ಅರ್ಧ ಗಂಟೆಯ ಕಾಲ ಆಂಜನೇಯನ ಗುಡಿಗೆ ತಲೆಯಿಟ್ಟು ನಿಂತ ಕುದುರೆಯ ಸ್ಟೋರಿ

0 0

ಸಾಮಾನ್ಯವಾಗಿ ಮಾನವರೆಲ್ಲ ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುವುದು, ದೇವಸ್ಥಾನಕ್ಕೆ ಹೋಗುವುದು ಸಹಜ. ಇದರಲ್ಲಿ ಆಶ್ಚರ್ಯ ಪಡುವಂತಹ ವಿಷಯ ಏನೂ ಇಲ್ಲ. ಆದರೆ ಪ್ರಾಣಿಗಳು ಸಹ ನಮ್ಮ ಹಾಗೆಯೇ ಭಕ್ತಿ ಭಾವದಿಂದ ದೇವರಿಗೆ ನಮಸ್ಕರಿಸುತ್ತವೆ ಎಂದರೆ ಇದು ಸ್ವಲ್ಪ ಆಶ್ಚರ್ಯದ ವಿಚಾರವೇ. ಬಾಗಲಕೋಟೆಯ ಸಮೀಪದಲ್ಲಿ ಕುದುರೆ ಒಂದು ಆಂಜನೇಯನ ಗುಡಿಗೆ ತಲೆಯಿಟ್ಟು 20 ನಿಮಿಷಗಳ ಕಾಲ ನಿಂತಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತಿದ್ದು, ಇದರ ಕುರಿತಾಗಿ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಈ ಒಂದು ಘಟನೆ ನಡೆದಿದ್ದು ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದ ಪುನರ್ ವಸತಿ ಕೇಂದ್ರದ ಸಮೀಪವಿರುವ ದೇವಸ್ಥಾನದ ಬಳಿಯಾಗಿದೆ. ಇಲ್ಲಿರುವ ಆಂಜನೇಯನ ಗುಡಿಯ ಮುಂದೆ ಕುದುರೆ ಪ್ರಾರ್ಥನೆ ಮಾಡುವ ರೀತಿಯಲ್ಲಿ ನಿಂತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗಿದೆ. ಇಲ್ಲಿರುವ ಪುಟ್ಟ ಆಂಜನೇಯ ಸ್ವಾಮಿ ಗುಡಿಗೆ ಕುದುರೆ ತಲೆ ಕೊಟ್ಟು ಪ್ರಾರ್ಥನೆ ಮಾಡುವ ರೀತಿಯಲ್ಲಿ ಸರಿಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ನಿಂತು ಕೊಂಡಿದೆ. ಕುದುರೆ ದೇವರ ಗುಡಿಯ ಕಟ್ಟಡಕ್ಕೆ ಹಣೆ ಕೊಟ್ಟು ನಿಂತರುವ ಹಾವ-ಭಾವವನ್ನು ನೋಡಿ ಸ್ಥಳೀಯರು ಹಾಗೂ ದಾರಿಹೋಕರು ಆಶ್ಚರ್ಯಗೊಂಡಿದ್ದಾರೆ. ಈ ವೇಳೆ ಅಲ್ಲಿಯೇ ಸ್ಥಳದಲ್ಲಿದ್ದ ಶಾಲಾ ಶಿಕ್ಷಕರೊಬ್ಬರು ತಮ್ಮ ಮೊಬೈಲ್ ನಲ್ಲಿ ಈ ಇಂದು ವಿಡಿಯೋವನ್ನು ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Leave A Reply

Your email address will not be published.