ಹುದ್ದೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆದರೂ ಛಲ ಬಿಡದೆ ಮಗನನ್ನು IAS ಅಧಿಕಾರಿ ಮಾಡಿದ ತಂದೆ

0 1,427

ಸಾಧಿಸುವವನಿಗೆ ಛಲ ಹೊಂದಿದ್ದರೆ ಏನನ್ನ ಬೇಕಾದರೂ ಸಾಧನೆ ಮಾಡುತ್ತಾನೆ ಅನ್ನೋದಕ್ಕೆ ಹಲವು ಉದಾಹರಣೆಗಳಿವೆ, ಅವುಗಳಲ್ಲಿ ಈ ಸ್ಟೋರಿ ಕೂಡ ಒಂದಾಗಿದೆ. ಸಾಧನೆ ಅನ್ನೋದು ಸುಲಭವಾಗಿ ಸಿಗುವಂತದಲ್ಲ ಅದಕ್ಕೆ ತನ್ನದೆಯಾದ ಕಠಿಣ ಶ್ರಮ ಜೊತೆಗೆ ಅದೃಷ್ಟನೋ ಇರಬೇಕು. ಹೌದು ಸತತ ಪ್ರಯತ್ನದಿಂದ ಅದಕ್ಕೆ ಪ್ರತಿಫಲವನ್ನು ಕಾಣಲು ಸಾಧ್ಯವಾಗುತ್ತದೆ ಸಾಧನೆ ಅಂದಳು ಬಡತನ ಮುಖ್ಯವಲ್ಲ ಅನ್ನೋದನ್ನ ಕುಲ್ದೀಪ್ ದ್ವಿವೇದಿ ಅವರು ತೋರಿಸಿಕೊಟ್ಟಿದ್ದಾರೆ.

ತಂದೆ ಹುದ್ದೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆದರೂ ತನ್ನ ಮಗನ ವಿದ್ಯಾಭ್ಯಾಸಕ್ಕೆ ಶ್ರಮಪಟ್ಟು ಸಹಕರಿಸಿದ್ದಾರೆ, ಇವರ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ತಿಳಿಯೋಣ ಬನ್ನಿ ಹೆಸರು ಕುಲ್ದೀಪ್ ದ್ವಿವೇದಿ ಎಂಬುದಾಗಿ ತಂದೆ ಸೂರ್ಯ ಕಾಂತ್ ದ್ವಿವೇದಿ ಇವರು ತಮ್ಮ ಕುಟುಂಬದಲ್ಲಿನ 5 ಜನರನ್ನು ಪೋಷಿಸಲು ಹೆಚ್ಚಿನ ಶ್ರಮ ಪಡುತ್ತಿದ್ದರು. ತಂದೆ ಸೂರ್ಯ ಕಾಂತ್ ದ್ವಿವೇದಿ ಅವರು ಲಕ್ನೋ ವಿಶ್ವವಿದ್ಯಾಲಯದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾರೆ, ಹಾಗೂ ಮಗನ ಯಶಸ್ಸಿಗೆ ಯಾವುದೇ ಅಡೆ ತಡೆಗಳು ಇಲ್ಲ ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಕುಲ್ದೀಪ್ ದ್ವಿವೇದಿ ಅವರು 2015 ರಲ್ಲಿ ಯುಪಿಎಸ್‌ಸಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಖಿಲ ಭಾರತ ಶ್ರೇಯಾಂಕ 242 ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುಲ್ದೀಪ್ ದ್ವಿವೇದಿ ಅವರು ಚಿಕ್ಕನಿಂದಲೇ ತಾನು ಐಎಎಸ್ ಅಧಿಕಾರಿಯಾಗಬೇಕು ಅನ್ನೋ ಕನಸನ್ನು ಕಟ್ಟಿಕೊಂಡಿದ್ದರು, ಈ ಹುದ್ದೆಯ ಬಗ್ಗೆ ತನ್ನ ಕುಟುಂಬದವರಿಗೆ ಸಂಪೂರ್ಣವಾಗಿ ತಿಳಿದಿರೋದಿಲ್ಲ ಆದರೂ ತನ್ನ ಮಗ ಜೀವನದಲ್ಲಿ ಒಂದೊಲೆಯ ಹುದ್ದೆಗೆ ಹೋಗಲಿ ಅನ್ನೋ ಕಾರಣಕ್ಕೆ ಹಗಲು ರಾತ್ರಿ ಶ್ರಮ ಪಟ್ಟು ಮಗನನ್ನು ಪ್ರೋತ್ಸಹಿಸಿದರು.

ಕುಲದೀಪ್ ದ್ವಿವೇದಿ 2009 ರಲ್ಲಿ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಪದವಿ ಪಡೆದರು ಮತ್ತು 2011 ರಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. ಹಾಗು ಹೆಚ್ಚಿನ ಶ್ರಮಪಟ್ಟು ತನ್ನ ಕುಟುಂಬದ ಪರಿಸ್ಥಿತಿಯನ್ನು ಅರಿತು ಓದಿನ ಕಡೆ ಹೆಚ್ಚಿನ ಗಮನ ಹರಿಸಿ ತಮ್ಮ ಕನಸಿನ ಹಾದಿಯನ್ನು ಮುಟ್ಟಿದ್ದಾರೆ. ಅದೇನೇ ಇರಲಿ ಇಂದಿನ ದಿನಗಳಲ್ಲಿ ಎಲ್ಲ ಸೌಕರ್ಯಗಳು ಇದ್ದರು ಕೂಡ ಓದದೇ ಇರುವಂತ ಕೆಲ ಮಕ್ಕಳ ಮುಂದೆ ನಿಜಕ್ಕೂ ಇವರು ಗ್ರೇಟ್ ಅಲ್ಲವೇ. ಪ್ರತಿ ತಂದೆ ತಾಯಿಗಳ ಕನಸು ಮಕ್ಕಳು ಓದಿ ಒಂದೊಳ್ಳೆ ಹುದ್ದೆಯನ್ನು ಸ್ವೀಕರಿಸಲಿ ಅನ್ನೋದೇ ಪ್ರತಿ ಪೋಷಕರ ಅಸೆ ಆಗಿರುತ್ತದೆ ಅಂತವರಿಗೆ ಈ ಕುಲದೀಪ್ ದ್ವಿವೇದಿ ಅವರು ಐಎಎಸ್ ಅಧಿಕಾರಿಯಾಗಿ ಮಾದರಿಯಾಗಿದ್ದಾರೆ.

Leave A Reply

Your email address will not be published.