ಮನೆಯಲ್ಲಿ ಸಿಲೆಂಡರ್ ಗ್ಯಾಸ್ ಬಳಸುತ್ತಿದ್ದರೆ ಇದನ್ನೊಮ್ಮೆ ತಪ್ಪದೆ ತಿಳಿಯಿರಿ

0 6

ಬಹಳ ಹಿಂದಿನ ಕಾಲದಿಂದಲೂ ಮನೆಗಳಲ್ಲಿ ಅಡುಗೆ ಮಾಡಲು ಮತ್ತು ನೀರು ಕಾಯಿಸಲು ಒಲೆಗಳನ್ನೇ ಬಳಸಲಾಗುತ್ತಿತ್ತು ಆ ಒಲೆಗಳಿಗೆ ಇಂಧನವಾಗಿ ಸೌದೆಗಳನ್ನು ಅಥವಾ ಬೆರಣಿಗಳನ್ನು ಬಳಸಲಾಗುತ್ತಿತ್ತು, ಆದರೆ ಈಗ ಕಾಲ ಬದಲಾಗಿದೆ ಕಾಲ ಬದಲಾದಂತೆಲ್ಲ ನಮ್ಮ ಜನರ ಜೀವನ ಶೈಲಿಯೂ ಕೂಡ ಬದಲಾಗಿದೆ. ಹಾಗಾಗಿ ಇಂದು ಬಹುತೇಕ ಮನೆಗಳಲ್ಲಿ ಅಡುಗೆ ಮಾಡಲು ಸೌದೆ ಒಲೆಗಳನ್ನು ಉಪಯೋಗಿಸುತ್ತಿಲ್ಲ ಬೆರಣಿಗಳನ್ನು ಇಂಧನವಾಗಿ ಉಪಯೋಗಿಸುತ್ತಿಲ್ಲ ಸೌದೆ ಒಲೆಗಳ ಬದಲಾಗಿ ಗ್ಯಾಸ್ ಸ್ಟವ್ ಇಂಡಕ್ಷನ್ ಸ್ಟವ್ ಗೋಬರ್ ಗ್ಯಾಸ್ ಹೀಗೆ ಹಲವಾರು ಬಗೆಯ ಆಧುನಿಕ ಒಲೆಗಳನ್ನು ಇಂಧನಗಳನ್ನು ನಾವಿಂದು ಬಳಸುತ್ತಿದ್ದೇವೆ ಆದರೂ ನಮ್ಮ ಸೌದೆ ಒಲೆಯ ಊಟದ ರುಚಿ ಈಗಿನ ಆಧುನಿಕ ಗ್ಯಾಸ್ ಒಲೆಯಲ್ಲಿ ಮಾಡಿದ ಅಡುಗೆಯಲ್ಲಿ ಇರುವುದಿಲ್ಲ ಬಿಡಿ ಅಲ್ಲದೇ ಅಡುಗೆ ಒಲೆಯಷ್ಟು ಸುರಕ್ಷಿತವೂ ಅಲ್ಲ ಅದರಲ್ಲಿಯೂ ಗ್ಯಾಸ್ ಸ್ಟವ್ ಅನ್ನು ಗ್ಯಾಸ್ ಸಿಲಿಂಡರ್ ಅನ್ನು ಬಳಸುವುದಂತೂ ಬಹಳ ಅಪಾಯಕಾರಿಯಾದದ್ದು ಹಾಗಾದರೆ ಗ್ಯಾಸ್ ಸಿಲಿಂಡರ್ ಬಳಸುವವರು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಇತ್ತೀಚಿನ ದಿನಗಳಲ್ಲಿ ಗ್ಯಾಸ್ ಸೋರಿಕೆಯಾಗಿ ಗ್ಯಾಸ್ ಸ್ಪೋಟಗೊಂದು ಬಹಳಷ್ಟು ಜನ ಸಾವನ್ನಪ್ಪಿದ್ದಾರೆ ಅಲ್ಲದೇ ಇಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ ಆದ್ದರಿಂದ ಗ್ಯಾಸ್ ಸಿಲಿಂಡರ್ ಬಳಸುವವರು ಗ್ಯಾಸ್ ಸಿಲಿಂಡರ್ ಕೊಳ್ಳುವಾಗ ಅವರು ನೀಡುವ ಪೂರ್ಣ ನಿರ್ದೇಶನವನ್ನು ತಿಳಿದುಕೊಳ್ಳಬೇಕು ಐಎಸ್ಐ ಸಂಕೇತವಿರುವ ಸಿಲಿಂಡರ್ ಗಳನ್ನು ಮಾತ್ರವೇ ಬಳಸಬೇಕು ಮತ್ತು ಗ್ಯಾಸ್ ಸಿಲಿಂಡರ್ ಗಳಿಗೂ ಕೂಡ ಅವಧಿ ಮುಗಿಯುತ್ತದೆ ಹಾಗಾಗಿ ಅವಧಿ ಮೀರಿದ ಗ್ಯಾಸ್ ಸಿಲಿಂಡರ್ ಗಳನ್ನು ಬಲಸಲೇಬಾರದು

ಇನ್ನೂ ಗ್ಯಾಸ್ ಸಿಲಿಂಡರ್ ಗಳನ್ನು ಅಡುಗೆ ಮನೆಗೆ ಹೊಂದಿಕೊಂಡಂತೆ ಹೊರಗಿನ ಭಾಗಗಳಲಿ ಇಡಬೇಕು ಅಲ್ಲದೆ ಯಾವುದೇ ಕಾರಣಕ್ಕೂ ಗ್ಯಾಸ್ ಸಿಲಿಂಡರ್ ಗೆ ನೀರು ತಾಗದಂತೆ ಎಚ್ಚರವಹಿಸಬೇಕು ಸಿಲಿಂಡರ್ ಗಳನ್ನು ತುಂಬಾ ಇಕ್ಕಟ್ಟಾದ ಜಾಗಗಳಲ್ಲಿ ಇಡದೇ ಗಾಳಿ ಬೆಳಕು ಚೆನ್ನಾಗಿ ಆಡುವಂತಹ ಜಾಗಗಳಲ್ಲಿ ಇಡುವುದು ಒಳ್ಳೆಯದು ಯಾವುದೇ ಕಾರಣಕ್ಕೂ ಸಿಲಿಂಡರ್ ಅನ್ನು ಮಲಗಿಸಿ ಇಡದೇ ಮೇಲ್ಮುಖವಾಗಿಯೇ ಇಡುವುದು ಎಲ್ಲಾ ರೀತಿಯಿಂದಲೂ ಒಳಿತು

ಅಲ್ಲದೇ ಗ್ಯಾಸ್ ಸಿಲಿಂಡರ್ ಅನ್ನು ಬಳಸದೇ ಇರುವ ಸಂದರ್ಭಗಳಲ್ಲಿ ಯಾವುದೇ ಕಾರಣಕ್ಕೂ ಸಿಲಿಂಡರ್ ನ ರೇಗ್ಯುಲೆಟರ್ ಅನ್ನು ಆಫ್ ಮಾಡುವುದನ್ನು ಮರೆಯಬಾರದು ಮತ್ತು ಸಿಲಿಂಡರ್ ನ ಬಳಿ ಪೆಟ್ರೋಲ್ ಹಾಗೂ ಅಗ್ನಿ ಪ್ರಚೋದಕ ಯಾವುದೇ ವಸ್ತುಗಳನ್ನು ಇಡಬಾರದು ಸಿಲಿಂಡರ್ ನ ಕೊಳವೆಗಳನ್ನು ಆಗಾಗ ಪರೀಕ್ಷೆ ಮಾಡುತ್ತಿರಬೇಕು ಯಾಕಂದ್ರೆ ಜಿರಲೆ ಸೇರಿದಂತೆ ಇನ್ನಿತರೆ ಕ್ರಿಮಿ ಕೀಟಗಳು ಅವುಗಳನ್ನು ಕಡಿದು ಹಾಳು ಮಾಡುವ ಸಾಧ್ಯತೆ ಇರುತ್ತದೆ

ಇನ್ನೂ ಗ್ಯಾಸ್ ಲೀಕ್ ಆಗಿದೆ ಎಂದು ನಿಮಗೆ ಸಂಶಯ ಬಂದಲ್ಲಿ ಅಥವಾ ಗ್ಯಾಸ್ ಲೀಕ್ ಆಗಿರುವುದು ಖಾತ್ರಿಯಾದಲ್ಲಿ ಮೊದಲು ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ತೆಗೆಯಬೇಕು ಮತ್ತು ಮೊದಲು ಗ್ಯಾಸ್ ನ ರೇಗ್ಯುಲೆಟರ್ ಅನ್ನು ಆಫ್ ಮಾಡಬೇಕು ಅಪ್ಪಿ ತಪ್ಪಿಯೂ ಕೂಡ ಎಲೆಕ್ಟ್ರಾನಿಕ್ ಸ್ವಿಚ್ ಗಳನ್ನು ಆನ್ ಮಾಡಬಾರದು

Leave A Reply

Your email address will not be published.