2017 ರಲ್ಲಾದ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾ’ಕಿಸ್ತಾನದ ವಿ’ರುದ್ಧ ಬ್ಯಾಟಿಂಗ್ ಮಾಡಿ ಕೊನೆಯಲ್ಲಿ ಭಾರತದ ಟೀಮ್ ಸೋತರು ಅವರ ಬ್ಯಾಟಿಂಗ್ ಎಲ್ಲರ ಮನಸ್ಸನ್ನು ಗೆದ್ದಿರುತ್ತದೆ ಇಂಟರ್ ನ್ಯಾಷನಲ್ ಕ್ರಿಕೆಟ್ ನಲ್ಲಿ ಅವರು ಬೆಳೆಯುತ್ತಾ ಹೋಗುತ್ತಾರೆ ಅವರು ಯಾರೆಂದರೆ ಹಾರ್ದಿಕ್ ಪಾಂಡೆ ಅವರ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಇವರು 11 ಅಕ್ಟೋಬರ್ 1993 ರಲ್ಲಿ ಗುಜರಾತ್ ನ ಸೂರತ್ ನಲ್ಲಿ ಜನಿಸುತ್ತಾರೆ. ಇವರ ತಂದೆ ಹಿಮಾಂಶು ಪಾಂಡೆ ಅವರು ಕಾರಿನ ಫೈನಾನ್ಸ್ ಬಿಸಿನೆಸ್ ನಡೆಸುತ್ತಾರೆ. ಇವರಿಗೆ ಒಬ್ಬ ಅಣ್ಣನಿದ್ದಾನೆ ಸಣ್ಣವರಿದ್ದಾಗಲೇ ಇವರಿಬ್ಬರು ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿರುತ್ತಾರೆ ಇದನ್ನು ನೋಡಿದ ಅವರ ತಂದೆ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದಿದ್ದರೂ ಸೂರತ್ ನಿಂದ ವಡೋದರಕ್ಕೆ ಶಿಫ್ಟ್ ಆಗುತ್ತಾರೆ ಅಲ್ಲಿ ಅವರು ಭಾರತದ ಮಾಜಿ ಕ್ರಿಕೆಟಿಗರಾದ ಕಿರಣ್ ಮೋರೆ ಅವರ ಕ್ರಿಕೆಟ್ ಅಕಾಡೆಮಿಗೆ ಸೇರಿಸುತ್ತಾರೆ. ಹಾರ್ದಿಕ್ ಅವರ ಆಸಕ್ತಿಯನ್ನು ನೋಡಿ ಕಿರಣ್ ಮೋರೆ ಅವರು ಮೂರು ವರ್ಷ ಫ್ರೀ ಆಗಿ ಕ್ರಿಕೆಟ್ ಕೋಚ್ ನೀಡುತ್ತಾರೆ. ಇವರು 9ನೇ ಕ್ಲಾಸ್ ವರೆಗೆ ಮಾತ್ರ ಓದುತ್ತಾರೆ ನಂತರ ಕ್ರಿಕೆಟ್ ಬಗ್ಗೆ ತಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ನಂತರ ಪ್ರೊಫೆಶನಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುತ್ತಾರೆ. ಅವರು ಬರೋಡ ಟೀಮನೊಂದಿಗೆ ಆಡುತ್ತಾರೆ. ನಂತರ ಅವರ ಬ್ಯಾಟಿಂಗ್ ಜನರ ಮನಸ್ಸು ಗೆಲ್ಲುತ್ತದೆ.

ನಂತರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಯ್ಕೆಯಾಗುತ್ತಾರೆ. ಸಿಎಸಕೆ ತಂಡದ ವಿರುದ್ಧ ಆಡಿ ಕೇವಲ 8 ಬಾಲ್ ಗಳಲ್ಲಿ 21 ರನ್ ಗಳನ್ನು ಬಾರಿಸುತ್ತಾರೆ ಇದರಿಂದ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ಎಂಬ ಪ್ರಶಸ್ತಿ ದೊರೆಯುತ್ತದೆ. ನಂತರ ಅವರು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧ ಭಾರತೀಯ ತಂಡದಲ್ಲಿ ಆಡುತ್ತಾರೆ. ಇವರು ಆಲ್-ರೌಂಡರ್ ಆಗಿ ಒಳ್ಳೆಯ ಪರ್ಫಾರಮೆನ್ಸ್ ತೋರಿಸುತ್ತಿದ್ದಾರೆ. ಕಾಫಿ ವಿತ್ ಕರಣ್ ಎಂಬ ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡುವ ಮೂಲಕ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕರಿಂದ ಛೀಮಾರಿಗೆ ಒಳಗಾಗುತ್ತಾರೆ. ಬಿಸಿಸಿಐ ಕೂಡ ಕೆಲವು ಮ್ಯಾಚಗಳನ್ನು ಆಡದಂತೆ ಸಸ್ಪೆಂಡ್ ಮಾಡಿರುತ್ತದೆ. ನಂತರ ಅವರು ತಮ್ಮ ಹೇಳಿಕೆಯಿಂದ ತಪ್ಪಾಗಿದೆ ಎಂದು ಟ್ವೀಟ್ ಮೂಲಕ ಕ್ಷಮೆಯಾಚಿಸಿದರು. ಅವರು 1 ಜನವರಿ 2020 ರಂದು ನತಾಶಾ ಅವರೊಂದಿಗೆ ಎಂಗೇಜ್ ಆಗುತ್ತಾರೆ. ಅವರ ಮನೆಯ ಸ್ಥಿತಿ ಆರ್ಥಿಕವಾಗಿ ಚೆನ್ನಾಗಿಲ್ಲದಿದ್ದರೂ ಅವರ ಪರಿಶ್ರಮದಿಂದ ಇವತ್ತು ಕ್ರಿಕೆಟ್ ಸ್ಟಾರ್ ಗಳಲ್ಲಿ ಒಬ್ಬರಾಗಿದ್ದಾರೆ. ಕ್ರಿಕೆಟ್ ನಲ್ಲಿ ಹೆಚ್ಚು ಅವಕಾಶಗಳು ಸಿಗಲಿ ಹಾಗೂ ಅವರ ಮುದ್ದಾದ ಮಗುವಿನೊಂದಿಗೆ ಸಂತೋಷವಾಗಿರಲಿ ಎಂದು ಹಾರೈಸೋಣ. ಈ ಮಾಹಿತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಪ್ಪದೇ ತಿಳಿಸಿ.

Leave a Reply

Your email address will not be published. Required fields are marked *