ಇನ್ನೇನು ಹೊಸವರ್ಷ ಬಂತು, ಸಿಂಹ ರಾಶಿಯವರಿಗೆ ಇಲ್ಲಿಯವರೆಗೆ ಒಂದು ಲೆಕ್ಕ ಇನ್ನುಮೇಲೆ ಅದೃಷ್ಟದ ಲೆಕ್ಕ ಹೇಗಿರತ್ತೆ ನೋಡಿ ಇವರ ಲೈಫ್

0 37,394

Leo Astrology 2024: ಇನ್ನೇನು ಕೆಲವೇ ದಿನಗಳಲ್ಲಿ 2023 ನೆಯ ವರ್ಷ ಅಂತ್ಯಗೊಂಡು 2024ನೆ ವರ್ಷ ಪ್ರಾರಂಭವಾಗಲಿದೆ ಈ ಹೊಸ ವರ್ಷದಲ್ಲಿ ವಿಶೇಷವಾಗಿ ಸಿಂಹ ರಾಶಿಯವರಿಗೆ ದೊರೆಯುವಂತಹ ಶುಭಫಲಗಳು ಹಾಗೂ ಕೆಲವೊಂದು ಎಚ್ಚರಿಕೆಗಳನ್ನು ಇಲ್ಲಿ ನಾವು ತಿಳಿದುಕೊಳ್ಳೋಣ.

ಶನಿಪ್ರಭಾವ ಸಿಂಹ ರಾಶಿಯವರಿಗೆ ಈ ವರ್ಷದಲ್ಲಿ ಅಷ್ಟೇನೂ ಇಲ್ಲ ಇದೇ (New year) ಹೊಸ ವರ್ಷದ ಜನವರಿ 17ನೇ ತಾರೀಕು ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸುತ್ತಾನೆ ಯಾವಾಗ ಶನಿಯು ಆರನೆಯ ಮನೆಯಿಂದ ಏಳನೇ ಮನೆಗೆ ಬರುತ್ತಾನೋ ಆಗ ಶನಿಯ ದೃಷ್ಟಿ ನಿಮ್ಮ ರಾಶಿಯ ಮೇಲೆ ಬೀಳುತ್ತದೆ ಇದರ ಅರ್ಥ ಏನೆಂದರೆ ಕೆಲವರು ನಿಮ್ಮ ಮೇಲೆ ದೃಷ್ಟಿಯನ್ನು ಇಟ್ಟಿದ್ದಾರೆ ಎಂಬುದಾಗಿದೆ

Leo Astrology Kannada For 2024

ಶನಿಯ ದೃಷ್ಟಿಯಿಂದ ನಿಮ್ಮ ರಾಶಿಯಲ್ಲಿ ಕೆಲವು ಬದಲಾವಣೆಗಳು ಉಂಟಾಗುತ್ತವೆ ಅಷ್ಟಮ ಶನಿ ಅಥವಾ ಸಾಡೆ ಸಾತ್ ಶನಿ ಇನ್ನಿತರ ಕೆಟ್ಟ ಪ್ರಭಾವಗಳು ಶನಿಯಿಂದ ನಿಮಗೆ ಉಂಟಾಗುವುದಿಲ್ಲ ನೀವು ಯಾವುದೇ ಕೆಟ್ಟ ಕಾರ್ಯದಲ್ಲಿ ತೊಡಗಿದ್ದರು ಸಹ ಶನಿಯು ನಿಮ್ಮನ್ನು ಅಲ್ಲಿಂದ ಒಳ್ಳೆಯ ಕಡೆಗೆ ಎಳೆದು ತರುವಂತಹ ಕಾರ್ಯವನ್ನು ಮಾಡುತ್ತಾನೆ ಈ ಸಮಯದಲ್ಲಿ ಸ್ವಲ್ಪ ತೊಂದರೆಯನ್ನು ನೀವು ಅನುಭವಿಸಬಹುದು ಆದ್ದರಿಂದ ಒಳ್ಳೆಯ ಕಾರ್ಯಗಳತ್ತ ಹೆಚ್ಚಿನ ಗಮನವನ್ನು ಹರಿಸಬೇಕು.

ಅಂತೆಯೇ ಗುರು ಕೂಡ ಸಿಂಹ ರಾಶಿಯವರಿಗೆ ಒಳ್ಳೆಯ ಬದಲಾವಣೆಯನ್ನು ತಂದು ಕೊಡುತ್ತಾನೆ ಏಪ್ರಿಲ್ 21 ನೇ ತಾರೀಕಿನಂದು ಗುರು ಮೀನ ರಾಶಿಯಿಂದ ಮೇಷ ರಾಶಿಗೆ ತನ್ನ ಸ್ಥಾನವನ್ನ ಬದಲಾಯಿಸುತ್ತಾನೆ ಸಿಂಹ ರಾಶಿಯ ಭಾಗ್ಯಸ್ಥಾನವನ್ನ ಗುರು ಆವರಿಸುತ್ತಾನೆ ಇದನ್ನು ಗುರುಬಲ ಎಂದು ಕರೆಯುತ್ತಾರೆ ನೀವು ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡಬೇಕಾದಲ್ಲಿ ಏಪ್ರಿಲ್ 21 ರವರೆಗೆ ಕಾದು ನಂತರದಲ್ಲಿ ಪ್ರಾರಂಭಿಸಿದರೆ, ನಿಮ್ಮ ವಿದ್ಯಾಭ್ಯಾಸ ವ್ಯಾಪಾರ ಉದ್ಯೋಗ ಕೌಟುಂಬಿಕ ಕಲಹ ಸಂಸಾರ ತಾಪತ್ರೆ ಇತ್ಯಾದಿ ಎಲ್ಲಾ ಸಂಕಷ್ಟಗಳು ದೂರವಾಗಿ ಒಳ್ಳೆಯ ಯೋಗಗಳು ಬರುತ್ತವೆ.

ಗುರುವು ಭಾಗ್ಯದಲಿದ್ದಾಗ ಗೋಚಾರ ಫಲದ ಪ್ರಕಾರ ಹೆಚ್ಚು ವಿದ್ಯಾವಂತರಾಗುತ್ತಾರೆ ಎಂದು ನಂಬಲಾಗಿದೆ ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಮುಂಬಡ್ತಿ ಅಥವಾ ಒಳ್ಳೆಯ ಧನಾಗಮನ ಉಂಟಾಗುತ್ತದೆ ಕಾಲವನ್ನು ಅಪೇಕ್ಷೆ ಮಾಡಿಕೊಂಡು ಸಾಧಿಸುವಂತಹ ಗುರಿ ನಿಮ್ಮಲ್ಲಿ ಇರುತ್ತದೆ ನಿಮ್ಮ ಜೀವನದಲ್ಲಿ ಉತ್ತಮ ಗುರುವಿನ ಆಗಮನ ಆಗುವುದರಿಂದ ಗುರುವಿನ ಸಹಕಾರದಿಂದ ನೀವು ಯಶಸ್ಸನ್ನು ಗಳಿಸುತ್ತೀರಿ ಏಪ್ರಿಲ್ 21ರ ನಂತರ ಆಕಾಶದಂತೆ ಅವಕಾಶಗಳನ್ನು ನೀವು ಪಡೆಯಲಿದ್ದೀರಿ.

ಇನ್ನು ಶಿಕ್ಷಕರು ವಿದ್ಯಾರ್ಥಿಗಳು ಸರ್ಕಾರಿ ಉದ್ಯೋಗಿಗಳು ಮಠಾಧೀಶರು ಅರ್ಚಕರು ಉದ್ಯಮಿಗಳು ಹೀಗೆ ಎಲ್ಲಾ ಬಗೆಯ ವೃತ್ತಿಯಲ್ಲಿ ನಿರತರಾಗಿರುವ ಸಿಂಹ ರಾಶಿಯವರಿಗೆ ಈ ವರ್ಷ ತುಂಬಾ ಉತ್ತಮವಾಗಿರುತ್ತದೆ ಧನದ ಮೂಲವೂ ವೃದ್ಧಿಯಾಗುತ್ತದೆ ಹಾಗೆಯೇ ಅಕ್ಟೋಬರ್ ತಿಂಗಳಿನಲ್ಲಿ ಎಂಟನೇ ಮನೆಗೆ ರಾಹುವಿನ ಪ್ರವೇಶವಾಗುತ್ತದೆ ಈ ಸಮಯದಲ್ಲಿ ನರಗಳ ಸಮಸ್ಯೆ ಗಂಟಲಿನಲ್ಲಿ ನೋವು ವಿಷ ಜಂತುಗಳಿಂದ ಭಯ ಇತ್ಯಾದಿ ವಿಷಯಗಳಿಂದ ಸ್ವಲ್ಪ ಮಟ್ಟದ ಧನಹಾನಿ ಉಂಟಾಗಬಹುದು ಇದಕ್ಕಾಗಿ ಕಾಲಭೈರವ ಅಥವಾ ವೀರಭದ್ರೇಶ್ವರ ನನ್ನ ಆರಾಧಿಸಿದರೆ ನಿಮ್ಮ ಭಯಗೊಂದಲಗಳು ದೂರವಾಗುತ್ತವೆ.

ಅಕ್ಟೋಬರ್ ತಿಂಗಳಲ್ಲಿ ಕೇತುವು ಎರಡನೆಯ ಮನೆಗೆ ಪ್ರವೇಶಿಸುತ್ತಾನೆ ಇದರಿಂದ ಹಿರಿಯರ ಆಸ್ತಿ ನಿಮ್ಮ ಪಾಲಾಗುತ್ತದೆ ವ್ಯವಹಾರದಲ್ಲಿ ದಿಡೀರ್ ಲಾಭ ಕಾಣುತ್ತೀರಿ ಮತ್ತು ಗುಪ್ತ ಕಾರ್ಯಾಚರಣೆಗೆ ಸಂಬಂಧಪಟ್ಟ ಕೆಲಸಗಳಿಂದ ಉತ್ತಮ ಧನಪ್ರಾಪ್ತಿ ಉಂಟಾಗುವ ಸಾಧ್ಯತೆಗಳು ಇವೆ ವರ್ಷದ ಆದಿಯಿಂದಲೂ ನಿಮ್ಮ ರಾಶಿಯಲ್ಲಿ ಒಳ್ಳೆಯ ಲಕ್ಷಣಗಳನ್ನೇ ಗಮನಿಸುತ್ತೀರಿ

ಅಕ್ಟೋಬರ್ ತಿಂಗಳಲ್ಲಿ ರಾಹುವಿನಿಂದ ಸ್ವಲ್ಪ ಎಚ್ಚರಿಕೆಯಿಂದ ಇರಬೇಕಾದ ಪರಿಸ್ಥಿತಿ ಬರಬಹುದು ಆದಾಗಿಯೂ ನಿಮ್ಮ ರಾಶಿ ಗುರುಬಲವನ್ನು ಹೊಂದಿದ್ದರಿಂದ ಗುರು ಎಲ್ಲವನ್ನು ಸರಿದೂಗಿಸುತ್ತಾನೆ ಸುಬ್ರಹ್ಮಣ್ಯನ ಅಷ್ಟೋತ್ತರಗಳನ್ನು ಜಪಿಸಿ ವಾರಕ್ಕೊಮ್ಮೆ ವೀರಭದ್ರನ ದರ್ಶನವನ್ನು ಮಾಡಿ ಕುಂಬಳಕಾಯಿಯನ್ನು ತಿಂಗಳಿಗೊಮ್ಮೆ ದಾನ ಮಾಡುವುದರಿಂದ ಯಥೇಚ್ಛವಾದ ಫಲಗಳನ್ನು ಪಡೆಯುತ್ತೀರಿ.

Leave A Reply

Your email address will not be published.