BPL Ration Card: ಸದ್ಯಕ್ಕೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ಆಯ್ಕೆಯಾದ ಕಾಂಗ್ರೆಸ್ ಸರ್ಕಾರವು ಕರ್ನಾಟಕ ರಾಜ್ಯದ ಎಲ್ಲಾ ಕಾರ್ಯಗಳ ಉಸ್ತುವಾರಿಯನ್ನ ವಹಿಸಿಕೊಂಡಿದೆ ಚುನಾವಣೆಗೂ ಮೊದಲೇ ಜನರಿಗೆ ಐದು ಭರವಸೆಗಳನ್ನು ನೀಡಿತ್ತು. ಇದರಿಂದಲೇ ಪಕ್ಷ ಗೆಲುವನ್ನ ಸಾಧಿಸಲು ಸಾಧ್ಯವಾಯಿತು ಎಂಬ ಮಾತುಗಳು ಕೂಡ ಹರಿದು ಬರುತ್ತಿದ್ದವು. ಏನೇ ಆದರೂ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ತಕ್ಷಣ ತಾವು ನೀಡಿದ ಮಾತಿಗೆ ಅನುಗುಣವಾಗಿ ಒಂದೊಂದೇ ಕಾರ್ಯವನ್ನ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ಸಫಲಗೊಳ್ಳುತ್ತಿದೆ.

ಅದರಲ್ಲಿ ಪ್ರಮುಖವಾಗಿ ಬಿಪಿಎಲ್ (BPL Ration Card) ಕಾರ್ಡು ದಾರರಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುವುದು ಒಂದು ಯೋಜನೆಯಾಗಿತ್ತು ಶೀಘ್ರವಾಗಿ ಇದನ್ನ ಜಾರಿಗೆ ತರಲು ಸರ್ಕಾರ ಸಿದ್ಧತೆಯನ್ನ ನಡೆಸುತ್ತಿದ್ದು ಇದಕ್ಕೆ ಸಂಬಂಧಪಟ್ಟಂತೆ ಕ್ಯಾಬಿನೆಟ್ ಸಭೆಯಲ್ಲಿ ಇನ್ನೊಂದು ಸುತ್ತಿನ ಚರ್ಚೆ ಕೂಡ ನಡೆದಿದೆ ಸಾಧ್ಯವಾದರೆ ಅದು ಈ ತಿಂಗಳಿಂದಲೇ ಜಾರಿಗೆ ಬರುವ ಸಾಧ್ಯತೆ ಕೂಡ ಇದೆ

ಅಷ್ಟೇ ಅಲ್ಲದೆ ಒನ್ ನೇಷನ್ ನೀತಿಕು ಕರ್ನಾಟಕ ರಾಜ್ಯ ಹೊಳಪಟ್ಟಿರುವುದರಿಂದ ವಿದ್ಯಾಭ್ಯಾಸ ಉದ್ಯೋಗ ವಲಸೆ ಇತ್ಯಾದಿ ಯಾವುದೇ ಕಾರಣಗಳಿಂದ ಒಂದು ಜಾಗ ಬಿಟ್ಟು ಮತ್ತೊಂದು ಜಾಗದಲ್ಲಿ ನೆಲೆಸಿರುವವರಿಗೆ ಕೂಡ ಅವರು ಅಲ್ಲಿರುವ ನ್ಯಾಯಬೆಲೆಯ ಅಂಗಡಿಗಳ ಮೂಲಕವೇ ಉಚಿತ ಪಡಿತರವನ್ನು ಪಡೆಯುವ ಅವಕಾಶವನ್ನು ಕೂಡ ಕಲ್ಪಿಸಿಕೊಟ್ಟಿದೆ.

ಸರ್ಕಾರ ಪ್ರತಿ ಬಿಪಿಎಲ್ ಕಾರ್ಡಿಗೆ ಉಚಿತ ಅಕ್ಕಿ ನೀಡುವುದರ ಜೊತೆಗೆ ಕಡಿಮೆ ಬೆಲೆಗೆ ಬೇರೆ ಸಾಮಾನುಗಳನ್ನು ಒದಗಿಸುತ್ತಿದೆ ಉದಾಹರಣೆಗೆ ಕಡಿಮೆ ಬೆಲೆಗೆ ಅಡುಗೆ ಎಣ್ಣೆ ತೊಗರಿ ಬೇಳೆ ಕಡಲೆಕಾಳು ಹಾಗೂ ಹಸಿರು ಕಾಳು ಇವುಗಳನ್ನ ನೀಡುವ ಉದ್ದೇಶವನ್ನು ಕೂಡ ಹೊಂದಿದೆ ಎಂದು ಹೇಳಲಾಗುತ್ತಿದೆ ಜೊತೆಗೆ ಕೇಂದ್ರದಲ್ಲಿಯೂ ಅನ್ನಪೂರ್ಣ ಎಂಬ ಯೋಜನೆಯ ಬಗ್ಗೆ ಚರ್ಚೆ ನಡೆದಿದೆ ಆದರೆ ಈ ಬಗ್ಗೆ ಸರ್ಕಾರ ಇನ್ನೂ ಕೂಡ ಸರಿಯಾದ ಸ್ಪಷ್ಟನೆಯನ್ನು ನೀಡಿಲ್ಲ. ಇದನ್ನೂ ಓದಿ: Anganwadi Recruitment 2023 ಈ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕ ಹುದ್ದೆಗಳು ಖಾಲಿ ಇವೆ ಆಸಕ್ತರು ಅರ್ಜಿಹಾಕಿ

Leave a Reply

Your email address will not be published. Required fields are marked *