Sagittarius Horoscope today: ಮುಂಬರುವ 2023 ನೆಯ ಹೊಸ ವರ್ಷದ ಮೊದಲ ಮಾಸವಾದ ಜನವರಿ ತಿಂಗಳಿನಲ್ಲಿ ಧನು ರಾಶಿಯವರ ಮಾಸ ಭವಿಷ್ಯ ಯಾವ ರೀತಿ ಇರಲಿದೆ ಎಂಬುದನ್ನು ನಾವು ಇಲ್ಲಿ ತಿಳಿದುಕೊಳ್ಳೋಣ.

ಧನು ರಾಶಿಯವರಿಗೆ ರಾಶಿಯಲ್ಲಿ ಅಶುಭ ಗ್ರಹಗಳು ಶುಭ ಗ್ರಹಗಳು ಎರಡು ಕೂಡ ಇರುತ್ತವೆ ರವಿ ಮತ್ತು ಬುಧ ವಿಶೇಷವಾಗಿ ಈ ರಾಶಿಯಲ್ಲಿ ಇರುತ್ತಾರೆ ನಂತರ ರವಿ ಎರಡನೆ ರಾಶಿಗೆ ಸ್ಥಾನ ಪಲ್ಲಟ ಮಾಡುತ್ತಾನೆ ಬಹಳ ಮುಖ್ಯವಾಗಿ ಜನವರಿ 18ನೇ ತಾರೀಖಿನಂದು ಶನಿಯ ಪರಿವರ್ತನೆ ಉಂಟಾಗುತ್ತದೆ ಈ ಸಮಯದಲ್ಲಿ ಸಂಪೂರ್ಣವಾಗಿ ಧನು ರಾಶಿಯವರಿಗೆ ಸಾಡೇಸಾತ್ ಶನಿ ಮುಗಿದು ಹೋಗುತ್ತದೆ. ಇದರಿಂದ ಬಂದ ಸಂಕಷ್ಟಗಳೆಲ್ಲ ನಿವಾರಣೆಯಾಗುತ್ತವೆ.

Sagittarius Horoscope today

ವಿಶೇಷವಾಗಿ ಧನು ರಾಶಿಯವರಿಗೆ ರಾಶಿಯಾಧಿಪತಿಯಾದ ಗುರು ಚತುರ್ಥದಲ್ಲಿದ್ದಾನೆ ಹೀಗೆ ಗ್ರಹಗಳ ಸ್ಥಾನ ಬದಲಾವಣೆಯಿಂದ ನಿಮ್ಮ ಕುಟುಂಬದಲ್ಲಿ ಒಳ್ಳೆಯ ಬದಲಾವಣೆಗಳು ಉಂಟಾಗುತ್ತೆ ವಿಶೇಷವಾಗಿ ಮನೆಗೆ ವಿಶೇಷ ಅತಿಥಿ ಅಥವಾ ವಿಶೇಷ ವ್ಯಕ್ತಿಯ ಆಗಮನ ಆಗುತ್ತದೆ ನೀವು ಭೇಟಿ ಮಾಡಲು ಅಥವಾ ಸಂಪರ್ಕಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯು ಸ್ವತಃ ತಾನೇ ನಿಮ್ಮನ್ನು ಭೇಟಿಯಾಗಲು ಬರುವಂತಹ ಸಾಧ್ಯತೆ ಕಂಡು ಬರುತ್ತದೆ

ಹಾಗೆಯೇ ನಿಮ್ಮ ರಾಶಿಯ ಧನ ಸ್ಥಾನದಲ್ಲಿ ಶುಕ್ರ ಇರುವುದರಿಂದ ನಿಮ್ಮ ರಾಶಿಯಲ್ಲಿ ಧನಘವನವು ಉಂಟಾಗುತ್ತದೆ ನೀವು ಹಿಂದೆ ಮಾಡಿರುವ ಯಾವುದೇ ಕಾರ್ಯಗಳ ಮೇಲೆ ನಂಬಿಕೆಯನ್ನು ಕಳೆದುಕೊಂಡಿದ್ದಲ್ಲಿ ಯಾವುದೇ ಕಾರ್ಯವನ್ನು ಮಾಡಲು ಸೋತಿದ್ದಲ್ಲಿ ಈಗ ಅದು ನಿಮ್ಮ ಪಾಲಿಗೆ ಒದಗಿ ಬರುತ್ತದೆ ನೀವು ಹಿಂದೆ ಮಾಡಿದ ಪುಣ್ಯ ಭಗವಂತನ ಕೃಪೆಯಿಂದ ನಿಮ್ಮ ಕೈ ಹಿಡಿಯುತ್ತದೆ.

ಹಾಗೆ ಯಾವುದಾದರೂ ಕಾರ್ಯವನ್ನ ಕೈಗೆತ್ತಿಕೊಂಡಿದ್ದಲ್ಲಿ ಅದು ಅರ್ಧಕ್ಕೆ ನಿಂತು ಹೋಗಿದ್ದು ಅನಿರೀಕ್ಷಿತವಾಗಿ ಆ ಕೆಲಸವನ್ನು ಮತ್ತೆ ಪ್ರಾರಂಭಿಸಲು ಅವಕಾಶಗಳು ಒದಗಿ ಬರುತ್ತವೆ ಈ ಜನವರಿ ತಿಂಗಳಿನಲ್ಲಿ ನೀವು ಕೈ ಹಾಕಿದ ಕೆಲಸಗಳೆಲ್ಲವೂ ಸಂಪೂರ್ಣವಾಗುತ್ತವೆ ಬಹು ಮುಖ್ಯವಾಗಿ ಸಂತಾನ ಅಭಿವೃದ್ಧಿಯಾಗದೆ ಇರುವಂತವರಿಗೆ ಸಂತಾನ ಫಲ ಕೂಡಿಬರಲಿದೆ

ನೀವು ಹಿಂದೆ ಅನುಭವಿಸಿದ ಕಠಿಣ ಸಮಸ್ಯೆಗಳು ನಿಧಾನಗತಿಯಲ್ಲಿ ಬದಲಾವಣೆ ಹೊಂದುತ್ತವೆ ಈ ವರ್ಷದಲ್ಲಿ ಉತ್ತಮ ರೀತಿಯಲ್ಲಿ ನಿಮ್ಮ ಜೀವನ ಸಾಗುತ್ತದೆ ಅಲ್ಲದೆ ನೀವು ಕೋರ್ಟ್ ಕಚೇರಿ ಮುಂತಾದ ಯಾವುದೇ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರು ನಿಮ್ಮ ಜೀವನದಲ್ಲಿ ಬರುವ ಒಬ್ಬ ಮಧ್ಯ ವ್ಯಕ್ತಿಯಿಂದ ನಿಮ್ಮ ಸಮಸ್ಯೆ ಪರಿಹಾರ ಗೊಳ್ಳುತ್ತದೆ.

ಸ್ವಲ್ಪಮಟ್ಟಿಗೆ ಆರ್ಥಿಕ ಅಭಿವೃದ್ಧಿಯನ್ನು ಹೊಂದುತ್ತೀರಿ ನೀವು ಯಾವುದಾದರೂ ಒಂದು ವಸ್ತುವನ್ನು ಮಾರಾಟ ಮಾಡಲು ಬಯಸಿದ್ದಲ್ಲಿ ಗಿರಾಕಿಗಳು ತಾನಾಗಿಯೇ ಬರುತ್ತವೆ ಉದಾಹರಣೆ ಕೃಷಿ ಜಮೀನು ಮಾರಾಟ ಅಥವಾ ಯಾವುದೇ ಇನ್ನಿತರ ಬೆಲೆಯುಳ್ಳ ವಸ್ತುಗಳ ಮಾರಾಟ ಇತ್ಯಾದಿಗಳಿಗೆ ಒಳ್ಳೆಯ ಬೆಲೆಯಲ್ಲಿ ಉತ್ತಮ ಗಿರಾಕಿಗಳು ಬರುತ್ತವೆ ಅಂತೆಯೇ ಭೂಮಿಯನ್ನು ವ್ಯಾಪಾರ ಮಾಡುವಂತಹ ಉದ್ಯೋಗಿಗಳು, ಕಬ್ಬಿಣದ ವ್ಯಾಪಾರ ಮಾಡುವಂತವರು ಧಾರ್ಮಿಕ ಮುಖಂಡರು ದೇವಸ್ಥಾನ ಹಾಗೆ ಇನ್ನಿತರ ಜೀರ್ಣೋದ್ಧಾರ ಕಾರ್ಯಗಳನ್ನ ಮಾಡಲು ಬಯಸುವವರು ಇತ್ಯಾದಿ ಒಳ್ಳೆಯ ಕಾರ್ಯಗಳಲ್ಲಿ ತೊಡಗಿರುವವರಿಗೆ ಈ ತಿಂಗಳಿನಲ್ಲಿ ಒಳ್ಳೆಯ ಲಾಭ ದೊರೆಯಲಿದೆ ಕತ್ತಲಿನಿಂದ ಬೆಳಕಿನೊಳಗೆ ಸಾಗಲು ನಿಮಗೆ ಸರಿಯಾದ ದಾರಿಯೂ ಈ ಸಮಯದಲ್ಲಿ ಸಿಗುತ್ತದೆ.

ನಿಮ್ಮ ಮಾತಿನ ಮೇಲೆ ಸ್ವಲ್ಪ ಹಿಡಿತವನ್ನು ಇಟ್ಟುಕೊಂಡು ತಾಳ್ಮೆಯಿಂದ ವರ್ತನೆ ಮಾಡಬೇಕು ಹಾಗೆಯೇ ನಿಮ್ಮ ಆರೋಗ್ಯದಲ್ಲಿಯೂ ಕೂಡ ಸಣ್ಣ ಪುಟ್ಟ ತೊಂದರೆಗಳು ಆಗಬಹುದಾದ ಸೂಚನೆಗಳು ಇರುವುದರಿಂದ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಉತ್ತಮ ಇನ್ನು ಕೋರ್ಟು ಕಚೇರಿಗಳಲ್ಲಿ ಕೆಲಸ ಮಾಡುವವರು ಸ್ವಲ್ಪ ಮಟ್ಟಿಗೆ ಜಾಗೃತವಾಗಿರಬೇಕು ಜನವರಿ 30ನೇ ತಾರೀಕು ಕೃತಿಕಾ ನಕ್ಷತ್ರದವರು ದೇವಿಯನ್ನು ವಿಶೇಷವಾಗಿ ಪೂಜಿಸುವುದರಿಂದ ಒಳ್ಳೆಯ ಲಾಭವನ್ನು ಪಡೆಯುತ್ತೀರಿ

ಮನೆಯಲ್ಲಿ ಈ ಫೋಟೋ ಇದ್ರೆ ಅದೃಷ್ಟ ತರುತ್ತಾ? ಮನೆಯ ಯಾವ ಜಾಗದಲ್ಲಿ ಇದ್ರೆ ಒಳ್ಳೇದು ತಿಳಿದುಕೊಳ್ಳಿ

ಇನ್ನು ಮೂಲ ನಕ್ಷತ್ರದವರು ವಿಶೇಷವಾಗಿ ಗೋವನ್ನು ಪೂಜಿಸಿ ಅದಕ್ಕೆ ಆಹಾರ ನೀಡುವುದರಿಂದ ತಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ಇನ್ನು ಪೂರ್ವಾಷಾಡ ನಕ್ಷತ್ರದವರು ಬಹಳ ಮುಖ್ಯವಾಗಿ ವಿಘ್ನ ವಿನಾಯಕನಾದ ಗಣೇಶ ನನ್ನ ಪೂಜಿಸಬೇಕು ಇದರಿಂದ ಸಕಲ ಸಂಪತ್ತು ವೃದ್ಧಿಯಾಗುತ್ತದೆ.

Leave a Reply

Your email address will not be published. Required fields are marked *