ಹರೇ ಕೃಷ್ಣಾ ಡೈಮಂಡ್ ಕಂಪನಿಯ ವರಸ್ದಾರನಾದ ಸಾವ್ ಜೀ ಧೋಲಾಕಿಯ ಒಬ್ಬ ವಜ್ರದ ವ್ಯಾಪಾರಿಯಾಗಿದ್ದು ಅವರು ಭಾರದ ದೊಡ್ಡ ದೊಡ್ಡ ಶ್ರೀಮಂತರ ಸಾಲಿನಲ್ಲಿ ನಿಲುತ್ತಾನೆ, ಯಾಕಂದ್ರೆ ಇವರ ಒಟ್ಟು ಆಸ್ತಿಯ ಮೊತ್ತ ಏಳು ಸಾವಿರ ಕೋಟಿಗೂ ಮೀರಿದ್ದು ಅಲ್ಲದೇ ಇವರು ಸೂರತ್ ನಲ್ಲಿ ಹನ್ನೊಂದು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಇವರು ಪ್ರತಿ ವರ್ಷವೂ ತನ್ನ ಕಂಪನಿಯಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿಗಳಿಗೆ ನಾಲ್ಕು ನೂರು ಅಪಾರ್ಟ್ಮೆಂಟ್ ಹಾಗೂ ಸಾವಿರ ಕಾರುಗಳನ್ನು ಕೊಡುವುದರೊಂದಿಗೆ ಭಾರತದಲ್ಲಿ ಜನಮನ್ನಣೆಗೆ ಪಾತ್ರರಾಗಿದ್ದಾರೆ ಎಲ್ಲಕ್ಕೂ ಮಿಗಿಲಾಗಿ ಬಹಳಷ್ಟು ಕಷ್ಟ ಪಟ್ಟು ತಮ್ಮ ಕಂಪನಿಯನ್ನು ಅವರು ಇಂದು ಈ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಇಂದು ಅವರಿಗೆ ವಯಸ್ಸಾಗಿರುವ ಕಾರಣ ತನ್ನ ಕಂಪನಿಯ ಜವಾಬ್ಧಾರಿಯನ್ನು ತಮ್ಮ ಸುಪುತ್ರ ದ್ರವ್ಯ ದೋಲಾಕಿಯಾ ಗೆ ಕೊಡಲು ಇಚ್ಚಿಸುತ್ತಾರೆ, ಅವನಿಗೀಗ 21 ವರ್ಷ ವಯಸ್ಸು ಅಷ್ಟೇ ದೂರದ ಅಮೇರಿಕಾದಲ್ಲಿ ಅವನು ತನ್ನ ಎಂಬಿಎ ಪದವಿ ಮುಗಿಸಿಕೊಂಡು ಬಂದಿದ್ದಾನೆ. ದ್ರವ್ಯ ದೋಲಾಕಿಯ ಭಾರತದ ಒಬ್ಬ ಅತ್ಯಂತ ಶ್ರೀಮಂತ ಉದ್ಯಮಿಯ ಮಗನಾದ್ದರಿಂದ ಅಲ್ಲದೇ ಹನ್ನೊಂದು ಅಂತಿಸ್ತಿನ ಮನೆಯಲ್ಲಿ ಬೆಳೆದ ತಮ್ಮ ಮುದ್ದು ಮಗನಿಗೆ ಹಣದ ಬೆಲೆ ಗೊತ್ತಿರುವುದಿಲ್ಲ ತಾನು ಪಟ್ಟ ಕಷ್ಟ ಅವನಿಗೆ ತಿಳಿದಿಲ್ಲ ಆದ್ದರಿಂದ ಇವನಿಗೆ ಹಣದ ಮಹತ್ವವನ್ನು ತಿಳಿಸಿ ನಂತರ ಅವನಿಗೆ ತನ್ನ ಕಂಪನಿಯ ಸಂಪೂರ್ಣ ಜವಾಬ್ದಾರಿಯನ್ನು ಹಸ್ತಾಂತರಿಸಬೇಕೆಂದು ನಿರ್ಧರಿಸಿದರು.

ಮೊದಲಿಗೆ ಅವರು ತನ್ನ ಮಗ ದ್ರವ್ಯ ದೋಲಾಕಿಯಾನನ್ನು ಕರೆದು ಏಳು ಸಾವಿರ ರೂಪಾಯಿಗಳನ್ನು ಆತನ ಕೈಗಿಟ್ಟು ಒಂದು ತಿಂಗಳು ಸಾಮಾನ್ಯರಲ್ಲಿ ಸಾಮಾನ್ಯನಾಗಿ ದುಡಿದು ಹಣವನ್ನು ಸಂಪಾದನೆ ಮಾಡು ಜನಸಾಮಾನ್ಯನ ಬದುಕನ್ನು ಬದುಕು ಎಂದು ಹೇಳಿ ನಾಲ್ಕು ಷರತ್ತುಗಳನ್ನು ವಿಧಿಸಿದರು ತನ್ನ ಹೆಸರನ್ನು ಎಲ್ಲಿಯೂ ಬಳಸಬಾರದು ಮೊಬೈಲ್ ಅನ್ನು ಬಳಸಬಾರದು, ಒಂದು ವಾರಕ್ಕಿಂತ ಹೆಚ್ಚಾಗಿ ಯಾವುದೇ ಸ್ಥಳದಲ್ಲಿ ಕೆಲಸ ಮಾಡಬಾರದು ಅಷ್ಟೇ ಅಲ್ಲದೇ ತನ್ನ ತಾಯಿ ಹಾಗೂ ಮೂವರು ಸಹೋದರಿಯರ ಜೊತೆಗೆ ಮಾತನಾಡಲೇಬಾರದು, ಇನ್ನು ತುಂಬಾ ಅವಶ್ಯಕ ಮತ್ತು ತುರ್ತು ಪರಿಸ್ಥಿತಿ ಎದುರಾದಲ್ಲಿ ಬೇರೆಯವರಿಂದ ಮೊಬೈಲ್ ಪಡೆದು ಮಿಸ್ ಕಾಲ್ ಕೊಟ್ಟರೆ ಮರಳಿ ತಾನೇ ಕರೆ ಮಾಡುವುದಾಗಿ ಆತನಲ್ಲಿ ಶರತ್ತುಗಳನ್ನು ವಿಧಿಸಿ ಕಳುಹಿಸಿದರು.

ಇದನ್ನೇ ದೊಡ್ಡ ಚಾಲೆಂಜ್ ಆಗಿ ತೆಗೆದುಕೊಂಡ ದ್ರವ್ಯ ದೋಲಾಕಿಯ ಕೊನೆಗೆ ತಲುಪಿದ್ದು ಕೆರಳಾದ ಕೊಚ್ಚಿನ್ ನಗರಕ್ಕೆ ಅವನು ಕೊಚ್ಚಿನ್ ನಗರಕ್ಕೆ ಬರುವಷ್ಟರಲ್ಲಿ ತಂದೆ ಕೊಟ್ಟಿದ್ದ ಏಳು ಸಾವಿರ ರೂಪಾಯಿ ಖಾಲಿಯಾಗಿಹೋಗಿತ್ತು ಅವನಿಗೆ ಮಲಯಾಳಿ ಭಾಷೆ ಬಾರದ ಕಾರಣ ಸರಿ ಸುಮಾರು ಅರವತ್ತು ಸ್ಥಳಗಳಲ್ಲಿ ಆತನಿಗೆ ಕೆಲಸ ಕೊಡದೆ ನಿರಾಕರಿಸಿದ್ದರು ಒಂದು ವಾರ ಯಾವುದೇ ಕೆಲಸ ಸಿಗದ ದ್ರವ್ಯ ದೋಲಾಕಿಯ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿ ಕಾಲ ಕಳೆದಿದ್ದಾನೆ

ನಂತರ ಆತನಿಗೆ ಒಂದು ಬೇಕರಿಯಲ್ಲಿ ಕೆಲಸ ದೊರೆಯುತ್ತದೆ ಆದರೆ ಒಂದು ವಾರದ ಕಾಲ ಆ ಬೇಕರಿಯಲ್ಲಿ ಕೆಲಸ ಮಾಡಿದ ಆತ ನಂತರ ಅಡಿಡಾಸ್ ಶೋ ರೂಂ ನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ಸರಿಯಾಗಿ ಸ್ಮೈಲ್ ಕೊಡದ ಕಾರಣದಿಂದಾಗಿ ಎರಡೇ ದಿನದಲ್ಲಿ ಆತನನ್ನು ಕೆಲಸದಿಂದ ತೆಗೆದು ಹಾಕಿದರು ಆನಂತರ ಅವನು ಮತ್ತೊಂದು ಚಪ್ಪಲಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ ನಂತರ ಒಂದು ಕಾಲ್ ಸೆಂಟರ್ ನಲ್ಲಿಯೂ ಕೂಡ ಕೆಲಸ ಮಾಡಿ ಕೊನೆಗೆ ಮೆಕ್ ಡೊನಾಲ್ಸ್ ನಲ್ಲಿ ಕೆಲಸ ಮಾಡುತ್ತಿರುವಾಗ ಆತನ ತಂದೆಯ ಅಸಿಸ್ಟೆಂಟ್ ಬಂದು ಅವನನ್ನು ಮನೆಗೆ ಮರಳುವಂತೆ ಸೂಚಿಸಿದ ನಂತರವಷ್ಟೇ ಆತನು ಈಗ ತನ್ನ ಮನೆಗೆ ಮರಳಿದನು ತಂದೆಯ ಬಳಿ ಹೋದ ದ್ರವ್ಯ ತನಗೆ ನಿಜವಾದ ಪ್ರಪಂಚದ ಅರಿವಾಯಿತೆಂದು ಹೇಳಿ ಈ ಅರಿವಿಗೆ ಕಾರಣರಾದ ತನ್ನ ತಂದೆಗೆ ಧನ್ಯವಾದಗಳನ್ನು ತಿಳಿಸಿದ್ದಾನೆ

ತಾನು ಕಷ್ಟ ಪಟ್ಟು ಸಂಪಾದಿಸಿದ ಸಂಪತ್ತನ್ನು ಮಗ ಮಜಾ ಮಾಡುವುದು ಸರಿಯಲ್ಲ ಆತನಿಗೆ ಹಣದ ಮಹತ್ವ ತಿಳಿಯಬೇಕು ಎಂದು ಅವರು ಮಾಡಿದ ಈ ಪ್ಲಾನ್ ಇಂದು ಆತನಿಗೆ ಪ್ರಪಂಚವನ್ನು ತಿಳಿಸಿಕೊಟ್ಟಿದೆ, ಅಷ್ಟೇ ಅಲ್ಲದೇ ಅವನನ್ನು ಒಬ್ಬ ಕೃತಜ್ಞ ವ್ಯಕ್ತಿಯನ್ನಾಗಿ ರೂಪಿಸಿದೆ. ಈ ಘಟನೆ ನಡೆದ ನಂತರ ಈ ವಿಷಯ ಕೆಲವು ನ್ಯೂಸ್ ಚಾನಲ್ ಗಳಲ್ಲಿ ಹಾಗೂ ಕೆಲವು ನ್ಯೂಸ್ ಪೇಪರ್ ಗಳಲ್ಲಿ ಪ್ರಕಟವಾಯಿತು ಅದನ್ನು ನೋಡಿದ ಓದಿದ ದ್ರವ್ಯ ನನ್ನು ದುಡಿಸಿಕೊಂಡ ಅವನಿಗೆ ಬೈದ ಎಲ್ಲರೂ ಒಮ್ಮೆಲೇ ಶಾಕ್ ಆಗಿರುವುದರಲ್ಲಿ ಸಂಶಯವಿಲ್ಲ.

Leave a Reply

Your email address will not be published. Required fields are marked *