಂದರೆಗಳು ಕಂಡು ಬರುವುದಿಲ್ಲ. ಮನೆಯಲ್ಲಿ ಶುಭಕರ ಕಾರ್ಯಕ್ರಮಗಳು ನೆರವೇರುತ್ತದೆ. ಮಾಡುವ ಕೆಲಸಕ್ಕೆ ಕುಟುಂಬದವರ ಒಪ್ಪಿಗೆ ಸಿಗುತ್ತದೆ. ಅದರಿಂದ ಹೆಚ್ಚು ಸಂತಸ ಸಿಗುತ್ತದೆ ಮತ್ತು ನೆಮ್ಮದಿಯಿಂದ ಕಾಲವನ್ನು ಕಳೆಯಬಹುದು. ಇಷ್ಟು ದಿನ ಕಛೇರಿಗಳಿಗೆ ಹೆಚ್ಚು ಓಡಾಟ ನಡೆಸಿದ್ದರೆ ಅದಕ್ಕೆ ಈ ಸಮಯದಲ್ಲಿ ಪರಿಹಾರ ಮತ್ತು ಫಲ ಸಿಗುತ್ತದೆ.

ಎಲ್ಲಾ ಕೆಲಸಗಳಿಗೆ ಕಟಕ ರಾಶಿಯವರ ಪರವಾಗಿ ಗೆಲುವು ಸಿಗುತ್ತದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಸಾಧನೆ ಮಾಡುವರು. ಆರ್ಥಿಕ ಸ್ಥಿತಿ ಅಭಿವೃದ್ಧಿ ಆಗುತ್ತದೆ ಮತ್ತು ಎಲ್ಲಾ ರೀತಿಯ ತೊಂದರೆಗಳು ದೂರವಾಗುತ್ತದೆ ಮತ್ತು ಎಲ್ಲ ರೀತಿಯ ಬೆಂಬಲ ಕುಟುಂಬದಿಂದ ಸಿಗುತ್ತದೆ. ವೃತ್ತಿ ರಂಗದಲ್ಲಿ ಉನ್ನತ ಸ್ಥಾನಕ್ಕೆ ಏರುವ ಅವಕಾಶಗಳು ಲಭಿಸುತ್ತದೆ. ಇವು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮಜಾತಕಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

Leave a Reply

Your email address will not be published. Required fields are marked *