RTC New Rules Karnataka: ರೈತ ನಮ್ಮ ದೇಶದ ಬೆನ್ನೆಲುಬು ಆದರೂ ನಾನಾ ಭಾಗದಲ್ಲಿ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ನೀರಿನ ಸಮಸ್ಯೆ, ಮಾಲೀಕತ್ವದ ಸಮಸ್ಯೆ ಹೀಗೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮ್ಮ ರಾಜ್ಯದ ಕಂದಾಯ ಸಚಿವರು ರೈತರ ಪಹಣಿಯ (RTC) ವರ್ಗಾವಣೆಯ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದ್ದಾರೆ ಹಾಗಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ

ಕರ್ನಾಟಕ ರಾಜ್ಯದ ಕಂದಾಯ ಸಚಿವರಾದ ಕೃಷ್ಣ ಭೈರೇಗೌಡ ಅವರು ರಾಜ್ಯದ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ ರಾಜ್ಯದ ರೈತರು ಇಂದಿಗೂ ಕೂಡ ತಮ್ಮ ತಾತ ಅಪ್ಪ ಮುತ್ತಾತನ ಹೆಸರಿನಲ್ಲಿ ಇರುವ ಪಹಣಿಯ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದಾರೆ. ಇದೀಗ ಇಂತಹ ರೈತರು ಸುಲಭವಾಗಿ ತಮ್ಮ ಹೆಸರಿಗೆ ಪಹಣಿ ಮಾಡಿಸಿಕೊಳ್ಳುವ ಮಾರ್ಗವಿದೆ. ನಮ್ಮ ಜಮೀನಿನ ಪಹಣಿ ತಾತ ಮುತ್ತಾತ ಅಪ್ಪನ ಹೆಸರಿನಲ್ಲಿದ್ದು ಅದನ್ನು ನಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಯಾವುದೆ ದಾಖಲೆಗಳು ಇಲ್ಲದೆ ಇದ್ದರೂ ಅಥವಾ ಆಸ್ತಿಗೆ ಸಂಬಂಧಪಟ್ಟ ವ್ಯಕ್ತಿ ಮರಣ ಹೊಂದಿದ್ದರೂ ರೈತರು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು.

ಕರ್ನಾಟಕದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಎಲ್ಲಾ ರೈತರಿಗೂ ಬಂಪರ್ ಕೊಡುಗೆಯನ್ನು ನೀಡಿದ್ದಾರೆ. ರೈತರ ಜಮೀನಿನ ಆಸುಪಾಸು ಇರುವ ರಸ್ತೆ, ನೀರು ಹೋಗುವ ಕಾಲುವೆ ಹಳ್ಳ, ಬೇಲಿ ಮತ್ತು ಜಮೀನಿನಲ್ಲಿ ಇರುವ ಮರಗಳು ನನ್ನ ಜಮೀನಿಗೆ ಬರುತ್ತದೆ ಇದು ನನ್ನ ಪಾಲು ಎಂದು ಹಲವು ಬಾರಿ ರೈತರು ಜಗಳಕ್ಕೆ ಇಳಿಯುವ ಪ್ರಕರಣಗಳು ದಾಖಲಾಗುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಂದಾಯ ಸಚಿವರು ರಾಜ್ಯಾದ್ಯಂತ ಇರುವ ಎಲ್ಲಾ ರೈತರ ದಾಖಲೆ ಪತ್ರಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದ್ದಾರೆ.

ಜಮೀನು ದಾನದ ರೀತಿ ಕ್ರಯದ ರೀತಿ, ವಿಭಾಗ ರೂಪದಲ್ಲಿ ಪಿತ್ರಾರ್ಜಿತ ಅಥವಾ ಪೌತಿ ಖಾತೆಯ ರೂಪದಲ್ಲಿ ಒಬ್ಬ ರೈತನಿಂದ ಇನ್ನೊಬ್ಬ ರೈತನಿಗೆ ವರ್ಗಾವಣೆಯಾಗಿರುತ್ತದೆ ಈ ಹಿಂದೆ ಇಂತಹ ಮಾಹಿತಿಯನ್ನು ಕಾಗದ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದರು ಆದರೆ ಅದರಲ್ಲಿ ಸರಿಯಾಗಿ ಯಾರಿಗೆ ಎಷ್ಟು ಭಾಗ ಸೇರ್ಪಡೆಯಾಗಿದೆ ಎಂಬುದನ್ನು ನಮೂದಿಸುತ್ತಿರಲಿಲ್ಲ. ಹೀಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪಹಣಿಯನ್ನು ಡಿಜಿಟಲೀಕರಣ ಮಾಡಲು ಮುಂದಾಗಿದೆ.

ಜಮೀನಿನ ಮಾಲೀಕರು ತಮ್ಮ ಜಮೀನಿನ ಬಗ್ಗೆ ಎಲ್ಲ ಮಾಹಿತಿಯನ್ನು ಮೊಬೈಲ್ ನಲ್ಲಿ ತಿಳಿಯಬಹುದಾದಂತಹ ಸೇವೆಯನ್ನು ರಾಜ್ಯ ಸರ್ಕಾರ ರೈತರಿಗೆ ಒದಗಿಸಿಕೊಡುತ್ತದೆ ಹೀಗಾಗಿ ಕರ್ನಾಟಕ ರಾಜ್ಯದ ರೈತರ ಜಮೀನಿನ ಮಾಹಿತಿಯನ್ನು ಹಾಗೂ ಅಳತೆಯನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡಲು ಯೋಜನೆಯನ್ನು ರೂಪಿಸುತ್ತಿದ್ದಾರೆ ಹಾಗೂ ಈ ಯೋಜನೆಯನ್ನು 2024ರ ಒಳಗೆ ಪೂರ್ಣಗೊಳಿಸುವ ಉದ್ದೇಶವನ್ನು ಕಂದಾಯ ಇಲಾಖೆ ಹೊಂದಿದೆ. ಇನ್ನು ಮುಂದೆ ಕರ್ನಾಟಕ ರಾಜ್ಯದ ಎಲ್ಲಾ ರೈತರ ಜಮೀನಿನ ಮಾಹಿತಿ ಡಿಜಿಟಲ್ ರೂಪದಲ್ಲಿ ಲಭ್ಯವಿರಲಿದೆ.

ರಾಜ್ಯದ ಹಲವು ಕಡೆಗಳಲ್ಲಿ ಈ ಯೋಜನೆ ಜಾರಿಗೆ ಬಂದಿದ್ದು ಡಿಜಿಟಲ್ ರೂಪದಲ್ಲಿ ರೈತರ ಜಮೀನನ್ನು ಸ್ಕ್ಯಾನ್ ಮಾಡಿ ಅದರ ದಾಖಲೆ ಸಂಗ್ರಹಣೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗೆ ಮಾಡುವುದರಿಂದ ರೈತರು ತಮ್ಮ ಮೊಬೈಲ್ ಗಳಲ್ಲಿಯೆ ಜಮೀನಿನ ಕುರಿತಾದ ಎಲ್ಲಾ ವಿವರಗಳನ್ನು ತಿಳಿಯಬಹುದು ಹಾಗೂ ಜಮೀನಿನ ಪಹಣಿ ತಂದೆ ತಾತ ಮುತ್ತಾತನ ಹೆಸರಿನಲ್ಲಿದ್ದರೆ ಅವರು ಮರಣ ಹೊಂದಿದ್ದರೆ ಅವರ ಮರಣ ಪ್ರಮಾಣ ಪತ್ರವನ್ನು ಕೊಡುವುದರ ಮೂಲಕ ಸುಲಭವಾಗಿ ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯ್ತಿ ಅಥವಾ ತಾಲೂಕ್ ಆಫೀಸ್ ನಲ್ಲಿ ವಿಚಾರಿಸಬಹುದು

By

Leave a Reply

Your email address will not be published. Required fields are marked *