SBI Scheme: SBI ನಲ್ಲಿ ಬರಿ 1.5 ಲಕ್ಷ ಹೂಡಿಕೆ ಮಾಡಿ ಸಾಕು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಸಿಗಲಿದೆ 44 ಲಕ್ಷ ರಿಟರ್ನ್ಸ್

0 70

SBI Scheme: ರಾಷ್ಟ್ರೀಕೃತ ಬ್ಯಾಂಕ್ SBI ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿದ್ದು ಈ ಬ್ಯಾಂಕು ತನ್ನ ಗ್ರಾಹಕರಿಗಾಗಿ ವಿವಿಧ ಯೋಜನೆಗಳನ್ನ ಜಾರಿಗೆ ತಂದಿದೆ ಅಷ್ಟೇ ಅಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಹಿರಿಯ ನಾಗರಿಕರಿಗಾಗಿ ಅಮೃತ ಕಳಶ ಯೋಜನೆ ಹಾಗೂ ಇನ್ನಿತರ ಯೋಜನೆಗಳನ್ನ ಜಾರಿಗೆ ತರುವುದರ ಮೂಲಕ ಗ್ರಾಹಕರ ಮನಮುಟ್ಟುವಂತಹ ಬ್ಯಾಂಕ್ ಆಗಿ ಬೆಳೆದು ಬಂದಿದೆ

ಅಷ್ಟೇ ಅಲ್ಲದೆ ಎಸ್‌ಬಿಐ (SBI Scheme) ನಲ್ಲಿ ಮಾಡುವ ಹೂಡಿಕೆಗೆ ಉಳಿದೆಲ್ಲ ಬ್ಯಾಂಕುಗಳಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಬಡ್ಡಿದರ ಲಭ್ಯವಾಗುತ್ತದೆ ಇದರ ಜೊತೆಗೆ ಗ್ರಾಹಕರ ಉಳಿತಾಯ ಹಾಗೂ ಅವರ ಹಣದ ವಿಚಾರದಲ್ಲಿ ಅತ್ಯುತ್ತಮವಾದ ಭದ್ರತಾ ವ್ಯವಸ್ಥೆಯನ್ನು ಇದು ಕಲ್ಪಿಸಿಕೊಟ್ಟಿದೆ ಆದ್ದರಿಂದಲೇ ಈ ಬ್ಯಾಂಕ್ ಎಲ್ಲಾ ಗ್ರಾಹಕರ ನೆಚ್ಚಿನ ಬ್ಯಾಂಕ್ ಎಂದು ಅನಿಸಿಕೊಂಡಿದೆ.

ನರೇಂದ್ರ ಮೋದಿಯವರು ಜಾರಿಗೊಳಿಸಿದ್ದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಖರೀದಿ ಮಾಡಬಹುದಾಗಿದೆ ಈ ಬ್ಯಾಂಕಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಪಡೆಯುವುದರಿಂದ ಗ್ರಾಹಕರಿಗೆ ಹಲವಾರು ರೀತಿಯ ಅನುಕೂಲತೆಗಳು ಸಿಗಲಿವೆ.

SBI ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಲು ಕೆಲವು ನಿಯಮಗಳು ಹಾಗೂ ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ ಅವುಗಳು ಏನೆಂದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕು ಹೆಣ್ಣು ಮಗುವಿನ ಪೋಷಕರು ಅವರ ಹೆಸರಿನಲ್ಲಿ ಯೋಜನೆಯನ್ನು ಮಾಡಿಸಬೇಕು ಅಷ್ಟೇ ಅಲ್ಲದೆ ಕೇವಲ ಎರಡು ಹೆಣ್ಣು ಮಕ್ಕಳಿಗೆ ಮಾತ್ರ ಈ ಯೋಜನೆಯನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ

SBI Scheme

ಇದನ್ನು ಹೊರತುಪಡಿಸಿ ಒಂದು ವೇಳೆ ಎರಡನೇ ಗರ್ಭಧಾರಣೆ ಸಂದರ್ಭದಲ್ಲಿ ತಾಯಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿದರು ಆಗ ಮಾತ್ರ ಮೂರು ಮಕ್ಕಳ ಹೆಸರಿನಲ್ಲೂ ಸುಕನ್ಯಾ ಸಮೃದ್ಧಿ ಯೋಜನೆ ಯನ್ನು ಖರೀದಿಸಬಹುದು ಇನ್ನು ಮಗುವಿಗೆ ಹತ್ತು ವರ್ಷ ತುಂಬುವುದರ ಒಳಗಾಗಿ ಈ ಯೋಜನೆಯನ್ನು ಮಾಡಿಸಬೇಕು ಕನಿಷ್ಠ 250 ಇಂದ ಗರಿಷ್ಠ 1,50,000ಗಳವರೆಗೆ ಈ ಯೋಜನೆಯಲ್ಲಿ ವಾರ್ಷಿಕವಾಗಿ ಹೂಡಿಕೆ ಮಾಡಬಹುದಾಗಿದೆ.

ಈ ಯೋಜನೆಯ ಅಡಿಯಲ್ಲಿ ಹೆಣ್ಣು ಮಗುವಿನ ಹೆಸರು ನೋಂದಾಯಿಸಲು ಹೆಣ್ಣು ಮಗುವಿನ ಜನನ ಪ್ರಮಾಣ ಪತ್ರ ಮತ್ತು ಇದರ ಜೊತೆಗೆ ಅವಶ್ಯ ದಾಖಲೆಗಳನ್ನು ನೀಡಬೇಕಾಗುತ್ತದೆ ಈ ಸುಕನ್ಯಾ ಸಮೃದ್ಧಿ ಯೋಜನೆಯು 15 ವರ್ಷಗಳ ಮೆಚುರಿಟಿ ಪಿರಿಯಡ್ ಅನ್ನ ಹೊಂದಿರುತ್ತದೆ ಹೆಣ್ಣು ಮಗುವಿಗೆ ಮಾಡಿರುವಂತಹ ಯೋಜನೆಯು ಆಕೆಗೆ 18 ವರ್ಷ ತುಂಬಿದ ನಂತರ ಆಕೆಯ ವಿದ್ಯಾಭ್ಯಾಸ ಅಥವಾ ಮದುವೆ ಇನ್ನಿತರ ಯಾವುದಾದರೂ ಉದ್ಯಮ ಮಾಡಲು ಬಯಸಿದರೆ ಆಕೆಗೆ ಹಣಕಾಸಿನ ನೆರವು ಸಿಗುತ್ತದೆ.

ಈ ಯೋಜನೆಯ ಅಡಿಯಲ್ಲಿ ಬರುವ ರಿಟರ್ನ್ಸ್ ಮೇಲೆ ಆದಾಯ ತೆರಿಗೆಯ ವಿನಾಯಿತಿಯನ್ನು ಕೂಡ ನೀಡಲಾಗುತ್ತದೆ ಇದು ಒಂದು ವಿಶೇಷ ಯೋಜನೆಯಾಗಿದ್ದು ಇತ್ತೀಚಿಗಷ್ಟೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಕೈಗೆತ್ತಿಕೊಂಡಿದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಒಮ್ಮೆ ಎಸ್ ಬಿ ಐ ಶಾಖೆಗೆ ಭೇಟಿ ಕೊಟ್ಟು ಅದರ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಈಗಲೇ ಒಂದು ಹೆಜ್ಜೆಯನ್ನ ಇಡಿ. ಇದನ್ನೂ ಓದಿ: Ration Card Update: 6 ವರ್ಷದ ಒಳಗಿನ ಮಗುವನ್ನು ರೇಷನ್ ಕಾರ್ಡ್ ಗೆ ಸೇರಿಸುವುದು ಹೇಗೆ? ಇಲ್ಲಿದೆ ಸುಲಭ ವಿಧಾನ

Leave A Reply

Your email address will not be published.