ರಸ್ತೆ ಬದಿ ಹಣ್ಣು ಮಾರಿ ಕನ್ನಡ ಶಾಲೆ ಕಟ್ಟಿಸಿದ ಬಡ ಹಣ್ಣು ವ್ಯಾಪಾರಿ

0 5

ಸಾಮಾನ್ಯವಾಗಿ ಬಡತನ ಎನ್ನುವುದು ಶಾಪವಲ್ಲ ಅದೊಂದು ವರ ಯಾಕಂದ್ರೆ ಎಲ್ಲರೂ ಬಡವರಾಗಿ ಬಾಳ್ವೆ ನಡೆಸುವುದಕ್ಕೆ ಅರ್ಹರಲ್ಲ ಇಂದಿಗೂ ಕೂಡ ನಮ್ಮ ಭಾರತದಲ್ಲಿ ಅದೆಷ್ಟೋ ಜನ ತಿನ್ನಲು ಒಂದೊತ್ತಿನ ಊಟವೂ ಕೂಡ ಇಲ್ಲದೆ ಕಿತ್ತು ತಿನ್ನುವ ಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆ, ಯಾವ ಸರ್ಕಾರವೂ ಕೂಡ ಅದನ್ನು ಈ ವರೆಗೆ ಗಮನಿಸಿಲ್ಲ ಅದರ ಅವಶ್ಯಕತೆಯೂ ಕೂಡ ಸರ್ಕಾರಕ್ಕೆ ಇಲ್ಲ ಅನಿಸುತ್ತದೆ ಬಿಡಿ. ಆದರೆ ಬಡವರ ಗೋಳು ಕೇಳುವವರ್ಯಾರು ಮೇಲು ಕೀಲುಗಳೆಂಬ ಜಾತೀಯತೆಯೇ ಸಮಾಜದಲ್ಲಿ ಸುತ್ತುವರೆದಿರುವಾಗ ಸರ್ಕಾರ ಎಲ್ಲಿ ತಾನೇ ಬಡವರ ಬಗ್ಗೆ ಗಮನ ಹರಿಸಲು ಸಾಧ್ಯ, ಹೌದು ಹಲವಾರು ಜನ ಬಡವರು ತಮ್ಮ ದಿನ ನಿತ್ಯದ ಒಂದು ತುತ್ತಿನ ಅನ್ನಕ್ಕಾಗಿ ಎಂತೆಂತದೋ ಕೆಲಸಗಳನ್ನು ಮಾಡಿಕೊಂಡು ಸ್ವಾಭಿಮಾನದಿಂದ ಬಾಳ್ವೆ ನಡೆಸುವವರಿದ್ದಾರೆ. ಆದರೆ ಇಲ್ಲೊಬ್ಬ ಬಡವ ಹಣ್ಣು ಮಾರುವ ಒಬ್ಬ ಸಾಮಾನ್ಯ ಯಾರೂ ಮಾಡದಂತಹ ಅಸಾಮಾನ್ಯ ಸಾಧನೆಯನ್ನು ಮಾಡಿದ್ದಾನೆ.

ಹೌದು ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಗ್ರಾಮದ ಹಾಜಬ್ಬ ಎನ್ನುವ ವ್ಯಕ್ತಿಯು ಈ ಸಾಧನೆಯನ್ನು ಮಾಡಿದ್ದಾರೆ ಕಿತ್ತು ತಿನ್ನುವ ಬಡತನವಿರುವ ಒಬ್ಬ ಸಾಮಾನ್ಯ ಕಿತ್ತಳೆ ಹಣ್ಣುಗಳನ್ನು ಮಾರುವ ಬಡವ ಒಂದು ಶಾಲೆಯನ್ನೇ ಕಟ್ಟಿಸಿದ್ದಾನೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ದಲ್ಲಿ ಕಡು ಬಡತನದಲ್ಲಿಯೇ ಜನಿಸಿದ ಹರೇಕಳ ಹಾಜಬ್ಬ ಶಾಲೆಯ ಮೆಟ್ಟಿಲನ್ನೇ ಏರಿಲ್ಲವಂತೆ, ಯಾಕಂದ್ರೆ ಅಷ್ಟೊಂದು ಬಡತನ ಅವರಲ್ಲಿತ್ತಂತೆ ಮೊದಲಿಗೆ ಬೀಡಿಗಳನ್ನು ಕಟ್ಟಿ ತಮ್ಮ ಜೀವನ ಸಾಗಿಸುತ್ತಿದ್ದ ಹಾಜಬ್ಬ ನಂತರದಲ್ಲಿ ಮಂಗಳೂರಿಗೆ ಹೋಗಿ ಹಣ್ಣುಗಳನ್ನು ತಂದು ಬುಟ್ಟಿಯಲ್ಲಿ ಇಟ್ಟುಕೊಂಡು ಮಾರಲು ಶುರು ಮಾಡಿದ್ದಾರೆ. ಆನಂತರದಲ್ಲಿ ಅವರಿಗೆ ಬಂದ ಯೋಚನೆಯೇ ತಾನು ಓದದಿದ್ದರು ಪರವಾಗಿಲ್ಲ ತನ್ನೂರಿನ ಮಕ್ಕಳು ಚೆನ್ನಾಗಿ ಓದಬೇಕು ಕಲಿಯಬೇಕು ಎಂದು ಮನಸ್ಸು ಮಾಡಿದ ಈ ವ್ಯಕ್ತಿ ಸರ್ಕಾರಿ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಜನರಿಂದ ಅದನ್ನು ಬಿಡಿಸಿಕೊಂಡು ಆ ಜಾಗದಲ್ಲಿ ತಾನು ಹಣ್ಣು ಮಾರಿ ಸಂಪಾದಿಸಿದ ಹಣದಿಂದ ಅಲ್ಲೊಂದು ಕನ್ನಡ ಶಾಲೆಯನ್ನು ತೆರೆದು ಅದನ್ನು ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಿ ಸಾಧನೆ ಗೈದಿದ್ದಾರೆ.

ಅಷ್ಟೇ ಅಲ್ಲದೇ ಇವರ ಈ ಸಾಧನೆಯನ್ನು ಗುರುತಿಸಿದ ನಮ್ಮ ಭಾರತ ಸರ್ಕಾರವು ಇವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ರಾಷ್ಟ್ರ ಪತಿಗಳಿಂದ ಗೌರವ ಸಮರ್ಪಣೆಗೆ ಪಾತ್ರರಾಗುವಂತೆ ಮಾಡಿದೆ, ಕನ್ನಡ ಶಾಲೆಗಳನ್ನು ಕೇಳುವವರೇ ಇಲ್ಲದಿರುವ ಈ ಕಾಲದಲ್ಲಿ ಕೋಟಿ ಹಣವಿದ್ದರೂ ಸಹ ಒಬ್ಬರಿಗೂ ದಾನ ಮಾಡದೇ ತಮ್ಮ ಮಕ್ಕಳ ಕಾಲಕ್ಕೆ ಮೊಮ್ಮಕ್ಕಳ ಕಾಲಕ್ಕೆ ಆಗುವಷ್ಟು ಸಂಪಾದಿಸುವ ದುರಾಸೆ ಹೊಂದಿರುವ ಜನರಿರುವ ಈ ಜಗತ್ತಿನಲ್ಲಿ ಒಬ್ಬ ಕಡು ಬಡವ ಹಣ್ಣಿನ ವ್ಯಾಪಾರಿಯ ಈ ಸಾಧನೆ ಶ್ಲಾಘನೀಯ.

Leave A Reply

Your email address will not be published.