Ultimate magazine theme for WordPress.

ಮಿಥುನ ರಾಶಿಯವರ ಫೆಬ್ರವರಿ ತಿಂಗಳ ಭವಿಷ್ಯ

0 10,978

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುವುದರಿಂದ  ಶುಭಫಲ ಮತ್ತು ಅಶುಭ ಫಲಗಳನ್ನು ನೋಡಬಹುದು.

ಮಿಥುನ ರಾಶಿಯವರ ಫೆಬ್ರವರಿ ತಿಂಗಳಿನ ಮಾಸ ಭವಿಷ್ಯವನ್ನು ನೋಡೋಣ.

ಮಿಥುನ ರಾಶಿಯ ಅಧಿಪತಿ :-ಬುಧ ಗ್ರಹ.
ರಾಶಿಯ ಚಿಹ್ನೆ :- ಗಂಡು ಮತ್ತು ಹೆಣ್ಣಿನ ಜೋಡಿ.
ಅದೃಷ್ಟ ಬಣ್ಣ :- ಹಸಿರು ಮತ್ತು ಹಳದಿ ಬಣ್ಣ.
ಅದೃಷ್ಟದ ದಿನಗಳು :- ಸೋಮವಾರ ಮತ್ತು ಬುಧವಾರ.
ಅದೃಷ್ಟದ ದೇವರು :- ಗಣಪತಿ.
ಅದೃಷ್ಟದ ಸಂಖ್ಯೆಗಳು :- 5, 2, 6, 3.
ಮಿತ್ರ ರಾಶಿಗಳು :- ಮೇಷ ರಾಶಿ, ಸಿಂಹ ರಾಶಿ, ತುಲಾ ರಾಶಿ, ಕನ್ಯಾ ರಾಶಿ.
ಶತ್ರು ರಾಶಿಗಳು :- ಕಟಕ ರಾಶಿ.
ಅದೃಷ್ಟದ ದಿನಾಂಕ :- 5,14, ಮತ್ತು 23.

ಮಿಥುನ ರಾಶಿಯವರು ವ್ಯಕ್ತಿತ್ವದಲ್ಲಿ ಹೆಚ್ಚು ಕರುಣೆ ಉಳ್ಳವರು. ಕಷ್ಟ, ನೋವು ತೊಂದರೆ ಎಂದರೆ ಹೆಚ್ಚು ಕರಗುವ ಮನಸ್ಸು ಇರುವವರು ಮತ್ತು ಅದಕ್ಕೆ ಪರಿಹಾರ ನೀಡಲು ತಯಾರಾಗಿ ಇರುವವರು. ಮಿಥುನ ರಾಶಿಯವರಿಗೆ ಈ ತಿಂಗಳಿನಲ್ಲಿ ಸಾಕಷ್ಟು ಶುಭ ಫಲಗಳು ಸಿಗುತ್ತವೆ. ಅವರಲ್ಲಿ ಇರುವ ಬುದ್ಧಿವಂತಿಕೆ, ಜ್ಞಾನ, ಅನುಭವ ಮತ್ತು ಚಾಕಚಕ್ಯತೆ  ಎಲ್ಲರ ಗಮನ ಸೆಳೆಯುತ್ತದೆ. ಸಮಯ ಪ್ರಜ್ಞೆ ಅವರ ಶಕ್ತಿಯಾಗಿ ಹೊರಹೊಮ್ಮುತ್ತದೆ. ಎದುರಾಗುವ ಸಂದರ್ಭವನ್ನು ಯಾವ ರೀತಿ ಉಪಯೋಗ ಮಾಡಿಕೊಳ್ಳುವರು ಎನ್ನುವುದರ ಮೇಲೆ  ಫಲಗಳು ಲಭಿಸುತ್ತದೆ. ಯಾವುದೇ, ರೀತಿಯ ಕೆಲಸ ಕೈ ಗೊಳ್ಳಬೇಕಿದ್ದರು ಅದನ್ನು ಬುದ್ದಿವಂತಿಕೆ ಉಪಯೋಗಿಸಿ ಮಾಡುವುದು ಉತ್ತಮ.

ಕೆಲಸದಲ್ಲಿ ಸಮಯ ಪ್ರಜ್ಞೆಯನ್ನು ಅಡವಳಿಕೆ ಮಾಡುವುದು ಒಳ್ಳೆಯದು. ಎಲ್ಲಿ  ಯಾವ ಸಂದರ್ಭದಲ್ಲಿ ಯಾರ ಮುಂದೆ ಎಷ್ಟು ಬಾರಿ ಮಾತಾಡಬೇಕು, ಎಷ್ಟು ಮಾತಾಡಬೇಕು, ಎಷ್ಟು ದುಡ್ಡು ಇಟ್ಟುಕೊಳ್ಳಬೇಕು?, ಎಷ್ಟು ಖರ್ಚನ್ನು ಮಾಡಬೇಕು  ಎನ್ನುವ ನಿರ್ಧಾರವನ್ನು ಮೊದಲೇ ಮಾಡಿರಬೇಕು. ಅದರಿಂದ ಅಂದುಕೊಂಡದಕ್ಕಿಂತ ಹೆಚ್ಚು ಒಳ್ಳೆಯ ಫಲ ದೊರಕುತ್ತದೆ.

ಫೆಬ್ರವರಿ ಮಾಸದಲ್ಲಿ ಹೆಚ್ಚು ಗೆಲುವನ್ನು ಪಡೆಯುವರು. ಕೆಲಸದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ.  ಈ ತಿಂಗಳಿನಲ್ಲಿ  ಹಣ ಕಾಸಿನ ತೊಂದರೆ ಎದುರಾಗುವುದಿಲ್ಲ. ಒಂದು ವೇಳೆ ತೊಂದರೆ ಎದುರಾದರು ಆದಾಯ ಹೆಚ್ಚಾಗಿ ಅದನ್ನು ಸರಿದೂಗಿಸುತ್ತದೆ

ಎಚ್ಚರಿಕೆಯಿಂದ ಇರಬೇಕಾದ ವಿಷಯ ಏನೆಂದರೆ ಸಾಧ್ಯವಾದಷ್ಟು ಖರ್ಚು ವೆಚ್ಚದ ಗಮನ ಕೊಡಬೇಕು ಮತ್ತು ಕಡಿಮೆ ಮಾಡಬೇಕು. ಅವಶ್ಯಕತೆ ಇರುವಷ್ಟನ್ನು ಮಾತ್ರ ಖರ್ಚು ಮಾಡಿ ಅನಗತ್ಯ ಖರ್ಚನ್ನು ದೂರ ಮಾಡಿದರೆ. ಹೆಚ್ಚು ಅಭಿವೃದ್ಧಿ ಆಗುತ್ತದೆ. ಹೊಸ ವಾಹನಗಳ ಖರೀದಿ ಮಾಡುವ ಯೋಗವಿದೆ. ನೂತನ ಆಸ್ತಿ ಖರೀದಿ, ಮನೆ ಖರೀದಿ, ಜಮೀನು ಖರೀದಿ ಮಾಡುವ ಆಲೋಚನೆ ಇದ್ದರೆ ಅದಕ್ಕೆ, ಈ ಫೆಬ್ರವರಿ ಮಾಸ ಒಳ್ಳೆಯ ಕಾಲ.

ಮಿಥುನ ರಾಶಿಯ ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ. ಕೆಲಸ ಹುಡುಕುವ ಜನರಿಗೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಸಂತಾನದ ಸಮಸ್ಯೆ ಇರುವ ಜನರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ. ಯಾವುದೇ ಕೆಲಸ ಮಾಡಿದರು ಬೇರೆಯವರ ಮೇಲೆ ಅವಲಂಬನೆ ಆಗಿರುವುದು ತಪ್ಪು. ಪಾರ್ಟ್ ಟೈಂ ಕೆಲಸ ಮತ್ತು ತಲೆಮಾರಿನಿಂದ ಬಂದಂತಹ ಕುಲ ಕಸುಬು ಹೆಚ್ಚಿನ ಲಾಭಗಳನ್ನು ತಂದು ಕೊಡುತ್ತದೆ.

ಯಾವ ವ್ಯಾಪಾರ ವ್ಯವಹಾರ ಮಾಡಿದರು ಹೆಚ್ಚಿನ ಫಲ ಸಿಗುತ್ತದೆ. ಸಿನೆಮಾ ಮತ್ತು ಟಿ. ವಿ. ಮಾಧ್ಯಮದಲ್ಲಿ ಕೆಲಸ ಮಾಡುವ ಕಲಾವಿದರಿಗೆ ಹೆಚ್ಚಿನ ಶುಭ ಫಲ ದೊರಕುತ್ತದೆ. ಹೆಚ್ಚಿನ ಪ್ರತಿಭೆಯನ್ನು ಪ್ರದರ್ಶಿಸಲು ಒಳ್ಳೆಯ ಕಾಲಾವಕಾಶ. ಹೊಸ ಸಂಸ್ಥೆಗಳನ್ನು ಸ್ಥಾಪಿಸಿ ನಡೆಸುವ ಜನರಿಗೆ ಹೆಚ್ಚಿನ ಮಂಗಳಕರ ಫಲಿತಾಂಶಗಳನ್ನು ಕಾಣುವರು.

ಮಾಡುವ ಕೆಲಸದಲ್ಲಿ ಹೆಚ್ಚಿನ ಗೌರವ ಸಿಗುತ್ತದೆ ಹಾಗೂ ಆ ಕ್ಷೇತ್ರದಲ್ಲಿ ಪ್ರಸಿದ್ದಿ ಹೊಂದುವ ಸಾಧ್ಯತೆ ಇದೆ. ಸಾರ್ವಜನಿಕರಲ್ಲಿ ಮಿಥುನ ರಾಶಿಯವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಮೂಡುತ್ತದೆ ರಾಜಕಾರಣಿಗಳು ಸಮಾಜಕ್ಕೆ ಸಹಾಯವಾಗುವ ಒಳ್ಳೆಯ ಕೆಲಸ ಮಾಡಿದರೇ ಉತ್ತಮ ಶುಭ ಫಲಗಳು ದೊರಕುತ್ತದೆ. ಸಾಲವನ್ನು ಕೊಡುವುದು, ಸಾಲವನ್ನು ಪಡೆಯುವುದು ಮತ್ತು ಅಗ್ರಿಮೆಂಟ್ ವಿಚಾರಗಳಲ್ಲಿ ನಂಬಿಕೆ ಇಟ್ಟು ವ್ಯವಹರಿಸುವ ಮುನ್ನ ಯೋಚನೆ ಮಾಡಿ ಮುಂದುವರೆಯುವುದು ಉತ್ತಮ.

ಪರಿಹಾರಗಳು :- ಶೇಷ ದೇವರಿಗೆ ಕ್ಷೀರಾಭಿಷೇಕ ಮಾಡಿಸಬೇಕು. ನಾಗ-ಕ್ಷೇತ್ರದ ದರ್ಶನ ಮಾಡಬೇಕು ಹಾಗೂ ಮನೆದೇವರ ಪ್ರಾರ್ಥನೆಯನ್ನು ಮಾಡಬೇಕು. ಶಿವ ಸಹಸ್ರನಾಮವನ್ನು ಜಪ ಮಾಡಬೇಕು. ಮನೆಯ ಈಶಾನ್ಯ ಮೂಲೆಯಲ್ಲಿ ಭಾರವಾದ ವಸ್ತುಗಳನ್ನು ಇಡಬಾರದು. ಮಾಡುವ ಕೆಲಸವನ್ನು ಪ್ರೀತಿ ಮಾಡಿದರೆ ಶುಭ ಫಲ ಲಭಿಸುತ್ತದೆ ಮತ್ತು ಸಮಸ್ಯೆಗಳು ದೂರವಾಗುತ್ತದೆ.

Leave A Reply

Your email address will not be published.