ಅಮೇರಿಕಾದ ಹೈವೇಗಳಲ್ಲಿ ಸಂಚಾರ ಮಾಡುವಾಗ ಸರ್ಕಾರ ಯಾವೆಲ್ಲ ಸೌಲಭ್ಯಗಳನ್ನು ಒದಗಿಸಿದೆ ಎಂಬುದರ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ. ಚಾಲಕರಿಗೆ ರಿಪ್ರೆಸ್ಮೆಂಟ್ ಮಾಡಿಕೊಳ್ಳುವ ಸಲುವಾಗಿ ಯಾವೆಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಜನರು ಯಾವ ರೀತಿಯ ಟ್ರಾಫಿಕ್ ರೂಲ್ಸ್ ಗಳನ್ನು ಅನುಸರಿಸಬೇಕು. ಪೆಟ್ರೋಲ್ ಪಂಪ್ ಗಳಲ್ಲಿ ಕಾರನ್ನು ರಿಫಿಲ್ ಮಾಡಿಕೊಳ್ಳುವುದಕ್ಕೆ ಯಾವ ರೀತಿ ವ್ಯವಸ್ಥೆ ಇದೆ ಎನ್ನುವುದರ ಕುರಿತು ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಅಮೆರಿಕದಲ್ಲಿ ದೊಡ್ಡ ದೊಡ್ಡ ಟ್ರಕ್ ಗಳಿಗೆ ಗ್ಯಾಸ್ಗಳನ್ನು ತುಂಬಿಸಿಕೊಳ್ಳುವ ಸ್ಥಳದಲ್ಲಿ ಚಾಲಕರಿಗೆ ಸ್ನಾನ ಮಾಡುವುದಕ್ಕೆ ವ್ಯವಸ್ಥೆಗಳು ಇರುತ್ತದೆ ಚಾಲಕರು ಎರಡು ಮೂರು ದಿನ ವಾರಗಟ್ಟಲೆ ಬೇರೆ ಬೇರೆ ರಾಜ್ಯಗಳಿಗೆ ಪ್ರಯಾಣ ಮಾಡುವುದರಿಂದ ಉಚಿತವಾಗಿ ಸ್ನಾನ ಮಾಡಿ ಫ್ರೆಶ್ ಆಗುವುದಕ್ಕೆ ಇಲ್ಲಿ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. ಹೈವೇಯಲ್ಲಿ ಪ್ರಯಾಣಿಸುತ್ತಿರುವಾಗ ವೇಗದ ಮಿತಿಯನ್ನು ಅನುಸರಿಸಬೇಕಾಗುತ್ತದೆ.

ತಪ್ಪಿದ್ದರೆ ಪೊಲೀಸರು ಫಾಲೋ ಮಾಡಿಕೊಂಡು ಬರುತ್ತಾರೆ. ನಿಮ್ಮ ಹಿಂದೆ ಪೊಲೀಸರು ಬರುತ್ತಿರುವುದು ನಿಮಗೆ ಖಾತ್ರಿಯಾದಾಗ ನೀವು ನಿಮ್ಮ ಕಾರನ್ನು ರಸ್ತೆಯ ಬಲಭಾಗಕ್ಕೆ ತೆಗೆದುಕೊಂಡುಹೋಗಿ ನಿಲ್ಲಿಸಿಕೊಳ್ಳಬೇಕು. ಪೊಲೀಸರು ನಿಮ್ಮ ಕಾರಿನ ನಂಬರನ್ನು ಕೊಡಿ ನಿಮ್ಮ ಪೂರ್ತಿ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಬಳಿ ಬರುತ್ತಾರೆ.

ಪೊಲೀಸರು ನಿಮ್ಮ ಬಳಿ ಬಂದಾಗ ನಿಮ್ಮ ಎರಡು ಕೈಗಳನ್ನು ಸ್ಟೇರಿಂಗ್ ಮೇಲೆ ಇಡಬೇಕು ಅವರಿಗೆ ನಿಮ್ಮ ಕೈಗಳು ಕಾಣಿಸಲಿಲ್ಲ ಎಂದರೆ ಅವರು ನೀವು ಯಾವುದೋ ಶಸ್ತ್ರವನ್ನು ಮುಚ್ಚಿಟ್ಟಿದ್ದೀರಿ ಎಂದು ತಿಳಿದುಕೊಳ್ಳುತ್ತಾರೆ. ಪೊಲೀಸರು ನಿಮ್ಮ ಬಳಿ ಬಂದಾಗ ನಿಮ್ಮನ್ನು ಯಾಕೆ ಹಿಡಿದಿದ್ದಾರೆ ಎನ್ನುವ ಕಾರಣವನ್ನು ಅವರು ವಿವರಿಸುತ್ತಾರೆ. ನೀವು ಯಾಕೆ ತಪ್ಪು ಮಾಡಿದ್ದೀರಿ ಅನ್ನೋದನ್ನ ಹೇಳಬೇಕು ನಂತರ ಅವರು ನಿಮ್ಮ ಬಳಿ ನಿಮ್ಮ ಕಾರ್ ರಿಜಿಸ್ಟ್ರೇಷನ್, ಕಾರ್ ಇನ್ಸೂರೆನ್ಸ್ ಮತ್ತು ನಿಮ್ಮ ಡ್ರೈವಿಂಗ್ ಲೈಸನ್ಸ್ ಅನ್ನು ಕೇಳುತ್ತಾರೆ

ನೀವು ಅದನ್ನು ಅವರಿಗೆ ತೋರಿಸಬೇಕು. ನಂತರ ಅವರು ನಿಮಗೆ ದಂಡವನ್ನು ವಿಧಿಸುತ್ತಾರೆ. ಇನ್ನು ಅಮೆರಿಕದಲ್ಲಿ ಟೋಲ್ಗಳಲ್ಲಿ ಯಾವ ರೀತಿ ಇರುತ್ತದೆ ಎಂದರೆ ಟೋಲ್ ತುಂಬಿಕೊಳ್ಳುವುದಕ್ಕೆ ಯಾವುದೇ ಮನುಷ್ಯರು ಇರುವುದಿಲ್ಲ ಕಾರಿನ ಮೇಲೆ ಐ ಪಾಸ್ ಇರುತ್ತದೆ.ಟೋಲ್ ಬುತ್ ನಲ್ಲಿ ಸ್ಕ್ಯಾನರ್ ಇರುತ್ತದೆ. ಕಾರು ಪಾಸ್ ಆದಾಗ ಅದು ಸ್ಕ್ಯಾನ್ ಮಾಡಿಕೊಳ್ಳುತ್ತದೆ.ಇದರಿಂದ ಪ್ರತಿ ಸಲ ಟೋಲ್ ಡಿಡಕ್ಟ್ ಆಗುತ್ತದೆ.

ಇನ್ನು ಪೆಟ್ರೋಲ್ ಬಂಕ್ ಗ್ಯಾಸ್ ಬಂಕ್ ಗಳಲ್ಲಿ ಹೇಗಿರುತ್ತದೆ ಎಂದರೆ ಅಲ್ಲಿ ನೀವೇ ಗ್ಯಾಸ್ ತುಂಬಿಕೊಳ್ಳಬೇಕು ಮೊದಲಿಗೆ ನಿಮ್ಮ ಕಾರ್ಡ ಎಂಟರ್ ಮಾಡಿಕೊಳ್ಳಬೇಕು.ನಂತರ ನಿಮಗೆ ಎಸ್ಟು ಬೇಕೋ ಅಷ್ಟನ್ನು ನೀವು ಹಾಕಿಕೊಳ್ಳಬೇಕು. ನೀವು ಹೈವೇಯಲ್ಲಿ ಚಲಿಸುವಾಗ ತುಂಬಾ ವೇಗವಾಗಿ ಚಲಿಸುವಂತೆ ಇಲ್ಲ ರಸ್ತೆಯ ಬದಿಯಲ್ಲಿ ನೀವು ಎಸ್ಟು ವೇಗವಾಗಿ ಚಲಿಸಬೇಕು ಎಂದು ಬರೆದಿರುತ್ತಾರೆ. ನಿಧಾನವಾಗಿ ಚಲಿಸುವಂತ ಕೆಲವು ಗಾಡಿಗಳನ್ನು ಹೈವೇಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ.

ಹೈವೇಯಲ್ಲಿ ಕಾರುಗಳು ಮಾತ್ರ ಚಲಿಸುವುದಿಲ್ಲ ಜೊತೆಗೆ ಬೈಕ್ ಗಳು ಕೂಡ ಚಲಿಸುತ್ತವೆ ಹೀಗೆ ಚಲಿಸುವಾಗ ಒಂದು ಗಾಡಿಯಿಂದ ಇನ್ನೊಂದು ಗಾಡಿಗೆ ಒಂದು ಕಾರಿನಷ್ಟು ಅಂತರ ಇರಬೇಕು. ನೀವು ಹೈವೇಯಲ್ಲಿ ಹೋಗುವಾಗ ಅಲ್ಲಿಂದ ಬೇರೆ ರಸ್ತೆಗೆ ಹೋಗಬೇಕು ಎಂದರೆ ಅಲ್ಲಿ ಎಕ್ಸಿಟ್ ಎಂದು ಬರೆದಿರುತ್ತಾರೆ ಅಲ್ಲಿಯೇ ಲೇನ್ ಬದಲಾಯಿಸಿ ರಸ್ತೆಗೆ ಸೇರಿಕೊಳ್ಳಬೇಕು. ಅದು ನಿಮ್ಮ ಊರಿಗೆ ಸೇರಿಸುತ್ತದೆ ಅದು ನಿಮ್ಮ ರಸ್ತೆ ಆಗಿಲ್ಲವೆಂದರೆ ಮುಂದಿನ ರಸ್ತೆಯನ್ನು ಹುಡುಕಿಕೊಂಡು ಹೋಗಬೇಕು.

ಹೈವೇಯಲ್ಲಿ ಹೋಗುವಾಗ ನಿಮಗೆ ಸುತ್ತಮುತ್ತ ಯಾವುದೇ ರೀತಿಯ ಅಂಗಡಿಗಳು ಕಾಣಿಸುವುದಿಲ್ಲ. ನಿಮಗೆ ಏನಾದರೂ ಬೇಕು ಎಂದರೆ ಅಲ್ಲಿ ಎಕ್ಸಿಟ್ ಎನ್ನುವ ಬೋರ್ಡ್ ಇರುತ್ತದೆ ಅಲ್ಲಿ ನೀವು ಹೈವೇ ಇಂದ ಬೇರೆ ರಸ್ತೆಗೆ ಹೋಗಿ ಅಲ್ಲಿ ಏನನ್ನಾದರೂ ತೆಗೆದುಕೊಳ್ಳಬಹುದು. ತುಂಬಾ ದೂರ ಪ್ರಯಾಣ ಮಾಡುವವರಿಗೆ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಕ್ಕೆ ವ್ಯವಸ್ಥೆ ಇರುತ್ತದೆ ಅದಕ್ಕೆ ರೆಸ್ಟ್ ಏರಿಯಾ ಎಂದು ಕರೆಯುತ್ತಾರೆ.

ಅಮೇರಿಕಾದ ಸರ್ಕಾರ ಎರಡೆರಡು ಮೈಲಿಗೆ ಒಂದೊಂದು ರೆಸ್ಟ್ ಏರಿಯಾವನ್ನು ಮಾಡಿರುತ್ತದೆ ರೆಸ್ಟ್ ಏರಿಯಾಕ್ಕೆ ಹೋಗುವುದಕ್ಕೆ ನೀವು ಹೈವೇ ಇಂದ ಹೊರಬಿದ್ದ ತಕ್ಷಣ ಕಾರು ಮತ್ತು ಟ್ರಕ್ ನವರು ಯಾವಕಡೆ ಹೋಗಬೇಕು ಎಂಬ ಬೋರ್ಡ್ ಕಾಣಿಸುತ್ತದೆ ನೀವು ಕಾರಿನಲ್ಲಿ ಹೋಗಿದ್ದರೆ ಕಾರು ಯಾವಕಡೆ ಹೋಗಬೇಕು ಎಂಬ ಚಿಹ್ನೆಯ ಗುರುತಿರುತ್ತದೆ ಆಕಡೆ ನೀವು ಚಲಿಸಬೇಕು. ರೆಸ್ಟ್ ಏರಿಯಾ ತುಂಬಾ ವಿಶಾಲವಾಗಿರುತ್ತದೆ ಅಲ್ಲಿ ಪಾರ್ಕಿಂಗ್ ಲಾಟ್ ಸಹ ಇರುತ್ತದೆ.

ಅಲ್ಲಿ ನಿಮಗೆ ತಿನ್ನುವುದಕ್ಕೆ ಕುಡಿಯುವುದಕ್ಕೆ ಏನು ಬೇಕು ಎಲ್ಲ ವ್ಯವಸ್ಥೆ ಇರುತ್ತದೆ ಶೌಚಾಲಯ ವ್ಯವಸ್ಥೆಯೂ ಕೂಡ ಇರುತ್ತದೆ. ಅಲ್ಲಿ ನೀವು ಎಷ್ಟು ಸಮಯ ಬೇಕಾದರೂ ವಿಶ್ರಾಂತಿಯನ್ನು ತೆಗೆದುಕೊಳ್ಳಬಹುದು. ನೀವು ಗ್ಯಾಸ್ಗಳನ್ನು ತುಂಬಿಸಿಕೊಳ್ಳಲು ಹೋದಾಗ ಅಲ್ಲಿ ಒಳಗಡೆ ನಿಮಗೆ ತಿನಿಸುಗಳು ಕುಡಿಯುವುದಕ್ಕೆ ಏನೆಲ್ಲ ಬೇಕು ಅವು ಸಿಗುತ್ತವೆ. ಈ ರೀತಿಯಾಗಿ ಹೈವೇಯಲ್ಲಿ ದೂರದೂರ ಪ್ರಯಾಣಿಸುವವರಿಗೆ ಯಾವುದೇ ರೀತಿ ತೊಂದರೆ ಆಗದೇ ಇರುವ ರೀತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಜೊತೆಗೆ ಪ್ರಯಾಣಿಕರು ಸಹ ನಿಯಮಗಳನ್ನು ಅನುಸರಿಸಬೇಕು ಇಲ್ಲವೆಂದರೆ ದಂಡ ಕಟ್ಟುವುದಕ್ಕೆ ಸಿದ್ಧರಾಗಿರಬೇಕು.

Leave a Reply

Your email address will not be published. Required fields are marked *