ಶಾಸ್ತ್ರದ ಪ್ರಕಾರ ಶನಿವಾರ ಇಂತಹ ಕೆಲಸವನ್ನು ಮಾಡಲೇ ಬಾರದು

0 0

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿವಾರದಂದು ಇಂತಹ ಕೆಲಸವನ್ನು ಮಾಡಲೇಬಾರದು ಎಂಬುದಾಗಿ ಹೇಳಲಾಗುತ್ತದೆ ಅದು ಯಾಕೆ ಅನ್ನೋದನ್ನ ಮುಂದೆ ನೋಡಿ ಇದರಿಂದ ಏನೆಲ್ಲಾ ಆಗುತ್ತೆ ಅನ್ನೋದನ್ನ ತಿಳಿಯುವ ಮೊದಲು ಜ್ಯೋತಿಷರನ್ನು ಪ್ರತಿ ಕೆಲಸಕ್ಕೂ ಬರ ಮಾಡಿಕೊಳ್ಳುತ್ತೇವೆ ಅಂದರೆ ಮದುವೆ ಆಗಲು ಅಥವಾ ಯಾವುದೇ ದೋಷ ಪರಿಹಾರಕ್ಕಾಗಲಿ ಜ್ಯೋತಿಷ್ಯರು ಹೇಳುವ ಕೆಲಸವನ್ನು ಮಾಡುತ್ತೇವೆ ಆದ್ರೆ ಕೆಲವೊಮ್ಮೆ ಕೆಲವೊಂದು ವಿಚಾರದಲ್ಲಿ ನಿರ್ಲಕ್ಷ್ಯತನ ತೋರಿಸಿಬಿಡುತ್ತೇವೆ ಆ ರೀತಿ ಮಾಡುವುದರಿಂದ ನಮಗೆ ಗೊತ್ತಿಲ್ಲದೇ ಕೆಲವೊಮ್ಮೆ ನಮ್ಮ ಮೇಲೆ ಅದರ ಪ್ರಭಾವ ಬೀರಿರುತ್ತದೆ.

ವಿಷ್ಯಕ್ಕೆ ಬರೋಣ ಶನಿವಾರದಂದು ಬದನೆ ಕಾಯಿ ಮತ್ತು ಕಾಳು ಮೆಣಸನ್ನು ಮನೆಗೆ ಖರೀದಿ ಮಾಡಬಾರದು ಹಾಗೂ ಈ ಪದಾರ್ಥಗಳ ಸೇವನೆ ಮಾಡುವುದು ಸೂಕ್ತವಲ್ಲ, ಹೀಗೆ ಮಾಡುವುದರಿಂದ ಅರೋಗ್ಯ ಸಮಸ್ಯೆ ಕಾಡುವದೂ ಹಾಗೂ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತವೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇನ್ನು ಬಟ್ಟೆಯ ವಿಚಾರಕ್ಕೆ ಬರುವುದಾದರೆ ಶನಿವಾರದಂದು ಕಪ್ಪು ಬಣ್ಣದ ಉಡುಪನ್ನು ಧರಿಸುವುದು ಸೂಕ್ತವಲ್ಲ ಹಾಗೂ ಕಪ್ಪು ಬಣ್ಣದ ಉಡುಪನ್ನು ಖರೀದಿ ಮಾಡುವುದು ಒಳ್ಳೆಯದಲ್ಲ, ಶನಿವಾರ ದಿನ ಸಾಸಿವೆ ಮತ್ತು ಯಾವುದೇ ಬಗೆಯ ಎಣ್ಣೆ ಹಾಗೂ ಮರದ ಪೀಠೋಪಕರಣಗಳನ್ನು ಖರೀದಿಸಿ ಮನೆಗೆ ತರುವುದು ಒಳ್ಳೆಯದಲ್ಲ ಅನ್ನೋದನ್ನ ಹೇಳಲಾಗುತ್ತದೆ. ಇನ್ನು ಅದೇ ದಿನ ಬೇಕಾದರೆ ಎಣ್ಣೆಯನ್ನು ದಾನವಾಗಿ ಕೊಡಬಹುದಾಗಿದೆ. ಉಪ್ಪು ಹಾಗೂ ಕಬ್ಬಿಣದಿಂದ ತಯಾರಿಸಿದ ವಸ್ತುಗಳನ್ನು ಶನಿವಾರ ಖರೀದಿ ಮಾಡಿದರೆ ಶನಿ ಕಾಟ ಹೆಚ್ಚಲಿದೆ

ಮನೆಯನ್ನು ಸ್ವಚ್ಛ ಮಾಡುವಂತ ಕಸ ಪೊರಕೆಯನ್ನು ಶನಿವಾರ ಖರೀದಿ ಮಾಡಬಾರದು ಮಾಡಿದ್ದೇಯಾದಲ್ಲಿ ಮನೆಯಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ ಅನ್ನೋದನ್ನ ಹೇಳಲಾಗುತ್ತದೆ. ಶನಿವಾರದ ದಿನ ಶನಿದೇವರಿಗೆ ಸಂಬಂಧ ಪಟ್ಟ ಬೇಳೆ ಕಾಳುಗಳನ್ನು ಖರೀದಿಸಬಾರದು, ಆದರೆ ಈ ದಿನ ಬೇಳೆ ಕಾಳುಗಳನ್ನು ಬಡವರಿಗೆ ದಾನ ಮಾಡಿದರೆ ಒಳ್ಳೆಯದು ಎಂದು ಜ್ಯೋತಿಷ್ಯ ಶಾಸ್ತ್ರಹೇಳುತ್ತದೆ. ಶನಿವಾರ ಒಳ್ಳೆಯದಾಗಬೇಕು ಅನ್ನೋದಾದರೆ ಶನಿ ದೇವನ ವಾಹನವಾಗಿ ಬಳಸುವಂತ ಈ ಕಾಗೆಗಳಿಗೆ ಆಹಾರವನ್ನು ಹಾಕುವುದರಿಂದ ಸಂಕಷ್ಟಗಳಿದ ಪಾರಾಗಬಹುದು.

Leave A Reply

Your email address will not be published.