ದೇಹಕ್ಕೆ ಬಲ ನೀಡುವ ಪವರ್ ಪುಲ್ ಮನೆಮದ್ದು

0 9

ಸಾಮಾನ್ಯವಾಗಿ ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಜನರನ್ನು ಕಾಡುವಂತಹ ಒಂದು ಸಮಸ್ಯೆ ಎಂದರೆ ಅದು ನರಗಳ ಬಲಹೀನತೆ ಸರಿ ಸುಮಾರು ಜನರಲ್ಲಿ ನಾವು ಈ ಸಮಸ್ಯೆಯನ್ನು ಕಾಣಬಹುದಾಗಿದೆ ಇಂದಿನ ಆಧುನಿಕ ಜೀವನ ಶೈಲಿಯ ಕಾರಣದಿಂದಾಗಿ ಸತ್ವವಿಲ್ಲದ ನಮ್ಮ ಆಹಾರ ಕ್ರಮಗಳಿಂದಾಗಿ ನಮ್ಮ ನರಗಳು ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಶಕ್ತಿಯನ್ನು ಕಳೆದುಕೊಂಡು ಬಲಹೀನತೆಗೆ ತುತ್ತಾಗುತ್ತವೆ ಮತ್ತು ಈ ರೀತಿಯ ನರಗಳ ಬಲಹೀನತೆಯನ್ನು ನಾವು ಮಧುಮೇಹ ಕಾಯಿಲೆ ಇರುವ ಜನರಲ್ಲಿ ಹೆಚ್ಚಾಗಿ ಕಾಣಬಹುದಾಗಿದೆ ಹೀಗೆ ನರದೌರ್ಬಲ್ಯ ಸಮಸ್ಯೆ ಇರುವವರು ಎಲ್ಲರಂತೆ ಆರಾಮವಾಗಿ ಕೆಳಗೆ ಕೂರಲು ಸಹ ಆಗುವುದಿಲ್ಲ ಕಾಲುಗಳು ಹಿಡಿದುಕೊಂಡ ಹಾಗೆ ರಕ್ತವು ದೇಹದ ಎಲ್ಲ ಜಾಗಗಳಲ್ಲಿ ಪರಿಚಲನೆಯನ್ನು ಕಳೆದುಕೊಂಡ ಹಾಗೆ ದೇಹದಲ್ಲಿರುವ ಸ್ನಾಯುಗಳು ಶಕ್ತಿ ಕುಂದಿದ ಹಾಗೆ ಹೀಗೆ ಎಲ್ಲಾ ರೀತಿಯಲ್ಲಿಯೂ ಸಹ ತಾವು ನೋವುಗಳನ್ನು ಅನುಭವಿಸುತ್ತಿರುತ್ತಾರೆ

ಆದರೆ ನಾವು ಈ ಕೆಳಗೆ ಹೇಳಲಾಗಿರುವ ಕೆಲವು ದಿನನಿತ್ಯದ ನಿಮ್ಮ ಅಭ್ಯಾಸಗಳನ್ನು ಬದಲಾವಣೆ ಮಾಡಿಕೊಳ್ಳುವುದರಿಂದ ಮತ್ತು ಕೆಲವು ಪಾನೀಯಗಳನ್ನು ದಿನನಿತ್ಯ ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ನರಗಳ ಬಲಹೀನತೆ ಕಡಿಮೆಯಾಗಿ ಸ್ನಾಯುಗಳಿಗೆ ಶಕ್ತಿಯ ಸಂಚಲನವಾಗುತ್ತದೆ

ನರದೌರ್ಬಲ್ಯ ಸಮಸ್ಯೆ ಇರುವವರು ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಎಳೆ ಬಿಸಿಲಿನಲ್ಲಿ ವ್ಯಾಯಾಮಗಳನ್ನು ಮಾಡುವುದರಿಂದ ಸೂರ್ಯನ ಕಿರಣಗಳಲ್ಲಿ ಇರುವ ವಿಟಮಿನ್ ಡಿ ನ ಕಾರಣದಿಂದಾಗಿ ದೇಹದಲ್ಲಿ ರಕ್ತದ ಸಂಚಲನ ಸರಾಗವಾಗಿ ಆಗುವುದರಿಂದ ನರಗಳ ದೌರ್ಬಲ್ಯ ಗುಣವಾಗುತ್ತದೆ

ಇನ್ನೂ ಅಶ್ವ ಗಂಧದ ಪುಡಿಯನ್ನು ಅದರ ಜೊತೆಗೆ ಒಂದಷ್ಟು ಕಲ್ಲು ಸಕ್ಕರೆಯ ಪುಡಿಯನ್ನು ಮಿಶ್ರಣ ಮಾಡಿ ಇಟ್ಟುಕೊಂಡು ಪ್ರತಿನಿತ್ಯ ಎರಡು ಬಾರಿ ಉಗುರು ಬೆಚ್ಚಗಿನ ಹಾಲಿನೊಂದಿಗೆ ಒಂದು ಚಮಚ ಸೇರಿಸಿ ನಿಯಮಿತವಾಗಿ ಕುಡಿಯುತ್ತಾ ಬಂದರೆ ಕ್ರಮೇಣ ನರಗಳ ಬಲಹೀನತೆ ಕಡಿಮೆಯಾಗುತ್ತದೆ ಇನ್ನೂ ಸಕ್ಕರೆ ಕಾಯಿಲೆ ಇರುವವರು ಕಲ್ಲು ಸಕ್ಕರೆಯ ಬದಲಾಗಿ ಹಳೆಯ ಬೆಲ್ಲದ ಪುಡಿಯನ್ನು ಬಳಸುವುದು ಒಳಿತು ಮತ್ತು ನರಗಳ ಬಲಹೀನತೆಗೆ ಇದೊಂದು ಅತ್ಯುತ್ತಮ ಉಪಾಯವಾಗಿದೆ

ಅಲ್ಲದೇ ನರಗಳ ದೌರ್ಬಲ್ಯತೆ ಇರುವವರು ಪ್ರತಿನಿತ್ಯ ಕೆನೆಬರಿತ ಹಾಲನ್ನು ಸೇವಿಸುವುದು ಕೂಡಾ ಒಳಿತು ಯಾಕಂದ್ರೆ ಹಾಲಿನಲ್ಲಿ ಕ್ಯಾಲ್ಸಿಯಮ್ ಇರುವ ಕಾರಣ ದೇಹಕ್ಕೆ ಬೇಕಾದ ಕ್ಯಾಲ್ಸಿಯಮ್ ಅನ್ನು ಹಾಲು ಒದಗಿಸುವುದಲ್ಲದೆ ನರಗಳ ಬಲಹೀನತೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುತ್ತದೆ ಹಾಗೂ ಒಂದು ಗ್ಲಾಸ್ ಉರುಗು ಬೆಚ್ಚಗಿನ ನೀರಿನಲ್ಲಿ ಅರ್ಧ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಒಂದು ಚಿಟಿಕೆ ಅರಿಶಿನದ ಪುಡಿಯನ್ನು ಸೇರಿಸಿ ಅದರ ಜೊತೆಗೆ ಒಂದು ಚಮಚ ಜೇನು ತುಪ್ಪವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಾ ಬಂದರೆ ಕ್ರಮೇಣ ನರಗಳ ಬಲಹೀನತೆ ಕಡಿಮೆಯಾಗುತ್ತದೆ

ಇನ್ನೂ ಪ್ರತಿನಿತ್ಯ ಕುಡಿಯುವ ಹಾಲಿನಲ್ಲಿ ಒಂದು ಚಿಟಿಕೆ ಅರಿಶಿನದ ಪುಡಿಯನ್ನು ಬೆರೆಸಿ ಕುಡಿಯುವುದರಿಂದಲೂ ಕೂಡಾ ನರಗಳು ಬಲವನ್ನು ಪಡೆಯುತ್ತವೆ ಜೊತೆಗೆ ಪ್ರತಿನಿತ್ಯ ವ್ಯಾಮಗಳ ಜೊತೆಗೆ ಸಹಜವಾದ ಒಂದು ಸುದೀರ್ಗ ನಡಿಗೆ ನಡೆಯುವುದರಿಂದಲೂ ದೇಹಕ್ಕೆ ರಕ್ತದ ಸಂಚಲನ ಸರಿಯಾಗಿ ಆಗಿ ನರಗಳು ಸ್ವಲ್ಪ ಮಟ್ಟಿಗೆ ಬಲವನ್ನು ಪಡೆಯುತ್ತವೆ

Leave A Reply

Your email address will not be published.