ಮನೆಯನ್ನು ಹೇಗೆ ಬೇಕು ಹಾಗೆ ಕಟ್ಟುವುದಕ್ಕೆ ಆಗೋದಿಲ್ಲ ಇತ್ತೀಚಿನ ದಿನಗಳಲ್ಲಿ ಮನೆಯನ್ನು ವಾಸ್ತು ಪ್ರಕಾರ ಕಟ್ಟಿಸುವಂತ ಜನರಿದ್ದಾರೆ ಆದ್ರೂ ಕೂಡ ಕೆಲವೊಮ್ಮೆ ಯಾವುದಾದರು ಒಂದು ಕಾರಣದಿಂದ ಮನೆಯಲ್ಲಿ ವಾಸ್ತು ದೋಷ ಇದ್ದೆ ಇರುತ್ತದೆ ಅಂತಹ ವಾಸ್ತು ದೋಷವನ್ನು ನಿವಾರಿಸುವಂತ ವಿಧಾನಗಳು ಹಲವಿದೆ ಅವುಗಳಲ್ಲಿ ಈ ವಿಧಾನ ಕೂಡ ಒಂದಾಗಿದೆ. ಮನೆಯ ಮುಂದೆ ಈ ಗಿಡಗಳು ಇದ್ರೆ ಮನೆಯ ವಾಸ್ತು ದೋಷ ನಿವಾರಣೆಯಾಗುತ್ತದೆ ಅನ್ನೋದನ್ನ ಹೇಳಲಾಗುತ್ತದೆ. ಅಷ್ಟಕ್ಕೂ ಈ ಸಸ್ಯಗಳು ಯಾವುವು ಅನ್ನೋದನ್ನ ತಿಳಿಯೋಣ.

ಈ ಸಸ್ಯಗಳು ಮನೆಯಲ್ಲಿ ಅಥವಾ ಮನೆಯ ಮುಂದೆ ಇದ್ರೆ ವಾಸ್ತು ದೋಷಗಳು ಪರಿಹಾರವಾಗುತ್ತವೆ ಈ ಸಸ್ಯಗಳಲ್ಲಿ ಸಕಾರಾತ್ಮಕ ಅಂದರೆ ಪಾಸಿಟಿವ್ ಎನರ್ಜಿಯನ್ನು ದೊರೆಕಿಸಿ ಕೊಡುವ ವಿಶೇಷ ಗುಣಗಳಿವೆ. ಮೊದಲನೆಯದಾಗಿ ಹೇಳುವುದಾದರೆ ಅಲೋವೆರಾ ಇದನ್ನು ಕನ್ನಡದಲ್ಲಿ ಲೋಳೆಸರ ಎಂಬುದಾಗಿ ಕರೆಯಲಾಗುತ್ತದೆ. ಈ ಸಸ್ಯ ಮನೆಯ ಮುಂದಿದರೆ ಪಾಸಿಟಿವ್ ಎನರ್ಜಿ ದೊರೆಯುವುದು, ಇನ್ನು ಈ ಲೋಳೆಸರ ಗಿಡವನ್ನು ಅದೃಷ್ಟದ ಗಿಡವೆಂದು ಭಾವಿಸಲಾಗುತ್ತದೆ. ಇದನ್ನು ಮನೆಯ ಮುಂದಿಟ್ಟಿರೆ ಯಾವುದೇ ದುಷ್ಟ ಶಕ್ತಿಗಳು ಒಳಗೆ ಬರುವುದಿಲ್ಲವೆನ್ನುತ್ತಾರೆ, ಹಾಗಾಗಿ ಮನೆಯ ಮುಂದೆ ಈ ಗಿಡ ಇದ್ರೆ ಶುಭಕರವಾಗವುದು.

ಇನ್ನು ಎರಡನೆಯದಾಗಿ ತುಳಸಿ ಗಿಡ ತುಳಸಿ ಗಿಡ ದೈವ ಭಕ್ತಿಯನ್ನು ಹೊಂದಿರುವಂತ ಗಿಡ ಹಾಗೂ ಹಲವು ಸಾಮಾನ್ಯ ಕಾಯಿಲೆಗಳಿಗೆ ಔಷಧಿ ಗುಣಗಳನ್ನು ಹೊಂದಿರುವಂತ ಗಿಡವಾಗಿದೆ. ಈ ಸಸ್ಯ ಮನೆಯ ಮುಂದಿದ್ದರೆ ಮನೆಯಲ್ಲಿನ ಕೆಟ್ಟ ದೃಷ್ಟಿಯನ್ನು ನಿವಾರಿಸಿ ಮನೆಯಲ್ಲಿ ಉತ್ತಮ ವಾತಾವರಣವನ್ನು ನಿರ್ಮಿಸಿಕೊಡುತ್ತದೆ. ಇನ್ನು ಪಾರಿಜಾತ ಸಸ್ಯ ಕೂಡ ಮನೆಯ ವಾಸ್ತು ದೋಷವನ್ನು ನಿವಾರಿಸುವಂತ ಗುಣವನ್ನು ಹೊಂದಿದೆ. ಮನೆಯ ಮುಂದೆ ಬಾಳೆ ಸಸಿ ಇದ್ರೂ ಕೂಡ ಶುಭಕರವಾಗುದು ಬಾಳೆ ಸಸಿಯಿಂದ ಬಹುಬೇಗನೆ ಮನೆಯಲ್ಲಿ ಮದುವೆ ಕಾರ್ಯಗಳು ನಡೆಯುವುದು ಯಾವುದೇ ತೊಂದರೆ ಇಲ್ಲದೆ.

ಅಷ್ಟೇ ಅಲ್ದೆ ಗೋಲ್ಡನ್ ಪಾಥೋಸ್ ಗಿಡ ಈ ಸಸ್ಯ ಮನೆಯಲ್ಲಿದ್ದರೆ ಯಾವೆಲ್ಲ ಉಪಯೋಗಗಳಿವೆ ಅನ್ನೋದನ್ನ ಹೇಳುವುದಾದರೆ. ದುಷ್ಟಶಕ್ತಿ ವಿರುದ್ಧ ಹೋರಾಡಲು ಸಹಕರಿಸುತ್ತದೆ. ಮನೆಯಲ್ಲಿ ದಾಳಿಂಬೆ ಗಿಡ ನೆಡುವುದರಿಂದ ರಾಹು, ಕೇತುವಿನ ನಕಾರಾತ್ಮಕ ಶಕ್ತಿ ಹಾಗೂ ಮಾಟ ಮಂತ್ರದ ಪ್ರಭಾವ ಕಡಿಮೆಯಾಗುತ್ತದೆ. ಹೀಗೆ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನ ಈ ಸಸ್ಯಗಳು ಹೊಂದಿವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!