ಪುನೀತ್ ಕಟ್ಟಿಸಿದ ಶಕ್ತಿಧಾಮ ನಿಜಕ್ಕೂ ಎಷ್ಟು ಹೈಟೆಕ್ ಆಗಿದೆ ಗೋತ್ತಾ, ವೀಡಿಯೊ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಶಕ್ತಿಧಾಮ ಇದು ಡಾಕ್ಟರ್ ರಾಜಕುಮಾರ್ ಕುಟುಂಬದವರ ಕನಸಾಗಿತ್ತು. ಇದಕ್ಕೆ ಪುನೀತ್ ರಾಜಕುಮಾರ್ ಆಧಾರ ಸ್ತಂಭವಾಗಿದ್ದರು. ನಟನೆ ಸಂಗೀತದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಂತಹ ಪುನೀತ್ ರಾಜಕುಮಾರ್ ಅವರು ಅದೆಷ್ಟೋ ಬಡಮಕ್ಕಳಿಗೆ ದಾರಿದೀಪ ವಾಗಿದ್ದರು. ಪುನೀತ್ ಅವರು ಅಲ್ಲಿನ ಮಕ್ಕಳಿಗೆ ಸುಸಜ್ಜಿತ ಶಿಕ್ಷಣವನ್ನು ನೀಡುವ ಕನಸನ್ನು ಕಂಡಿದ್ದರು ಅಲ್ಲಿರುವ ಮಕ್ಕಳಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದರು ಪುನೀತ್ ಅವರ ಅಗಲಿಕೆಯಿಂದ ಶಕ್ತಿಧಾಮ ದಲ್ಲಿರುವ ಮಕ್ಕಳು ಕೂಡ ತುಂಬಾ ದುಃಖಕ್ಕೆ ಒಳಗಾಗಿದ್ದಾರೆ ತುಂಬಾ ಸಂಕಟ ಪಡುತ್ತಿದ್ದಾರೆ.

ಉತ್ತಮವಾದ ಪರಿಸರದ ಮದ್ಯೆ ಶಕ್ತಿಧಾಮದ ಸುಸಜ್ಜಿತವಾದ ಕಟ್ಟಡವಿದೆ. ಮಕ್ಕಳಿಗೆ ಉತ್ತಮವಾದ ವ್ಯವಸ್ಥೆ ಇದೆ. ಮಕ್ಕಳಿಗೆ ಆಧುನಿಕ ಶಿಕ್ಷಣವನ್ನು ನೀಡುವುದಕ್ಕಾಗಿ ಕಂಪ್ಯೂಟರ್ಗಳನ್ನು ಅಳವಡಿಸಲಾಗಿದೆ. ಅಲ್ಲಿ ಮಕ್ಕಳಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿದೆ ಮಕ್ಕಳಿಗೆ ಪ್ರತಿದಿನ ಯೋಗಾಭ್ಯಾಸವನ್ನು ಮಾಡಿಸಲಾಗುತ್ತದೆ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಸಲಾಗುತ್ತದೆ. ಅಲ್ಲಿ ಮಕ್ಕಳಿಗೆ ಆಟವಾಡುವುದಕ್ಕೆ ಮೈದಾನವು ಕೂಡ ಉತ್ತಮವಾಗಿದೆ. ಮಕ್ಕಳಿಗೆ ಓದುವುದಕ್ಕೆ ಸಹಾಯ ವಾಗುವುದಕ್ಕೆ ಗ್ರಂಥಾಲಯ ವ್ಯವಸ್ಥೆ ಇದೆ.

ಇನ್ನು ಮಕ್ಕಳು ಮಲಗುವ ಕೊಠಡಿಗಳಲ್ಲಿ ಕಾಟ್ ಗಳ ವ್ಯವಸ್ಥೆಯೂ ಕೂಡ ಇದೆ. ಶಕ್ತಿಧಾಮದಲ್ಲಿರುವ ಮಕ್ಕಳಿಗೆ ಒಂದೇ ರೀತಿಯಾದ ಸಮವಸ್ತ್ರವನ್ನು ಕೊಡಲಾಗುತ್ತದೆ ಈ ರೀತಿಯಾಗಿ ಉತ್ತಮ ವ್ಯವಸ್ಥೆಗಳನ್ನು ಶಕ್ತಿಧಾಮ ಒಳಗೊಂಡಿದ್ದು ಮಕ್ಕಳ ಜೊತೆಗೆ ಮಹಿಳೆಯರಿಗೂ ಕೂಡ ಕೌಶಲ್ಯಗಳ ತರಬೇತಿಯನ್ನು ನೀಡಿ ಅವರಿಗೆ ಉದ್ಯೋಗವನ್ನು ಒದಗಿಸಲಾಗುತ್ತದೆ ಒಟ್ಟಾರೆಯಾಗಿ ಶಕ್ತಿಧಾಮ ಒಂದು ಬಡವರ ಪಾಲಿನ ದೇವಾಲಯವಿದ್ದಂತೆ.

ಹೆಣ್ಣು ಮಕ್ಕಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಉತ್ತಮ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಲಾಗಿದೆ. ಪುನೀತ್ ಅವರು ಆಶ್ರಮಕ್ಕೆ ಭೇಟಿ ನೀಡಿದಾಗ ಮಕ್ಕಳು ಏನಾದರೂ ಕೋರಿಕೆಯನ್ನು ಅವರ ಮುಂದಿಟ್ಟರೆ ಅವರು ಅದನ್ನು ಇಡೆರಿಸುತ್ತಿದ್ದರು ಆದರೆ ಇದನ್ನು ನೋಡಿಕೊಳ್ಳುತ್ತಿದ್ದವರು ಪುನೀತ್ ರಾಜಕುಮಾರ್ ಅವರು ಇನ್ನು ಮುಂದೆ ಇದನ್ನು ನೋಡಿಕೊಳ್ಳುವುದಕ್ಕೆ ಇಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ. ಶಕ್ತಿಧಾಮದಲ್ಲಿರುವ ಮಕ್ಕಳಿಗೆ ಅವರು ಸ್ಫೂರ್ತಿಯಾಗಿದ್ದರು ಆದರೆ ನಗುಮೊಗದ ಯುವರಾಜ ಇನ್ನು ಕೇವಲ ನೆನಪು ಮಾತ್ರ. Video credit For new time


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *