ಗಂಟಲು ನೋವಿನಿಂದ ತಕ್ಷಣ ರಿಲೀಫ್ ನೀಡುವ ಮನೆಮದ್ದು

0 37

ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಆರೋಗ್ಯವೂ ಸಹ ಬದಲಾಗುತ್ತದೆ. ಅದರಲ್ಲೂ ಶೀತ, ಗಂಟಲು ನೋವು , ಕೆಮ್ಮು ನಮ್ಮನ್ನು ಕಾದಳು ಆರಂಭಿಸುತ್ತವೆ. ಅದರಲ್ಲೂ ಗಂಟಲು ನೋವು ನಮ್ಮನ್ನು ತೀರಾ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಈ ಗಂಟಲು ನೋವು ಬಂದರೆ ನಮಗೆ ಮಾತನಾಡಲೂ , ಏನಾದ್ರು ಆಹಾರ ಸೇವನೆ ಮಾಡಲೂ ಸಹ ಕಷ್ಟ ಆಗುತ್ತದೆ. ಇದಕ್ಕೆ ಮುಖ್ಯ ಕಾರಣ ವೈರಸ್ , ಬ್ಯಾಕ್ಟೀರಿಯ ಮತ್ತು ಫಂಗಸ್ ನಿಂದ ಉಂಟಾಗುವ ಇನ್ಫೆಕ್ಷನ್ ಗಳು ಮೂಲ ಕಾರಣ ಆಗಿರುತ್ತವೆ. ಹಾಗಾಗಿ ಪದೇ ಪದೇ ಗಂಟಲು ನೋವು ಬಾರದೇ ಇರುವ ಹಾಗೇ ಅದನ್ನು ನಿವಾರಿಸಿಕೊಳ್ಳಲು ಮನೆ ಮದ್ದು ಏನು ಅನ್ನೋದನ್ನ ನೋಡೋಣ.

ಮೊದಲಿಗೆ ಗಂಟಲು ನೋವಿಗೆ ರಾಮಬಾಣ ಎಂದೇ ಕರೆಸಿಕೊಂಡಿರುವ ಉಪ್ಪು ನೀರು ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿ ಮುಕ್ಕಳಿಸುವ ಮೂಲಕ ನಿಮ್ಮ ಗಂಟಲು ನೋವನ್ನು ನಿವಾರಿಸಿಕೊಳ್ಳಬಹುದು. ಇಷ್ಟಕ್ಕೆ ಗಂಟಲು ನೋವು ತಕ್ಷಣಕ್ಕೆ ಕಡಿಮೆ ಆಗುತ್ತದೆ. ಒಂದುವೇಳೆ ನಿಮಗೆ ಬರೀ ಉಪ್ಪು ನೀರು ಅಷ್ಟು ಇಷ್ಟ ಆಗದೆ ಇದ್ದಲ್ಲಿ ಇದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿಕೊಳ್ಳಿ. ನಂತರ ಬಾಯಿ ಮುಕ್ಕಳಿಸಿ ಆದರೆ ನೀರನ್ನು ನುಂಗಬಾರದು ಹೊರಗೆ ಉಗುಳಬೇಕು. ದಿನಕ್ಕೆ ನಾಲ್ಕೈದು ಬಾರಿ ಹೀಗೆ ಮಾಡುವುದರಿಂದ ಗಂಟಲು ನೋವು ಕಡಿಮೆ ಆಗುತ್ತದೆ.

ಗಂಟಲು ನೋವಿಗೆ ಇನ್ನೊಂದು ಅತ್ಯತ್ತಮ ಮನೆ ಮದ್ದು ಎಂದರೆ ಅದು ನಮ್ಮ ಮನೆಯಲ್ಲಿಯೇ ಸುಲಭವಾಗಿ ದೊರೆಯುವ ಬೆಳ್ಳುಳ್ಳಿ. ಬೆಳ್ಳುಳ್ಳಿಯಲ್ಲಿ ಆಂಟಿ ಬ್ಯಾಕ್ಟೀರಿಯ ಅಂಶಗಳು ಇವೆ. ಇದರಲ್ಲಿರುವ ಆಂಟಿ ಸಪ್ಟಿಕ್ ಅಂಶ ಮತ್ತು ಕೆಲವು ಔಷಧೀಯ ಗುಣಗಳು ಗಂಟಲು ನೋವಿಗೆ ಉತ್ತಮ ಪರಿಹಾರವನ್ನು ನೀಡುತ್ತವೆ. ಗಂಟಲು ನೋವಿಗೆ ಹಸಿ ಬೆಳ್ಳುಳ್ಳಿಯನ್ನು ಪ್ರತೀ ನಿತ್ಯ ಸೇವನೆ ಮಾಡುವುದರಿಂದ ಗಂಟಲಿನಲ್ಲಿ ಇರುವ ಕೆಟ್ಟ ಬ್ಯಾಕ್ಟೀರಿಯವನ್ನು ಹೋಗಲಾಡಿಸಲು ಇದು ಸಹಾಯ ಮಾಡುತ್ತದೇ.

ಗಂಟಲು ನೋವಿಗೆ ಇನ್ನೊಂದು ಅತ್ಯುತ್ತಮ ಮನೆ ಮದ್ದು ಎಂದರೆ ಅದು ಲವಂಗ. ಒಂದೆರಡು ಲವಂಗವನ್ನು ಬಾಯಲ್ಲಿ ಇಟ್ಟುಕೊಂಡು ಅದನ್ನು ಜಗಿದು ರಸವನ್ನು ನುಂಗಬೇಕು ಹಾಗೆ ಲವಂಗ ಮೆತ್ತಗಾದ ನಂತರ ಅದನ್ನೂ ಕೂಡಾ ಜಗಿದು ತಿನ್ನಬೇಕು ಇದರಿಂದ ಗಂಟಲು ನೋವು ಬೇಗ ನಿವಾರಣೆ ಆಗುವುದು. ಗಂಟಲು ನೋವಿಗೆ ಶುಂಠಿ ಟೀ ಕೂಡಾ ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಈ ಎಲ್ಲಾ ಮನೆ ಮದ್ದುಗಳೂ ಸಹ ಗಂಟಲು ನೋವಿಗೆ ತುಂಬಾ ಪ್ರಯೋಜನಕಾರಿಯಾಗಿ ಕೆಲಸ ಮಾಡುತ್ತವೆ.

Leave A Reply

Your email address will not be published.