ಕ್ರಿಕೆಟ್ ಆಟದಲ್ಲಿ ಹಲವಾರು ವ್ಯಕ್ತಿಗಳು ತಮ್ಮ ಪ್ರತಿಭೆಯಿಂದ ಅವರ ಮತ್ತು ಕ್ರಿಕೆಟ್ ಆಟದ ಹೆಸರನ್ನು ಹೆಚ್ಚಿಸಿದ್ದಾರೆ. ಅಂತಹವರಲ್ಲಿ ರೋಹಿತ್ ಶರ್ಮಾ ಕೂಡ ಒಬ್ಬರು. ತಮ್ಮ ಅತ್ಯುತ್ತಮ ಆಟದಿಂದ ಭಾರತದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ರೋಹಿತ್ ಶರ್ಮಾ ಅವರು 1987 ಏಪ್ರಿಲ್ 30 ರಂದು ಗುರುನಾಥ್ ಶರ್ಮಾ ಮತ್ತು ಪೂರ್ಣಿಮಾ ಶರ್ಮಾರವರಿಗೆ ನಾಗಪುರದ ಬಾನ್ಸೋದ್ ನಲ್ಲಿ ಜನಿಸಿದರು. ಇವರು ಭಾರತೀಯ ಅಂತರ್ರಾಷ್ಟ್ರೀಯ ಆಟಗಾರರಾಗಿದ್ದಾರೆ. ಇವರು ಬಲಗೈ ಬ್ಯಾಟ್ಸ್ಮನ್ ಆಗಿದ್ದಾರೆ. ಇವರು ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಆಗಿದ್ದಾರೆ. 20ನೇ ವಯಸ್ಸಿನಲ್ಲಿ ಕ್ರಿಕೆಟ್ ನಲ್ಲಿ ತನ್ನ ಅಂತರ್ರಾಷ್ಟ್ರೀಯ ಜೀವನದ ವೃತ್ತಿಯನ್ನು ಇವರು ಆರಂಭಿಸಿದರು.

ಶರ್ಮಾ ಅವರು ತ್ವರಿತವಾಗಿ ಮುಂದಿನ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಖಾಯಂ ಆಟಗಾರ ಎಂದು ವಿಶ್ಲೇಷಕರು ನಿಗದಿಪಡಿಸಿದ್ದಾರೆ. 2013ರಲ್ಲಿ ಅವರು ಭಾರತೀಯ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಡಲು ಆರಂಭಿಸಿದರು. ಹಾಗೆಯೇ ಮುಂದೆ ಸತತವಾಗಿ ತಮ್ಮ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅವರು ಪ್ರಸ್ತುತ 209 ರನ್ ಏಕದಿನ ಇನ್ನಿಂಗ್ಸ್ ಗಳಲ್ಲಿ ಎರಡನೇ ಅತಿಹೆಚ್ಚು ಸ್ಕೋರ್ ಮಾಡಿದ್ದಾರೆ. ತಮ್ಮ ಟೆಸ್ಟ್ ಚೊಚ್ಚಲದಂದು ಅವರು ಕೋಲ್ಕತ್ತಾ ಈಡನ್ ಗಾರ್ಡನ್ಸ್ ನಲ್ಲಿ ನವೆಂಬರ್ 2013ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕವನ್ನು ಗಳಿಸಿದರು.

ನಂತರ ಎರಡು ಸತತ ಟೆಸ್ಟ್ ಶತಕಗಳು ಅವರನ್ನು 2012-13ರಲ್ಲಿ ದಿಲೀಪ್ ಸರ್ದೇಸಾಯಿ ಪ್ರಶಸ್ತಿ ಗಳಿಸುವಂತೆ ಮಾಡಿದವು. ತನ್ನ ಮುಂದಿನ ಟೆಸ್ಟ್ ಪಂದ್ಯದಲ್ಲಿ 111ರನ್ ಗಳಿಸಿದರು. ಇವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಹಲವಾರು ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಗೆದ್ದಿದ್ದರು. ಇದು ಅವರ ಜೀವನದ್ದುದ್ದಕ್ಕೂ ಒಂದು ಅಡಿಪಾಯ ಆಗಿದೆ ಎಂದು ಹೇಳಬಹುದಾಗಿದೆ. ಈಗ ಅವರಿಗೆ ಮದುವೆಯಾಗಿದೆ. ಅವರಿಗೆ ಒಂದು ಮಗು ಕೂಡ ಹುಟ್ಟಿದೆ. ಗಂಡ ಹೆಂಡತಿ ಇಬ್ಬರೂ ಕೂಡ ದಿನಾಲೂ ವ್ಯಾಯಾಮ ಮತ್ತು ವರ್ಕ್ ಔಟ್ ಗಳನ್ನು ಒಟ್ಟಿಗೆ ಮಾಡುತ್ತಾರೆ. ತಮ್ಮ ಪತ್ನಿಗೆ ಮನೆಯ ಎಲ್ಲಾ ಕೆಲಸದಲ್ಲೂ ಕೂಡ ಸಹಾಯ ಮಾಡುತ್ತಾರೆ.

Leave a Reply

Your email address will not be published. Required fields are marked *