ತೆಳ್ಳಗೆ ಕಾಣಬೇಕು, ದೇಹದಲ್ಲಿ ಕೊಬ್ಬಿನ ಅಂಶ ಇರಬಾರದು, ಆರೋಗ್ಯಕರವಾಗಿರಬೇಕು ಎಂಬುದು ಎಲ್ಲ ಮಹಿಳೆಯರ ಆಸೆ. ಪುರುಷರು ಕೂಡ ಫಿಟ್​ ಆಗಿರುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರಾದರೂ ಮಹಿಳೆಯರಷ್ಟು ಸೌಂದರ್ಯದ ಕಡೆಗೆ ಗಮನ ನೀಡುವುದಿಲ್ಲ. ಹಾಗಾಗಿಯೇ ಪುರುಷರಿಗಿಂತ ಮಹಿಳೆಯರು ಡಯಟ್​ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ.

ಮೆಂತ್ಯೆಯನ್ನು ಬಳಸಿ:ಮೆಂತ್ಯೆಯನ್ನು ಆಹಾರದಲ್ಲಿ ಹೆಚ್ಚೆಚ್ಚು ಬಳಸುವುದರಿಂದ ಸೊಂಟದ ಕೊಬ್ಬನ್ನು ಕರಗಿಸಬಹುದು. ಸ್ವಲ್ಪ ಮೆಂತ್ಯೆ ಕಾಳುಗಳನ್ನು ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಅದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರಿಗೆ ಸೇರಿಸಿ ಕುಡಿಯಿರಿ. ಹಾಗೇ, ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದಲೂ ಬೊಜ್ಜು ಕರಗುತ್ತದೆ.

ಚಿಲ್ಲಿ ಪೆಪ್ಪರ್​, ಕ್ಯಾಪ್ಸಿಕಂ ಬಳಸಿ: ನಿಮ್ಮ ಆಹಾರದಲ್ಲಿ ಚಿಲ್ಲಿ ಪೆಪ್ಪರ್​ ಬಳಸುವುದರಿಂದ ದೇಹದ ಕೊಬ್ಬಿನಂಶವನ್ನು ಕರಗಿಸಲು ಸಾಧ್ಯವಿದೆ. ಇದನ್ನು ವಿಜ್ಞಾನಿಗಳೇ ಒಪ್ಪಿಕೊಂಡಿದ್ದು, ಚಿಲ್ಲಿ ಪೆಪ್ಪರ್​ ಅನ್ನು ಆಹಾರದಲ್ಲಿ ಬಳಸುವುದರಿಂದ ಡಯಟಿಂಗ್​ ಮಾಡುವವರಿಗೆ ತೂಕ ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಲಿದೆ. ಕ್ಯಾಪ್ಸಿಕಂ (ಡೊಳ್ಳು ಮೆಣಸಿನಕಾಯಿ) ಕೂಡ ತೂಕವನ್ನು ಇಳಿಸಿಕೊಳ್ಳಲು ಉಪಯುಕ್ತ ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಹೆಚ್ಚಿನ ಒತ್ತಡ ಒಳ್ಳೆಯದಲ್ಲ:ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಒತ್ತಡಕ್ಕೆ ಒಳಗಾದಂತೆ ನಿಮ್ಮ ತೂಕವೂ ಹೆಚ್ಚತೊಡಗುತ್ತದೆ. ಒತ್ತಡ ಹೆಚ್ಚಾದಂತೆ ಸ್ಟ್ರೆಸ್​ ಹಾರ್ಮೋನ್ ಕಾಟ್ರಿಸಾಲ್​ ಉತ್ಪತ್ತಿಯಾಗಿ ಹಸಿವಿನ ಪ್ರಮಾಣವೂ ಹೆಚ್ಚುತ್ತದೆ. ಬಾಳೆಹಣ್ಣು, ಬಾದಾಮಿ, ಚೆರ್ರಿಯನ್ನು ಡಯಟ್​ನಲ್ಲಿ ಹೆಚ್ಚು ಬಳಸುವುದರಿಂದ ಒತ್ತಡವೂ ಕಡಿಮೆಯಾಗುತ್ತದೆ.

ನಿಧಾನವಾಗಿ ಆಹಾರ ಸೇವಿಸಿ: ಮನೆಯಲ್ಲಿ ನೀವೇನಾದರೂ ಗಬಗಬನೆ ತಿನ್ನುತ್ತಿದ್ದರೆ ಅಜ್ಜನೋ ಅಜ್ಜಿಯೋ ಅಥವಾ ಅಮ್ಮನೋ ಬಯ್ಯುವುದನ್ನು ನೋಡಿರಬಹುದು. ಅದಕ್ಕೆ ಕಾರಣವೂ ಇದೆ. ಆಯುರ್ವೇದದ ಪ್ರಕಾರ ನಾವು ಆಹಾರವನ್ನು ಎಷ್ಟು ನಿಧಾನವಾಗಿ ಸೇವಿಸುತ್ತೇವೋ ಅಷ್ಟು ಸರಿಯಾಗಿ ಜೀರ್ಣಕ್ರಿಯೆಯೂ ಆಗುತ್ತದೆ. ನಿಧಾನವಾಗಿ ಆಹಾರವನ್ನು ಸೇವಿಸುವುದರಿಂದ ನಮಗೆ ಎಷ್ಟು ಆಹಾರ ಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಲು ಮೆದುಳಿಗೆ ಸಹಾಯವಾಗುತ್ತದೆ. ನಾವು ತಿನ್ನುವ ಆಹಾರ ಸರಿಯಾಗಿ ಜೀರ್ಣವಾಗದಿರುವುದು ಕೂಡ ತೂಕ ಹೆಚ್ಚಾಗುವಿಕೆಗೆ ಒಂದು ಕಾರಣ. ಚಿಪ್ಸ್​ ಮುಂತಾದ ಎಣ್ಣೆತಿಂಡಿಗಳು, ಸಕ್ಕರೆ ಅಂಶ ಹೆಚ್ಚಾಗಿರುವ ಪದಾರ್ಥಗಳು, ಅತಿಯಾಗಿ ಸಿಹಿಯಾಗಿರುವ ಪಾನೀಯಗಳನ್ನು ಸೇವಿಸದಿರುವುದು ಉತ್ತಮ.

ಒಂದೇ ಬಾರಿ ತಿನ್ನಬೇಡಿ: ಹಸಿವಾಗಿದೆ ಎಂದು ಒಂದೇ ಸಲ ರಾಶಿಗಟ್ಟಲೆ ತಿನ್ನುವ ಬದಲು ಆಗಾಗ ಸ್ವಲ್ಪ ಸ್ವಲ್ಪ ತಿನ್ನುತ್ತಾ ಇರುವುದರಿಂದ ಜೀರ್ಣಕ್ರಿಯೆಗೆ ಸುಲಭವಾಗುತ್ತದೆ. ಇದರಿಂದ ಕೊಬ್ಬು ಶೇಖರವಾಗುವುದು ತಪ್ಪುತ್ತದೆ. ಹಾಗೇ, ಊಟದಲ್ಲಿ ತರಕಾರಿ, ಶೇಂಗಾ ಎಣ್ಣೆಯನ್ನು ಬಳಸಿ. ಮೊಟ್ಟೆಯನ್ನು ತಿನ್ನುವುದಾದರೆ ಹಳದಿ ಭಾಗದ ಬದಲಾಗಿ ಬಿಳಿಯ ಭಾಗವನ್ನು ಮಾತ್ರ ತಿನ್ನಿ. ಹೆಚ್ಚೆಚ್ಚು ಪ್ರೋಟೀನ್​ ಮತ್ತು ನಾರಿನಂಶ ಇರುವ ಆಹಾರ ಸೇವಿಸಿ.

ಹಾಲಿನ ಉತ್ಪನ್ನಗಳನ್ನು ಕಡಿಮೆ ಬಳಸಿ:ಹಾಲು ಅಥವಾ ಹಾಲಿನ ಉತ್ಪನ್ನಗಳು ತೂಕವನ್ನು ಹೆಚ್ಚಿಸುತ್ತದೆ. ಹಾಗಾಗಿ, ಡಯಟ್​ ಮಾಡುವವರು ಇಂತಹ ಆಹಾರವನ್ನು ಸೇವಿಸದೇ ಇರುವುದು ಉತ್ತಮ. ಐಸ್​ಕ್ರೀಂ, ಮೊಸರು, ಪೇಡಗಳನ್ನು ಅವಾಯ್ಡ್​ ಮಾಡಿ.

ಪ್ರೋಟೀನ್‌‌ ಅಂಶ ಕಡಿಮೆ ಇರುವ ಆಹಾರ ಸೇವಿಸುವವರಿಗಿಂತ ಪ್ರೊಟೀನ್ ಭರಿತ ಆಹಾರ ಸೇವಿಸುವರೇ ಕಡಿಮೆ ಕೊಬ್ಬನ್ನು ಹೊಂದಿರುತ್ತಾರೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ನಿಮ್ಮ ದಿನವನ್ನು ಹೆಚ್ಚಿನ-ಪ್ರೊಟೀನ್ ಉಪಹಾರದೊಂದಿಗೆ ಪ್ರಾರಂಭಿಸುವುದು ತೂಕ ಕಳೆದುಕೊಳ್ಳಲು ಒಂದು ಪರಿಣಾಮಕಾರಿ ಮತ್ತು ಆರೋಗ್ಯಕರ ವಿಧಾನ. ಇದು ದೇಹಕ್ಕೆ ಅಗತ್ಯ ಶಕ್ತಿಯನ್ನು ನೀಡುತ್ತದೆ . ಅದರ ಜೊತೆಗೆ ಹಸಿವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕದ ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ದೇಹದ ಶಕ್ತಿಯನ್ನು ಉಳಿಸಿಕೊಳ್ಳಲು ನೀವು ಪ್ರೋಟಿನ್‌ಯುಕ್ತ ಆಹಾರ ಸೇವಿಸಲೇ ಬೇಕು. ವಿಶೇಷವಾಗಿ ನಿಮ್ಮ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸುವಾಗ ಪ್ರತಿ ಊಟದಲ್ಲಿ ಪ್ರೊಟೀನ್‌ಭರಿತ ಮೀನು, ಮೊಟ್ಟೆ, ಕೋಳಿ ಮಾಂಸ, ಹಾಲಿನ ಉತ್ಪನ್ನ, ಬೀನ್ಸ್‌ನಂತಹ ಆಹಾರಗಳಿರಲಿ.

Leave a Reply

Your email address will not be published. Required fields are marked *