ಅಪ್ಪು ಕೊನೆಯದಾಗಿ ಹಾಡಿದ ಹಾಡು ಯಾವುದು ನೋಡಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ವಿಧಿಯ ಆಟವನ್ನು ಬಲ್ಲವರು ಯಾರಿದ್ದಾರೆ, ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಇಂದು ನಮ್ಮೊಂದಿಗಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ. ಅನೇಕ ಸಿನಿಮಾಗಳಲ್ಲಿ ನಟನೆ ಮಾತ್ರವಲ್ಲದೆ ಹಿನ್ನೆಲೆ ಗಾಯಕರಾಗಿ ಕೆಲಸಮಾಡಿದ್ದಾರೆ ಜೊತೆಗೆ ಅನೇಕ ಬಡವರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ಕೊನೆಯ ಹಾಡಿನ ಬಗ್ಗೆ ಹಾಗೂ ಅವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಭಿನ್ನ ನಟನೆಯಿಂದ ವ್ಯಕ್ತಿತ್ವದಿಂದ ಉನ್ನತ ಸ್ಥಾನದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮದೆ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರು ಹಠಾತ್ತನೆ ವಿಧಿವಶರಾಗಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕಳೆದ ವರ್ಷ ಚಿರು ಅವರು ಸತ್ತಾಗಲೂ ಕನ್ನಡ ಚಿತ್ರರಂಗ ದುಃಖದಿಂದ ಮುಳುಗಿತ್ತು. ಈಗಲೂ ಅಂತದ್ದೆ ದುಃಖ ನಮ್ಮ ಮುಂದೆ ಎದುರಾಗಿದೆ.

ನಗುಮೊಗದಿಂದಲೆ ಎಲ್ಲರ ಪ್ರೀತಿಗೆ ಪಾತ್ರವಾಗಿರುವ ಕನ್ನಡ ಚಿತ್ರರಂಗದ ಅದ್ಭುತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಯಾರೂ ಕಲ್ಪನೆ ಮಾಡಲು ಸಾಧ್ಯವಾಗದಂತೆ ಅಕ್ಟೋಬರ್ 29 ನೇ ತಾರೀಖಿನಂದು ಹೃದಯಾಘಾತದಿಂದ ನಿಧನರಾದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೆ 11 ದಿನಗಳು ಕಳೆದಿದೆ. ಅವರ ಕಾರ್ಯವನ್ನು ಈಗಾಗಲೆ ಕುಟುಂಬಸ್ಥರೆಲ್ಲರು ಶಾಸ್ತ್ರೋಕ್ತವಾಗಿ, ಸರಳವಾಗಿ ನಡೆಸಿದ್ದಾರೆ.

ಪುನೀತ್ ಅವರ ಮಕ್ಕಳು ಅವರ ದಾರಿಯಲ್ಲಿಯೆ ಸಾಗುವ ನಿರ್ಧಾರವನ್ನು ಮಾಡಿದ್ದಾರೆ. ಪುನೀತ್ ಅವರು ಮಾಡುತ್ತಿದ್ದ ಎಲ್ಲಾ ಜನಸೇವಾ ಕೆಲಸಗಳನ್ನು ಮುಂದುವರಿಸುವುದಾಗಿ ಪುನೀತ್ ಅವರ ಪತ್ನಿ ಅಶ್ವಿನಿ ಹಾಗೂ ಮಕ್ಕಳು ನಿರ್ಧಾರ ಮಾಡಿದ್ದಾರೆ. ವಿಧಿಯಾಟವನ್ನು ಯಾರಿಂದಲೂ ತಿಳಿಯಲು ಸಾಧ್ಯವೆ ಇಲ್ಲ ಎನ್ನುವುದಕ್ಕೆ ಪುನೀತ್ ರಾಜಕುಮಾರ್ ಅವರ ಸಾವು ನಿದರ್ಶನವಾಗಿದೆ. ಪುನೀತ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.

ಪುನೀತ್ ರಾಜಕುಮಾರ್ ಅವರು ಸಾಯುವ ಹಿಂದಿನ ದಿನ ಭಜರಂಗಿ 2 ಸಿನಿಮಾ ಸಂಬಂಧಿಸಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ಅವರ ಜೊತೆ ಪುನೀತ್ ಅವರು ಡ್ಯಾನ್ಸ್ ಮಾಡಿದ್ದರು. ಪುನೀತ್ ಅವರು ಅನೇಕ ಸಿನಿಮಾಗಳಿಗೆ ತಮ್ಮ ಧ್ವನಿಯನ್ನು ನೀಡಿದ್ದಾರೆ. ಪುನೀತ್ ಅವರು ಕೊನೆಯಬಾರಿ ಹಾಡಿದ ಹಾಡನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ. ನಮ್ಮೊಂದಿಗೆ ನಗುತಲಿದ್ದು ಕಣ್ಮರೆಯಾಗಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಮುಂದಿನ ಜನ್ಮದಲ್ಲಿಯೂ ಇದೆ ಕನ್ನಡನಾಡಿನಲ್ಲಿ ಜನಿಸಲಿ ಎಂದು ಆಶಿಸೋಣ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *