ಭಾರತದಲ್ಲಿ ಕೆಲವೊಬ್ಬರು ತಾವು ಹುಟ್ಟಿರುವುದೇ ಸಮಾಜ ಸೇವೆ ಮಾಡಲಿಕ್ಕೆ ಎಂದು ಭಾವಿಸಿರುತ್ತಾರೆ ಕೆಲವೊಬ್ಬರು ತಮ್ಮಲ್ಲಿರುವ ಅಧಿಕ ಹಣದಿಂದ ಜನರ ಕಷ್ಟಗಳನ್ನು ಕೇಳುತ್ತಾ ಅವುಗಳನ್ನು ನೀಗಿಸುತ್ತಾ ಬರುತ್ತಾರೆ, ಆದರೆ ಇನ್ನೂ ಹಲವರಿಗೆ ತಾವು ಸಮಾಜ ಸೇವೆ ಮಾಡಬೇಕೆಂದುಕೊಂಡರೂ ತಮ್ಮಲ್ಲಿ ಬಡತನದ ಕಾರಣ ಅವರನ್ನು ಯಾರೂ ಸಹ ಗುರುತಿಸುವುದಿಲ್ಲ. ಆದರೆ ನಮ್ಮ ಭಾರತ ಸರ್ಕಾರವು ನಡೆಸುವ ನಾಗರಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಭಾರತಾಂಬೆಯ ಸೇವೆಯನ್ನು ಮಾಡಲು ಮತ್ತು ಭಾರತದ ಅತ್ಯುನ್ನತ ಹುದ್ದೆಯನ್ನು ಅಲಂಕರಿಸುವುದಲ್ಲದೇ ಜನಗಳ ಸೇವೆಯನ್ನು ಮಾಡಲು ಮುಂದಾಗುವವರಿದ್ದಾರೆ, ಹೀಗೆ ನಮ್ಮ ಭಾರತ ಸರ್ಕಾರವು ನಡೆಸುವಂತಹ ಲೋಕ ಸೇವ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ತಮ್ಮನ್ನು ತಾವು ಜನಗಳ ಸೇವೆ ಮಾಡುವುದರಲ್ಲಿ ತೊಡಗಿಸಿಕೊಂಡವರಲ್ಲಿ ನಮ್ಮ ಕರ್ನಾಟಕದವರೆ ಆದ ಶಿಲ್ಪಾ ಪ್ರಭಾಕರ್ ಕೂಡ ಒಬ್ಬರು.

ಹೌದು ಮೂಲತಃ ಕರ್ನಾಟಕದವರಾದ ಶಿಲ್ಪಾ ಪ್ರಭಾಕರ್ ಪ್ರಸ್ತುತ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಷ್ಟೇ ಆದರೂ ನಮ್ಮ ಕರ್ನಾಟಕದ ಮಹಿಳೆಯೋರ್ವರು ತಮಿಳುನಾಡಿನಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸುವುದು ಎಂದರೆ ತಮಾಷೆಯ ಮಾತಲ್ಲ ಅಲ್ಲದೇ ಒಬ್ಬ ಜಿಲ್ಲಾಧಿಕಾರಿಗೆ ಇರುವಂತಹ ಜವಾಬ್ದಾರಿಗಳೂ ಅಷ್ಟೇ ತುಂಬಾ ಮಹತ್ವವಾದುವು ಆದರೇ ಈ ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಅವರು ತಮ್ಮ ಜಿಲ್ಲೆಯಲ್ಲಿ ಬಹಳಷ್ಟು ಜನ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಗೆ ದಾಖಲಾದವರನ್ನು ಮತ್ತು ಅನಾರೋಗ್ಯ ಪೀಡಿತರಾಗಿ ಸಾವಿಗೀಡಾದವರನ್ನು ಕಂಡು ಈ ಸಮಸ್ಯೆಗೆ ಮೂಲ ಕಾರಣ ಮತ್ತು ಪರಿಹಾರ ಕ್ರಮಗಳ ಬಗ್ಗೆ ಎಚ್ಚರ ವಹಿಸಲು ಪ್ರಯತ್ನಿಸಿದ್ದಾರೆ.

ಮೊದಲಿಗೆ ಅವರು ಹಳ್ಳಿಗಳಲ್ಲಿನ ನೀರಿನ ಟ್ಯಾಂಕ್ ಗಳ ಮತ್ತು ಇನ್ನೂ ಹಲವಾರು ನೀರಿನ ಮೂಲಗಳನ್ನು ಪರೀಕ್ಷಿಸಲು ಮುಂದಾಗಿದ್ದಾರೆ ಆದರೇ ಅವರು ಈ ರೀತಿಯ ಪರೀಕ್ಷೆ ನಡೆಸುವಾಗ ಸಿಬ್ಬಂದಿಗಳು ಎಲ್ಲ ನೀರಿನ ಮೂಲಗಳು ಮತ್ತು ನೀರಿನ ದೊಡ್ಡ ದೊಡ್ಡ ಟ್ಯಾಂಕ್ ಎಲ್ಲವೂ ಬಹಳಷ್ಟು ಸ್ವಚ್ಛತೆಯಿಂದ ಕೂಡಿರುವುದಾಗಿ ಮಾಹಿತಿ ನೀಡಿದ್ದಾರೆ, ಆದರೇ ಅವರ ಮಾಹಿತಿಯನ್ನು ನಂಬದ ಶಿಲ್ಪಾ ಪ್ರಭಾಕರ್ ಅವರು ಸುಮಾರು 140 ಅಡಿಗಳಷ್ಟು ಎತ್ತರವಿರುವ ನೀರು ಶೇಖರಣೆಯ ಒಂದು ದೊಡ್ಡ ಟ್ಯಾಂಕ್ ನ ಮೆಲೇರಿದ್ದಾರೆ, ಅಲ್ಲದೇ ಆ ಟ್ಯಾಂಕ್ ನ ಸ್ವಚ್ಚತೆಯನ್ನು ಸ್ವತಃ ತಾವೇ ಪರೀಕ್ಷಿಸಿ ಅಲ್ಲಿರುವ ಕಲ್ಮಶವನ್ನು ಆದಷ್ಟು ಬೇಗ ಸ್ವಚ್ಚಗೊಳಿಸಬೇಕಾಗಿ ಹೇಳಿದ್ದಾರೆ ಆಗದಿದ್ದಲ್ಲಿ ಟ್ಯಾಂಕ್ ನ್ನು ಸ್ವಚ್ಚಗೊಳಿಸುವ ಸಿಬ್ಬಂದಿಗಳನ್ನು ಕೆಲಸದಿಂದ ತೆರವುಗೊಳಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಅದೊಂದೇ ಅಲ್ಲದೇ ಶಿಲ್ಪಾ ಪ್ರಭಾಕರ್ ಆ ದಿನ ಮತ್ತೊಂದು ಇದೆ ರೀತಿಯ ನೀರಿನ ಟ್ಯಾಂಕ್ ಅನ್ನು ಹತ್ತಿ ಪರಿಶೀಲಿಸಿದ್ದಾರೆ ಎಷ್ಟೇ ಆದರೂ ಗಂಡಸರೆ ಹತ್ತಲು ಹೆದರುವ ಅಷ್ಟು ಎತ್ತರದ ಟ್ಯಾಂಕ್ ಅನ್ನು ಮಹಿಳೆಯಾಗಿ ಶಿಲ್ಪಾ ಪ್ರಭಾಕರ್ ಅವರು ಹತ್ತಿ ಪರಿಶೀಲಿಸಿರುವುದು ಒಂದು ಸಾಧನೆಯೇ ಸರಿ ಮತ್ತು ಅದು ಅವರ ಕರ್ತವ್ಯ ನಿಷ್ಠೆಯನ್ನು ಪ್ರತಿನಿಧಿಸುತ್ತದೆ, ಅಷ್ಟೇ ಅಲ್ಲದೇ ಈ ಮುಂಚೆ ಅಂತಹ ಎತ್ತರದ ಟ್ಯಾಂಕ್ ಅನ್ನು ತಾವು ಎಂದು ಹತ್ತಿಲ್ಲ ಎಂಬುದನ್ನೂ ಸಹ ಶಿಲ್ಪಾ ಸ್ಪಷ್ಟಪಡಿಸಿದ್ದಾರೆ ಮತ್ತು ನೀರಿನ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮುಡಿಸುವಲ್ಲಿ ಅವರು ಮುಂದಾಗಿದ್ದಾರೆ ಎಷ್ಟೇ ಆದರೂ ಇಂತಹ ಒಬ್ಬ ಮಹಿಳೆ ಕರ್ನಾಟಕದವರು ಎಂಬುದೇ ಒಂದು ನಾವು ಹೆಮ್ಮೆ ಪಾಡಬೇಕಾದಂತಹ ವಿಷಯವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!