ಕಾರಿನಲ್ಲಿ ಇದ್ದ ಒಬ್ಬನೇ ಹುಡುಗನನ್ನು ನೋಡಿ ಈಕೆ ಏನ್ ಮಾಡಿದ್ದಾಳೆ ನೋಡಿ, ಇಂತವರಿಂದ ಸ್ವಲ್ಪ ಹುಷಾರಾಗಿರಿ

Recent Story

Recent story: ಜೀವನದಲ್ಲಿ ಪ್ರಸಂಗಗಳು ಯಾವ ರೀತಿ ಬರುತ್ತದೆ ಎನ್ನುವುದಕ್ಕೆ ಈ ಒಂದು ಘಟನೆ ನಿಜಕ್ಕೂ ಒಳ್ಳೆಯ ಉದಾಹರಣೆಯಾಗಿದೆ ನಾವು ಎಷ್ಟೇ ಜಾಗರೂಕರಾಗಿದ್ದರೂ ಕೂಡ ಇವತ್ತು ಜನ ನಮ್ಮನ್ನು ಯಾವ ರೀತಿ ಮೋಸ ಮಾಡುತ್ತಾರೆ ಎನ್ನುವುದಕ್ಕೆ ಇಲ್ಲಿ ಒಂದು ಉತ್ತಮ ಉದಾಹರಣೆ ಇದೆ. ಈ ಘಟನೆ ನಡೆದಿದ್ದು 2022 ಏಪ್ರಿಲ್ 3ನೇ ತಾರೀಕು ಬೆಂಗಳೂರಿನ ಶಿವಾಜಿನಗರದಲ್ಲಿ ದಿನೇಶ್ ಎಂಬ ಸಾಫ್ಟ್ವೇರ್ ಇಂಜಿನಿಯರ್ (Software Engineer) ರಾಜಾಜಿನಗರದಿಂದ ದೊಂಬುಳುರಿಗೆ ತನ್ನ ಆಫೀಸ್ ಗೆ ತನ್ನ ಕಾರಿನಲ್ಲಿ ದಿನವೂ ಹೋಗುತ್ತಿದ್ದ.

ಅವತ್ತು ಕೂಡ ದಿನೇಶ್ ರಾಜಾಜಿನಗರದಿಂದ ತನ್ನ ಆಫೀಸಿಗೆ ಹೋಗುವಾಗ MG rode ಬಳಿ ಇರುವ ಅನಿಲ್ ಕುಂಬಳೆ ವೃತ್ತದ ಬಳಿ ಬಳಿ ಸಿಗ್ನಲ್ ಬಿದ್ದಿರುವ ಕಾರಣದಿಂದ ಕಾರ್ ನ್ನ ನಿಲ್ಲಿಸಬೇಕಾಗುತ್ತದೆ . ಆಗ ಅಲ್ಲಿಗೆ ಒಬ್ಬಳು ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡಲು ಬರುತ್ತಾಳೆ ಮೊದಮೊದಲು ದಿನೇಶ್ ಅವಳಿಗೆ ಏನು ಕೊಡುವುದಿಲ್ಲ ಮುಂದೆ ಹೋಗು ಎನ್ನುತ್ತಾನೆ ಕೊನೆಗೆ ತುಂಬಾ ಹಂಬಲಿಸಿದಾಗ ತನ್ನ ಜೇಬಿನಿಂದ ಎರಡು ರೂಪಾಯಿ ಕಾಯಿನ್ ಅನ್ನು ತೆಗೆದು ಕೊಡುತ್ತಾನೆ

ಇದನ್ನೂ ಓದಿ..SSLC, PUC ಹಾಗೂ ಡಿಗ್ರಿ ಆದಂತಹ ಅಭ್ಯರ್ಥಿಗಳಿಗೆ ಭಾರತೀಯ ರೈಲ್ವೆಯಲ್ಲಿದೆ ಉದ್ಯೋಗಾವಕಾಶ

ಎರಡು ರೂಪಾಯಿ ಕಾಯಿನ್ ನೋಡಿದ ಆ ಮಹಿಳೆ ಸಿಟ್ಟಾಗುತ್ತಾಳೆ ಎರಡು ರೂಪಾಯಿಯಲ್ಲಿ ಏನು ಬರುತ್ತದೆ ನಾನೇ ನಿನಗೆ ಹತ್ತು ರೂಪಾಯಿ ಕೊಡುತ್ತೇನೆ ಎಂದು ಎರಡು ರೂಪಾಯಿಯನ್ನು ಅವನ ಮೇಲೆ ಬಿಸಾಕುತ್ತಾಳೆ ಅವಳ ಅಹಂಕಾರವನ್ನು ಅಂದುಕೊಂಡು ದಿನೇಶ್ ಸುಮ್ಮನಾಗುತ್ತಾನೆ ಕೊಟ್ಟ ದುಡ್ಡನ್ನ ತನ್ನ ಜೇಬಿಗೆ ಹಾಕಿಕೊಳ್ಳುತ್ತಾನೆ.

ಸಿಟ್ಟಿಗೆದ್ದ ಆ ಭಿಕ್ಷಕಿ ಸ್ವಲ್ಪ ಮುಂದೆ ಬಂದು ನೋಡಿದಾಗ ದಿನೇಶನ ಹಿಂದಿನ ಕಾರ್ ಡೋರ್ ಓಪನ್ ಆಗಿತ್ತು ದಿನೇಶ್ ಇನ್ನೇನು ಟ್ರಾಫಿಕ್ ಸಿಗ್ನಲ್ ಬಿತ್ತು ಎಂದು ಗೇರ್ ಹಾಕುವುದರಲ್ಲಿ ಮಗ್ನನಾಗಿದ್ದ ಅಭಿಕ್ಷಕಿ ಅಷ್ಟರಲ್ಲಿ ಮೆಲ್ಲನೆ ತನ್ನ ಬಳಿ ಇದ್ದ ಮಗುವನ್ನ ಹಿಂದಿನ ಸೀಟಿನಲ್ಲಿ ಹಾಕಿ ಡೋರ್ ಅನ್ನ ಸ್ವಲ್ಪ ಮುಂದೆ ಮಾಡುತ್ತಾಳೆ. ಆ ಗಾಡಿ ಗ್ರೀನ್ ಸಿಗ್ನಲ್ ಬಿದ್ದ ಕಾರಣ ಮುಂದೆ ಹೋಗುತ್ತದೆ ಮುಂದೆ ಕುಳಿತಂತಹ ದಿನೇಶಿಗೆ ಇದರ ಬಗ್ಗೆ ಅರಿವೇ ಇರುವುದಿಲ್ಲ ಆ ಭಿಕ್ಷುಕಿ ಮಗುವನ್ನ ಕಾರಿನಲ್ಲಿ ಹಾಕಿ ನೇರವಾಗಿ ಶಿವಾಜಿನಗರ್ ಪೊಲೀಸ್ ಠಾಣೆಗೆ ಹೋಗುತ್ತಾಳೆ ತನ್ನ ಮಗುವನ್ನು ಒಬ್ಬ ವ್ಯಕ್ತಿ ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗಿದ್ದಾನೆ ಎಂದು ಕಂಪ್ಲೇಂಟ್ ಮಾಡುತ್ತಾಳೆ ಹಾಗೂ ಕಾರ್ ನಂಬರ್ ಡೀಟೇಲ್ಸ್ ಅನ್ನು ನೀಡುತ್ತಾಳೆ.

ಪೊಲೀಸರು ಕಾರ್ ನಂಬರ್ ಅನ್ನು ಪತ್ತೆ ಹಚ್ಚಿದಾಗ ಆಗ ಗೊತ್ತಾಗುತ್ತದೆ ಇದು ದಿನೇಶ್ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಪೊಲೀಸರು ದಿನೇಶನ ಮನೆಯನ್ನು 10 ನಿಮಿಷದಲ್ಲಿ ಪತ್ತೆ ಹಚ್ಚುತ್ತಾರೆ ಅವನ ಮನೆಗೆ ರಾಜಾಜಿನಗರದ ಪೊಲೀಸ್ ಠಾಣೆಯ ಒಬ್ಬ ಕಾನ್ಸ್ಟೇಬಲ್ ಅನ್ನು ಕಳಿಸಿ ಅವನು ಆಫೀಸ್ ಅಡ್ರೆಸ್ ಅನ್ನು ಕೂಡ ಪತ್ತೆ ಹಚ್ಚುತ್ತಾರೆ. ಅಲ್ಲಿಂದ ನೇರವಾಗಿ ಶಿವಾಜಿನಗರದ ಪೊಲೀಸರು ದಿನೇಶನ ಆಫೀಸಿಗೆ ಬರುತ್ತಾರೆ ಆಗ ಪೊಲೀಸರು ದಿನೇಶನನ್ನು ಕರೆದು ನಡೆದ ವಿಚಾರವನ್ನು ಹೇಳುತ್ತಾರೆ

ದಿನೇಶನಿಗೂ ಕೂಡ ಇದರ ಬಗ್ಗೆ ಏನು ಮಾಹಿತಿ ಇರುವುದಿಲ್ಲ ಈ ವಿಷಯ ಕೇಳಿ ದಿನೇಶ್ ಕೊಡ ಗಾಬರಿಯಾಗುತ್ತಾನೆ ಪೊಲೀಸರು ಮತ್ತು ದಿನೇಶ್ ಕಾರ್ ಬಳಿ ಬಂದು ನೋಡಿದಾಗ ನಿಜಕ್ಕೂ ಅಲ್ಲಿ ಮಗುವಿತ್ತು ಇನ್ನು ನಿದ್ರಾವಸ್ಥೆಯಲ್ಲಿ ಇತ್ತು, ಆ ವೇಳೆ ಬಾಗಿಲು ತೆರೆಯದಿದ್ದರೆ ಆ ಮಗು ಸತ್ತು ಹೋಗುತ್ತಿತ್ತು ಆದರೆ ಹಿಂದಿನ ಡೋರ್ ಸರಿಯಾಗಿ ಬಿದ್ದಿರಲಿಲ್ಲ ಇದೇ ಕಾರಣ ಮಗು ಉಸಿರಾಡಲು ಸಾಧ್ಯವಾಯಿತು ಮಗುವನ್ನು ಹಾಗೂ ದಿನೇಶನನ್ನ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು ಆ ಭಿಕ್ಷಕಿಯನ್ನು ಕೂಡ ಅಲ್ಲಿಗೆ ಕರೆಸುತ್ತಾರೆ.

ದಿನೇಶ್ ನಾನು ಈ ಕೃತ್ಯವನ್ನು ಮಾಡಿಲ್ಲವೆಂದು ಪದೇ ಪದೇ ಹೇಳುತ್ತಾನೆ ನಾನ್ಯಾಕೆ ಕಿಡ್ನಾಪ್ ಮಾಡಲಿ ನಾನು ಒಳ್ಳೆಯ ಕೆಲಸದಲ್ಲಿ ಇದ್ದೇನೆ ನನಗೆ ಇಂಥ ವಿಚಾರ ಯಾಕೆ ಬರುತ್ತದೆ ಎಂದು ಹೇಳುತ್ತಾನೆ ಕೊನೆಗೆ ಪೊಲೀಸರು ಅನಿಲ್ ಕುಂಬಳೆ ಸರ್ಕಲ್ ಸಿ ಸಿ ಕ್ಯಾಮೆರಾವನ್ನು ನೋಡಿದಾಗ ಆಗ ಗೊತ್ತಾಗುತ್ತದೆ ಈ ಹುಡುಗಿಯೆ ಆ ಮಗುವನ್ನು ಇಟ್ಟಿದ್ದು ಎಂದು.

ಇದನ್ನೂ ಓದಿ..ವೃಷಭ ರಾಶಿಯ ಪುರುಷರು ಹೀಗೇಕೆ? ಇವರ ಗುಣ ಸ್ವಭಾವ ಹೇಗಿರತ್ತೆ ಗೊತ್ತಾ..

ನಮ್ಮ ಸಮಾಜದಲ್ಲಿ ಯಾವ ರೀತಿಯ ಮೋಸ ಮಾಡುತ್ತಾರೆ ಎಂದು ನಾವು ಇದರಲ್ಲಿ ತಿಳಿದುಕೊಳ್ಳಬಹುದು ಹೊಸ ಮಾಫಿಯಾ ಬೆಂಗಳೂರಿನಲ್ಲಿ ತುಂಬಾ ನಡೆಯುತ್ತಿದೆ ಈ ಭಿಕ್ಷುಕಿಯ ಹೆಸರು ಸಲ್ಮಾನ್ ಬೇಗಮ್ ಓದಿದ್ದು ಪಿಯುಸಿ ಇವಳ ಹಿಂದೆ ಶಿವಾಜಿನಗರದಲ್ಲಿ ದೊಡ್ಡ ಗ್ಯಾಂಗ್ ಕೂಡ ಇದೆ ಅಂದರೆ ಆ ಚಿಕ್ಕ ಮಕ್ಕಳಿಗೆ ನಿದ್ದೆ ಬರುವ ತರ ಸಿರಪನ್ನು ಕೊಡಿಸಿ ಅವರಿಗೆ ನಿದ್ದೆ ಬರುವ ತರ ಮಾಡಿ ಅವರನ್ನು ಎತ್ತಿಕೊಂಡು ಭಿಕ್ಷೆಯನ್ನು ಬಿಡುವುದನ್ನೇ ದೊಡ್ಡ ಮಾಫಿಯನ್ನಾಗಿ ಮಾಡಿಕೊಂಡಿದ್ದಾರೆ. ಸಾಮಾನ್ಯರು ಇವುಗಳಿಂದ ಸ್ವಲ್ಪ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ.

Leave a Reply

Your email address will not be published. Required fields are marked *