ಹತ್ತು ತಿಂಗಳ ಬಳಿಕ ಶಾಲೆಗಳು ಓಪನ್ ಆಗುತ್ತಾ?

0 0

ಕೋರೋನ ಆರಂಭವಾಗಿ ಈಗಾಗಲೇ ಒಂದು ವರ್ಷ ಆಗುತ್ತಾ ಬಂದಿದೆ. ಕೋರೋನ ಆರಂಭವಾದ ಕಾಲದಿಂದ ಹಿಡಿದು ಇಲ್ಲಿಯವರೆಗೂ ಕೂಡ ಯಾವುದೆ ಶಾಲಾ ಕಾಲೇಜುಗಳನ್ನು ಆರಂಭಿಸಲು ಆಗಲಿಲ್ಲ. ವಿದ್ಯಾರ್ಥಿಗಳ ಭವಿಷ್ಯವನ್ನು ನೆನಪಿನಲ್ಲಿಟ್ಟುಕೊಂಡು ಅವರ ಮುಂದಿನ ಭವಿಷ್ಯಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಆನ್ಲೈನ್ ಕ್ಲಾಸ್ ಗಳನ್ನು ಆರಂಭಿಸಲಾಗಿತ್ತು. ಆದರೆ ಇತ್ತೀಚೆಗೆ ಎಲ್ಲ ಶಾಲಾ-ಕಾಲೇಜುಗಳನ್ನು ಆರಂಭಿಸಬೇಕು ಎನ್ನುವ ಮಾತುಕತೆ ನಡೆಯುತ್ತಿದ್ದು , ಆನ್ಲೈನ್ ಕ್ಲಾಸ್ ಗಳಿಗೆ ಮುಕ್ತಾಯ ಹಾಡಿ ಮತ್ತೆ ವಿದ್ಯಾರ್ಥಿಗಳು ಪಠ್ಯಪುಸ್ತಕ ಹಾಗೂ ಬ್ಯಾಗುಗಳ ಮುಖ ನೋಡುವಂತಾಗಿದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯದ ಹಾಗೆಯ ಕರ್ನಾಟಕದಲ್ಲಿಯೂ ಕೂಡ ಶಾಲೆಗಳನ್ನು ತೆರೆಯಲು ನಿರ್ಧಾರ ಮಾಡಲಾಗಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಶಾಲೆಗಳನ್ನು ಆರಂಭಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡು ರಾಜ್ಯಗಳಲ್ಲಿ ಈಗಾಗಲೇ ಶಾಲೆಗಳು ಆರಂಭಗೊಂಡಿದ್ದು ರಾಜಸ್ಥಾನದಲ್ಲಿ ಕೂಡ ಇನ್ನೇನು ಶಾಲೆ ಆರಂಭವಾಗಲಿದೆ. ಅದೇ ರೀತಿ ಕರ್ನಾಟಕದಲ್ಲಿ ಶಾಲೆಗಳನ್ನು ಆರಂಭಿಸಲು ಯೋಚಿಸಲಾಗಿದೆ. ಶಾಲೆಗಳ ಆರಂಭದ ಕುರಿತು ಇನ್ನೂ ಸರಿಯಾದ ನಿರ್ಧಾರ ಆಗದೇ ಇರುವುದರಿಂದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಮ್ಯಾರಥಾನ್ ಸಭೆಯನ್ನು ನಡೆಸಲಿದ್ದಾರೆ. ಸ್ವತಹ ಸುರೇಶ್ ಕುಮಾರ್ ಅವರೇ ಖುದ್ದಾಗಿ ಪರಿಸ್ಥಿತಿಗಳನ್ನು ಅವಲೋಕಿಸಿ ವಾಸ್ತವ ಪರಿಸ್ಥಿತಿ ಮಾಹಿತಿಯನ್ನು ಪಡೆಯಲಿದ್ದಾರೆ. ಹಾಗೂ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದರೆ ಮಾತ್ರ ಶಾಲೆಗಳನ್ನು ತೆರೆಯಲಾಗುತ್ತದೆ.

ಇನ್ನು ಶಾಲೆಗಳ ಆರಂಭವಾದ ನಂತರ ಯಾವೆಲ್ಲ ನಿಯಮಗಳು ಇರುತ್ತವೆ ಅಂತ ನೋಡುವುದಾದರೆ ಡಿಗ್ರಿ ಕಾಲೇಜ್ ರೀತಿಯಮಾದರಿಯಲ್ಲಿ ಶಾಲೆಗಳನ್ನು ಆರಂಭಿಸುವ ಸೂಚನೆ ಇದೆ. ಶಾಲೆಗಳನ್ನು ಆರಂಭಿಸಿದರು ಸಲುವಾಗಿ 8 ಹೊಸ ನಿಯಮಗಳನ್ನು ಸಹ ರೂಪಿಸಲಾಗಿದೆ. ಇನ್ನು ಶಿಕ್ಷಕರ ಹಾಜರಾತಿಯನ್ನು ಕಡ್ಡಾಯಗೊಳಿಸಿ ಶಿಕ್ಷಕರು ಪೂರ್ವಭಾವಿ ಸಿದ್ಧತೆ ನಡೆಸಿಕೊಳ್ಳಬೇಕು. ದಿನ ಬಿಟ್ಟು ದಿನಕ್ಕೆ ಶಿಫ್ಟ್ ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಲು ಆಲೋಚಿಸಲಾಗಿದೆ. ಇನ್ನು ಶಾಲೆಗಳ ಆರಂಭಕ್ಕಾಗಿ ಸರ್ಕಾರ ಮಾಡಿರುವಂತಹ ಅಥವಾ ತೆಗೆದುಕೊಂಡಿರುವ ಅಂತಹ ನಿಯಮಗಳು ಏನು ಅಂತ ನೋಡುವುದಾದರೆ ಮೊದಲಿಗೆ ಡಿಸೆಂಬರ್ ಎರಡನೇ ವಾರದಲ್ಲಿ ಶಾಲೆಯನ್ನು ಆರಂಭಿಸಲಾಗುತ್ತದೆ. 2ನೇ ನಿಯಮ ಎಂದರೆ ಮೊದಲಿಗೆ 10ನೇ ತರಗತಿ ಹಾಗೂ ಪಿಯು ಕಾಲೇಜುಗಳನ್ನು ಆರಂಭ ಮಾಡಲಾಗುತ್ತದೆ. ನಂತರ ಹಂತಹಂತವಾಗಿ ಶಾಲೆಗಳನ್ನು ಸಂಪೂರ್ಣವಾಗಿ ಆರಂಭ ಮಾಡಲಾಗುತ್ತದೆ.

ಡಿಗ್ರಿ ಕಾಲೇಜ್ ಮಾದರಿಯಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ ಆದರೆ ಶಾಲೆಗಳ ಆರಂಭವಾಗಿದ್ದರೂ ಪೋಷಕರ ಅನುಮತಿ ಕಡ್ಡಾಯವಾಗಿರುತ್ತದೆ. ನವೆಂಬರ್ 2ರಿಂದ ಅಂದರೆ ಸೋಮವಾರದಿಂದ ಶಿಕ್ಷಕರ ಹಾಜರಾತಿ ಕಡ್ಡಾಯವಾಗಿರುತ್ತದೆ. ಶಾಲೆಗಳು ಆರಂಭವಾದ ನಂತರ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಯಲ್ಲಿ ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು. ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಲ್ಲಿ ಪಾಳಿ ಪದ್ಧತಿಯನ್ನು ಅನುಸರಿಸಬೇಕು. ಬೆಳಿಗ್ಗೆ ಮತ್ತು ಮಧ್ಯಾಹ್ನದ ಅವಧಿಯಲ್ಲಿ ತರಗತಿಯನ್ನು ಮಾಡುವುದು, ದಿನ ಬಿಟ್ಟು ದಿನ ತರಗತಿ ನಡೆಸುವುದಕ್ಕಾಗಿ ಸಹ ಶಿಕ್ಷಣ ಇಲಾಖೆ ಚಿಂತನೆ ನಡೆಸುತ್ತಿದೆ. ಯಾವುದೇ ವಿದ್ಯಾರ್ಥಿಗಳಿಗೂ ಸಹ ಶಾಲೆಗೆ ಬರಲು ಕಡ್ಡಾಯವಾಗಿ ಬರಲೇಬೇಕು ಎಂದು ಒತ್ತಾಯ ಮಾಡುವಂತಿಲ್ಲ. ಇನ್ನು ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳಿಗೂ ಸಹ ಪೋಷಕರ ಅನುಮತಿ ಕಡ್ಡಾಯವಾಗಿರುತ್ತದೆ ಹಾಗೂ ಪೋಷಕರ ಅನುಮತಿ ಇಲ್ಲದೆ ವಿದ್ಯಾರ್ಥಿಗಳನ್ನು ಶಾಲೆಗೆ ಬರಲು ಒತ್ತಾಯ ಮಾಡುವಂತಿಲ್ಲ.

ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕಡ್ಡಾಯಬಾಗಿ ಮಾಸ್ಕ್ ಧರಿಸಲೇಬೇಕು. ಅನಾರೋಗ್ಯದಲ್ಲಿ ಬಳಲುತ್ತಿರುವ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡಲಾಗುವುದು. ಶಾಲೆಗಳಲ್ಲಿ ತರ್ಮಲ್ ಸ್ಕ್ಯಾನಿಂಗ್ ಕಡ್ಡಾಯವಾಗಿ ಮಾಡಲಾಗುವುದು ಹಾಗೂ ಶಾಲೆ ಮುಗಿದ ನಂತರ ಸ್ಯಾನಿಟೈಸ್ ಮಾಡಲೇಬೇಕು. ಶಾಲೆಗಳ ಆವರಣದಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಪಾಲಿಸುವುದು. ವಿದ್ಯಾರ್ಥಿಗಳ ನಡುವೆ ಕನಿಷ್ಠ ಮೂರು ಅಡಿ ಅಂತರ ಕಾಯ್ದುಕೊಳ್ಳುವ ಮೂಲಕ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಶಾಲಾ ಆವರಣಗಳಲ್ಲಿ ಗುಂಪು ಕಟ್ಟದಂತೆ ಎಚ್ಚರವಹಿಸಬೇಕು. ಶೌಚಾಲಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿರಬೇಕು ಹಾಗೂ ಲೈಬ್ರೆರಿಯಲ್ಲಿ ಹೆಚ್ಚು ಮಕ್ಕಳು ಒಂದೇ ಸಮನೆ ಸೇರದಂತೆ ಗಮನವಹಿಸಬೇಕು. ಗುಂಪು ಕ್ರೀಡೆಗಳಿಗೆ ಶಾಲೆಗಳಲ್ಲಿ ಅವಕಾಶ ನೀಡುವಂತಿಲ್ಲ. ಈ ರೀತಿಯ ನಿಯಮಗಳು ಶಾಲೆಗಳ ಆರಂಭವಾಗುವ ಮುಂಚೆ ಸಿದ್ಧವಾಗಿದ್ದು ಎಲ್ಲಾ ನಿಯಮಗಳ ಪ್ರಕಾರ ಮುಖ್ಯಮಂತ್ರಿಗಳು ಶಾಲೆಗಳ ಆರಂಭಕ್ಕೆ ಒಪ್ಪಿಗೆ ನೀಡಬೇಕಾಗಿದೆ ಅಷ್ಟೇ.

Leave A Reply

Your email address will not be published.