ಬಡತನವನ್ನು ಮೆಟ್ಟಿನಿಂತು 21ನೇ ವಯಸ್ಸಿನಲ್ಲೇ ಐಎಎಸ್ ಅಧಿಕಾರಿಯಾದ ಆಟೋ ಚಾಲಕನ ಮಗ

0 7

ಸಾಧಿಸುವವನಿಗೆ ಛಲವೊಂದಿದ್ದರೆ ಏನನ್ನ ಬೇಕಾದರೂ ಸಾಧನೆ ಮಾಡುತ್ತಾರೆ ಅನ್ನೋದಕ್ಕೆ ಈ ವ್ಯಕ್ತಿಯೇ ಉತ್ತಮ ಉದಾಹರಣೆ ಎನ್ನಬಹುದಾಗಿದೆ, ಹೌದು ಸಾಧನೆ ಅನ್ನೋದು ಸುಲಭವಾಗಿ ಸಿಗುವಂತ ಕೈ ತುತ್ತು ಅಲ್ಲ ಅದಕ್ಕೆ ಅದರದ್ದೆಯಾದ ಶ್ರಮ ವಹಿಸಬೇಕು ಹಾಗೂ ಅಂತಹ ಅಧಿಕಾರವನ್ನು ಇಂದಿನ ದಿನಗಳಲ್ಲಿ ಪಡೆಯಲು ಹೆಚ್ಚು ಶ್ರಮದ ಜೊತೆಗೆ ಅದೃಷ್ಟ ಇರಬೇಕು ಅನ್ನೋದನ್ನ ಹೇಳಲಾಗುತ್ತದೆ, ಆದ್ರೆ ಈ ವ್ಯಕ್ತಿ ಅತಿ ಕಿರಿಯ ವಯಸ್ಸಿನಲ್ಲಿ ಅಂದರೆ 21 ನೇ ವರ್ಷಕ್ಕೆ ಐಎಎಸ್ ಅದಿಕಾರಿಯಾಗುತ್ತಾರೆ ಅಂದರೆ ನಿಜಕ್ಕೂ ಇವರ ಈ ಸಾಧನೆಗೆ ಮೆಚ್ಚಲೇ ಬೇಕು.

ತಮ್ಮ ಬಡತವನ್ನು ಮೆಟ್ಟಿ ನಿಂತು ಆ ವಯಸ್ಸಿನಲ್ಲೇ ಹೆಚ್ಚಿನ ಶ್ರಮವಯಸಿ ಯುಪಿಎಸ್ಸಿ ಪರೀಕ್ಷೆಯಲ್ಲಿ 361 ನೇ ಸ್ಥಾನದೊಂದಿಗೆ ಅಖಿಲ ಭಾರತ ಶ್ರೇಯಾಂಕವನ್ನು ಗಳಿಸಿದ್ದಾರೆ, ಇಷ್ಟಕ್ಕೂ ಇವರ ಯಾರು ಇವರ ಸಾಧನೆಯಾ ಹಾದಿ ಹೇಗಿತ್ತು ಅನ್ನೋದರ ಬಗ್ಗೆ ತಿಳಿಯೋಣ. ಹೆಸರು ಅನ್ಸಾರ್ ಅಹ್ಮದ್ ಶೇಖ್ ಎಂಬುದಾಗಿ ಇವರ ವಯಸ್ಸು 21 ಆಗಿದ್ದು ಇವರು ಮುಸ್ಲಿಂ ಕುಟುಂಬದ ವ್ಯಕ್ತಿ ತಂದೆ ವೃತ್ತಿಯಲ್ಲಿ ರಿಕ್ಷಾ ಚಾಲಕ ಮಹಾರಾಷ್ಟ್ರದ ಜಲ್ನಾ ಗ್ರಾಮದವರು ಆಗಿದ್ದು, ಮನೆಯಲ್ಲಿ ಆರ್ಥಿಕ ಪರಿಸ್ತಿಸ್ತಿ ಅಷ್ಟೊಂದು ಚೆನ್ನಾಗಿರಲಿಲ್ಲಅದರ ನಡುವೆಯೂ ಯಾವುದನ್ನೂ ಲೆಕ್ಕಿಸದೆ ಎಲ್ಲವು ಕೂಡ ತಮ್ಮ ಜೀವನಕ್ಕೆ ಸ್ಪ್ರೂರ್ತಿ ಎಂಬುದಾಗಿ ತಿಳಿದು ತಮ್ಮ ಸ್ಸಾದನೆಯ ಹಾದಿಯ ಕಡೆ ಹೆಚ್ಚು ಗಮನ ಹರಿಸುತ್ತಿದ್ದರು.

ಅನ್ಸರ್ ಅವರು ಪುಣೆಯ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನದಲ್ಲಿ ಬಿ. ಎ ಯ ಪ್ರತಿಷ್ಠಿತ ಕಾಲೇಜು ಕೋರ್ಸ್‌ ಮಾಡಿದ್ದರು, ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸ್ ಆಗಲು ಸತತ 12 ಗಂಟೆಗಳ ಕಾಲ ಪರೀಕ್ಷೆಗಾಗಿ ತಯಾರಿ ಆಗುತ್ತಿದ್ದರು ಜೊತೆಗೆ ಓದಿನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು, ಇಂದಿನ ಕಾಲದಲ್ಲಿ ಎಲ್ಲವು ಇದ್ದು ಕೂಡ ಓದಿನ ಕಡೆ ಹೆಚ್ಚು ಗಮನ ಕೊಡದೆ ಇರುವಂತವರ ಮಧ್ಯೆ ಇಂಥವರು ಇರೋದು ನಿಜಕ್ಕೂ ಮೆಚ್ಚಲೇ ಬೇಕು ಇವರ ಸಾಧನೆ ಇಂದಿನ ಯುವಕ ಯುವತಿಯರಿಗೆ ಸ್ಪೂರ್ತಿಯಾಗಿದೆ.

ಹಲವು ಕಷ್ಟಗಳನ್ನು ಮೆಟ್ಟಿನಿಂತು ಉತ್ತಮ ಹುದ್ದೆಯನ್ನು ಪಡೆದಂತ ಈ ವ್ಯಕ್ತಿಗೆ ನಮ್ಮ ಕಡೆಯಿಂದ ಒಂದು ಸಲ್ಯೂಟ್ ಹಾಗೂ ಬಡವರು ಹಾಗೂ ಆರ್ಥಿಕವಾಗಿ ದುರ್ಬಲ ಇರುವಂತ ವ್ಯಕ್ತಿಗಳಿಗಾಗಿ ಹೆಚ್ಚಿನ ಕೆಲಸ ಮಾಡಲಿ ಅನ್ನೋದೇ ನಮ್ಮ ಆಶಯ.

Leave A Reply

Your email address will not be published.