ಉದ್ಯೋಗಿನಿ ಯೋಜನೆಯ (Udyogini yojane) ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕಾ? ಹಾಗಾದರೆ ಇಲ್ಲಿದೆ ಪೂರ್ತಿ ಮಾಹಿತಿ ಕರ್ನಾಟಕ ಸರ್ಕಾರವು ಉದ್ಯಮಶೀಲ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶದಿಂದ ಮಹಿಳಾ ಉದ್ಯೋಗಿನಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ರಾಜ್ಯದಲ್ಲಿ ವಾಸಿಸುವ 18 ರಿಂದ 55 ವರ್ಷದೊಳಗಿನ ಮಹಿಳೆಯರು ಸ್ವಂತ ಉದ್ಯಮ ಪ್ರಾರಂಭಿಸಲು ಗರಿಷ್ಠ ರೂ. 3 ಲಕ್ಷ ವರೆಗೆ ಬಡ್ಡಿರಹಿತ ಸಾಲ ಪಡೆಯಬಹುದು.

ಯೋಜನೆಯ ಪ್ರಯೋಜನಗಳು:
ಸ್ವಂತ ಉದ್ಯಮ ಪ್ರಾರಂಭಿಸಲು ಹಣಕಾಸು ನೆರವು
ಉದ್ಯಮದ ಬೆಳವಣಿಗೆಗೆ ಸಹಾಯ
ಆರ್ಥಿಕ ಸ್ವಾವಲಂಬನೆ
ಉದ್ಯೋಗಾವಕಾಶಗಳ ಸೃಷ್ಟಿ

ಅರ್ಹತೆ:
ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ಅವರ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು. ಪರಿಶಿಷ್ಟ ಜಾತಿ/ಪಂಗಡದ ಮಹಿಳೆಯರ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು. ಸಾಮಾನ್ಯ ವರ್ಗದ ಮಹಿಳೆಯರ ವಾರ್ಷಿಕ ಆದಾಯ ರೂ. 1.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?
*ಅರ್ಜಿದಾರರು ಉದ್ಯೋಗಿನಿ ಯೋಜನೆಯ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ಫಾರಂ ಡೌನ್‌ಲೋಡ್ ಮಾಡಿಕೊಳ್ಳಬಹುದು ಅಥವಾ ಹತ್ತಿರದ ಜಿಲ್ಲಾ ಕೈಗಾರಿಕಾ ಕಚೇರಿಯಿಂದ ಪಡೆಯಬಹುದು.
*ಭರ್ತಿ ಮಾಡಿದ ಅರ್ಜಿ ಫಾರಂ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಕೈಗಾರಿಕಾ ಕಚೇರಿಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು:
*ಗುರುತಿನ ಪುರಾವೆ
*ನಿವಾಸ ಪುರಾವೆ
*ಜಾತಿ/ಪಂಗಡ ಪ್ರಮಾಣಪತ್ರ (ಪರಿಶಿಷ್ಟ ಜಾತಿ/ಪಂಗಡದ ಅರ್ಜಿದಾರರಿಗೆ ಅನ್ವಯಿಸುತ್ತದೆ)
*ಆದಾಯ ಪುರಾವೆ
*ವಯಸ್ಸಿನ ಪುರಾವೆ

*ಯೋಜನಾ ವರದಿ
*ವ್ಯವಹಾರದ ವಿವರ
*ಮಾರುಕಟ್ಟೆ ವಿಶ್ಲೇಷಣೆ
*ಹಣಕಾಸು ಯೋಜನೆ
*ಬ್ಯಾಂಕ್ ಪಾಸ್‌ಬುಕ್
*ಪ್ಯಾನ್ ಕಾರ್ಡ್
*ತರಬೇತಿ ಪ್ರಮಾಣಪತ್ರಗಳು (ಯಾವುದಾದರೂ ಇದ್ದರೆ)

ಅರ್ಜಿಯನ್ನು ಹಾಕಲು ಗ್ರಾಮಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಗೆ ಭೇಟಿ ನೀಡಿ ಅಲ್ಲಿ ನೀವು ಭರ್ತಿ ಮಾಡಿದ ಫಾರ್ಮ್ ಅನ್ನು ಸಲ್ಲಿಸಿ.

By

Leave a Reply

Your email address will not be published. Required fields are marked *