Sagittarius astrology 2023: ಹೊಸ ವರ್ಷ ಆರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಹೊಸ ವರ್ಷದಲ್ಲಿನ ಹೊಸ ಭವಿಷ್ಯವನ್ನು ತಿಳಿಯಲು ಹಲವರು ಕಾತುರರಾಗಿರುತ್ತಾರೆ ಇದೇ 2023ನೆಯ ಹೊಸ ವರ್ಷದ ಧನು ರಾಶಿಯವರ ಸಂಪೂರ್ಣ ವರ್ಷ ಭವಿಷ್ಯವನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.

ವಿಶೇಷವಾಗಿ ಧನು ರಾಶಿಯವರಿಗೆ ವರ್ಷದ ಆರಂಭದ ಅಂದರೆ ಜನವರಿ ತಿಂಗಳಿನ 18ನೇ ತಾರೀಖಿನಲ್ಲಿ ಸಾಡೇಸಾತ್ ಶನಿಯ ಅವಧಿ ಮುಕ್ತಾಯವಾಗುತ್ತದೆ ಗೃಹ ಸ್ಥಿತಿಯನ್ನು ಗಮನಿಸಿದರೆ ನಿಮ್ಮ ರಾಶಿಯಿಂದ ಮೂರನೇ ರಾಶಿಗೆ ಶನಿಯ ಸ್ಥಾನಪಲ್ಲಟ ಉಂಟಾಗುತ್ತದೆ ಆದ್ದರಿಂದ ಧನು ರಾಶಿಯವರಿಗೆ ಇರುವ ಸಂಕಷ್ಟಗಳು ಇಲ್ಲಿಗೆ ಮುಕ್ತಾಯಗೊಳ್ಳುತ್ತವೆ.

24 ಏಪ್ರಿಲ್ 2013ರ ವರೆಗೂ ಗುರು ಚತುರ್ಥ ರಾಶಿಯಲ್ಲಿ ಇರುತ್ತಾನೆ ಹಾಗೆ ರಾಹು ಕೂಡ ಪಂಚಮದಿಂದ ಅಕ್ಟೋಬರ್ 30ನೇ ತಾರೀಖಿನ ನಂತರ ನಿಮ್ಮ ರಾಶಿಗೆ ಪ್ರವೇಶಿಸುತ್ತಾನೆ ಹೀಗೆ ನಿಮ್ಮ ರಾಶಿಯ ಮೇಲೆ ಪ್ರಭಾವವನ್ನು ಬೀರುತ್ತದೆ ಕಳೆದ ದಿನಗಳಲ್ಲಿ ಈ ರಾಶಿಯವರು ಅಪಾರವಾದಂತಹ ಕಷ್ಟಗಳನ್ನು ಕಂಡಿರುತ್ತಾರೆ ಆದರೆ ಈ ವರ್ಷವೂ ಆಗಿರುವುದಿಲ್ಲ ನಿಮ್ಮ ರಾಶಿಯಲ್ಲಿ ಉತ್ತಮ ಬದಲಾವಣೆಯನ್ನು ಕಾಣುತ್ತೀರಿ.

ಈ ವರ್ಷದಲ್ಲಿ ಶನಿಯ ಸಂಪೂರ್ಣ ಬಲವು ನಿಮ್ಮ ಜೊತೆ ಇರುತ್ತದೆ ನೀವು ಕಳೆದುಕೊಂಡಂತಹ ಕೆಲವು ವಸ್ತುಗಳು ಅಥವಾ ಸಂಗತಿಗಳು ನಿಮ್ಮ ಬಳಿಗೆ ವಾಪಸ್ ಆಗುತ್ತವೆ ಇನ್ನು ಆರ್ಥಿಕ ವಿಚಾರ ಹೇಳುವುದಾದರೆ ಹಣದ ಕೊರತೆಯಿಂದ ತುಂಬಾ ಬಡಲಿದ್ದ ನಿಮಗೆ ಈಗ ಆರ್ಥಿಕವಾಗಿ ಅಭಿವೃದ್ಧಿಯಾಗಲಿದೆ ನೀವು ಮಾಡಿದ ಕಾರ್ಯಗಳು ನಿಮ್ಮ ಕೈ ಹಿಡಿಯುತ್ತವೆ ನೀವು ಮಾಡುವ ಉದ್ಯೋಗದಲ್ಲಿ ಉತ್ತಮ ಲಾಭವನ್ನು ಕಾಣುತ್ತೀರಿ

ಹಲವಾರು ಅವಕಾಶಗಳು ಈ ಸಮಯದಲ್ಲಿ ನಿಮ್ಮನ್ನ ಹುಡುಕಿ ಬರುತ್ತವೆ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡುತ್ತವೆ ನಿಮ್ಮ ವೃತ್ತಿ ಜೀವನಕ್ಕೆ ಅರ್ಥಪೂರ್ಣವಾದ ಮಾರ್ಗವು ಈ ಮುಂಬರುವ ಹೊಸ ವರ್ಷದಲ್ಲಿ ನಿಮಗೆ ಕಾಣಲಿದೆ ಹಾಗೆಯೇ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ತಿರುವನ್ನು ಕಂಡ ನಂತರದಲ್ಲಿ ಭಗವಂತನನ್ನು ಮನಸ್ಸಾರ ಪ್ರಾರ್ಥಿಸಿ ನಿಮ್ಮ ಕಷ್ಟಕಾಲದಲ್ಲಿ ನಿಮ್ಮ ಕೈಹಿಡಿದ ಆತನನ್ನು ಮರೆಯದೆ ಸ್ಮರಿಸುವುದರಿಂದ ನಿಮ್ಮ ಏಳಿಗೆ ಇನ್ನೂ ಹೆಚ್ಚುತ್ತದೆ.

ನಿಮ್ಮ ಜೀವನದಲ್ಲಿ ಬರುವ ಎಲ್ಲಾ ಸಂದರ್ಭಗಳನ್ನು ಇದ್ದ ಹಾಗೆ ಸ್ವೀಕರಿಸಿ ಇದರಿಂದ ನಿಮಗೆ ಬರುವ ಅವಕಾಶಗಳು ತಪ್ಪಿ ಹೋಗದೆ ಯಶಸ್ಸನ್ನು ಗಳಿಸಲು ಉತ್ತಮ ಮಾರ್ಗಗಳು ದೊರೆಯುತ್ತವೆ ಇನ್ನು ಧನು ರಾಶಿಯವರಿಗೆ ವರ್ಷದ ಕೊನೆಯಲ್ಲಿ ಪ್ರಯಾಣ ಯೋಗವು ಬರಲಿದೆ ದೂರ ಪ್ರಯಾಣವು ಒಳ್ಳೆಯ ಲಾಭವನ್ನು ಮನಶಾಂತಿಯನ್ನು ತಂದು ಕೊಡುತ್ತದೆ ಆರೋಗ್ಯದ ವಿಚಾರ ಬಂದರೆ ದೀರ್ಘಕಾಲಿಕ ಸಮಸ್ಯೆಗಳು ನಿಮ್ಮಿಂದ ದೂರವಾಗುತ್ತವೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ

ಇಷ್ಟು ದಿನಗಳ ಕಾಲ ದುಃಖ ಅಥವಾ ಆಳಸ್ಯವೇ ನಿಮ್ಮ ಶತ್ರುವಾಗಿದ್ದು ಇನ್ನೂ ಮುಂದಿನ ದಿನಗಳಲ್ಲಿ ಅವುಗಳು ನಿಮ್ಮಿಂದ ದೂರವಾಗಿ ಹೋಗುತ್ತವೆ ಯಾವುದೇ ರೀತಿಯ ಶತ್ರುಭಯವು ನಿಮ್ಮಿಂದ ದೂರವಾಗುತ್ತದೆ ಹಾಗೆಯೇ ತಂದೆ ಅಥವಾ ತಂದೆಗೆ ಸಮಾನ ಆದಂತಹ ವ್ಯಕ್ತಿಗಳಿಂದ ಆಶೀರ್ವಾದವು ದೊರೆಯುತ್ತದೆ ಪುಣ್ಯಕ್ಷೇತ್ರಗಳನ್ನು ದರ್ಶನ ಮಾಡುವ ಭಾಗ್ಯವನ್ನು ನೀವು ಈ ಸಮಯದಲ್ಲಿ ಹೊಂದಿರುತ್ತೀರಿ ಧಾರ್ಮಿಕ ವೃತ್ತಿ ಮಾಡುವವರಿಗೆ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಕಾಣುತ್ತದೆ.

ಜನವರಿ 2023 ರಲ್ಲಿ ಧನು ರಾಶಿಯವರಿಗೆ 8 ಶುಭಫಲಗಳಿವೆ ಆದ್ರೆ..

ಇನ್ನು ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ವಿವಾಹ ಭಾಗ್ಯವು ಕೂಡಿಬರುತ್ತದೆ ವಿದ್ಯಾರ್ಥಿಗಳಿಗೂ ಸಹ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ದೊರೆಯುತ್ತದೆ ಇನ್ನು ನಿಮ್ಮಿಂದ ಕೈ ತಪ್ಪಿ ಹೋದ ಭೂಮಿಯು ನಿಮ್ಮ ಪಾಲಿಗೆ ದೊರೆಯುತ್ತದೆ ನ್ಯಾಯಾಲಯಕ್ಕೆ ಸಂಬಂಧಪಟ್ಟಂತಹ ಕೆಲವೊಂದು ಸಮಸ್ಯೆಗಳು ಈ ಸಂದರ್ಭದಲ್ಲಿ ನಿವಾರಣೆಯಾಗುತ್ತವೆ ಈ ವರ್ಷದಲ್ಲಿ ಸರ್ಕಾರಿ ಅಧಿಕಾರಿಗಳು ಹಣಕಾಸು ವ್ಯವಹಾರದಲ್ಲಿ ಕಾರ್ಯನಿರ್ವಹಿಸುವವರು ಸ್ವಲ್ಪಮಟ್ಟಿಗೆ ಎಚ್ಚರಿಕೆಯಿಂದ ಇರಬೇಕು

ಇವರಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಆತಂಕಗಳು ಎದುರಾಗಬಹುದು ಇದನ್ನು ಹೊರತುಪಡಿಸಿ ಧನು ರಾಶಿಯವರಿಗೆ ಉತ್ತಮ ವಾದಂತಹ ಭವಿಷ್ಯ ಈ ವರ್ಷ ಒದಗಿ ಬರಲಿದೆ ಮೂಲ ನಕ್ಷತ್ರದವರು ಗೋವನ್ನು ಆರಾಧನೆ ಮಾಡುವುದರಿಂದ ಒಳ್ಳೆಯ ಫಲಗಳನ್ನು ಪಡೆಯುತ್ತೀರಿ ಹಾಗೆ ದುರ್ಗಾದೇವಿಯ ಮಂದಿರಕ್ಕೆ ಹೋಗಿ ಪೂಜಿ ಸಲ್ಲಿಸಿ ಆರಾಧನೆ ಮಾಡುವುದರಿಂದ ಸರ್ವ ಸಂಕಷ್ಟಗಳು ನಿವಾರಣೆಯಾಗಿ ಸಕಲ ಸಂಪತ್ತು ವೃದ್ಧಿಯಾಗುವುದು.

Leave a Reply

Your email address will not be published. Required fields are marked *